ಶುಕ್ರವಾರ, ಡಿಸೆಂಬರ್ 8, 2023

ಪರದೆ ಕರೆ...

 


ಕಾದದ್ದೇ ಬಂತು ಹೆಂಚಿಗೆ

ಹುಯ್ಯುವ ಆಸಾಮಿ ಇಲ್ಲ!

ಹಿಟ್ಟು ಉಕ್ಕಿದೆ ಉಕ್ಕುತ್ತಲೇ ಇದೆ

ಹಿಡಿದಿಟ್ಟ ಪಾತ್ರಕ್ಕೂ ಮೀರಿ


ಎವೆ ಮುಚ್ಚಿ ತೆರೆಯುವುದರ

ಒಳಗೊಂದು ಬೇಯದ ಕನಸು,

ಕಟ್ಟಲೂ ಬಹುದು ಕೆಡವಲದು

ನನಸ ನೇವರಿಕೆಯಲೇ ಚಿತ್ತ


ಉರವಲು ನಿಗಿ ನಿಗಿ ಕೆಂಡ 

ಅಂಡ ಕೆಳಗೆ, ಹೆಂಚು ನಿರ್ಲಿಪ್ತ

ಪ್ರಾಪ್ತ ಘ್ರಾಣಕ್ಕೆ ಸುಟ್ಟ ನಾತ!

ದಿಕ್ಕೆಟ್ಟ ಬದುಕು ಆವರ್ತ...


ಅವಧಿಯಲ್ಲಿ ಪ್ರಕಟಿತ 

08/12/2023


(ಚಿತ್ರ ಕೃಪೆ: ಅಂತರ್ಜಾಲ)



3 ಕಾಮೆಂಟ್‌ಗಳು:

  1. ಬಹಳ ದಿನಗಳ ಬಳಿಕ ಚಂದದ ಕವನ ವಾಹ್ ಬದರಿ
    GVJ

    ಪ್ರತ್ಯುತ್ತರಅಳಿಸಿ
  2. ಸಹನೆಗೆ, ತಾಳ್ಮೆಗೆ,ತಿತಿಕ್ಷೆಗೆ,
    ಎಂದಿದ್ದರೂ ಬೆಲೆ!!!
    ಕಾಯ್ದ ಹೆಂಚಿಗೆ,ಬಿಡುಗಡೆ ನೀಡುವ, ಜ್ಞಾನಿ ಬಂದ!!!!
    ಅಹಂಕಾರದಿಂದ ಉಕ್ಕುತ್ತಿದ್ದ ಹಿಟ್ಟಿಗೊಂದು ಗತಿ ಕಾಣಿಸಿದ!!!!
    ಕಾದ ಹೆಂಚಿಗೆ ಹಿಟ್ಟು ಸುರಿದು,
    ಹರವಿ,ಹದ ಮಾಡಿದ!!!!
    ಹಿಟ್ಟು ,ಮೊದಲು,ಕೊಂಯ್ ಎಂದು ಚುರುಗುಟ್ಟಿ, ಸುಮ್ಮನಾಯಿತು.
    ಕಾದ ಹೆಂಚು,
    ತನ್ನ ತಾಪವಿಳಿದು ತಣ್ಣಗಾಯಿತು!!!!!
    ಸೊಕ್ಕಿ,ಉಕ್ಕಿದ್ದ ಹಿಟ್ಟು,
    ಕಾದ ಹೆಂಚಿನ ಮೇಲೆ
    ತಪ ಮಾಡಿ,
    ನೊಂದು,ಬೆಂದು,
    ಸವಿಯಾದ ಗರಿ,ಗರಿ,
    ದೋಸೆಯಾಗಿ,
    ಆವರ್ತನ ಗೊಂಡು,
    ಸವಿದ ಬಾಯಲ್ಲಿ
    ಸಾಕ್ಷಾತ್ಕಾರ ಪಡಿಯಿತು.

    - Dr. DTK

    ಪ್ರತ್ಯುತ್ತರಅಳಿಸಿ
  3. ಪ್ರತಿಮಾಪ್ರಧಾನ ಕವನಗಳಿಗೆ ವಿಮರ್ಶಕರು ‘ನವ್ಯ ಕವನ ’ಎಂದು ಕರೆದರು ; ರಸಪ್ರಧಾನ ಕವನಗಳಿಗೆ ರಸಿಕರು ‘ರಮ್ಯ ಅಥವಾ ನವೋದಯ ಕವನಗಳು’ ಎಂದರು. ಬದರಿಯವರೆ, ನಿಮ್ಮ ಕವನಗಳ ಹೊರಮೈ ಪ್ರತಿಮೆಗಳಿಂದ ತುಂಬಿದ್ದರೆ, ಅಂತರಂಗದಲ್ಲಿ ರಸ ತುಂಬಿಕೊಂಡಿರುತ್ತದೆ. ನಿಮ್ಮ ಕಾವ್ಯವು ರಮ್ಯ ಹಾಗು ನವ್ಯ ಕವನಗಳೆರಡರ ಗುಣಗಳನ್ನು ಒಳಗೊಂಡಿವೆ. ಆದುದರಿಂದ, ನಿಮ್ಮ ಕವನಗಳಿಗೆ ‘ರಮ್ಯ-ನವ್ಯ’ ಕವನಗಳು ಎಂದೆನ್ನಬಹುದು!

    ಪ್ರತ್ಯುತ್ತರಅಳಿಸಿ