Wednesday, September 24, 2014

ಮಹಾಲಯ ಅಮಾವಾಸ್ಯೆ ಮತ್ತು ಆ ಹುಟ್ಟು ಮಚ್ಚೆ!


ಈ ಮಹಾಲಯ ಅಮಾವಾಸೆ ಎಂದರೆ ನನಗೆ ಚಿಕ್ಕ ವಯಸ್ಸಿನಿಂದಲೂ 
ಏನೋ ಆಪ್ತ ಭಾವ ಕಣ್ರೀ...

ಕಾರಣವನ್ನೂ ಹೇಳಿ ಬಿಡುತ್ತೇನೆ. ತಾವು ತೆಲುಗು ಸಿನಿಮಾ ನೋಡುಗರಾದರೆ 1955 ರಲ್ಲಿ ತೆರೆಕಂಡ ಬಹು ತಾರಾ ಚಿತ್ರ ರತ್ನ 'ಮಿಸ್ಸಮ್ಮ' ನೆನಪಿರಬಹುದು. ಅದರಲ್ಲಿ ನಾಯಕಿಯು ಚಿಕ್ಕವಳಾಗಿದ್ದಾಗಲೇ ಆಂಧ್ರದ ಕಾಕಿನಾಡದ ಸಮುದ್ರ ತೀರದಲ್ಲಿ ಮಹಾಲಯ ಅಮಾವಾಸ್ಯೆಯ ದಿನ ಕಳೆದು ಹೋಗಿರುತ್ತಾಳೆ. ಆಕೆಯ ಬಗ್ಗೆ ಅವರ ಹೆತ್ತವರಲ್ಲಿದ್ದ ಏಕೈಕ ಗುರುತೆಂದರೆ ಆಕೆಯ ಪಾದದಲ್ಲಿದ್ದ ಹುಟ್ಟು ಮಚ್ಚೆ. ಅದರ ಸುತ್ತಲೇ ಇಡೀ ಕಥೆ ಸುತ್ತುತ್ತದೆ.

ನಾಯಕಿಯ ಪಾತ್ರದಲ್ಲಿ ನಟಿಸಿದಾಕೆ ಅಂದಕಾಲದ ಪರಿಪೂರ್ಣ ಕಲಾವಿದೆ ಬಹು ಭಾಷಾ ನಟಿ ಸಾವಿತ್ರಿ. ಆಕೆ ಎಂದರೆ ನನಗೆ ಈವತ್ತಿಗೂ ಪಂಚಪ್ರಾಣ.

ನನ್ನ ನೆಚ್ಚಿನ ನಟಿಯು ಈ ಚಿತ್ರದಲ್ಲಿ ಮಹಾಲಯ ಅಮಾವಾಸ್ಯೆಯ ದಿನ ಕಳೆದು ಹೋಗಿರುತ್ತಾಳೆ ಎಂಬ ಕಾರಣದಿಂದ ಈ ದಿನ ನನ್ನ ಪಾಲಿಗೆ ವಿಶಿಷ್ಟ.

ಡಾ. ರಾಜ್ ಅವರ ಚಿತ್ರ ತಾಯಿಗೆ ತಕ್ಕ ಮಗದಲ್ಲಿ ಸಾವಿತ್ರಿಯವರು ಹೆತ್ತ ತಾಯಿಯಾಗಿ ಮನಸೆಳೆದಿದ್ದರು.
ಹಾಗೆ ನೋಡಿದರೆ, ಆಕೆಯ ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು ಚಿತ್ರಗಳೆಲ್ಲವೂ ಮೈಲುಗಲ್ಲುಗಳೇ.
ಗುಂಡಮ್ಮ ಕಥ ಚಿತ್ರದ ಅಮಾಯಕ ದೊಡ್ಡ ಮಗಳು,  ಮೂಗ ಮನಸುಲು ಚಿತ್ರದ ಜನ್ಮಾಂತರದ ಪಾತ್ರ ಹೀಗೆ ಯಾವುದಕ್ಕಾದರೂ ಸೈ. ಆಕೆ ನಿರ್ದೇಶಕನ ಪಾತ್ರ ಕಲ್ಪನೆಯನ್ನು ತೆರೆಗಟ್ಟಬಲ್ಲ ಸಂಪೂರ್ಣ ಕಲಾವಿದೆ.

ತೆಲುಗಿನ ಮಾಯಾಬಜಾರ್ ಚಿತ್ರದಲ್ಲಿ ಆಕೆಯದು ಸುನೀತ ಯುವತಿ ಶಶಿರೇಖಳ ಪಾತ್ರ. ಆಕೆಯ ರೂಪದಲ್ಲಿ ಘಟೋತ್ಕಜನು ಬೇಡದ ಮದುವೆ ತಪ್ಪಿಸಲು ಬರುತ್ತಾನೆ. ಕನ್ನಡದ ಕಿರುತೆರೆ ನಟ ರವಿಕಿರಣರ ಮುತ್ತಾತ ಎಸ್.ವಿ. ರಂಗಾರಾವ್ ಮೇರು ಪ್ರತಿಭೆ. ಅವರು ಈ ಚಿತ್ರದಲ್ಲಿ ಘಟೋತ್ಕಜ.

ಎಸ್.ವಿ. ಆರ್ ಅವರ ನಡಿಗೆಯ ರೀತಿ ಮತ್ತು ಮಾತಾಡುವ ರೀತಿಯೇ ಸೋಜಿಗ.  ಘಟೋತ್ಕಜನು ಶಶಿರೇಖಳ ರೂಪದಲ್ಲಿ ನಟಿಸಿದ ಹಾಡು, 'ಅಹಾ ನಾ ಪೆಳ್ಳಿಯಂಟ'.

ಒಮ್ಮೆ ಸುನೀತ ಯುವತಿಯಂತೆ, ಮತ್ತೊಮ್ಮೆ ಘಟೋತ್ಕಜನ ರಾಕ್ಷಸ ನಡಿಗೆ ಹೀಗೆ ಎರಡನ್ನೂ ಆ ಹಾಡಿನಲ್ಲಿ ಆಕೆ ಸಲೀಸಾಗಿ ನಿಭಾಯಿಸಿ ಬಿಡುತ್ತಾರೆ. ಅವಕಾಶವಾದರೆ ಯೂಟ್ಯೂಬಿನಲ್ಲಿ ಒಮ್ಮೆ ನೋಡಿರಿ.

ಈವತ್ತು ಯಾಕೋ ನನಗೆ ದಿನವೆಲ್ಲ ಆಕೆಯ ನೆನಪು ಆವರಿಸಿಕೊಂಡಿತು ನೋಡಿ...

10 comments:

 1. ಹಳೆಯ ಸ್ವರ್ಣಮಯ ನೆನಪಿನ ಖಜಾನೆಯಿಂದ ತೆಗೆದು ಸ್ವಲ್ಪ ನಮ್ಮಿಂದ ಹಂಚಿ ಕೊಂಡಿದ್ದಿರಿ, ಧನ್ಯವಾದಗಳು.

  ReplyDelete
 2. ಸಾವಿತ್ರಿ ಒಬ್ಬರು ಅದ್ಭುತ ನಟಿ.

  ReplyDelete
 3. ದಕ್ಷಿಣದ 'ಮೀನಾ ಕುಮಾರಿ' ಯೆಂದೇ ಪ್ರಸಿದ್ಧರಾದ ಸಾವಿತ್ರಿಯವರ ನೆನಪು ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು ಬದರೀ. ಅಂತಹ ಅದ್ಭುತ ನಟಿಯ ವೈಯಕ್ತಿಗ ಬದುಕು ದುರಂತವಾದದ್ದೇ ತೀರ ಶೋಚನೀಯ

  ReplyDelete
 4. ಒಳ್ಳೆಯ ನಟಿಯ ಬಗೆಗಿನ ಒಂದಷ್ಟು ಒಳ್ಳೆ ಮಾತುಗಳು ... :)

  ReplyDelete
 5. I have seen the video of the song," Aha, nanage maduve ante..". Did not know the talented actress. Thanks for the sketch.

  ReplyDelete
 6. ನನಗೆ ಇದು ಹೊಸ ವಿಷಯ, ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 7. ಇಂತಹ ಎಂದರೋ.... ಮಹಾನುಭಾವಲು ( ಅಭಿನಯ ಅವಿಸ್ಮರಣನೀಯ ) ಅಂದರಿಕೀ ವಂದನಾಲು.

  ReplyDelete
 8. :) ನನಗೂ ಬಿ.ಸರೋಜಾದೇವಿ ನೋಡಿದರೆ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ ನೆನಪಿಗೆ ಬರುತ್ತದೆ.

  ReplyDelete
 9. ಕಲೆಗಾಗಿ ಕಲೆಯಿಂದ ಕಲೆಗೋಸ್ಕರ ಬದುಕಿ ಬಾಳಿದ ನಟನಾಮಣಿಗಳು ಅವರು. ಶ್ರದ್ಧೆ ಭಕ್ತಿ ಮತ್ತು ಇಂದು ಒಂದು ಸಿನೆಮಾದಲ್ಲಿ ಚೆನ್ನಾಗಿ ಅಭಿನಯಿಸಿದರೆ ಮುಂದೆ ಇನ್ನೊಂದು ಚಿತ್ರ ಸಿಗುತ್ತದೆ ಎಂದು ತಮ್ಮ ಎಲ್ಲಾ ಶಕ್ತಿಯನ್ನು ತುಂಬಿ ಅಭಿನಯಿಸುತ್ತಿದ್ದರು. ಅಣ್ಣಾವ್ರ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅವರ ಅಭಿನಯ ಅಮೋಘ.. ಒಂದು ಸುಂದರ ನೆನಪಿನ ಹೊರೆಯನ್ನು ಹೊತ್ತು ತಂದು ಇಳಿಸಿದ್ದೀರ ಈ ಲೇಖನದಲ್ಲಿ

  ಸೂಪರ್ ಬದರಿ ಸರ್

  ReplyDelete