Monday, December 24, 2012

ಆದರೆ ಹೆಣ್ಣು ... ಹುಟ್ಟಿದರೆ ಸಾಕು..


ನನ್ನ ಅನಿಸಿಕೆ :
 
ಹೆಣ್ಣು ಹುಟ್ಟಿದಾಗ ಎಂತಹ ತಾರತಮ್ಯ ತೋರಿಸುತ್ತಾರೆ ಎಂಬುದನ್ನು ನನ್ನ ಹತ್ತಿರದ ಹೆಣ್ಣು ಮಗಳಿಗೆ ಹೆಣ್ಣು ಮಗುವಾದಾಗ ಕಣ್ಣಾರೆ ಕಂಡಿದ್ದೇನೆ. 

ಗಂಡು ಮಕ್ಕಳು ಮಾತ್ರ ಮುಂದೆ ಒದಗುವರು ಎಂಬ ಪೊಳ್ಳಿಗೆ ಬಿದ್ದ ಕೊಟ್ಟ ಮನೆಯವರ ಮತಿ ಹೀನತೆ ಇದು.

ನಮ್ಮ ಚಿಕ್ಕಮ್ಮನನ್ನು ಅವರ ಹೆಣ್ಣು ಮಕ್ಕಳೇ ನೋಡಿಕೊಂಡರು. ಗಂಡು ಮಕ್ಕಳು ಆಸ್ತಿ ಮಾತ್ರ ಹಂಚಿಕೊಂಡರು!

ಹೆಣ್ಣು ಮಗುವಿಗೂ ಒಂದು ವರದಾನವಿದೆ, ಆಕೆ ಯಾರದೇ ಸ್ಪರ್ಷದ ಹಿಂದಿನ ಅಸಲಿಯತ್ತನ್ನು ಸುಲಭವಾಗಿ ಪತ್ತೆ ಹಚ್ಚಿಬಿಡಬಲ್ಲಳು. ಅಕ್ಕರೆ ಯಾವುದು ನಖರಾ ಯಾವುದೆಂದು ಆಕೆ ತಟ್ಟಂತ ಹೇಳಿ ಬಿಡಬಲ್ಲಳು. ಅಂತೆಯೇ ನೋಟಗಳನ್ನೂ ಸಹ.
ಬದುಕಿನ ವಿವಿದ ಹಂತಗಳಲ್ಲಿ ಆಕೆ ಬಚಾವಾಗಿ ಬರಬೇಕಾದ ಬಾಣಗಳೆಷ್ಟೋ! ಯಾವ ಹುತ್ತದಲ್ಲಿ ಯಾವ ಹಾವೋ?

ಶೋಷಣೆಗೆ ಯಾವುದೇ ಮುಖವಿರಲಿ. ಅದಕ್ಕೆ ಆಕೆ ಪ್ರತಿಭಟಿಸ ಬೇಕು. ಮುಳ್ಳುಗಳಿರುವ ಕಡೆಯೇ ಇರುವ ಹೂಗಳ ಸಹಾಯವನ್ನು ಪಡೆಯ ಬಹುದು. ಹಿಂಸೆಗಳನ್ನು ಆಕೆ ಎದುರಿಸಬೇಕು.

ನಮ್ಮ ನ್ಯಾಯಾಂಗ ವ್ಯವಸ್ಥೆ ಇನ್ನಾದರೂ ತನ್ನ ಬಸವ ಹುಳುತನವನ್ನು ಮರೆತು, ವೇಗವನ್ನು ಪಡೆದುಕೊಳ್ಳ ಬೇಕು. ನ್ಯಾಯಾಂಗ ವ್ಯವಸ್ಥೆಯು ಆಮೂಲಾಗ್ರ ಬದಲಾವಣೆಯಾಗಬೇಕು. ಶಿಕ್ಷೆಯ ಪ್ರಮಾಣದ ಘೋರತೆಯ ಮೇಲೆ ಅಪರಾಧಿ ಆಗುವ ಧೈರ್ಯವೂ ಇಳಿ ಮುಖವಾಗಬಹುದು.

ಒಂದು ನಾಗರೀಕ ಸಮಾಜವನ್ನು ರೂಪಿಸುವಲ್ಲಿ ಸರ್ಕಾರಗಳ ಪಾತ್ರವನ್ನು ಮೊದಲು ಅದು ಮನಗಂಡರೆ ಒಳಿತು.

ನಿಮ್ಮ ಈ ಲೇಖನವನ್ನು ಪುರುಷ ವಿರೋಧಿ ಎಂದಾಗಲೀ, ಸ್ತ್ರೀ ಪರ ಚಿಂತನೆ ಎಂದಾಗಲಿ ನೋಡುವ ಅವಶ್ಯಕತೆಯೇ ಇಲ್ಲ, ಇದರ ಹಿಂದಿರುವ ಮಾನವೀಯ ಕಳಕಳಿ ನಮ್ಮನ್ನು ಖಂಡಿತ ತಟ್ಟುತ್ತದೆ.

ದೆಹಲಿಯಲಾದರೆ ಪ್ರತಿಭಟನೆ, ನಮ್ಮ ಹಳ್ಳಿಗಳಲಾರದೆ ಮರೆತಂತೆ ನಟಿಸುವ ಹೋರಾಟದ ಮನಸ್ಥಿತಿ ಬೇಡ. 

ತಪ್ಪು ಎಲ್ಲೇ ಇರಲಿ ಅದನ್ನು ತಿದ್ದುವುದಕ್ಕೆ ಮೊದಲು ನಮ್ಮ ಮನಸ್ಸುಗಳು ಸಿದ್ದವಾಗಲಿ. 

ಒಳ್ಳೆಯ ಆಶಯ ಲೇಖನಕಕಾಗಿ ಧನ್ಯವಾದಗಳು.
ಈ ಬರಹವನ್ನು ನನ್ನ ಬ್ಲಾಗಿನಲ್ಲೂ ಹಂಚಿಕೊಳ್ಳುತ್ತೇನೆ.

(ಒಳ್ಳೆಯ ಬ್ಲಾಗ್ ಬರಹ ಒಂದಕ್ಕೆ
ನಾನು ಪ್ರತಿಕ್ರಿಯಿಸಿದ್ದು ಹೀಗೆ,
ಅವರು ಅನುಮತಿಸಿದ ಮೇಲೆ
ಆ ಬರಹದ ಲಿಂಕ್ ಅನ್ನೂ
ನಿಮಗೆ ಕೊಡುತ್ತೇನೆ)

11 comments:

 1. ನಿಜ ಬದರಿ, ಹೆಣ್ಣಿಗೆ ಶಕ್ತಿಯ ರೂಪ ಎಂದೆಲ್ಲಾ ಹೇಳೋರೂ ನಾವೇ ಆ ಹೆಣ್ಣಿನ ಶೋಷಣೆಗೆ ಕಾರಣಕರ್ತರೂ ನಾವೇ,,ಎಂತಹ ವಿಪರ್ಯಾಸ. ನಿಮ್ಮ ಕಾಳಜಿಯೂ ಅರ್ಥವಾಗುತ್ತೆ, ಅದರಲ್ಲೂ ವಿಕೃತತೆಯತ್ತ ಹೊರಳುತ್ತಿರುವುದು ಯುವತೆ ಮಾತ್ರ ಅಲ್ಲ...ಎನ್ನುವುದು ಇನ್ನೂ ಚಿಂತೆಗೀಡುಮಾಡುವ ವಿಷಯ. ನಿಮ್ಮೊಂದಿಗೆ ದನಿ ನನ್ನದೂ.

  ReplyDelete
 2. ಬದರಿನಾಥರೆ,
  ಹೆಣ್ಣುಮಕ್ಕಳಿಗೆ ಇರುವ ಅಂತಃಕರಣ ಗಂಡುಮಕ್ಕಳಿಗೆ ಎಲ್ಲಿಂದ ಬರಬೇಕು? ಆದರೆ ನಮ್ಮ ಸಮಾಜ ಹೆಂಗಸರನ್ನು ಕೀಳುಗಳೆಯುವದು ಏಕೆ ಎನ್ನುವುದೇ ತಿಳಿಯದು.

  ReplyDelete
 3. ಸಂಪತ್ತಿಗೆ ಸವಾಲ್ ಚಿತ್ರದ ಸಂಭಾಷಣೆ..."ವಿದ್ಯೆಗೆ ಸರಸ್ವತಿ, ದುಡ್ಡಿಗೆ ಲಕ್ಷ್ಮವ್ವ, ಧೈರ್ಯಕ್ಕೆ ಪಾರ್ವತೀ..ಹೀಗೆ ಎಲ್ಲದಕ್ಕೂ ನಮ್ಮ ಹಿರಿಯರು ಹೆಣ್ನುಗಳನ್ನೇ ಹೆಸರಿಸಿದ್ದಾರೆ.."...ಹಾಗೆ ಈ ಹೆಣ್ಣುಗಳ ಮೇಲೆ ನಡೆಯುವ ದೌರ್ಜನ್ಯ ಇದು ನಮ್ಮ ಮಾಧ್ಯಮದ ಸೃಷ್ಟಿಯೇ...ಶೋಷಣೆ, ಬಲಾತ್ಕಾರ ಎಲ್ಲವು ವೈಭವಿಕೃತವಾದಾಗ ಸಮಸ್ಯೆಗಳು ಶುರುವಾಗುತ್ತವೆ..ಮಕ್ಕಳಿಗೆ ಒಳ್ಳೆಯ ಪಾಠ ವನ್ನು ಕಲಿಸದ ಅಥವಾ ಕಲಿಸಲು ಬಿಡದ ಈ ಸಮಾಜ, ಮಾಧ್ಯಮಗಳು..ಅವುಗಳು ದಾರಿ ಬಿಡಲು ದಾರಿ ಮಾಡಿಕೊಡುತ್ತವೆ...ಎಲ್ಲದನ್ನು ಪಾಶ್ಚಾತ್ಯ ದೇಶ ಎಂದು ಅನುಕರಿಸುವ ಈ ಸಮಾಜ ಒಳ್ಳೆಯದನ್ನು ಮಾತ್ರ ಅವರಿಂದ ಕಲಿಯುವುದಿಲ್ಲ..ಒಳ್ಳೆಯ ಅನಿಸಿಕೆ ನಿಮ್ಮದು ಬದರೀ ಸರ್..

  ReplyDelete
 4. ಸರ್,ನಿಮ್ಮ ಅನಿಸಿಕೆ ಸರಿಯಾಗಿದೆ... ಇಂದಿನ ಪರಿಸ್ಥಿತಿಯಲ್ಲಿ ಹೆಣ್ಣನ್ನು ಸಮಾಜ ಕಾಣುತ್ತಿರುವ ದೃಷ್ಟಿ ನಿಜಕ್ಕೂ ಬದಲಾಗಬೇಕಿದೆ...ಹೆಣ್ಣನ್ನು ದೇವತೆ ಎಂದು ಪೂಜಿಸುವ ನಾಡು ನಮ್ಮದು..ಹಾಗಂತ ಎಲ್ಲ ಘಟನೆಗಳ ಹಿಂದೆ ಪುರುಷನದ್ದೇ ತಪ್ಪು ಎಂದು ದೂಷಿಸುವುದು ತರವಲ್ಲ(ಕಾಲವನ್ನು ಹೊರತುಪಡಿಸಿ)... ಕೆಲವು ಸನ್ನಿವೇಶಗಳಲ್ಲಿ ತನ್ನ ಗೌರವ ಕಾಪಾಡಿಕೊಳ್ಳುವುದು ಹೆಣ್ಣಿನ ಕರ್ತವ್ಯ ಅನ್ನುವುದು ನನ್ನ ಭಾವನೆ,,,,

  ReplyDelete
 5. ನಿಮ್ಮ ಮಾತುಗಳು ನಿಜ ಬದರಿ ಸರ್,ಜ್ಞಾನವಿಲ್ಲದ ನಾವು ಯಾಕೆ ಹಿಂಗಾದುತ್ತಿದ್ದೇವೆ ಅರ್ಥ ಆಗುತ್ತಿಲ್ಲ. ಕಾಡಿನ ಪ್ರಾಣಿಗಳಿಗಿಂತ ಕೆಟ್ಟವರು ನಾವು

  ReplyDelete
 6. ನಿಜ ಸರ್....ನಾಚಿಕೆಗೇಡಿನ ವಿಷಯ.....ವಿದ್ಯಾ ವಂತರೆನಿಸಿ ಕೊಂಡ ವರು ಕೂಡ ಅಮಾನವೀಯವಾಗಿ ವರ್ತಿಸುತ್ತಿರುವುದು ವಿಷಾದನೀಯ. ನನಗೂ ಒಬ್ಬಳು ಮಗಳಿದ್ದಾಳೆ....ನಾನು ಅವಳನ್ನು ಪಡೆದಿರುವುದೇ ನನ್ನ ಭಾಗ್ಯ ಎಂದುಕೊಂಡಿದ್ದೀನಿ.....

  ReplyDelete
 7. ತುಂಬಾ ಸೊಗಸಾಗಿ ಬರೆದಿದ್ದೀರ ಬದರಿ, ನಿಮ್ಮ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ.

  ReplyDelete
 8. ನಿಮ್ಮ ಮಾತು ನಿಜ ಬದರಿ ಸರ್ ... ತುಂಬಾ ಚೆನ್ನಾಗಿದೆ

  ReplyDelete
 9. ಇಂದೂ ಕೂಡ ಹೆಣ್ಣೇ ? ಅನ್ನೋ ಪ್ರಶ್ನೆ ಮಾಯವಾಗದಿರುವುದು
  ನೋವಿನ ಸಂಗತಿ

  ReplyDelete
 10. ತುಂಬಾ ಚೆನ್ನಾಗಿ ಬರೆದಿದ್ದೀರ ಸರ್.ನೀವು ಹೇಳಿದ ಹಾಗೇ ನಮ್ಮ ದೇಶದ ಕಾನೂನು ವ್ಯವಸ್ಥೆ ಮತ್ತೆ ನಮ್ಮ ಜನರು ಆಲೋಚಿಸುವ ದಿಕ್ಕು ಬದಲಾಗಬೇಕು ಸರ್.ಇಲ್ಲದಿದ್ದರೆ ಇಂಥ ಸಮಸ್ಯೆಗಳಿಗೆ ಅಂತ್ಯ ಅನ್ನುವುದೇ ಇರುವುದಿಲ್ಲ ಅನಿಸುತಿದೆ.

  ReplyDelete
 11. ಇದು ತಪ್ಪಾಗಿದೆ. ಹೆಣ್ಣನ್ನು ಹುಟ್ಟಿದ ಕೂಡಲೇ ಕೊಲೆ ಮಾಡಬೇಕು, ಬದುಕಲು ಬಿಡಬಾರದು

  ReplyDelete