ಪೂರ್ಣ ವಿರಾಮಕೂ ಮುನ್ನ
ಲೇಖನ ಚಿನ್ಹೆಗಳನಿಟ್ಟೆ ಪ್ರಭುವೇ!
ಇಹದ ಗುಡಾರ ಮುಷ್ಟಿ ಗುಂಡಿಗೆ,
ಒಟ್ಟುವೆ ಅಚ್ಚರಿಯ ಪ್ರಶ್ನೆಗಳೆನಿತು
ಕಂಸದೊಳಗಣ ಕಣ ಬದುಕಿಗೆ
ವ್ಯುತ್ಪತ್ತಿ ಅರ್ಧ ಅಲ್ಪ ಅಪ್ರಬುದ್ಧ,
ಸಾವಿರ ತಾಲೀಮು ನಂತರವೂ
ಬರೆದಷ್ಟೂ ಕಾಗುಣಿತ ಲೋಪಗಳೇ
ಅಚ್ಚು ದೋಷವಲ್ಲ ಅಪದ್ಧ ಭಾಷೆ,
ಪ್ರಶ್ನಾರ್ಥಕ ಕೀಲಿಗಳೇ ಮಣೆಯಲಿ
ಗೆರೆಯ ಆಚೆಗೇ ನಿಲ್ಲಿಸಿ ನಿಲ್ಲಿಸಿ
ಗೆಲುವ ರುಚಿಯನೂ ತೋರದಿರೆ,
ಯಾಕಪ್ಪಾ ಗೆಲ್ಲಿಸಿದ್ದು ಶುಕ್ರನನು
ಸಹಸ್ರ ಈಜುಗಾರರನೆಲ್ಲ ಹಿಂದಿಕ್ಕಿ
ಅಜ್ಞಾತನನು ಮುನ್ನುಗ್ಗಿಸಿ ಅಂದು
ತಿಳಿವು ಮಂತ್ರ ಮರೆತ ಬತ್ತಳಿಕೆ
ಅಹಮು ಬುರುಗಿನಗಾಧ ಗೋಳ
ಸೀಳ ಬಲ್ಲದೇ ಮೊಂಡು ಕೊಂಬು,
ಕೊಟ್ಟು ನೋಡು ಸಾಣೆಯ ಪ್ರಜ್ಞೆ
ಚೂಪಾಗಲಿ ಮಗಂದು ಮಸ್ತಿಷ್ಕ
ಅಹಮು ಬುರುಗಿನಗಾಧ ಗೋಳ
ಸೀಳ ಬಲ್ಲದೇ ಮೊಂಡು ಕೊಂಬು,
ಕೊಟ್ಟು ನೋಡು ಸಾಣೆಯ ಪ್ರಜ್ಞೆ
ಚೂಪಾಗಲಿ ಮಗಂದು ಮಸ್ತಿಷ್ಕ
ಲೋಪಾಗಮಾದೇಶವ ಹರಸು
ಸಹ್ಯವಾಗಲಿ ಅಜ್ಞಾತ ಕವಿಯ ಕವಿತೆ
"ಪ್ರತಿ ಸಾಲಿಗೂ ಬೇಕೆ ಪ್ರಾಸದಂತ್ಯ,
ಪ್ರಸವಗಳೆಲ್ಲ ಸುಲಲಿತವೇ ಹೇಳಿ?
ಸುಲಭ ಓದಿಗೆ ಜೀರ್ಣವಾಗು ಕವಿತೆ
ಸುಲಿದ ಬಾಳೆಯ ಹಣ್ಣ ತೆರದಿ ಖ್ಯಾತಿ,
ಹಲಸೇ ಇಷ್ಟ ಕವಿಗೆ, ಬಿಡಿಸಿರಿ ತಾವೇ"
ಪ್ರಸವಗಳೆಲ್ಲ ಸುಲಲಿತವೇ ಹೇಳಿ?
ಸುಲಭ ಓದಿಗೆ ಜೀರ್ಣವಾಗು ಕವಿತೆ
ಸುಲಿದ ಬಾಳೆಯ ಹಣ್ಣ ತೆರದಿ ಖ್ಯಾತಿ,
ಹಲಸೇ ಇಷ್ಟ ಕವಿಗೆ, ಬಿಡಿಸಿರಿ ತಾವೇ"
(ಚಿತ್ರ ಕೃಪೆ: ಗೂಗಲ್)
ಅತ್ಯುತ್ತಮ...
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ...
ಅರ್ಥಪೂರ್ಣ
ಪ್ರತ್ಯುತ್ತರಅಳಿಸಿಪ್ರತಿ ಸಾಲಿಗೂ ಬೇಕೆ ಪ್ರಾಸದಂತ್ಯ,
ಪ್ರಸವಗಳೆಲ್ಲ ಸುಲಲಿತವೇ ಹೇಳಿ
ವಾಹ್ ವಾಹ್
-GVJ
ಪ್ರಾಸ ಕೊಡಲು ಪ್ರಯಾಸವೇಕೆ
ಪ್ರತ್ಯುತ್ತರಅಳಿಸಿಪ್ರಸವ ನೈಜವಾಗದು..ಇದು ಕಲಿಗಾಲ..
ಬದರಿಗೆ ಬದರಿಯೇ ಸೈ... ಪ್ರತಿ ಸಾಲೂ ಅತಿ ನೈಜ..ಪ್ರಯಾಸವಿಲ್ಲದ ಪ್ರಸವ.
ವ್ಹಾ👌👌
ಪ್ರತ್ಯುತ್ತರಅಳಿಸಿ