![]() |
ಪಿ.ಎನ್. ನಾರಣಯ್ಯ ಶೆಟ್ಟಿ |
ಅಪ್ಪ ಬದುಕಿದ್ದರೇ ಈಗ ಅವರಿಗೆ ಭರ್ತಿ ೧೦೦ ವರ್ಷ.
ನಾನು ಮೂರು ವರ್ಷ ಮಗುವಾಗಿದ್ದಾಗ ನಮ್ಮ ತಂದೆ ತೀರಿಕೊಂಡರು. ಆದ್ದರಿಂದ ಅವರು ರೂಪು, ತಾಕು, ದನಿ ಮತ್ತು ಕೋಪಗಳು ನನಗೆ ನೆನಪಿಲ್ಲ.
ನಮ್ಮ ಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ. ಅದು ಸುತ್ತ ೧೬ ಪುಟ್ಟ ಹಳ್ಳಿಗಳಿಗೆ ದೊಡ್ಡ ಹಳ್ಳಿ. ನಮ್ಮಪ್ಪ ಅಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಜೊತೆಗೆ ಕೃಷಿಯೂ ಸಹ. ಮನೆ ಕೊಟ್ಟಿಗೆಯಲ್ಲಿ ಹಸು ಕರುಗಳು. ಗಾರೆಯಿಂದ ಕಟ್ಟಿದ ಉದ್ದೋ ಉದ್ದದ ತಾರಸೀ ಮಹಡಿ ಮನೆ. ಸಾಕಷ್ಟು ಸ್ಥಿತಿವಂತ, ಗೌರವಯುತ ಕುಟುಂಬ.
ಇಡೀ ಹಳ್ಳಿಗೆ ನಮ್ಮದೇ ಸ್ವಂತ ಪಾಯಖಾನೆ ಇದ್ದ ಮನೆ! ನಮ್ಮಪ್ಪ ಹೊಸತೇನನ್ನೋ ಯೋಚಿಸುತ್ತಿದ್ದ ಹರಿಕಾರ. ಈಗಲೂ ಹಳೇ ತಲೆಮಾರಿನ ಸುತ್ತಲಿನ ಹಳ್ಳಿ ಮಂದಿಗೆ ನಮ್ಮಪ್ಪ ಬಹು ಚಿರಪರಿಚಿತ.
ಆಗೆಲ್ಲ ವಿದ್ಯುಚ್ಛಕ್ತಿಯನ್ನೂ ಗುತ್ತಿಗೆಗೆ ತರುತ್ತಿದ್ದ ಕಾಲ, ಅಪ್ಪನೂ ವಿದ್ಯುತ್ ಗುತ್ತಿಗೆದಾರ. ಅವರು ಜೈಪುರದವರೆಗೂ ಹೋಗಿ ಒಂದು ಸುಂದರ ಬಿಳಿ ಅಮೃತ ಶಿಲೆಯ ಕನ್ಯಕಾಪರಮೇಶ್ವರಿ ವಿಗ್ರಹ ತಂದು ಪ್ರತಿಷ್ಠಾಪಿಸಿದ್ದಾರೆ. ಆನಂತರ ನಮ್ಮ ಅಣ್ಣಂದಿರು ತಿಮ್ಮಪ್ಪನನ್ನು ಪ್ರತಿಷ್ಠಾಪಿಸಿದ್ದಾರೆ.
ಆ ಕಾಲದಲ್ಲಿ ನಮ್ಮಪ್ಪ ಅಂಗಡಿಗೆ ಬಟ್ಟೆ ಕೊಳ್ಳಲು ಜೈಪುರ, ಅಹಮದಾಬಾದ್ ಮತ್ತು ಉತ್ತರ ಭಾರತವೆಲ್ಲ ಓಡಾಡುತ್ತಿದ್ದದ್ದು ಈಗಲೂ ನಮ್ಮ ತಾಯಿ ನೆನೆಯುತ್ತಾರೆ. ನಮ್ಮಪ್ಪ ಗುಡಿಯಾತ್ತಮ್ ಬೀಡಿ ಸೇದುತ್ತಿದ್ದರಂತೆ.
ಬರೀ ಗಂಡು ಸಂತಾನವೇ ಇದ್ದ ಮನೆಯಲ್ಲಿ ನಮ್ಮಪ್ಪ ನನಗೆ ಲಂಗ ಜಾಕೆಟ್ ಹಾಕಿ, ಇಜ್ಜಡೆಗೆ ಹೂವು ಮುಡಿಸಿ, ಗೆಜ್ಜೆ ಹಾಕಿ ಕೈ ಹಿಡಿದು ನಿಲ್ಲಿಸಿದರೆ ನಿಲ್ಲಿಸಿದರೆ ಥಕಥೈ ಎಂದು ಕುಣಿಯುತ್ತಿದ್ದೆ ಅಂತ ನಮ್ಮ ಚಿಕ್ಕಮ್ಮನ ಮಗಳು ಈಗಲೂ ಹೇಳುತ್ತಾಳೆ.
ಅಪ್ಪ ತೀರಿಕೊಂಡ ನಂತರ ಅಣ್ಣಂದಿರು ನನಗೆ ಅಪ್ಪನ ನೆನಪೇ ಬಾರದಂತೆ ಮುದ್ದಾಗಿ ಬೆಳೆಸಿದರು. ಅಂತೆಯೇ ನಮ್ಮ ಅತ್ತಿಗೆಯರೂ ಸಹ.
ವಾರ್ಷಿಕ ವೈದಿಕವೂ ತೀರಿಕೊಂಡವರನ್ನು ನೆನೆಪಿಗೆ ತರುವ ಒಂದು ನೆಪವೇ...
ಹಬ್ಬದ ಆಚರಣೆ ಇಲ್ಲದಿದ್ದರೇನಂತೆ? ಜನ್ಮ ಕೊಟ್ಟ ತಂದೆ-ತಾಯಿಗಳನ್ನು ಆತ್ಮೀಯವಾಗಿ ನೆನೆಯುವುದೇ ಹಬ್ಬವಲ್ಲಲ್ವೇ? ನಿಮ್ಮ ತಂದೆಯವರ ನೆನಪು ನಿಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತಿರಲಿ. - Triveni
ಪ್ರತ್ಯುತ್ತರಅಳಿಸಿಅಪ್ಪನ ನೆನಪು ಮೊಗೆದಷ್ಟು ಬರುತ್ತಲೇ ಇರುತ್ತದೆ...ನನಗೆ ೭ ತಿಂಗಳುಗಳೇ ಭಾರವಾಗುತ್ತಿದೆ..ನಿಮ್ಮ ಪರಿಸ್ತಿತಿ ಅರಿವಾಗುತ್ತದೆ..ತಂದೆಯ ಒಡನಾಟದ ಅರಿವಿಲ್ಲದ ಮಧುರತನ ಮನದ ಮೇಲೆ ಮಾಡುವ, ಹಾಗು ಮೂಡಿಸುವ ಛಾಪು ಅಂತಿಂತದಲ್ಲ ....ಜನ್ಮ ಶತಾಭ್ಧಿ ಒಂದು ಬಹು ರೋಮಾಂಚಕ ಅನುಭವ..ಈ ಸಂದರ್ಭದ ಲೇಖನ ಚಿರನೆನಪಾಗುತ್ತದೆ...
ಪ್ರತ್ಯುತ್ತರಅಳಿಸಿನಿಮ್ಮ ಹಾದಿಯಲ್ಲಿ.... ನನ್ನ ಅಪ್ಪನ ಬದುಕನ್ನು ನನ್ನ ಕಣ್ಣಲ್ಲಿ ಕಂಡಂತೆ ರೂಪಿಸುತಿದ್ದೇನೆ..ಮೊದಲ ವರ್ಷ್ಯಾಬ್ಧಕ್ಕೆ ಹೊರ ತರುವ ಯೋಜನೆ ಇದೆ..
ಬದ್ರಿ ಸರ್ ಹೀಗೆ ಅಲ್ಲವೆ ಕೆಲವು ದಿನ-ವಿಶೇಷಗಳು ಯವಾಗಲೂ ನೆನಪಿನಲ್ಲಿ ಉಳಿದುಬಿಡುತ್ತವೆ..
ಪ್ರತ್ಯುತ್ತರಅಳಿಸಿದಸರ ಹಬ್ಬ ನನ್ನ ಅಕ್ಕ ತೀರಿಕೊಂಡಿದ್ದು ಬನ್ನಿ ಕೊಡು-ತಗೊಳ್ಳುವಾಗ ಈಗಲೂ ನೆನಪಾಗುತ್ತದೆ..
ಕೆಲವೊಂದು ಬರಹಗಳು 'ಶಬ್ದ'ಗಳ ನೆರವಿಲ್ಲದೆಯೂ ತಾಗುತ್ತವೆ.ಮುಟ್ಟುತ್ತವೆ..ಇದೂ ಕೂಡ.
ಪ್ರತ್ಯುತ್ತರಅಳಿಸಿ-RJ
ಬದರಿ ಸರ್...ನಿಮ್ಮ ತಂದೆಗೆ ನನ್ನದೊಂದು...ಪುಟ್ಟ ನಮನ.... :)
ಪ್ರತ್ಯುತ್ತರಅಳಿಸಿಬದರಿ ಸರ್;ನಿಮ್ಮ ತಂದೆಯವರ ನೆನಪಿಗೊಂದು ಶ್ರದ್ಧಾಂಜಲಿ.
ಪ್ರತ್ಯುತ್ತರಅಳಿಸಿತಂದೆಯವರ ಬಗೆಗಿನ ಅಭಿಮಾನಕ್ಕೆ ನಮ್ಮದೊಂದು ನಮನ. ಜಯಶ್ರೀಯವರು ಹೇಳಿದಂತೆ ಇದು ಲೇಖನವೊ ಕಥೆಯೋ ಅಥವಾ ಸರಳ ಪತ್ರವೋ ಎಂಬ ಗೊಂದಲ ಮೂಡುವುದು ಸಹಜ. ನಾವು ಆಸಕ್ತಿದಾಯಕ ವಿಷಯ ಹೇಳುತಿದ್ದೇವೆ ಎಂಬ ಹುಮ್ಮಸ್ಸಿನಲ್ಲಿ ಅಥವಾ ಉಮೇದಿನಲ್ಲಿ ನಮಗೆ ತಿಳಿಯದಂತೆ ಒಂದು ರೀತಿಯ ಭಾವವೇಶಕ್ಕೊಳಗಾಗಿ ಬರೆಯಲಾರಂಬಿಸುತ್ತೇವೆ. ಆದರೆ ಅದು ನಮಗೆ ಮಾತ್ರ ನಿಕಟ. ಬೇರೆಯವರು ಓದಲು ಆರಂಬಿಸಿದಾಗ ಹಾಗ...,ಹಾ ಎಂಬ ಚಿಕ್ಕ ಉದ್ಗಾರವಷ್ಟೇ. ನಿಮ್ಮಿಂದ ನಾವು ಅಪೇಕ್ಷಿಸುವುದು ತೀಕ್ಷಣ ಹಾಗು ನೀವು ರಚಿಸುವ ಪದಗಳ ಗಾರುಡಿ ನಿಮ್ಮ ಕವನದಂತೆ ಸೂಜಿಗಲ್ಲಿನಂತೆ ಸೆಳೆಯುವ ಗುಣದ ಅಪೇಕ್ಷೆ. ಮತ್ತಷ್ಟು ಬಿಸುಪು ಜೊತೆಗೊಂದಿಷ್ಟು ಕುತೂಹಲದ ಲೇಖನ ನಿಮ್ಮಿಂದ ನಮ್ಮ ಅಪೇಕ್ಷೆ.
ಪ್ರತ್ಯುತ್ತರಅಳಿಸಿGOOD :-)
ಪ್ರತ್ಯುತ್ತರಅಳಿಸಿಬದರಿ ಸರ್...
ಪ್ರತ್ಯುತ್ತರಅಳಿಸಿನನ್ನ ಮೆಚ್ಚಿನ ಲೇಖಕ "ರವಿ ಬೆಳಗೆರೆಯವರು" ಓ ಮನಸೇ.." ಪತ್ರಿಕೆಯಲ್ಲಿ ಒಮ್ಮೆ ಬರೆದಿದ್ದರು..
"ಅಪ್ಪನೆನ್ನುವ ಸ್ಟುಪಿಡ್ ಫೆಲೊ..."
ಕೊನೆಯಲ್ಲಿ ಅವರು ಬರೆದಿರುವ ವಾಕ್ಯ ಇನ್ನೂ ನನ್ನ ಮನಸ್ಸಲ್ಲಿ ಅಚ್ಚಳಿಯದೆ ಇದೆ...
"ಅಪ್ಪನ ಮಹತ್ವ...
ಅವನ ಇರುವಿಕೆಯ ಬೆಲೆಯನ್ನು "ಅಪ್ಪನನ್ನು" ಕಳೆದುಕೊಂಡವರಿಗೆ ಮಾತ್ರ ಗೊತ್ತು... !
ಮಗನಿಗೆ ಅಪ್ಪನಾದರೂ ನನ್ನ ಅಪ್ಪ ಇಂದಿಗೂ ನನ್ನನ್ನು ಕಾಡುತ್ತಾನೆ..
ನಿಮ್ಮ ಲೇಖನ ಮನೋಜ್ಞವಾಗಿದೆ...
ಶ್ರದ್ಧಾಂಜಲಿ ನಿಮ್ಮ ತಂದೆಯವರಿಗೆ...... ಅಪ್ಪನನ್ನು ಅತಿ ಹೆಚ್ಚಾಗಿ ಪ್ರೀತಿಸುವ, ಅವರ ನಾಲ್ಕು ಮಕ್ಕಳಲ್ಲಿ ಮೊದಲನೇ ಮಗಳು ನಾನು....ಏನೋ ಗೊತ್ತಿಲ್ಲ... ಓದ್ತಿದ್ರೆ, ಅಳು ಬರ್ತಿದೆ .... ಇದನ್ನ ಓಪನ್ ಮಾಡಬಾರದು ಅಂತಿದ್ರು, 3K ಲಿ ಪೋಸ್ಟ್ ಮಾಡಿದಾಗ, ನೋಡದೆ/ಓದದೆ ಇರೋದಕ್ಕೆ ಆಗಲಿಲ್ಲ.
ಪ್ರತ್ಯುತ್ತರಅಳಿಸಿಅಪ್ಪನ ಜಾಗದಲ್ಲಿ ಅಣ್ಣಂದಿರು ನಿಂತು ಪ್ರೀತಿಯ ಧಾರೆ ಎರೆದು ನಿನ್ನ ಜೀವನದಲ್ಲಿ ಅವರ ಖಾಲಿ ಸ್ಥಾನ ತುಂಬಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು.. ನಿಮ್ಮೆಲ್ಲರ ಪ್ರೇಮ ಬಾಂಧವ್ಯಕ್ಕೆ ಮೆರಗು ಕೊಡಲು ಮಮತೆಯ ಅತ್ತಿಗೆಯರೂ ಕಾರಣ.. ನನ್ನ ತವರು ಸದಾ ನಗುನಗುತ್ತಿರಲಿ ತಮ್ಮಾ...
ಪ್ರತ್ಯುತ್ತರಅಳಿಸಿಜೋಷಿಯವರು ಹೇಳಿದ ಹಾಗೆ ಈ ಬರಹಕ್ಕೆ
ಪ್ರತ್ಯುತ್ತರಅಳಿಸಿಶಬ್ಧಗಳ ನೆರವು ಬೇಡ.
ನಿಮ್ಮ ಅಪ್ಪನವರು ನಿಮ್ಮೆಲ್ಲರಲ್ಲಿ ಜೀವಂತ
ಸ್ವರ್ಣಾ
ತಂದೆಯ ಸ್ಥಾನ ತುಂಬುವುದು ಬಹು ದೊಡ್ಡ ಕೆಲಸ .ಅದನ್ನು ಯಾರಾದರು ಮಾಡಿದರೆ ,ಅದರಂಥ ಸಾದನೆ ಇಲ್ಲ .ನಿಮ್ಮ ಅಣ್ಣದಿರಿಗೆ ನನ್ನ ಅಭಿನಂದನೆಗಳು
ಪ್ರತ್ಯುತ್ತರಅಳಿಸಿಬದರಿನಾಥರೇ, ಸುಂದರ ನೆನಪುಗಳನ್ನು ಹಂಚಿಕೊಂಡಿರುವಿರಿ. ಶುಭವಾಗಲಿ.
ಪ್ರತ್ಯುತ್ತರಅಳಿಸಿಕಣ್ಣು ತೇವವಾದವು. ನನಗನಿಸುವಂತೆ ಪರ ದಂತೆ ಅಪರ ಕರ್ಮವು ಅಗತ್ಯವಾದುದು. ಅಪ್ಪನ ನೆನಪದು ಆಗಾಧ.
ಪ್ರತ್ಯುತ್ತರಅಳಿಸಿ-ಅನೀಲ ತಾಳಿಕೋಟಿ
http://karitopi.blogspot.com/
ತಂದೆಯನ್ನು ನೆನೆಸಿ ಬರೆದ ಚಂದದ ಬರಹ ಬದರಿ ಭೈಯ್ಯ...
ಪ್ರತ್ಯುತ್ತರಅಳಿಸಿಮಾಲತಿ ಎಸ್.
ಬದರಿನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ನೆನಪು ಕಂಬನಿಯಾಗಿ ಈ ಲೇಖನದಲ್ಲಿ ಚಿಮ್ಮಿದೆ. ನಿಮ್ಮ ಜೊತೆಗೆ ನನ್ನದೂ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.
ಸ್ವಲ್ಪ ಬೇಸರವಾಯಿತು ಓದುತ್ತಾ.. ಅಗಲುವಿಕೆ ಮತ್ತದರ ನೆನಪು ಬೇಸರವನ್ನೇ ತರುವುದಲ್ಲವೇ.. ಆ ಕಾರಣಕ್ಕಾಗಿ ಆಗಿರಬಹುದು..
ಪ್ರತ್ಯುತ್ತರಅಳಿಸಿಕೆಲವರು ಎದುರಿಗಿರದಿದ್ದರೂ ಅವರ ನೆನಪುಗಳು ಎಂದೂ ಕಾಡುತ್ತಾ, ಸಲಹುತ್ತಾ ಇರುತ್ತದೆ..
appa amma ibbaroo makkalige eredu kannugaliddante..adaralli ondannu kaledukondaroo,aaguva novu......helalaagadu..nimma thandeyavarige nanna shraddhaanjaliyannu arpisuttene.
ಪ್ರತ್ಯುತ್ತರಅಳಿಸಿನಿಮ್ಮ ತಂದೆಯವರಿಗೆ ನಮ್ಮದೊಂದು ಪುಟ್ಟ ನಮನ... ತಂದೆಯ ನಂತರದ ದಿನಗಳಲ್ಲಿ ನಿಮ್ಮಲ್ಲಿ ಯಾವುದೇ ಕೊರತೆ ಇಲ್ಲದಂತೆ ಅಣ್ಣ ಅತ್ತಿಗೆಯರು ಸಾಕಿದರು ಎಂಬ ಮಾತು ಖುಶಿ ಕೊಡುತ್ತೆ ಸಾರ್.. ಈಗಿನ ಕಾಲದಲ್ಲಿ ಹತ್ತಿದ ಏಣಿಯನ್ನೇ ಒದೆಯುವಂತಹ ಜನರು ಇದ್ದಾರೆ ಅಂತಹದರಲ್ಲಿ ನೀವು ಅವರನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಲಿದ್ದೀರಿ.
ಪ್ರತ್ಯುತ್ತರಅಳಿಸಿತಂದೆಯವರ ನೆನಪು, ಅವರ ಸಾಧನೆಗಳು, ಅಣ್ಣಂದಿರು ಅತ್ತಿಗೆಯರನ್ನು ನೆನಪಿಸಿಕೊಂಡು ಬರೆದ ಲೇಖನ....
ಪ್ರತ್ಯುತ್ತರಅಳಿಸಿಹಾಗೆ ಮನ ಮುಟ್ಟಿತು ಸರ್...
'ಭರಿಯಾಚ ಪರಮ ಸಖ' ಹಾಗೆಯೇ ತಂದೆ ಕೂಡ.
ಪ್ರತ್ಯುತ್ತರಅಳಿಸಿಎಷ್ಟೊಂದು ಅಪ್ಪಂದಿರು ಅವರವರ ಮಕ್ಕಳ ನೆನಪಿನಲ್ಲಿ ಮಾತ್ರ ಬದುಕಿದ್ದಾರೆ
ಪ್ರತ್ಯುತ್ತರಅಳಿಸಿಜೀವನ ಕೆಲವು ಪಾತ್ರಗಳೇ ಹಾಗೆ, ಅವರು ಇಲ್ಲದಿದ್ದರೆ ಏನೋ ಕಮ್ಮಿ ಅನ್ನೋ ಭಾವ ಹೋಗುವುದೇ ಇಲ್ಲ. ನೆನಪಿರದ ಒಂದು ಜೀವದ ಕೆಲವು ತುಣುಕುಗಳನ್ನು ಜೋಪಾನವಾಗಿತ್ತು ಕೊಂಡಿದ್ದವರು ಇಂದು ನಮ್ಮೊಂದಿಗೆ ಹಂಚಿಕೊಂಡಿದಕ್ಕೆ ಥ್ಯಾಂಕ್ಸ್. ನಿಮಗೂ ಅಪ್ಪನ ದಿನದ ಶುಭಾಶಗಳು.
ಪ್ರತ್ಯುತ್ತರಅಳಿಸಿa salute your father... may his soul rest in peace.... uttama lekhana...
ಪ್ರತ್ಯುತ್ತರಅಳಿಸಿತಂದೆಯ ನೆನಪು ಎಂದಿಗೂ ಮಾಸದು. ಲೇಖನ ಚೆನ್ನಾಗಿ ಮೂಡಿ ಬಂದಿದೆ
ಪ್ರತ್ಯುತ್ತರಅಳಿಸಿಅಪ್ಪನ ನೆನಪಿನ ಅಮೃತಾ,,, ಸುಂದರವಾಗಿದೆ ಪಲವಳ್ಳಿ ಸರ್,,,,
ಪ್ರತ್ಯುತ್ತರಅಳಿಸಿನಾವು ವರ್ಷಕ್ಕೊಮ್ಮೆ ಕಳೆದುಕೊಂದವರನ್ನು ತಿಥಿಯ ರೂಪದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದುದನ್ನೇ ಅವರು " ಡೇ " ಗಳಾಗಿ ಮಾಡಿ ಬದುಕಿರುವಾಗಲೇ ನಮ್ಮ ಕೃತಜ್ಞತೆ ಅರ್ಪಿಸಲು ಸಹಾಯಮಾಡಿಕೊಟ್ಟಿದ್ದಾರೆ ಅಂದುಕೊಳ್ಳಬಾರದೇಕೆ? ಕ್ಷಣಕ್ಷಣವೂ ಹೆಜ್ಜೆಹೆಜ್ಜೆಗೂ ನೆನಪಾಗುವ ಅಮ್ಮ ಅಪ್ಪನನ್ನು ಕುರಿತು ಎದುರಿಗೆ ಹೇಳಲಾಗದ ಎಷ್ಟೋ ಗೆಳೆಯರು ನಮ್ಮೊಡನಿದ್ದಾರೆ. ಪಾಪ ಅವರುಗಳು ತಮ್ಮ ತಂದೆತಾಯಿಗೆ ಹೃದಯಪೂರ್ವಕ ನಮನ ಸಲ್ಲಿಸಲು ಇದೊಂದು ಮಾರ್ಗ ಎನಿಸುವುದು. ಇದ್ದಿದ್ದರೆ ಶತಾಯುಷಿಗಳ ಗುಂಪಿಗೆ ಸೇರುತ್ತಿದ್ದ ನಿಮ್ಮ ತಂದೆಯವರ ವಿಚಾರ ತಿಳಿದು ಸಂತೋಷವಾಯ್ತು ಬದರಿ ಸರ್..
ಪ್ರತ್ಯುತ್ತರಅಳಿಸಿನನ್ನ ಐದನೇ ಅಣ್ಣ ಮುದ್ದುರಾಮ ಗುಪ್ತ ಬರೆಯುತ್ತಾರೆ:
ಪ್ರತ್ಯುತ್ತರಅಳಿಸಿMy father is always a great father, his thoughts, views and work are leads to future development. Hats off to him. We need his blessings. And also I remember today my brother Govindanna .
Badari your words on father more than impressive, it is true. Thanks for more information and remembering. Our blessings always to you.
ವಿಶಾಲ ಅತ್ತಿಗೆ ಬರೆಯುತ್ತಾರೆ:
ಪ್ರತ್ಯುತ್ತರಅಳಿಸಿBadri super baraha ,I went through all the replies in fb yellara baraha thumba chenagithu
ನನ್ನ ಮೂರನೇ ಅಣ್ಣ ಮಕ್ಕಳ ತಜ್ಞ ಡಾ. ಪಿ.ಎನ್. ಗೋವಿಂದರಾಜುಲು ಬರೆಯುತ್ತಾರೆ:
ಪ್ರತ್ಯುತ್ತರಅಳಿಸಿBadri's feelings are true.my memories roll back to 1973.My father died on 23rd aug.1973 at Victoria hospital due to Hepatitis and it's complications.I have the greatest satisfaction of having served him till he died and was duly assisted by muddu.Almost all the senior doctors came helped me and they also deeply mourned his death.Kvvenkata ramaiah helped us to shift the body to my village.The whole vilage cried.I took the Asthis to Srirangapatna and performed the rituals.Badri was a child of 3 years.