ಬುಧವಾರ, ಏಪ್ರಿಲ್ 17, 2013

ಕವಿತೆ...

ನೀ ಕೈ ಹಿಡಿದೆತ್ತದೆ
ಭುಜದ ಆಸರೆ ಕೊಡದೆ

ಕವಿತೆ,
ಹಗುರಾಗಲು
ಎನಗೆ ತಾವೆಲ್ಲೇ?



(ಚಿತ್ರಕೃಪೆ : ಅಂತರ್ಜಾಲ)

44 ಕಾಮೆಂಟ್‌ಗಳು:

  1. ನಿಮ್ಮ ಕವನಗಳು ತುಂಬಾ ಚನ್ನಾಗಿವೆ..ಅರ್ಥಗರ್ಭಿತವಾಗಿವೆ..ಹೀಗೇ ಬರೆಯುತ್ತಿರಿ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತುಂಬಾ ಧನ್ಯವಾದಗಳು ಅರವಿಂದ್ ಸಾರ್, ನಿಮ್ಮ ಪ್ರೋತ್ಸಾಹದ ಈ ಮಾತುಗಳು ನನ್ನನ್ನು ಇನ್ನಷ್ಟು ಬರೆಯಲು ಪ್ರೇರೇಪಿಸುತ್ತವೆ. ಪದೇ ಪದೇ ಬರುತ್ತಿರಿ ದಯವಿಟ್ಟು.

      ಅಳಿಸಿ
  2. ಎರಡು ಕಾಲುಗಳ ಮೇಲೆ ನಡಿಗೆ ಚಂದ
    ಐದು ಸಾಲುಗಳ ಕವನವೆ ಅಂದ
    ಭಾರವನ್ನು ಓದುಗರ ಮೇಲೆ ಇಳಿಸಿ ಹಗುರಾದ ಅನುಭವ
    ಸೂಪರ್ ಸಾಲುಗಳು ಬದರಿ ಸರ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಓದುಗ ಮಹಾಶಯ ಕನಿಕರಿಸಿ ಓದಿದರೆ, ನನ್ನ ಕಾವ್ಯಕೂ ಜನ್ಮ ಸಾರ್ಥಕ್ಯ. ಮಹಾ ಪೋಷಕರು ನೀವಿರುವಾಗ ನನಗೇಮ್ತ ಭಯ? ಧನ್ಯವಾದಗಳು.

      ಅಳಿಸಿ
  3. ಶಾರದಾಂಬೆಯ ವರಪುತ್ರ,
    ನಿನ್ನ ಪ್ರತಿ ಶಬ್ದಗಳು ಅರ್ಥಗರ್ಭಿತ..
    ತಮ್ಮಾ ಆ ತಾಯ ಕರುಣೆ ನಿನ್ನ ಮೇಲಿರಲಿ..
    ಹೊಸ ಹೊಸ ಕವಿತೆಗಳ ಹೂ ಗುಚ್ಛ ಹೀಗೆ ಹುಟ್ಟಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಕ್ಕ, ನಿಮ್ಮ ಆಶೀರ್ವಾದವು ಇರಲಿ ಹೀಗೇ ಸದಾ. ಆಗಲೇ ಈ ಮಿಂಚುಹುಳುವೋಳೂ ತುಸುವು ಬೆಳಕು. ಧನ್ಯವಾದಗಳು.

      ಅಳಿಸಿ
  4. ಚಂದದ ಸಾಲುಗಲು.. ಅರ್ಥಗರ್ಭಿತವೂ..
    ಇಷ್ಟವಾಯಿತು ಸರ್..

    ಪ್ರತ್ಯುತ್ತರಅಳಿಸಿ
  5. ಕವಿಗಳಿಗೆ ಕವನಗಳೇ ವರದಾನ..ನಮ್ಮ ಪದಗಳೇ ಹಾಗೆ, ನಮ್ಮ ಭಾವನೆಗಳಿಗೆ ನಮ್ಮ ಕಷ್ಟ ಸುಖಗಳಿಗೆ ಮುದ ನೀಡುತ್ತವೆ, ಹೇಳೋಕೆ ಆಗದ ವಿಷಯವನ್ನು ಪದಗಳೆ ಮಾತಾಡುತ್ತವೆ. ಕವಿತೆಗಳೆ ನಮ್ಮ ಆಸರೆ ಎಂದು ಸಾರುವ ನಿಮ್ಮ ಚುಟುಕ ಮೂಡಿಬಂದ ರೀತಿ ಹಿಡಿಸಿತು.

    ಪ್ರತ್ಯುತ್ತರಅಳಿಸಿ
  6. ಹಗುರಾಗದ ಕವಿತೆ, ಹೆಗಲು ಕೊಡದೆ ಕೈಹಿಡಿದೆತ್ತದೆ...ಚನ್ನಾಗಿದೆ...

    ಪ್ರತ್ಯುತ್ತರಅಳಿಸಿ
  7. ಕವಿಯ ಭಾವನೆಗೆ ಕವನವೇ ಶರೀರ ಎನ್ನುವ ಸತ್ಯವನ್ನು ನಿಮ್ಮ ಕವನಗಳು ಸ್ಪಷ್ಟಪಡಿಸುತ್ತವೆ!

    ಪ್ರತ್ಯುತ್ತರಅಳಿಸಿ
  8. ಒಬ್ಬ ಕವಿ ಕವಿತೆಗೆ ಹೀಗೆ ಸಂಪೂರ್ಣ ಶರಣಾಗತಿ ಅದಾಗ ಅಷ್ಟೇ ಇಷ್ಟು ತಾದತ್ಮ ಭಾವದಿಂದ ಕವಿತೆ ಉಕ್ಕಿ ಬರಲು ಸಾದ್ಯ . ನಿಮ್ಮ ಕವನಗಳು ನಿಮಗಸ್ಥೆ ಅಲ್ಲ ನಮ್ಮೆಲ್ಲರಿಗೂ ಹೃದಯ ತುಂಬಿ ಕೊಳ್ಳಲು ಆಸರೆ ಬದರಿ ಜಿ .

    ಪ್ರತ್ಯುತ್ತರಅಳಿಸಿ
  9. ಈ ಉಪಕೃತ ಭಾವಕ್ಕೆ ನಾನು ನಿಮ್ಮೊಂದಿಗೆ ನೂರಕ್ಕೆ ನೂರರಷ್ಟು ದನಿಗೂಡಿಸುತ್ತೇನೆ. ಈ ರಚನೆ- ಚಿಕ್ಕ ಮೂರ್ತಿಯ ದೊಡ್ಡ ಭಾವ, ಪ್ರಭಾವ....

    ಪ್ರತ್ಯುತ್ತರಅಳಿಸಿ
  10. ತುಂಬಾ ಸುಂದರವಾದ ಸಾಲುಗಳು ಜೊತೆಗೆ ಅರ್ಥಪೂರ್ಣ ಚಿತ್ರ. ವಾವ್ .. ಸಂತೋಷವಾಯಿತು. ಅಭಿನಂದನೆಗಳನ್ನು ಹೇಳಲೇ ಬೇಕು .

    ಪ್ರತ್ಯುತ್ತರಅಳಿಸಿ