ಸೋಮವಾರ, ಫೆಬ್ರವರಿ 25, 2013

ನಮ್ಮೂರು - 3

ಈ ಸಂಚಿಕೆಯಲ್ಲಿ ಬರುವ ಊರಿನ ಪರಿಚಯ ಸುಮಾರು 40 ವರ್ಷಗಳ ಹಿಂದಿನದು. ಈಗ ಅಲ್ಲಿನ ಪರಿಸರ ಮತ್ತು ಜೀವನ ವಿಧಾನವೂ ಬಹಳಷ್ಟು ಬದಲಾಗಿ ಹೋಗಿದೆ. ಈಗ ಅಲ್ಲಿನ ಮನೆ ಮನೆಗೂ ಭೂಷಣ: ದನ ಕರು ಮತ್ತು ಸೂರಿಗೆ ಡಿಷ್ ಆಂಟನಾ!

ನಾನು ಹೇಳಲು ಹೊರಟಿರುವುದು ನಾನು ಶಾಲೆ ಓದುತ್ತಿದ್ದ ದಿನಗಳ ಬಗ್ಗೆ. ಆಗ ಮುರುಕಲು ತರಗತಿಗಳಿದ್ದ ಸ್ಥಳದಲ್ಲಿ ಈಗ ಚಂದದ ಗೋಪಿ ಬಣ್ಣದ ಶಾಲಾ ಕಟ್ಟಡವಿದೆ. ನಾವೆಲ್ಲ ಮರಳು ಹಾಸಿದ ನೆಲದ ಮೇಲೆ ಕುಳಿತು ಬಳಪ ಮುರಿಯುತ್ತಿದ್ದ ಜಾಗದಲ್ಲೇ ಬೆಂಚುಗಳು ರಾರಾಜಿಸುತ್ತಿವೆ.

ನಮ್ಮ ಹಳ್ಳಿಯು ಮೊದಲೇ ನಿಮಗೆ ಹೇಳಿದಂತೆ ಆಂಧ್ರದ ಗಡಿಗೆ ಬಹಳ ಸಮೀಪವಿರುವುದರಿಂದ ಆಚಾರ ವಿಚಾರಗಳಲ್ಲೂ, ಬಳಕೆಯಲ್ಲೂ ದ್ವಿ ಭಾಷೆ ನುಸುಳಿಬಿಟ್ಟಿರುತ್ತದೆ. ಹಾಗಾಗಿಯೇ ನಮ್ಮ ಮನೆಯಲ್ಲಿ ಈಗಲೂ ನಮ್ಮ ಮಾತು ಕನ್ನಡದಲ್ಲೇ ಶುರುವಾಗಿ, ನಡುವೆಲ್ಲೂ ತೆಲುಗಿಗೆ ಹೊರಳಿ, ಕಡೆಗೆ ಕನ್ನಡದಲ್ಲೇ ಉಪಸಂಹಾರವಾಗುತ್ತದೆ!

ಹೀಗಿರಲು, ನಮ್ಮ ಶಾಲಾ ದಿನಗಳಲ್ಲಿ ಕನ್ನಡ ಮೇಸ್ಟರರ ತರಗತಿಗಳ ಝಲಕ್ ಹೀಗಿರುತ್ತಿತ್ತು. ಮೇಸ್ಟ್ರು ತರಗತಿ ಪ್ರವೇಶಿಸಿ, ಆದೇಶಿಸುತ್ತಿದ್ದರು :

"ಏಮಂಡ್ರ ಕನ್ನಡ ಬುಕ್ಕುಲು ತೀಯಂಡಾ... ಅಕ್ಕಡ ಯಾಬೈ ಮೂಡೋ ಪೇಜುಲೋ ಪದ್ಯಂ ತೀಸ್ಕೋಂಡಾ... ಆ ಪದ್ಯಂಲೋ ಕುವೆಂಪು ಏಮಿ ಚೆಪ್ತಾರಂಟೇ...."
("ಏನ್ರೋ ಕನ್ನಡ ಬುಕ್ಕು ತೆಗೀರೀ... ಅಲ್ಲಿ ಐವತ್ತ ಮೂರನೇ ಪೇಜಲ್ಲಿ ಪದ್ಯ ತೆಗೀರಿ... ಆ ಪದ್ಯದಲ್ಲಿ ಕುವೆಂಪು ಏನ್ ಹೇಳ್ತಾರಂದ್ರೇ...)


ಇನ್ನೊಂದು ನಮಗೆ ಪರಮಾಶ್ಚರ್ಯದ ಸಂಗತಿ ಎಂದರೆ ನಮಗೆ ಮೊದಲನೆ ತರಗತಿ ಪಾಠ ಮಾಡುತ್ತಿದ್ದವರು, ಪಕ್ಕದ ನಕ್ಕಲಹಳ್ಳಿಯ ಮಲ್ಲಪ್ಪ ರೆಡ್ಡಿ ಮಾಸ್ತರರು. ನಾವು ಹತ್ತನೇ ಕ್ಲಾಸು ಮುಗಿಸಿದರೂ ಅವರಿನ್ನೂ ಒಂದನೇ ಕ್ಲಾಸೇ ತೆಗೆದುಕೊಳ್ಳುತ್ತಿದ್ದರು, ಆಗ ನನಗೆ ಹುಟ್ಟಿದ ಎರಡು ಸಾಲು...

ಹಂಗೋ ಹಿಂಗೋ
ದಾಟ್ಕೊಂಡ್ ಬಿಟ್ಟೆ
ಎಸ್ಸೆಸ್ ಎಲ್ ಸೀನಾ,
ಮಲ್ಲಪ್ಪ ರೆಡ್ಡಿ
ಮಾಸ್ತರ್ ಮಾತ್ರ
ಪಾಸಾಗಲೇ ಇಲ್ರೀ
ಒಂದನೇ ಇಯತ್ತೇನಾ!


(ಮುಂದುವರೆಯುವುದು...)


ಫೇಸ್ ಬುಕ್ - ನಮ್ ಕನ್ನಡ ಗುಂಪಿನಲ್ಲಿ ನಿಮ್ಮೊಳಗೊಬ್ಬ ಬಾಲು ಅವರು ಪ್ರಕಟಿಸಿದ ನಮ್ಮೂರ ಚಿತ್ರಣ.
http://www.facebook.com/photo.php?fbid=535156209862166&set=o.109902029135307&type=1&theater

7 ಕಾಮೆಂಟ್‌ಗಳು:

  1. ನಿಮ್ಮ ದ್ವಿಭಾಷಿಕ ಪರಿಸರದ ಸೊಗಸನ್ನು ಓದಿ ಖುಶಿಯಾಗುತ್ತಿದೆ. ಒಂದನೇ ಇಯತ್ತೆ ದಾಟದ ಮಲ್ಲಪ್ಪ ಮೇಷ್ಟರ ಬಗೆಗೆ ಕನಿಕರವೂ ಆಗುತ್ತಿದೆ!

    ಪ್ರತ್ಯುತ್ತರಅಳಿಸಿ
  2. ಈ ತೆಲ್ಗನ್ನಡ ಕೇಳಕ್ಕೆ ಮಜವಾಗಿರತ್ತೆ.
    ಮುಂದುವರೆಯಲಿ ನಿಮ್ಮ ನೆನಪ ಸರಣಿ

    ಪ್ರತ್ಯುತ್ತರಅಳಿಸಿ
  3. ಎರಡು ಭಾಷೆಯ ಪರಿಸರದ ಲಘುಹಾಸ್ಯದ ಘಟನೆ ಚೆನ್ನಾಗಿ ಬಂದಿದೆ

    ಪ್ರತ್ಯುತ್ತರಅಳಿಸಿ
  4. ಶಾಲೆಗಳು ವಿದ್ಯೆಯ ಅಧಿದೇವತೆ ಸರಸ್ವತಿಯ ತಾಣ. ಅಂತಹ ದಿನಗಳ ಬಗ್ಗೆ ಲೇಖನ ಹಿತವಾಗಿದೆ. ಶಾಲಾ ದಿನಗಳಲ್ಲಿ ಎಲ್ಲರ ಪಾಡು ಒಂದೇ.. ಸುಂದರವಾಗಿ ಬರೆದಿದ್ದೀರ ಬದರೀ ಸರ್

    ಪ್ರತ್ಯುತ್ತರಅಳಿಸಿ
  5. ಮಲ್ಲಪ್ಪ ರೆಡ್ಡಿ ಮಾಸ್ತರರ ವ್ಯಕ್ತಿತ್ವ ಇನ್ನೂ ನಿಮ್ಮ ಮನಸ್ಸಿನಲ್ಲಿ ಉಳಿದಿರಬೇಕಾದರೆ ಅವರು ಗಾಢ ವ್ಯಕ್ತಿತ್ವದವರೇ ಸರಿ! :)

    ಪ್ರತ್ಯುತ್ತರಅಳಿಸಿ