ಮಂಗಳವಾರ, ಸೆಪ್ಟೆಂಬರ್ 24, 2013

ಬ್ಲಾಗಿಗೆ 5 ತುಂಬಿದ ಸಂಭ್ರಮ...

ನನ್ನ ಅಜ್ಞಾತ ಬ್ಲಾಗಿಗೆ 5 ವರ್ಷ ತುಂಬಿದ ಸಂಭ್ರಮ. ಇಷ್ಟು ಜನ ಬ್ಲಾಗ್ ಗೆಳೆಯರು - ಫೇಸ್ ಬುಕ್ ಗೆಳೆಯರು ನನಗೆ ಸಿಗುತ್ತಾರೆ, ಇಷ್ಟು ಪ್ರೋತ್ಸಾಹಿಸಿ ಬರೆಸುತ್ತಾರೆ, ಅಂತ ಕನಸಲ್ಲೂ ಎಣೆಸಿರಲಿಲ್ಲ.

ಕಳೆದ ವರ್ಷ: 

  • ಫೇಸ್ ಬುಕ್ಕಿನ 3K ಗುಂಪು ತನ್ನ ಶತಮಾನಂಭವತಿ - 100 ಕವಿಗಳ ಕವನ ಸಂಕಲನದಲ್ಲಿ ನನ್ನ 'ಕಾಮನ ಹುಣ್ಣಿಮೆ'ಗೂ ಅವಕಾಶ ಮಾಡಿಕೊಟ್ಟಿತು. 
  •  ಫೇಸ್ ಬುಕ್ಕಿನ 3K ಗುಂಪು ನಡೆಸುವ ನವೆಂಬರ್ ಕವಿತೆ ಸ್ಪರ್ಧೆಯಲ್ಲಿ ನನ್ನ ಕವಿತೆ 'ತ್ಯಾಜ್ಯ ವ್ಯಾಜ್ಯ'ವು ನನ್ನ ಆತ್ಮೀಕ ಗೆಳೆಯ ಪುಷ್ಪರಾಜ್ ಚೌಟ ಅವರ ಜೊತೆ ಪ್ರಶಸ್ತಿ ಹಂಚಿಕೊಂಡಿತು.
  • ಫೇಸ್ ಬುಕ್ಕಿನ 3K ಗುಂಪು ಶತಮಾನಂಭವತಿ ಹೆಸರು ಸೂಚಿಸಿದ್ದಕ್ಕಾಗಿ ಮತ್ತು  ನವೆಂಬರ್ ಕವಿತೆ ಪ್ರಶಸ್ತಿ ಗೆದ್ದದ್ದಕ್ಕಾಗಿ, 3K ಲಾಂಛನದ ಒಂದು ಟೈಟಾನ್ ವಾಚು, ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಮತ್ತು ಇಸ್ಕಾನ್ ಅವರ 'ಭಗವದ್ಗೀತ' ನೀಡಿ ಪ್ರೋತ್ಸಾಹ ನೀಡಿತು.
  • 'ಸಂಗಮ ಸುಖ' ಕವನವು ಯಾಮಿನಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಯಿತು. 
  • 'ಛಾವಣಿಯ ಬಾವಲಿ' ಕವನವು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಬೆಳಕು ಕಂಡಿತು. 
  • 17 ವಾರಗಳ ಕಾಲ ಗಲ್ಫ್ ಕನ್ನಡಿಗ ಅಂತರ್ಜಾಲ ಪತ್ರಿಕೆಯಲ್ಲಿ ಪಲವಳ್ಳಿ ಅಂಕಣ ಬರೆದ ತೃಪ್ತಿ ಇದೆ.

ನನಗೆ ಬೆನ್ನು ತಟ್ಟಿ ಈ ಕಲ್ಲನ್ನು ದೇವರ ವಿಗ್ರಹವಾಗಲಿಲ್ಲವಾದರೂ ಕನಿಷ್ಠ ದ್ವಾರಪಾಲಕನ ಮಟ್ಟಿಗಾದರೂ ತಿದ್ದಿದ ನಿಮಗೆಲ್ಲ ನನ್ನ ನಮನಗಳು.

ನಾನು ಕಾಗುಣಿತ ತಪ್ಪುಗಳ ಸರದಾರ, ಈ ಮಟ್ಟಿಗೆ ತುಸು ಬರೆಯುತ್ತೀನೆಂದರೆ ಅದರ ಹಿಂದೆ ಹುರಿದುಂಬಿಸುವ ನಿಮ್ಮ ಸಹೃದಯತೆಯೇ ನನಗೆ ಟಾನಿಕ್ಕು.

ನನ್ನ ಬ್ಲಾಗಿನಲ್ಲಿ ನಾನು ಬರೆದುಕೊಂಡದ್ದೆಲ್ಲಾ ಶ್ರೇಷ್ಟವೆಂದೇನೂ ಇಲ್ಲ. ಆದರೆ ಅವು ನನ್ನ ಎಳೆ ಕಣ್ಣುಗಳಿಗೆ ಗೋಚರವಾದ ಬೊಂಬೆಗಳಷ್ಟೇ.

ನನ್ನ ಮೇಸ್ಟ್ರುಗಳಾದ:
ಪ್ರಕಾಶ್ ಹೆಗಡೆ, ಸುನಾಥ್ ಸಾರ್, ದಿ. ರವಿ ಮೂರ್ನಾಡ್, ಪುಷ್ಪರಾಜ್ ಚೌಟ, ಅಶೋಕ್ ಶೆಟ್ಟಿ, ಮಂಜುನಾಥ್ ಕೊಳ್ಳೇಗಾಲ, ಡಾ|| ಡಿ.ಟಿ.ಕೆ. ಮೂರ್ತಿ, ನಿಮ್ಮೊಳಗೊಬ್ಬ ಬಾಲು, ದಿನಕರ ಮೊಗೇರ, ಶ್ರೀಕಾಂತ್ ಮಂಜುನಾಥ್, ಆಜಾದ್, ತಿರುಮಲೈ ರವಿ, ಚಿನ್ಮಯ ಭಟ್, ವಿ.ಆರ್. ಭಟ್, ಪದ್ಯಾನ ರಾಮಚಂದ್ರ, ಅನಂತರಾಜ್, ನಟರಾಜು ಸೀಗೆಕೋಟೆ ಮರಿಯಪ್ಪ, ಸೀತಾರಾಂ,  ಪರೇಶ್, ಪ್ರಶಾಂತ್, ಈಶ್ವರ್ ಕಿರಣ ಭಟ್,  ಪಮ್ಮಿ, ನರಸಿಂಹ ಸಿಂಹ,  ಉಮೇಶ್ ದೇಸಾಯಿ, ಪ್ರಶಸ್ತಿ, ಗುಬ್ಬಚ್ಚಿ ಸತೀಶ್, ಜಿ.ಎಸ್. ಮೋಹನ್,  ದೊಡ್ಡೇರಿ, ವಿ.ಆರ್. ಭಟ್, ಮೋಹನ ಕೊಳ್ಳೇಗಾಲ, ಮಹೇಶ್ ಸಿದ್ದಲಿಂಗಪ್ಪ, ಸತೀಶ್ ನಾಯ್ಕ್, ಸತೀಶ್ ರಾಮನಗರ,  ಗಿರಿ ಶಿಖರ, ಪ್ರಣವ, ಸುರಗಂಗೆ, ಸಂತೋಷ್ ಎಲ್ ಎಂ,  ಡಾ|| ವೀರ್ ರಾಮಕೃಷ್ಣ, ಹೃದಯ ಶಿವ, ಹರಿಹರಪುರ ಶ್ರೀಧರ್, ಪಾರ್ಥ ಸಾರಥಿ, ಶಿವು.ಕೆ, ಕವಿ ನಾಗರಾಜ್, ಕೃಷ್ಣಮೂರ್ತಿ, ಕೋರೆ, ವಿನೋದ್ ಬೆಂಗ್ಳೂರು, ಆರ್.ಜೆ - ರಾಘವೇಂದ್ರ ಜೋಷಿ, ಕ್ರಿಶ್ ಜೋಶಿ, ವಸಂತ ಕುಮಾರ್, ಮಂಜು ವರ್ಗಾ, ಗುರುಪ್ರಸಾದ್ ಆಚಾರ್ಯ, ಭರತ್, ಜೆ.ವಿ.ಎಂ. ನಾಯ್ಡು, ವಿನಾಯಕ್ ಭಗವತ್, ಪ್ರಮೋದ್ ಶ್ರೀನಿವಾಸ್, ಅರುಣ್ ಶ್ರಿಂಗೇರಿ, ಶಂಕರ್ ದೇವಾಡಿಗ, ಲಕ್ಷ್ಮೀ ಪ್ರಸಾದ್, ವೆಂಕಟೇಶ್ ಹೆಗಡೆ,  ಅಗಡಿ, ಪ್ರವೀಣ್, ಗಂಗಾಧರ್ ದಿವಾತಾರ್, ಪದ್ಮಶಾಲಿ, ವಲ್ಲೀಶ್,  ಪ್ರವೀಣ, ಹರೀಶ್ ಶೀರ್ವ, ಕಂಚಿಮನೆ, ಗರುಡ, ದಯಾನಂದ್, ಆಕುವಾ, ಬ್ರಹ್ಮಾವರ, ಪದ್ಮಪಾಣಿ, ಆಸುಮನ, ಡಿ.ಎಸ್. ಶ್ರೀನಿಧಿ, ಚೆನ್ನ, ಶ್ರೀಧರ, ಭೀಮಸೇನ  ...


ನನ್ನ ಬ್ಲಾಗ್ ಸರಸ್ವತಿಗಳಾದ:
 

ಸ್ವರ್ಣಾ, ರೂಪಾ ಸತೀಶ್, ಸುಷ್ಮಾ ಮೂಡಬಿದಿರೆ, ಸುಗುಣ, ಆರತಿ ಘಟಿಕಾರ್, ಸುಷ್ಮಾ, ಮಾಲತಿ ಶಣೈ, ಸಂಧ್ಯಾ,  ಶ್ರೀದೇವಿ ಕಳಸದ್, ಅನುರಾಧ ರಾವ್, ಅನಿತಾ ನರೇಶ್ ಮಂಚಿ, ತ್ರಿವೇಣಿ,  ಜಯಶ್ರೀ, ಜ್ಯೋತಿ ಮಹದೇವ್, ಅನುರಾಧಾ ಸಾಮಗಾ, ನಿವೇದಿತಾ ತಡಾನಿ, ಭಾಗ್ಯ ಭಟ್, ಉಮಾ ಪ್ರಕಾಶ್, ಉಷಾ ಕಟ್ಟೆಮನೆ, ಗೆಳತಿ, ಜಯಲಕ್ಷ್ಮೀ ಪಾಟಿಲ್, ಮಂಜುಳ, ಸೀಮಾ, ಅಂಜಲಿ ರಾಮಣ್ಣ, ಶಕುಂತಲ ಐಯ್ಯರ್, ಲತಾ ದಾಮ್ಲೆ,  ಮಮತ ಕೀಲಾರ್, ಭಾವನಾ, ಡಾ|| ವಿದ್ಯಾ, ಪ್ರಭಾಮಣಿ ನಾಗರಾಜ್, ಸಂಪು, ಸುಜಾತ ಲೋಕೇಶ್, ತೇಜಸ್ವಿನಿ ಹೆಗಡೆ, ವಾಣಿಶ್ರೀ ಭಟ್, ಮಂಜುಳಾ ದೇವಿ, ವಾಣಿ ಶೆಟ್ಟಿ, ಸುಲತಾ ಶೆಟ್ಟಿ, ಶಮ್ಮಿ, ಮಹಾಲಕ್ಷ್ಮೀ, ಶೀಲಾ, ಸುನೀತಾ ಮಂಜುನಾಥ್, ಶೀತಲ್ ವನ್ಸರಾಜ್,  ಸವಿತಾ ಇನಾಂದಾರ್...

೩ಕೆ ಕನ್ನಡ ಬಳಗ, ಕನ್ನಡ ಬ್ಲಾಗ್, ಪದಾರ್ಥ ಚಿಂತಾಮಣಿ, ಕಥೆ ಕವನ ಕಾಲಹರಣ, ನಿಲುಮೆ, ಗಲ್ಫ ಕನ್ನಡಿಗ, ಕನ್ನಡ ಕಟ್ಟೆ, ಯಾಮಿನಿ, ಅವಧಿ, ವಿ.ಕ ಗೂ ನನ್ನ ಪ್ರಣಾಮಗಳು.  

ಸದಾ ನನ್ನ ಬೆನ್ನ ಹಿಂದೆ ನಿಂತು ನನ್ನ ಹೊಟ್ಟೆ ಪಾಡಿನ ಬದುಕಿನಾಚೆಯ ಇನ್ನಿತರೇ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ ನನ್ನ ಒಲುಮೆಯ ಶ್ರೀಮತಿಗೂ ಸಹ ನನ್ನ ಧನ್ಯವಾದಗಳು.

ಹೆಸರುಗಳು ಹಿಂದೆ ಮುಂದೆ ಆಗಿರಬಹುದು ಅಥವಾ ಬಿಟ್ಟು ಹೋಗಿರಬಹುದು, ಆದರೆ ನೀವು ಇದ್ದೀರ ನನ್ನೊಂದಿಗೆ ಸದಾ.

ಹೀಗೇ ನನ್ನನ್ನು ತಿದ್ದುತ್ತಲೇ ಇರಿ, ನಿಮ್ಮೊಲ್ಲೊಬ್ಬನಾಗಿ.
ಸದಾ ನನ್ನ ಬ್ಲಾಗಿಗೆ ಬರುತ್ತಿರಿ ಮತ್ತು ಪ್ರೋತ್ಸಾಹಿಸುತ್ತಿರಿ, ನಿಮ್ಮ ಒಲುಮೆ ಇರಲಿ ಶಾಶ್ವತ.    

18 ಕಾಮೆಂಟ್‌ಗಳು:

  1. "ಕಲ್ಲನ್ನು ದೇವರ ವಿಗೃಹವಾಗದಿದ್ದರೂ ದ್ವಾರಪಾಲಕನ ಮಟ್ಟಿಗಾದರೂ" ಎಂಬ ಮಾತು ಇಷ್ಟವಾಯಿತು. ನಿಮ್ಮ ಬ್ಲಾಗ್ ನ ೫ನೇ ವರ್ಷದ ಸಂಭ್ರಮಕ್ಕೆ ಶುಭಾಶಯಗಳು. ನಿಮ್ಮಿಂದ ಇನ್ನೂ ಹೆಚ್ಚಿನ ಬರಹಗಳು ಹುಟ್ಟಿ ಬರಲಿ, ಅದನ್ನೆಲ್ಲ ನಾವು ಕಾತರದಿಂದ ಕಾಯುವಂತೆ ಮಾಡಲಿ.

    ಪ್ರತ್ಯುತ್ತರಅಳಿಸಿ
  2. ಐದು ವರುಷದ ಸಂಭ್ರಮ ನಿಮ್ಮ ಬ್ಲಾಗಿಗೆ
    ಅದು ಅಜ್ಞಾತ ಹೇಗೆ ಗುರುಗಳೇ?
    ಶುಭಾಶಯಗಳು
    ಹೀಗೆ ಇನ್ನು ಐವತ್ತು ಪಟ್ಟು ವರುಷಗಳಾಗಲಿ
    ನಮಗೆ ನಿಮ್ಮ ಜ್ಞಾನ ಸುಧೆ ಸಿಗುತ್ತಾ ಇರಲಿ
    ನನ್ನನ್ನು ಬ್ಲಾಗ್ ಸರಸ್ವತಿಯರಲ್ಲಿ ಸೇರಿಸಿದ್ದಕ್ಕೆ ಧನ್ಯವಾದಗಳು
    ನಿಮ್ಮ ಸಾಧನೆಗಳಿಗೆ ಶುಭಾಶಯಗಳು

    ಪ್ರತ್ಯುತ್ತರಅಳಿಸಿ
  3. ನಿಮ್ಮ ಐದು ವರ್ಷದ ಮಗು (ಬ್ಲಾಗು )ಇನ್ನೂ ಬೆಳೆದು ದೊಡ್ಡದಾಗಲಿ. ಓದುಗರಿಗೆ ಕಾವ್ಯದ ರಸದೌತಣ ನೀಡುತ್ತಾ ಸಾಗಲಿ. ಅಭಿನಂದನೆಗಳು ಬದ್ರಿ ಸರ್.

    ಪ್ರತ್ಯುತ್ತರಅಳಿಸಿ

  4. ಶುಭಾಶಯಗಳು ಸರ್. ನಿಮ್ಮಂಥ ಕವಿ ಗೆಳಯರನ್ನು ಪಡೆದುದಕ್ಕೆ ನಮಗೂ ಖುಷಿ. ನಿಮ್ಮ ಲೇಖನಿ ಎಂದೂ ನಿಲ್ಲದಿರಲಿ. ಐದು ವರ್ಷದ ಹುಟ್ಟಿದ ಹಬ್ಬ ಅಂದ್ರೆ ಜೋರಾಗಿ ಒಂದು ಊಟ ಹಾಕಿಸ್ಬೇಕಪ್ಪ :)

    ಪ್ರತ್ಯುತ್ತರಅಳಿಸಿ
  5. ವಾ ವಾ.. ಕ್ಯಾ ಬಾತ್ ಹೇ..!! ನಾನು ಸಹ ಈ ಲಿಸ್ಟ್ ನಲ್ಲಿದ್ದೀನಿ ಖುಷಿ ಆಯ್ತು. ೫ ವರ್ಷಗಳು ಹೆಚ್ಚುತ್ತ ಹೋಗುತ್ತಿರಲಿ ಸರ್. ನೀವು ಬರೆಯುವ ಪ್ರತಿ ಕವಿತೆಗಳು ಹಾಗೂ ಇತ್ತೀಚೆಗೆ ಸಕ್ಕತ್ ಕಥೆಗಳು ಸದಾ ನಮ್ಮೆಲ್ಲರಿಗೂ ಇಷ್ಟವಾಗಿವೆ. ನೀವು ವಿಭಿನ್ನ ಶೈಲಿಯ ಬರಹಗಾರರು ಮತ್ತು ಕವಿಗಳು ನಿಮ್ಮೊಂದಿಗೆ ನಮ್ಮ ಸ್ನೇಹವಿರುದೇ ನಮಗೆ ಹೆಮ್ಮೆ.
    ಶುಭವಾಗಲಿ ಮತ್ತಷ್ಟು, ಮಗದಷ್ಟು ಕವಿತೆಗಳು ಹೊರಬರಲಿ
    ಜೈ ಬದರಿ ಸರ್

    ಪ್ರತ್ಯುತ್ತರಅಳಿಸಿ
  6. ಹೃತ್ಪೂರ್ವಕ ಅಭಿನಂದನೆಗಳು. ಹೀಗೆ ಸುಂದರವಾಗಿ ಮತ್ತಷ್ಟು ಬಲಯುತವಾಗಿ ನಿರಂತರವಾಗಿ ಮುನ್ನಡೆಯುತ್ತಿರಲಿ.

    ಪ್ರತ್ಯುತ್ತರಅಳಿಸಿ
  7. ಶುಭಾಶಯಗಳು ಬದರಿ ಜೀ...
    ಈ ಅಕ್ಷರ ಸಂಭ್ರಮ ಕಾಲ ಮಿತಿಯನೂ ಮೀರಿ ಜಾರಿಯಲಿರಲಿ ಹೀಗೆಯೇ ಸದಾ...:)
    ನನ್ನಂಥ ಅಲ್ಪನನ್ನೂ ಮೇಸ್ಟ್ರುಗಳ ಸಾಲಿಗೆ ಸೇರಿಸಿದ ನಿಮ್ಮ ಪ್ರೀತಿ ಮತ್ತು ವಿನಯಕ್ಕೆ ತಲೆಬಾಗುತ್ತಾ - ಶ್ರೀವತ್ಸ ಕಂಚೀಮನೆ.

    ಪ್ರತ್ಯುತ್ತರಅಳಿಸಿ
  8. ಬದರಿನಾಥರೆ,
    ಐದು ವರ್ಷಪೂರ್ತಿ ನಮಗೆ ಸಿಹಿ ಉಣ್ಣಿಸುತ್ತ ಬಂದಿದ್ದೀರಿ. ಇಂದು ನಿಮಗೆ ಸಿಹಿ ಸಿಹಿ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  9. ನಿಮ್ಮ ಬ್ಲಾಗ್ ನಿಮ್ಮ ಕವನಗಳು ಎಲ್ಲರನ್ನು ಮರೆಯದೆ ನೆನೆಸಿಕೊಳ್ಳುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗುತ್ತದೆ ಖಂಡಿತ
    ವಿಶ್ವಾಸಗಳೊಡನೆ
    ಪಾರ್ಥಸಾರಥಿ

    ಪ್ರತ್ಯುತ್ತರಅಳಿಸಿ
  10. ಶುಭಾಶಯಗಳು ಪ್ರೀತಿಯ ಬದರಿ ಜಿ , ನಿಮ್ಮ ಕವಿತೆಗಳ ಪದಗಳ ಭಂಡಾರ ನಮ್ಮ ಜ್ಞಾನ ಹೆಚ್ಚಿಸಿದೆ . ನಿಮ್ಮ ಬ್ಲಾಗ್ ನೂರುಕಾಲ ನಿರಂತರವಾಗಿ ಸಾಗಲಿ. ಅದನ್ನು ಓದಿ ನಲಿಯುವ ಅವಕಾಶ ನಮ್ಮೆಲ್ಲರಿಗೆ ಸಿಗಲಿ.

    ಪ್ರತ್ಯುತ್ತರಅಳಿಸಿ
  11. ನಿಮ್ಮ ಬ್ಲಾಗ್ ನ ೫ನೇ ವರ್ಷದ ಸಂಭ್ರಮಕ್ಕೆ ಶುಭಾಶಯಗಳು; ಎಲ್ಲರನ್ನು ಮರೆಯದೆ ನೆನೆಸಿಕೊಳ್ಳುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗುತ್ತದೆ. ನನ್ನನ್ನು ನಿಮ್ಮ' ಬ್ಲಾಗ್ ಸರಸ್ವತಿ' ಯ ಲಿಸ್ಟ್ಲ್ಲಿ ಸೇರಿಸಿದ್ದಕ್ಕೆ ಧನ್ಯವಾದಗಳು ; ಶುಭವಾಗಲಿ ಬದರಿ :)

    ಪ್ರತ್ಯುತ್ತರಅಳಿಸಿ
  12. ''ನನಗೆ ಬೆನ್ನು ತಟ್ಟಿ ಈ ಕಲ್ಲನ್ನು ದೇವರ ವಿಗ್ರಹವಾಗಲಿಲ್ಲವಾದರೂ ಕನಿಷ್ಠ ದ್ವಾರಪಾಲಕನ ಮಟ್ಟಿಗಾದರೂ ತಿದ್ದಿದ ನಿಮಗೆಲ್ಲ ನನ್ನ ನಮನಗಳು.'' dodda maatu badri, yavattu ashte 'Tumbida koda tulukolla' annodakke neeve sakshi. I am really blessed to have u as my brother. god bless u

    ಪ್ರತ್ಯುತ್ತರಅಳಿಸಿ
  13. ಬದರಿ ಸರ್ ನಿಮಗೆ ಆತ್ಮೀಯ ಅಭಿನಂದನೆಗಳು .. ನಿಮ್ಮಂಥ ಸ್ನೇಹಿತರನ್ನು ಪಡೆಯಲು ಈ ಬ್ಲಾಗ್ ಲೋಕವು ಒಂದು ಕಾರಣ .. ನಮಗೆ ನಿಮ್ಮಿಂದ ಕಲಿಯಬೇಕಾದ್ದು ಬಹಳ ಇದೆ .. ನಿಮ್ಮ ಕವಿತೆಗಳ ಪಯಣ ಹೀಗೆ ಮುಂದುವರೆಯಲಿ

    ಪ್ರತ್ಯುತ್ತರಅಳಿಸಿ
  14. ಐದು ಒಂದು ಮುಖ್ಯ ಸಂಖ್ಯೆ.. ಮಗುವಿನ ಮೊದಲ ಐದು ವರ್ಷ ಸೊಗಸು,.. ಕಂಪನಿಯಲ್ಲಿ ಐದು ವರ್ಷ ಗ್ರಾಚುಟಿ ಹಕ್ಕು ಸಿಗುತ್ತದೆ, ಪಾಂಡವರು ಐದು, ಬೆರಳುಗಳು ಐದು, ಪಂಚಾಂಗದಲ್ಲಿ ಐದು, ಮುತ್ತೈದೆಗೆ ಐದು ಒಡವೆಗಳು ಹೀಗೆ ಐದು ತಲುಪಿದ ನಿಮ್ಮ ಬ್ಲಾಗಿಗೆ ಸಂಭ್ರಮದ ಶುಭಾಶಯಗಳು ಐದು ಐವತ್ತಾಗಲಿ..

    ಪ್ರತ್ಯುತ್ತರಅಳಿಸಿ