Tuesday, January 7, 2014

ಕನ್ನಡತನ...

ಮೆದುಳಿನಾಳವ ಹೊಕ್ಕ
ಪರಕೀಯ ಹುಳುಗಳೆಲ್ಲ
ನನ್ನ ಸ್ವಂತಿಕೆಯನು ಮುಕ್ಕಿ
ತೊದಲುಲಿಗಳನೂ ಮರೆಸಿ
ಮುಗ್ಗಲು ಹಿಡಿಸುವ ಮುನ್ನ
ಎಚ್ಚರವಾಗಲಿ ತನು ಮನ
ಕನ್ನಡತನ ಜಾಗೃತವಾಗಲಿ

8 comments:

  1. ನಮ್ಮೆಲ್ಲರ ಆಶಯವೂ ಇದೇ ಆಗಿದೆ: ಜಯ ಕನ್ನಡ!

    ReplyDelete
  2. ಬದರಿ ಕನ್ನಡವನ್ನು ಮರೆಯುವುದೇ? ಸಾಧ್ಯವೇ ಇಲ್ಲ.

    ReplyDelete
  3. ಹೊಸ ವರ್ಷದ ಧ್ಯೇಯ ವಿನೂತನ ಕಾವ್ಯದೊಂದಿಗೆ, ಮೆಚ್ಚಿಕೊಂಡೆನು ಸರ್ :)

    ReplyDelete
  4. ತುಂಬಾ ಸೊಗಸಾಗಿದೆ ಸರ್.. ಪದಗಳು ಓದಿದವರ ಮನಮುಟ್ಟುವುದು.. ಆದರೆ ಎಚ್ಚರವಾಗಬೇಕಿರುವುದು ಸ್ವಇಚ್ಚೆಯಿಂದ .. ಹಾಗಾದರೆ ಅದು ಕನ್ನಡದ ಬೆಳವಣಿಗೆಗೆ ಉತ್ತಮ ದಾರಿಯಾಗುವುದು .. :)

    ReplyDelete
  5. ವಾಹ್.. ಆಶಯ ಚೆನ್ನಾಗಿದೆ. ನಮ್ಮ ಭಾಷೆ ನಮಗೆ ಹೆಚ್ಚು... ಮರೆಯುವುದುಂಟೇ

    ReplyDelete
  6. ಸಿರಿಗನ್ನಡಂ ಗೆಲ್ಗೆ :-) :-)

    ReplyDelete
  7. ಜೈ ಕರ್ನಾಟಕ ಮಾತೆ :)

    ReplyDelete
  8. ಕನ್ನಡಮ್ಮ ಸದಾ ಅಜರಾಮರ.. ಅಲ್ಲಿ ಇಲ್ಲಿ ಬಂದು ಮುಕ್ಕುವ ಪರಭಾಷೆಗಳು ಕನ್ನಡಾಂಬೆಯನ್ನು ಅಲಂಕರಿಸುತ್ತದೆಯೇ ಹೊರತು... .....

    ಆಶಯ ಹೊತ್ತ ಭಾವ ಸೂಪರ್ ಬದರಿ ಸರ್

    ReplyDelete