Tuesday, July 17, 2012

ಚಿತ್ರಾಂಕಣ - 1

ನೀಳ ಗೆರೆಗಳಿವು
ನಿನ್ನಂತೆಯೇ ನೇರಾ ನೇರಾ
ಸಂಧಿಸಲಾರೆವು
ಗೆಳತಿ ಬಾಳ ಪೂರಾ...
 
ಶಿವಮೊಗ್ಗ ಪಾರ್ಕಿನಲ್ಲಿ ನಾನು ತೆಗೆದ ಚಿತ್ರ

9 comments:

 1. ದೂರ ದೂರ ದೂರ ಎಷ್ಟು ದೂರ...
  ಆದ್ರೆ ಅವು ಹೃದಯಗಳನ್ನು ಬೆಸೆಯುವ ಮನವನ್ನು ಉಗಿಬಂಡಿಯ ಮೂಲಕ ತಲುಪಿಸುತ್ತದೆ...
  ಸುಂದರ ಚಿತ್ರದ ಜೊತೆಗೆ ಸುಂದರ ಸಾಲುಗಳು

  ReplyDelete
 2. ಹೀಗೇ ನಾನೂ ನೀನೂ
  ಸಮಾನಾಂತರ
  ರೇಖೆಗಳು!
  ನಿನ್ನ ಹಾದಿ ನಿನಗೆ,
  ನನ್ನ ಹಾದಿ ನನಗೆ!
  ಕೊನೆಯವರೆಗೂ.....,
  ಸಂಧಿಸುವುದೇ ಇಲ್ಲ!!!
  ಪ್ರೀತಿ,ಪ್ರೇಮ,ಅನುಕಂಪ,
  ಯಾವುದೂ........,
  ನಮ್ಮನ್ನು ಬಂಧಿಸುವುದೇ ಇಲ್ಲ!
  ನಾವು ಸಮಾನಾಂತರ ರೇಖೆಗಳು!!!
  ಹತ್ತಿರವಿದ್ದೂ ದೂರ ನಿಲ್ಲುವ
  ಅಹಂಕಾರದ ಪತಾಕೆಗಳು!!!

  ReplyDelete
 3. ಸುಂದರ ಸಾಲುಗಳು.

  ಸೇರದೆಯೂ ಸೇರುವ,
  ನಮ್ಮತನವ ಮೀರದೆ,
  ಒಂದಾಗಿ ಸಾಗುವ
  ನಾವು ಸಮಾನಂತರ ರೇಖೆಗಳು :)
  Swarna

  ReplyDelete
 4. ಎಷ್ಟು ಕಾಲ ಜೊತೆಗಿದ್ದರೂ ಒಂದಾಗಲಾರವು!
  ನನ್ನ ನಿನ್ನ ಸೇರಿಸುವುದಕೆ ಏನು ಭಾರವು?

  ReplyDelete
 5. ಬದರಿನಾಥರೆ,
  ವಿಷಾದಸೂಚನೆಯನ್ನು ನಾಲ್ಕೇ ಸಾಲುಗಳಲ್ಲಿ ತುಂಬ ಚೆನ್ನಾಗಿ ಮಾಡಿದ್ದೀರಿ.

  ReplyDelete
 6. ಬದರೀ ಸರ್....

  ಸುಂದರ ಚಿತ್ರದೊಂದಿಗೆ ಅಂದದ ಸಾಲುಗಳು...

  ReplyDelete