ಶುಕ್ರವಾರ, ಜನವರಿ 18, 2013

ಅಸಾಧ್ಯ ಪೂರ್ವಜರು...


Week : 16


ನನಗೆ ಅಚ್ಚರಿಯಾಗುವುದು ನಮ್ಮ ಪೂರ್ವಜರ ಅದ್ಭುತ ಕಲ್ಪನಾ ಶಕ್ತಿ ಮತ್ತು ಅವರ ನಿಖರತೆಯ ಬಗೆಗೆ .

ಇಂದು ನಮ್ಮ ಕೃತಕ ಉಪಗ್ರಹಗಳು ಭೂಮಿಯ ಹೊರಗೆ ಸದಾ ಸುತ್ತುತ್ತಾ ಹೊರ ಮೈಗೆ ಕಾಣುವ ಹವಾಮಾನ, ಕಾಡುಗಳು, ಭೂ ಲಕ್ಷಣಗಳ ಜೊತೆಗೆ ಭೂಮಿಯ ಆಳದಲ್ಲಿ ಹೊಕ್ಕಿರುವ ಹಲವು ಖನಿಜಗಳ ಮತ್ತು ಜಲದ ಆಗರವನ್ನು ನಿಚ್ಚಳವಾಗಿ ತೋರುತ್ತಿವೆ. ಆದರೆ, ಶತಮಾನಗಳ ಹಿಂದೆಯೇ ಇಂದಿನಷ್ಟೇ ಖಚಿತವಾಗಿ ಭೂಪಟ ರಚಿಸಿದ ನಮ್ಮ ಹಿರಿಕರ ಬುದ್ಧಿವಂತಿಕೆ ಮೆಚ್ಚತಕ್ಕದ್ದೇ. ಹಿಂದೆ ರಚಿಸಿದ ಭೂಪಟಗಳು ಇವತ್ತಿಗೂ ನಿಖರ ಮತ್ತು ಸ್ಪಷ್ಟ.

ಕೊಲಂಬಸ್ ಮತ್ತು ವಾಸ್ಕೋ ಡಿ ಗಾಮಾ ಆದಿಯಾಗಿ ಸಮುದ್ರಯಾನ ಮೂಲಕವೋ ಅಥವಾ ಭೂ ಮಾರ್ಗವಾಗಿಯೋ ತಮ್ಮ ದೇಶಗಳಿಂದ ದೂರ ದೂರ ಹೊಸ ಭೂ ಖಂಡಗಳನ್ನು ತಲುಪಿದ ಆದಿ ಪ್ರವಾಸಿಗರು, ಆ ನಂತರ ದಾಖಲಿಸಿದ ತಮ್ಮ ಯಾನದ ನಕಾಶೆ ಮತ್ತು ಪ್ರಯಾಣದ ವಿವರಗಳನ್ನು ಈಗ ಓದಿದರೆ ಅವರ ಪ್ರಾಮಾಣಿಕ ಶ್ರಮ ಮತ್ತು ಅನ್ವೇಷಕ ಶಕ್ತಿಗಳು ಅಭಿಮಾನ ಮೂಡಿಸುತ್ತದೆ.

ಯಾವುದೋ ನಕ್ಷತ್ರ, ಸೂರ್ಯ ಚಂದ್ರರನ್ನು ಆಧಾರವಾಗಿಟ್ಟುಕೊಂಡು ಪ್ರಾಚೀನರು ರೂಪಿಸಿದ ದಿನಚರಿ, ಋತು ಪಟ್ಟಿ, ಮಳೆ - ಬೆಳೆ ಸೂಚಕಗಳು, ಸಮುದ್ರ ಯಾನವಲ್ಲದೆ ಎಲ್ಲ ಕಡೆ ಬಳಸಬಹುದಾದ ದಿಕ್ಸೂಚಿ ಹೀಗೆ ಅವನ ಅನ್ವೇಷಣೆಗಳು ಭೂತ ವರ್ತಮಾನ ಹಾಗೂ ಭವಿಷ್ಯಕ್ಕೂ ಆಕರಗಳೇ.

ಹಾಗೆ ನೋಡಿದರೆ ನಾವುಗಳೇ ತುಸು ಸೋಮಾರಿಗಳು, ನಮಗೆ ಚಿಕ್ಕ ದಿನಸೀ ಪಟ್ಟಿಯನ್ನು ಕೂಡಲೂ ಅನಿವಾರ್ಯವಾಗಿ ಕ್ಯಾಲಿಕ್ಯುಲೇಟರ್ ಬೇಕೇ ಬೇಕು. ಅದೇ ಹಿಂದಿನವರು ಕೂಡುವಿಕೆ ಕಳಯುವಿಕೆಯನ್ನು ಸಲೀಸಾಗಿ ಮನಸ್ಸಿನಲ್ಲೇ ಗುಣಿಸಿ ತಟ್ಟನೆ ಹೇಳಿ ಬಿಡುತ್ತಿದ್ದರು ಎಂದು ಕಾಣುತ್ತದೆ. ಅವರು ಗಣಿತದ ಎಲ್ಲ ಶಾಖೆಗಳ ಪರಿಶೋಧನೆಗಳನ್ನು ಇಂದಿನ ಗಣಕ ಯಂತ್ರಗಳಿಲ್ಲದೆ ಮಾಡಿ ಮುಗಿಸಿದ್ದರು.

ಇಂದಿನ ಬೃಹದಾಕಾರದ ಕ್ರೇನುಗಳು, ಕಲ್ಲು ಕಡೆಯುವ ಯಂತ್ರಗಳು, ಲೇಸರ ಮಾಪಮನಗಳು ಮತ್ತು ಭಾರೀ ಭೂ ಸಂಚಾರೀ ವಾಹನಗಳ ಹಂಗಿಲ್ಲದೆ ದೂರದ ಈಜಿಪ್ಟಿನ ಪಿರಮಿಡುಗಳನ್ನೂ, ನಮ್ಮ ತಾಜಮಹಲು, ಲೇಪಾಕ್ಷೀ ಅಷ್ಟೇಕೆ ನಮ್ಮದೇ ಅಂಗಳದ ಹೆಮ್ಮೆಯ ಗೋಲಗುಂಬಜೂ, ಬೇಲೂರು ಹಳೇಬೀಡುಗಳ ದೊಡ್ಡ ದೇಗುಲಗಳ ನುಣುಪಾದ ಬೃಹದಾಕಾರದ ಕಲ್ಲು ಕಂಬಗಳನ್ನೂ ಆತ ನಿರ್ಮಿಸಿದ.  ಪೂರ್ವಜರು ಅವನ್ನೆಲ್ಲಾ ರೂಪಿಸಿದ್ದು ಹೇಗೆಂದು, ಇಂದಿನ ಆಧುನಿಕ ಪರಿಕರಗಳಿಗೆ ಹೋಲಿಸಿ ನೋಡಿ ನಾವು ಸಂಶೋಧನೆ ಮಾಡುತ್ತಲೇ ಇದ್ದೇವೆ!

ಅಸಲು ಮನುಜ ಮನಸು ಮಾಡಿದರೆ ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲ ಎನ್ನುವುದನ್ನು ನಾವು ಕಲಿಯ ಬೇಕಾದ್ದು ಹಿಂದಿನ ತಲಮಾರುಗಳಿಂದ. ಅವರ ಬುದ್ದಿಮತ್ತೆ ಬಹುಶಃ ನಮಗಿಂತಲೂ ಹಲವು ಪಟ್ಟು ಹೆಚ್ಚಿನದಾಗಿತ್ತೆಂದು ತೋರುತ್ತದೆ.

ಇವೇ ಅಲ್ಲದೆ ಅವರು ನಮಗೆ ಪಾಠವಾಗಬಲ್ಲ ಪರಿಪೂರ್ಣರು. ಅವರ ವಸುಂಧರೆ ಎಡೆಗಿನ ಪ್ರೀತಿಯಿಂದ ನಾವುಗಳು ಇಂದು ಬದುಕಿದ್ದೇವೆ. ಅವರೆಂದೂ ನೀರನ್ನು, ಗಾಳಿಯನ್ನೂ ಕಲುಷಿತಗೊಳಿಸಲಿಲ್ಲ. ಕಾಡು ಕಬಳಿಸಲಿಲ್ಲ, ಹಸಿರನ್ನು ಅಳಿಸಲಿಲ್ಲ, ಅಣು ಸಂಶೋಧನೆಯ ಹೆಸರಿನಲಿ ಬುಡದಲ್ಲೇ ಪಾತಕ ಸ್ಫೋಟಕವನ್ನು ಪೋಷಿಸುವ ಹುಂಬತನಕ್ಕೆ ಹೋಗಲಿಲ್ಲ. ಹಾಗಾಗಿಯೇ ನಮ್ಮ ಕಾಲಕ್ಕೆ ಇಂದಿಗಾದರೂ ಧರಿತ್ರಿ ಸುಸ್ಥಿತಿಯಲೇ ದೊರಕಿತು. ಅದು ಅವರ ಉದಾರ ಮನಸಿನ ಬಳುವಳಿ. ಮುಂದಿಗಾದರೂ ನಮ್ಮ ಪೀಳಿಗೆಯು ಉಸಿರಾಡಲು ನಾವು ಶುದ್ಧ ಗಾಳಿಯನ್ನಾದರೂ ಉಳಿಸುತ್ತೇವೆಯೋ ಅದೇ ಪ್ರಶ್ನೇ?


ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
18.01.2013

http://gulfkannadiga.com/news/culture/36808.html
(ಚಿತ್ರ ಕೃಪೆ : ಅಂತರ್ಜಾಲ)


13 ಕಾಮೆಂಟ್‌ಗಳು:

  1. sir .......it is an excellent article. every new generation guy should read understand that he is also standing on this old platform

    ಪ್ರತ್ಯುತ್ತರಅಳಿಸಿ
  2. ಬದರಿನಾಥರೆ,
    ನಿಮ್ಮ ಹಾರೈಕೆ ಫಲಿಸಲಿ ಎಂದಷ್ಟೇ ನಾನು ಪ್ರಾರ್ಥಿಸಬಹುದು!

    ಪ್ರತ್ಯುತ್ತರಅಳಿಸಿ
  3. ಅವರು ಸೋತಿದ್ದು ನಮ್ಮಂಥ ಒಂದು ಜನಾಂಗದ ಸೃಷ್ಟಿಯಲ್ಲಿ ಮಾತ್ರ :)

    ಪ್ರತ್ಯುತ್ತರಅಳಿಸಿ
  4. ಪೂರ್ವಜರೆಲ್ಲ ಬುದ್ದಿವಂತರೇ ಬಿಡಿ :)

    ಮಾಹಿತಿ ಚೆನ್ನಾಗಿದೆ ...

    ಬರಿತಾ ಇರಿ ..

    ಓದ್ತಾ ಇರ್ತೀವಿ ..

    ಧನ್ಯವಾದ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಜೊತೆಗೆ ನನ್ನ ಪೂರ್ವಜರೂ ಭಾಗ್ಯಮ್ಮಾ ಅಂದರೇ ಮಂಗಗಳು! ಹಹ್ಹಹ್ಹಾ...

      ಓದಿ ಪ್ರೋತ್ಸಾಹಿಸುತ್ತಿರಿ ಹೀಗೆ...

      ಅಳಿಸಿ
  5. ಬಹಳ ಯಥಾವತ್ ಕಥೆ ನಮ್ಮ ಪೀಳಿಗೆಯದು. ನಿಜಕ್ಕೂ ಆ ಕಾಲದವರ ಬುದ್ಧಿ ಶಕ್ತಿಗೆ ಎದುರಿರಲಿಲ್ಲ,,,ನಮ್ಮ ಶಾಲಾ ದಿನಗಳ ಮಗ್ಗಿ ಬಾಯಿ ಪಾಠ ನನಗೆ ನನ್ನಂಥವರಿಗೆ ತಮ್ಮ ಪ್ರೌಢ ಮತ್ತು ಪದವಿ ಸಮಯಗಳಲ್ಲಿ ಎಷ್ಟು ಸಹಕಾರಿಯಾಗಿತ್ತು ಎಂಬುದು ಈಗ ಕೆಲವೊಮ್ಮೆ ಕ್ಯಾಲ್ಕುಲೇಟರ್ ಸಿಗದೆ ಕೆಲ ಸಮಸ್ಯೆಗಳನ್ನು ಬಿಡಿಸುವಾಗ ಅರಿವಾಗುತ್ತದೆ. ವರ್ಗಮೂಲವನ್ನು ಕಂಡುಹಿಡಿಯುವುದು ಕಾಗದ ಪೆನ್ನಿನ ಮೂಲಕ ಆಗ ಮಾಡುತ್ತಿದ್ದೆವು ಎಂದರೆ ಇಂದಿನ ವಿದ್ಯಾರ್ಥಿಗಳು ಹೌದಾ?? ಎನ್ನುವಂತಾಗಿದೆ.
    ಬದರಿ ಚನ್ನಾಗಿದೆ ಲೇಖನ

    ಪ್ರತ್ಯುತ್ತರಅಳಿಸಿ
  6. ಬದರೀ ಸಾರ್..

    ನಿಜ ನಮ್ಮ ಹಿರಿಯರ ಸಾಧನೆ ಮತ್ತು ಶೋಧನೆಗೆ ಹೋಲಿಸಿದರೆ ನಮ್ಮ ಇವತ್ತಿನ ಸಾಧನೆಗಳು ಅವುಗಳಷ್ಟು ಎತ್ತರಕೆ ನಿಲ್ಲಲಾರವು ಅನ್ನುವುದು ಸತ್ಯ.
    ಈಗಿನ ಸಾಧನೆಗಳಾದರೂ ಅವುಗಳ ತಳಹದಿಯ ಮೇಲೆ ನಿಂತು.. ಅವುಗಳ ಸಿದ್ಧಾಂತಗಳ ಶಕ್ತಿಯೇ ಮೇಲೆಯೇ ಉದಯಿಸಿ ಬರುತ್ತಿರೋದು ಅನ್ನೋದು ನಿಜ.
    ಅವರು ನೆಟ್ಟ ವಿಜ್ಞಾನದ ಬೇರು ಈಗಲೂ ಅಚ್ಚರಿಯ ಅಸಂಖ್ಯಾತ ಕೊಡುಗೆಗಳನ್ನ ನೀಡುತ್ತಿದೆ.

    ತುಂಬಾ ಒಳ್ಳೆಯ ಲೇಖನ ಸಾರ್. ಅಭಿವೃದ್ಧಿ ಅನ್ನೋ ಹೆಸರಿನಲ್ಲಿ ನಾವು ಮಾಡುತ್ತಿರುವ ಅನಾಹುತಗಳ ಕುರಿತಾಗಿ ನಾವೆಲ್ಲಾ ಎಚ್ಚೆತ್ತು ಕೊಳ್ಳಲೇ ಬೇಕಿದೆ.

    ಪ್ರತ್ಯುತ್ತರಅಳಿಸಿ
  7. ನನಗೂ ನಮ್ಮ ಪೂರ್ವಜರ ಸಾಧನೆಯನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಉತ್ತಮ ಲೇಖನ.

    ಪ್ರತ್ಯುತ್ತರಅಳಿಸಿ
  8. ಯಾವ ಆಧುನಿಕ ತಾಂತ್ರಿಕತೆಯ ಮೆರುಗು ಇಲ್ಲದೆ ಅಸಾಧಾರಣ ಕಲೆ ಅರಳಿತ್ತು, ಅವರಿಗೆ ಇದ್ದದ್ದು ಒಂದೇ ಗುರಿ...ನಮ್ಮ ಮುಂದಿನ ಪೀಳಿಗೆಗೆ ಒಂದು ಒಳ್ಳೆಯ ಪ್ರಪಂಚ ಕೊಡಬೇಕೆಂಬುದು...ಅದಕ್ಕೆ ಉದಾಹರಣೆ ಕಲ್ಲಲ್ಲೇ ಕಲೆಯನ್ನು ಕಂಡ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೊನಾರ್ಕ್, ಎಲ್ಲೋರಾ, ಅಜಂತಾ, ಜೈಪುರದ ಅರಮನೆಗಳು ಹೀಗೆ ಬೇಕಾದಷ್ಟು ನಮ್ಮ ಕಣ್ಣ ಮುಂದೇ ಇವೆ...ನಾವು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತಿರುವ ಪ್ರಪಂಚ ನೆನೆದರೆ ಭಯವಾಗುತ್ತದೆ...ಸುಂದರ ಲೇಖನ ಬದರಿ ಸರ್..

    ಪ್ರತ್ಯುತ್ತರಅಳಿಸಿ