ಶನಿವಾರ, ಫೆಬ್ರವರಿ 2, 2013

ನಮ್ಮೂರು - 1

ಫೇಸ್ ಬುಕ್ - ನಮ್ ಕನ್ನಡ ಗುಂಪಿನಲ್ಲಿ ನಿಮ್ಮೊಳಗೊಬ್ಬ ಬಾಲು ಅವರು ಪ್ರಕಟಿಸಿದ ನಮ್ಮೂರ ಚಿತ್ರಣ.
ಭಾಗ - 1





ನನಗೆ ಬಾಲ್ಯ ಎಂದ ಕೂಡಲೆ ನನಗೆ ನೆನಪಾಗುವುದು ನನ್ನ ಹಳ್ಳಿಯಾದ ವಾಟದಹೊಸಹಳ್ಳಿ.

ಐದನೇ ತರಗತಿಯವರೆಗೂ ಅಲ್ಲಿ ಓದಿ ನಂತರ ಮುದ್ದೇನಹಳ್ಳಿಗೆ ಸೇರಿದೆ.

ನನ್ನ ಬಾಲ್ಯದಲ್ಲಿ ನನ್ನ ನೆಚ್ಚಿನ ಆಟಗಳೆಂದರೆ, ಬಸ್ಸಾಟ, ಪೈಪಾಟ, ಲಗೋರಿ, ಕಳ್ಳ ಪೋಲಿಸ್ ಮತ್ತು ಕುಂಟೇ ಬಿಲ್ಲೆ.

ಬಸ್ಸಾಟ ದಾರ ಕಟ್ಟಿಕೊಂಡು ಮಕ್ಕಳೆಲ್ಲ ಒಳಗೆ ಸೇರಿ ಮುಂದಿನವನು ಚಾಲಕ, ಹಿಂದಿನವನು ನಿರ್ವಾಹಕನಂತೆ ಆಡುವ ಆಟ. ಊರಿನ ಗಲ್ಲಿಗಲ್ಲಿಗಳಲ್ಲೂ ನಮ್ಮ ಬಸ್ಸು ಓಡಿದ್ದೇ ಓಡಿದ್ದು.

ಪೈಪಾಟವೆಂದರೆ, ಹಳ್ಳಿಯಲ್ಲಿ ನಮ್ಮದು ಬಟ್ಟೆ ಅಂಗಡಿ, ಬಟ್ಟೆ ಸುತ್ತಲು ಪ್ಲಾಸ್ಟಿಕ್ ಪೈಪ್ ಇರುತ್ತದೆ. ನಮ್ಮ ಮನೆಯ ಹಿಂದೆ ನಮ್ಮ ತಾಯಿ ಪುಟ್ಟ ತೋಟ ಮಾಡಿದ್ದರಲ್ಲ ಅಲ್ಲಿ ಹತ್ತಾರು ಗಿಡಗಳು. ದಾಸವಾಳ, ದಾಳಿಂಬೆ, ರೋಜಾ ಹೀಗೆ. ಅವುಗಳನ್ನೆಲ್ಲ ಬೆಸೆಯುವಂತೆ ಪ್ಲಾಸ್ಟಿಕ್ ಪೈಪುಗಳನ್ನು ಭೂಮಿಯ ಒಳಗೆ ಮುಚ್ಚಿ, ಒಂದು ಕಡೆ ನೀರು ಹಾಕಿದರೆ ಎಲ್ಲ ಗಿಡಗಳಿಗೂ ಸಮನಾಗಿ ಹರಿಯುವಂತೆ ಜೋಡಿಸುವುದು.

ಇನ್ನು ಲಗೋರಿ, ಮರ ಕೋತಿ ಆಟ, ಐಸ್ ಪೈಸ್, ನೀರು ತುಂಬುವ ಆಟ ಮತ್ತು ಮರ ಏರುವುದು ಹೊರಾಂಗಣ ಸಾಹಸಗಳಾದರೆ, ಕಳ್ಳ ಪೊಲೀಸ್, ಚಕ್ಕಾಬಾರ ಮತ್ತು ಗುಳಿಮನೆ ಒಳಾಂಗಣ ಆಟಗಳು.

ಮತ್ತೆ ಬಾಲ್ಯ ಹಿಂದಿರುಗಬಾರದೇ ಅನಿಸುವುದು ಇದನ್ನೆಲ್ಲ ನೆನೆದಾಗಲೇ!

ನನ್ನ ಹಳ್ಳಿಯ ಚಿತ್ರಗಳಿಗೆ ಇದು ಮುನ್ನುಡಿ ಎಂದುಕೊಂಡರೆ, ಮುಂದೆ ಆಂಧ್ರದ ಗಡಿಯಲ್ಲಿರುವ ನನ್ನ ಹಳ್ಳಿಯ ನೆನಪುಗಳನ್ನು ಮುಂದೆ ಬಿಚ್ಚಿಡುತ್ತೇನೆ.


(ಸಶೇಷ)


(ಚಿತ್ರ ಕೃಪೆ : ಅಂತರ್ಜಾಲ)

http://www.facebook.com/photo.php?fbid=496637223714065&set=o.109902029135307&type=1&theater

5 ಕಾಮೆಂಟ್‌ಗಳು:

  1. ಬಾಲ್ಯಾಟಗಳ ಕನವರಿಕೆಗಳಿಗೊಂದು ಸುಂದರ ನುಡಿ.ನಮ್ಮ ಬಾಲ್ಯವನ್ನೂ ನೆನಪಿಗೆ ತರಿಸಿತು.ಮತ್ತೆ ಹಿಂದಿರುಗುವುದು ಅಸಾಧ್ಯ.ಆದರೆ ಅದರ ಆಸ್ವಾದನೆ ಚಿರಂತನ.

    ಪ್ರತ್ಯುತ್ತರಅಳಿಸಿ
  2. ಹೌದು ಬದರಿ ಸರ್,
    ಆ "ಪೈಪಾಟ"ದಲ್ಲೇ ನಮ್ಮಲ್ಲಿ ಹಳ್ಳಿ ಹುಡುಗರು "Innovation" ತೋರಿಸಿಬಿಡುತ್ತಾರೆ.
    ಅದು ಕೇವಲ Interest ಆದ ಆಟವಷ್ಟೇ ಅಲ್ಲ, ಗಿಡಗಳಿಗೂ ನೀರು ಹಾಯಿಸುವ ಉಪಯುಕ್ತ ಕೆಲಸ.

    ನಮ್ಮ ಬಾಲ್ಯವನ್ನು ನೆನೆಸಿಕೊಂಡರೆ ಖುಷಿಯಾಗುವುದೇ ಅದಕ್ಕೆ ಅಲ್ಲವೇ?
    ನಮಗೆ ಈಗಿನಂತೆ video Game ಅಥವಾ ಇನ್ನಾವುದೇ Gadget ಗಳಿರಲಿಲ್ಲ.
    ನೋಡೋಕೆ tv ಇರಲಿಲ್ಲ. ಆದರೂ ನಮಗೆ ಯಾವುದೇ ಆಟದ ಸಾಮಾನಿಲ್ಲದೆ ಕಳ್ಳ-ಪೋಲಿಸ್ , ಮರಕೋತಿ, ಐಸ್ ಪೈಸ್ ಎಲ್ಲವನ್ನೂ ಆಡುತ್ತಿದ್ದೆವು.

    ಇವತ್ತಿನ ಪೀಳಿಗೆಯೂ ಮುಂದೆ "ನಾವು Angry Birds ಆಡಿದೆವು" ಅಂತ ಹೇಳಿಕೊಳ್ಳಬಹುದು.
    ಆದರೆ ಯಾರ ಜೊತೆ ಎಂದರೆ ಮಾತ್ರ ಅವರಿಂದ No Response !! :)

    ನಾವೂ ಈಗಲೂ ನಾವಾಡಿದ ಆಟಗಳನ್ನು ನೆನೆಸಿಕೊಂಡರೆ....ಯಾವಾಗಲೂ ಪೋಲಿಸ್ ಅಗಬೇಕೆನ್ನುತ್ತಿದ್ದ ರವೀಂದ್ರ, ಕಳ್ಳನಾಗಿ ಒದೆ ತಿನ್ನುತ್ತಿದ್ದ ಭಾಗ್ಯರಾಜು, ಯಾವಾಗಲೂ ಮೋಸ ಮಾಡಿ ನಮ್ಮಿಂದ ಚೀಮಾರಿ ಹಾಕಿಸಿಕೊಳ್ಳುತ್ತಿದ್ದ ರಂಗಸ್ವಾಮಿ.....ಎಲ್ಲರೂ ನೆನಪಾಗುತ್ತಾರೆ.
    ಆದರೆ ಈಗ.... ಹಳ್ಳಿಯಿಲ್ಲ, ನಾವಾಡಿದ ಆಟಗಳಿಲ್ಲ, ಅಷ್ಟೆಲ್ಲ ಯಾಕೆ, ಆಟವಾಡಲೂ ಜೊತೆಗಾರರಿಲ್ಲ...TV ,Mobile, IPOD, Gadget ಇಂತಹ ಸ್ನೇಹಿತರನ್ನು ಬಿಟ್ಟರೆ :(

    ಅಲ್ಲವೇ ?

    ಪ್ರತ್ಯುತ್ತರಅಳಿಸಿ
  3. ಬದರಿನಾಥರೆ,
    ಕಳೆದು ಹೋದ ಆ ದಿನಗಳು ಮತ್ತೆ ಮರಳಲು ಸಾಧ್ಯವೆ? Beautiful nostalgia!

    ಪ್ರತ್ಯುತ್ತರಅಳಿಸಿ
  4. ಬಾಲ್ಯದ ನೆನಪು ಒಂದು ರೀತಿಯ ತೆಂಗಿನ ಮರ ಇದ್ದಂತೆ. ತೆಂಗಿನ ಮರದಲ್ಲಿ ಪ್ರತಿ ಒಂದು ವಸ್ತುವು ಉಪಯೋಗಕ್ಕೆ ಬರುವಂತೆ...ಬಾಲ್ಯದ ನೆನಪುಗಳು ಅಲೆಗಳ ಹಾಗೆ ಬಂದು ಅಪ್ಪಳಿಸಿ ತನ್ನ ಗುರುತನ್ನು ಒತ್ತಿ ಹೋಗುತ್ತದೆ..ಮತ್ತೆ ಮರಳಿ ಬರಲು. ಸುಂದರ ಬರಹ ಬದರಿ ಸರ್..

    ಪ್ರತ್ಯುತ್ತರಅಳಿಸಿ