Friday, February 15, 2013

ನನಗೆ ಟಾನಿಕ್ಕಿನಂತೆ...

ನಾನು ಮೂಕ ವಿಸ್ಮಿತವಾಗಿದ್ದೇನೆ ಗೆಳೆಯರೇ, ಕೊಳಲು ಬ್ಲಾಗಿ ನ ಶ್ರೀಯುತ. ಡಾ|| ಡಿ.ಟಿ. ಕೃಷ್ಣಮೂರ್ತಿ ಅವರು ನನ್ನ ಕವನಗಳ ಬಗೆಗೆ ಬೆನ್ನುತಟ್ಟುವ ಒಂದು ಅತ್ಯುತ್ತಮ ಕವನ ಬರೆದಿದ್ದಾರೆ.

ಅವರ ಪ್ರೀತಿ ಇರಲಿ ಹೀಗೆಯೇ ಸದಾ...

"ಬದರಿಯ ಕವನ!!!"

ಬದರಿಯ ಕವನ ಹೀಗೇ
ಎಂದು ಹೇಳುವುದು ಹ್ಯಾಗೆ!!?


ಕತ್ತಲಲ್ಲೊಂದು ಮತಾಪು
ಝಾಗ್ಗನೆ ಬೆಳಗಿದ
ಮಗುವಿನ ಕೆಂಪಗಿನ ನಗು !!!
ಮನಸ್ಸು ?ಅದೂ ಹಾಗೇ !!!
ನಡೆ ನುಡಿ,ನೇರ!!!
ಅದರದೇ ಒಂದು ಮುಗ್ಧ ಛಾಪು !!
ಕಾರ್ಗತ್ತಲ ರಾಶಿಯಲ್ಲಿ
ಮಿಂಚು ಹುಳುಗಳ ಜಾತ್ರೆ!!!
ಬದರಿಯ ಕವನಗಳ ಯಾತ್ರೆ
ಎಂದೂ ಬರಿದಾಗದ
ಇಂದ್ರಜಾಲ ಪಾತ್ರೆ!!!


ಬದರಿಯ ಕವನ
ಗಮ ಗಮಿಸುವ ದವನ!!!
ಹೀಗೇ ಎಂದು ...............,
ವ್ಯಾಖ್ಯಾನಿಸುವುದು ಹೇಗೆ ಅದನ್ನ ?
ಬಣ್ಣಿಸ ಬಹುದೇ
ಕವನದ ಆತ್ಮವನ್ನ!!!?
ಬದರಿಯ ಕವನ ಇರುವುದೇ ಹಾಗೆ!!!
ಹೀಗೇ ಎಂದು ಹೇಳದ ಹಾಗೆ!!!

(ಸ್ನೇಹಿತ ಬದರಿನಾಥ್ ಪಲವಳ್ಳಿಯವರ ಕವನಗಳ ಬಗ್ಗೆ ಒಂದು ಕವನ) 

http://dtkmurthy.blogspot.in/2013/02/blog-post.html 

ಮಾನ್ಯ ಶ್ರೀ. ಡಾ|| ಡಿ.ಟಿ. ಕೃಷ್ಣಮೂರ್ತಿಯವರು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸಂಸ್ಥೆಯ ಕಾರ್ಗಲ್ ಆಸ್ಪತ್ರೆಯಲ್ಲಿ ಕಿವಿ ಮೂಗು ಗಂಟಲು ತಜ್ಞರು.

ಸ್ವತಃ ಉತ್ತಮ ಕವಿ, ಬರಹಗಾರ, ನಿರಂತರ ಓದುಗ ಮತ್ತು ಆದ್ಯಾತ್ಮಿಕ ಚಿಂತಕ. ಅತ್ಯುತ್ತಮ ಗಾಯಕರೂ ಆಗಿರುವ ಇವರು, ಸದಾ ಚಟುವಟಿಕೆಯಿಂದ ಬದುಕನ್ನು ರೂಪಿಸಿಕೊಂಡಿದ್ದು, ನಮಗೆಲ್ಲ ಸ್ಪೂರ್ತಿಯ ಚಿಲುಮೆ.

ಅವರ ಮಾಹಿತಿ ಪೂರ್ಣ, ಬದುಕನ್ನು ತೆರೆದಿಡುವ ಬ್ಲಾಗ್ ’ಕೊಳಲು’.

15 comments:

 1. ಕೃಷ್ಣ ಮೂರ್ತಿಗಳದು
  ಅಪ್ಪನಂತಹ ಒಲುಮೆ...

  ಅವರ ಈ ಪ್ರೋತ್ಸಾಹದ ಕವನ ನನಗೆ ಟಾನಿಕ್ಕಿನಂತೆ...

  ಒಂದು ಪದ್ಯ ಬರೆಸಿಕೊಳ್ಳುವಷ್ಟು ನನ್ನ ಕವನಗಳು ಉತ್ತಮವೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆದರೆ, ನನಗೆ ಅವರ ಒಲುಮೆಯಂತೂ ಸ್ಪೂರ್ತಿ.

  ಒಂದೊಮ್ಮೆ ನನ್ನ ಬ್ಲಾಗನ್ನು ಯಾರೂ ಓದುತ್ತಲೇ ಇರಲಿಲ್ಲ. ಎಷ್ಟೋ ವರ್ಷಗಳು ಶೂನ್ಯ ಸಂಪಾದನೆ - ಸೊನ್ನೆ ಕಾಮೆಂಟು! ಯಾರೂ ಓದದ ಮೇಲೆ ಏಕೆ ಬರೆಯಬೇಕು ಎಂದು ನೊಂದು ನಾನು ನಿಲ್ಲಿಸಬೇಕೆಂದಿದ್ದಾಗ ನಮ್ಮ ಕೊಳಲಿನ ವೈದ್ಯರೇ, ಮುಂದುವರೆಸುವಂತೆಯೂ ಮತ್ತು ಬರೆಯಲೇ ಬೇಕೆಂದೂ ತಾಕೀತು ಮಾಡಿದವರು. ಇಂದಿನ ನನ್ನ ಯಶಸ್ಸಿಗೆ ಅವರ ಪಾತ್ರವೂ ಬಹಳವಿದೆ. ಅವರಿಗೆ ಕೃತಜ್ಞ.

  ತಪ್ಪಿದ್ದಾಗ ತಿದ್ದಿ, ಕವನದ ಹೂರಣವನ್ನು ಆಗಾಗ ಒದಗಿಸಿ ನನ್ನನ್ನು ಬೆಳೆಸುತ್ತಾ ಬಂದ ಮಹಾ ಪೋಷಕ ಡಾ|| ಕೃಷ್ಣಮೂರ್ತಿ ಅವರು. ಅವರು ತಣ್ಣಗಿರಲಿ.

  ಅವರ ಆಶಯದಂತೆ "ಕತ್ತಲಲಿ ಮತಾಪು" ಆಗುತ್ತಾ, "ಮಗುವಿನ ಕೆಂಪಗಿನ ನಗು"ವನ್ನು ಉಳಿಸಿಕೊಳ್ಳುವತ್ತ ಮುಂದುವರೆಯಲು ಅವರ ಜೊತೆ ನಿಮ್ಮ ಆಶೀರ್ವಾದವೂ ನನಗೆ ಬೆಳಕೇ.

  ಅನಂತ ಧನ್ಯವಾದಗಳು.

  ನಿಮ್ಮ ಒಲುಮೆಯ ಜೊತೆಯೇ
  ನನಗೆ ಶ್ರೀರಾಮ ರಕ್ಷೆ.

  ReplyDelete
 2. "ನಿಮ್ಮೊಲೋಮೆ ನಮಗಿರಲಿ ತಂದೆ ಕೈ ಹಿಡಿದು ನೀವ್ ನಡೆಸಿ ಮುಂದೆ" ನಮ್ಮ ಮಕ್ಕಳು ಚಿತ್ರದ ಹಾಡು ನೆನಪಿಗೆ ಬಂತು...ಸದಾ ಬೆನ್ನು ತಟ್ಟುವ ಇಂತಹ ಸುಂದರ ಹೃದಯಗಳ ಒಡನಾಟ ದಕ್ಕಿರುವ ನೀವು ಧನ್ಯರು..ಅದನ್ನ ಸವಿಯಲು ಅನುವು ಮಾಡಿಕೊಟ್ಟ ನೀವಿಬ್ಬರಿಗೂ ನಮನಗಳು..ಹೀಗೆಯೇ ಸಾಗಲಿ..ಜನುಮ ಜನುಮದ ಅನುಬಂಧ...!

  ReplyDelete
  Replies
  1. ಶ್ರೀಮಾನ್ ನಾನು ನಿಜವಾಗಲಿ ಇಷ್ಟು ಹೊಗಳಿಕೆಗೆ ಮಾನ್ಯನೇ ಗೊತ್ತಿಲ್ಲ. ನಿಮ್ಮ ಪ್ರೋತ್ಸಾಹದ ಹದವಾದ ಮಳೆಯಲ್ಲಿ ನನ್ನ ಕಾವ್ಯ ವನವೂ ಅರಳುತಿದೆ. ಇದರ ಮೇಲೆ ನನ್ನದೇನೂ ಇಲ್ಲ...

   Delete
 3. ಡಾಕ್ಟರ್ ಬರೆದದ್ದೆಲ್ಲಾ ಸರಿಯಿದೆ..... ಇದು ಎಲ್ಲರ ಅಭಿಪ್ರಾಯ ಕೂಡ.... ಆದ್ರೆ ಎಲ್ಲರಿಗೂ ಡಾಕ್ಟರ್ ಥರ ಬರೆಯಲಿ ಆಗಲಿಲ್ಲ ಅಷ್ಟೇ....

  ReplyDelete
  Replies
  1. ಮೊಗೇರಾ ಸಾರ್, ಈವತ್ತಿನ ನನ್ನ ಚಿಕ್ಕ ಗೆಲುವಿಗೂ ನೀವು ಬ್ಲಾಗರುಗಳ ಒಲುಮೆಯೇ ಕಾರಣ.

   ನಿಮಗೆ ಅನಂತ ಧನ್ಯವಾದಗಳು.

   Delete
 4. ದಿನಕರ್ ಮೊಗೆರ ಅವರ ಅಭಿಪ್ರಾಯವೇ ನನ್ನದು
  ಡಾಕ್ಟರು ತುಂಬಾ ಸುಂದರವಾಗಿ ಹೇಳಿದ್ದಾರೆ

  ReplyDelete
  Replies
  1. ಧನ್ಯವಾದಗಳು ಸ್ವರ್ಣಾಜೀ.

   Delete
 5. ಬದರೀಜಿ;ನಿಮಗೆ ನೀವೇ ಸಾಟಿ!!!ನಾನು ಹೇಳಬೇಕಾದ್ದನ್ನು ನನ್ನ ಚಿತ್ರವೇ ಹೇಳುತ್ತದೆ.HATS OFF TO BADRI !!!

  ReplyDelete
  Replies
  1. ಅದೇ ನಗು, ಮಾಸದ ಮುಗುಳ್ ನಗು...

   Delete
 6. ಬದರಿ ಭಾಯ್...

  ಮಸ್ತ್ ಕವನ ಬರದಾರ ನಮ್ ಡಾಕ್ಟ್ರು.......

  ಖುಷಿ ಆತ್ರಿ....

  ReplyDelete
  Replies
  1. ಮಾನ್ಯ ಅಧ್ಯಕ್ಷರೇ,

   ನಿಮ್ಮ ಒಲುಮೆಯ ಮುಂಬೆಳಕಲ್ಲಿ ನಾನು ನಿಧಾನವಾಗಿ ಅರಳುವ ಕುಸುಮ. ನಿಮ್ಮ ಪ್ರೀತಿ ಇರಲಿ ಅನವರತ.

   Delete
 7. ಸೂಪರ್ ಸರ್ ...ಎಲ್ಲರ ಅಭಿಪ್ರಾಯವೇ ನನ್ನ ಅಭಿಪ್ರಾಯವು ಕೂಡ ..... ನಿಮಗೆ ನೀವೇ ಸಾಟಿ

  ReplyDelete
 8. ಉತ್ಪ್ರೇಕ್ಷೆ ಏನಿಲ್ಲ ನಿಮ್ಮ ಕವನಗಳಲ್ಲಿ ಒಂದು ಒಳನೋಟವಿರುತ್ತದೆ
  ಒಮ್ಮೊಮ್ಮೆ ನೇರವಾಗಿ ಮನವನ್ನು ತಟ್ಟಿಬಿಡುತ್ತದೆ

  ReplyDelete