ಸೋಮವಾರ, ಜುಲೈ 8, 2013

ನ್ಯಾಪ್ಕಿನ್ ಕವಿತೆ...

ಕೊನೆಯ ಹನಿಯವರೆಗೂ
ಬಸಿಯುವುದು ಗೊತ್ತಿದ್ದವನೇ
ಕುಡುಕ!
ಸುರಿದ ಪೈಸೆಗಳ ಲೆಕ್ಕ
ನಿಶೆಯಲೇ ಅಂತ್ಯವಾದಾರೆ
ಸಾಕು ಅವನಿಗದೇ ಚುಕ್ತ

ಬಸಿಯುವುದು ಯಾರಿಗಿಲ್ಲ ಜಗದಿ
ಅದೇ ಅವನ ಮೂಲ ಪ್ರಶ್ನೆ
ನೌಕರಿಯೂ ಹಿಂಡದೇ ಹೇಳಿ?
ಸ್ವಂತ ಸಂಸಾರವೂ ಕೆಲವೊಮ್ಮೆ
ನಕ್ಕಳು ಗೆಳತಿ ಗಲಾಸಿನಾಕಾರದಲ್ಲಿ

ಹೆಂಡ ಕುಡಿವುದೇ ತಪ್ಪೇ
ವಿಲಾಯತಿ ಬೇಕೆ ನಾತ ಶುದ್ಧಿಗೆ?
ತೂರಾಡುವುದೇ ಧ್ಯೇಯ ಕಡೆಗೆ,
ಮನೆಯಲೇ ಪಾನೋತ್ಸವ
ಬಯಲಾಗದು ಸತ್ಯ ನೆರಮನೆಗೆ!

ಮೊದಲ ಸಿಪ್ಪಿಗೂ ಮುನ್ನ
ಭಯಗ್ರಸ್ತ ತಳಮಳ ಒಳಗೆ
ಕರುಳು ಸುಟ್ಟೀತೆ ಎಂಬಿತ್ಯಾದಿ,
ಇಳಿದಂತೆ ಒಳಗೆ ಮಗಾ
ಯಾವನಾ ಸೀ.ಎಂಊ ಈಗ?

ಅಸಲು ನೀರಿನದೇ ತಪ್ಪು
ವಿಸ್ಕಿಗಾದರೂ ಅದೇ ರಮ್ಮಿಗಾದರೂ ಅದೇ
ಮಿಳಿತ ಮನದೆನ್ನೆಯಂತೆ,
ಅಮಲಿನಸಲು ಹಾಟಲ್ಲವೇ ಅಲ್ಲ
ಗ್ಯಾರಂಟಿ ಅದು ನಲ್ಲಿ ನೀರೇ!

ಶಿಳ್ಳೆ ಹೊಡೆದವರೂ ನೀವೇ
ಶರಾಬೀ ಸ್ಟಾರು ಬಚ್ಚನ್ನಿಗೆ
ಸುಮ್ಮನೆ ಬೈಯುತ್ತೀರಿ ನಮಗೆ!


(ಚಿತ್ರಕೃಪೆ: ಅಂತರ್ಜಾಲ)

(ಬಾರ್ ಅಂಡ್ ರೆಸ್ಟೋರೆಂಟುಗಳಲ್ಲಿ ಕುಡಿದ ಕವಿಯೊಬ್ಬ ಲಹರಿಗೆ ಬಿದ್ದು ಕೈ ಒರೆಸಿಕೊಳ್ಳಲು ಕೊಟ್ಟ ನ್ಯಾಪ್ಕಿನ್ - ಟಿಷ್ಯೂ ಪೇಪರ್ರಿನ ಮೇಲೆ  ಬರೆದ ಕವಿತೆ)

48 ಕಾಮೆಂಟ್‌ಗಳು:

  1. :-)
    ಕೊನೆಯ ಹನಿಯವರೆಗೂ
    ಬಸಿಯುವುದು ಗೊತ್ತಿದ್ದವನೇ
    ಕುಡುಕ! :-)
    ಅಮಲಿನಸಲು ಹಾಟಲ್ಲವೇ ಅಲ್ಲ
    ಗ್ಯಾರಂಟಿ ಅದು ನಲ್ಲಿ ನೀರೇ!
    :-(
    ಸರ್ ನಮ್ಮಲ್ಲಿ ನಲ್ಲಿ ನೀರಿನ ಬಣ್ಣ ಕೂಡ ವಿಸ್ಕಿ ಕಲರ್ರೆ!! ಏನ್ ಮಾಡೋದು ಹೇಳಿ
    ಸೂಪರ್ ಕವಿತೆ
    ಕುಡಿಯೋರಿಗೆ ಗೊತ್ತು ಅದರ ಮಜಾ ಮತ್ತೆ ಸಜಾ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮೊದಲ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಮೇಡಂ, ನಿಮ್ಮ ಮಾತು ನಿಜ, ನಮ್ಮ ಊರಿನ ನಲ್ಲಿ ನೀರೂ ರಮ್ಮಿನ ಕಲ್ಲರೇ. ನಿಮ್ಮ ಅಭಿಮಾನಕ್ಕೆ ಶರಣು.

      ಅಳಿಸಿ
  2. ಮನದೆನ್ನೆಯಂತೆ ಅಮಲಿನಸಲು ಹಾಟಲ್ಲವೇ ಅಲ್ಲ
    ಗ್ಯಾರಂಟಿ ಅದು ನಲ್ಲಿ ನೀರೇ!

    accepted n revealed beautifully..

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮೇಡಂ, ನಿಮ್ಮ ಸಾಲುಗಳು ಎಷ್ಟು ಕಾವ್ಯಾತ್ಮಕವಾಗಿತ್ತೆಂದರೆ ಓದಿ ಹೇಳಿದ ಮೇಲೆ ನನ್ನ ಮಾಡದಿಯೂ ಖುಷ್. ನಿಮಗೆ ನನ್ನ ಅನಂತ ಧನ್ಯವಾದಗಳು.

      ಅಳಿಸಿ
  3. ಕುಡಿಯದವರಿಗೂ ಮತ್ತೆರುವುದು ಖಚಿತ...
    ಅಮಲು.. ಓದಿದವರಿಗದು ಉಚಿತ..
    ನಾನೂ ಕೂಡಾ ಈಗ ಪಾನಮತ್ತ..
    ನಿಮ್ಮ ಕವನ ಸತ್ಯಾಂಶಗಳ ಸುತ್ತ..

    ಬದರೀ ಸಾರ್.. ನಾನು ಫುಲ್ ಟೈಟ್.. :D :D

    ಪ್ರತ್ಯುತ್ತರಅಳಿಸಿ
  4. ಕುಡಿತದ ಭಾರಿ ಸತ್ಯಗಳು, ಒಳ್ಳೆಯ ಚಿತ್ರಣ. ಕೊನೆಯ ಹನಿಯವರೆಗೂ ಬಸಿಯುವುದು ಗೊತ್ತಿದ್ದವನೇ
    " ಕುಡುಕ "

    ಪ್ರತ್ಯುತ್ತರಅಳಿಸಿ
  5. ಕುಡುಕನ ಮ್ಯಾಲೂ ಬರೀತಿರಲ್ರಿಪಾ
    ಛೆ ಛೆ ಅಮಾಯಕರು ಅವರು...!!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹಂಗಲ್ಲ ಸಾರ್, ಕುಡುಕ ಅಮಾಯಕ, ಮದಿರೆ ನಿರ್ವಾಹಕಿ. ಬರ್ರೆಲ ಪ್ರಯೋಗ ಮಾಡಿ ನೋಡೋಣವಂತೆ ಎನಂತೀರಿ ಉಮೇಶಣ್ಣ?

      ಅಳಿಸಿ
  6. "ಶಿಳ್ಳೆ ಹೊದೆಯುವವರೂ ನೀವೇ ಶರಾಬಿ ಸಾರ್ ಬಚ್ಚನ್ನ್ನಿಗೆ,ನಮ್ಮನ್ನು ಸುಮ್ಮನೇ ಬೈಯುತ್ತೀರಿ !!! ".ಬದರಿ ,ನಿಮ್ಮ ಕವಿತಾ ಶಕ್ತಿಗೆ ಏನೆನ್ನೋಣ !!! ಎಲ್ಲಿಂದ ಎಲ್ಲಿಗೇ ಹೋಗುತ್ತೆ ಸ್ವಾಮಿ ನಿಮ್ಮ ಲಹರಿ !!! ನಿಮ್ಮ ಕಲ್ಪನಾ ಶಕ್ತಿಗೆ ನನ್ನದೊಂದು hats off !!! ನಿಮ್ಮಲ್ಲಿನ ಆ ದೈವಿಕ ಶಕ್ತಿಗೆ ನಮೋನ್ನಮಃ !!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. 'ಅಂತಾ ರಾಮಾಮಯಮ್' ಅನ್ನುತ್ತಾನೆ ಭಕ್ತ ರಾಮದಾಸ. 'ಅಂತಾ ರಮ್ಮುಮಯಂ' ಅನ್ನುತ್ತಾನೆ ಅಲ್ವಾ ಮದಿರೆ ದಾಸ?

      ಎನಂತೀರಿ ಕೊಳಲು ಸಾ?

      ಅಳಿಸಿ
  7. ಕವಿತೆಯಲ್ಲಿ ನಶೆ ಚೆನ್ನಾಗಿ ಬೆರೆತಿದೆ.. ಓದಿದಷ್ಟೂ ಅಮಲು.. waaah..

    ಪ್ರತ್ಯುತ್ತರಅಳಿಸಿ
  8. ಯಪ್ಪಾ ಬದರಿ....!!!
    ಯಾವುದೋ ಸಿನಿಮಾ ಡೈಲಾಗು ನೆನ್ಪಾಯ್ತು,,,
    ೬೦-೬೫ ವರ್ಷದ ಮುದುಕಿ ಹೇಳ್ತಾಳೆ
    "ನಾನು ದಿನಾ ನೈನ್ಟಿ ಹಾಕ್ಕೊಳ್ದೇ ಮಲಗಿದ್ದೇ ಇಲ್ಲ...ಅದು ಹಾಕ್ಕೊಂಡು ಮಲಗೋದೋ ಒಂದು ಮಜಾ"
    ಮೇಲಿನ ಸಾಲಲ್ಲಿ ನೈನ್ಟಿ=ನೈಟಿ ...ಅಷ್ಟೇ ಮಾರ್ಪಾಡು...
    ಕೊನೆಯ ಹನಿಯ ಕಥೆ ಕುಡ್ಕನಿಗೆ ಗೊತ್ತಿರೊಲ್ಲ ಆದರೆ ಅಂತಹ ಸ್ನೇಹಿತನ್ನ ಮನೆಗೆ ಡ್ರಾಪ್ ಮಾಡೋ ನನ್ನಂತಹ ಟೀ ಟೋಟಲ್ಲರ್ ಗೆ ನೆನಪು ತುಂಬಾ...
    ಒಮ್ಮೆ ಒಬ್ಬನ್ನ (ಟೈಟಾಗಿದ್ದ ಆಗ್ಲೇ) ರೂಮಿಗೆ ಬಿಟ್ಟೆ ಮಂಚದ ಮೇಲೆ ಮಲಗಿಸಿದೆ ಖಾತ್ರಿ ಆಯ್ತು ಮಲಗಿದ ಅಂತ..ಹೊರಟೆ ಮನೆಗೆ.
    ಬೆಳಿಗ್ಗೆ ಸ್ವಲ್ಪ ಚಿಂತೆ ಆಯ್ತು. ಯಾಕಂದ್ರೆ ತುಂಬಾನೆ ಕುಡಿದಿದ್ದ ರಾತ್ರಿ,,, ಎದ್ದು ಬೇಗ ಹೋಗಿ ನೋಡ್ತೀನಿ ಕಾಣ್ಲಿಲ್ಲ ಆಸಾಮಿ..!!!ಎಲ್ಲಾ ಕಡೆ ಹುಡುಕ್ದೆ..ಕೊನೆಗೆ ಟಾಯ್ಲೆಟ್ ಬಾಗಿಲಲ್ಲಿ ಬಿದ್ದಿದ್ದನ್ನ ನೋಡಿ..ನೀರು ಚಲ್ಲಿದೆ.
    ಸದ್ಯಕ್ಕೆ ಎಚ್ಚರ ಆಯ್ತು ಅವನಿಗೆ ಕೇಳಿದೆ..ಏನೋ ಕತೆ ನಿಂದು ? ಅಂತ..
    ನನ್ನ ಕೈಯಲ್ಲೇ ಯಾಕೋ ಬಿಟ್ಟೆ ಬಾಟ್ಲು..? ಅಂದ
    ಅದು ಖಾಲಿಯಾಗಿತ್ತಲ್ಲೋ..ಅಂದೆ
    ಊಂ ಕಣೋ ..ಆದ್ರೆ ನೀನು ಬಿಟ್ಟಮೇಲೆ ಸ್ವಲ್ಪ ಹಿತ್ಗೆ ಎಚ್ಚರ ಆಯ್ತು, ಬಾಟ್ಲು ಬಗ್ಗಿಸ್ದೆ ಮೂರ್ನಾಲ್ಕು ತೊಟ್ಟು ಸಿಕ್ತು, ಏರಿಸ್ಕಂಡೆ...ಸುಸು ಬಂತು..ಬಂದು ಮಾಡಿ ಔಟ್ ಆಗ್ಬುಟ್ಟೆ ಇಲ್ಲೇ ಅನ್ಸುತ್ತೆ..
    ಇದು-ಕೊನೆ ಹನಿಗಳ ಮಹಾತ್ಮೆ...!!!!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನೈನ್ಟಿ=ನೈಟಿ ಆಹಾ ಆಜಾಡಣ್ಣ ಭಲೇ ಭಲೇ. ಒಳ್ಳೆಯ ಕಾಮೆಂಟು ನನ್ನ ಪುಕ್ಕಕ್ಕೆ...
      ಧನ್ಯವಾದಗಳು ಸಾರ್. :)

      ಅಳಿಸಿ
  9. ಕುಡಿತದೊಳಗಿನ ಸತ್ಯಗಳು... ಸಾಲುಗಳಾಗಿ ಮೂಡಿಬಂದಿವೆ. ಕುಡಿತ ಎಷ್ಟೋ ಮನೆ ಮನಸ್ಸುಗಳನ್ನು ಹಾಳು ಮಾಡಿವೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಮಾತು ನಿಜ ಕುಡಿತ ಎಷ್ಟೋ ಮನೆ ಮನಸ್ಸುಗಳನ್ನು ಹಾಳು ಮಾಡಿವೆ ಸುಗುಣ ಅವರೇ, ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಮತ್ತಿನಿಂದ. ಒಳ್ಳೆಯ ಮಾತಿಗೆ ಧನ್ಯವಾದಗಳು ನಿಮಗೆ.

      ಅಳಿಸಿ
  10. "ಮೊದಲ ಸಿಪ್ಪಿಗೂ ಮುನ್ನ
    ಭಯಗ್ರಸ್ತ ತಳಮಳ ಒಳಗೆ
    ಕರುಳು ಸುಟ್ಟೀತೆ ಎಂಬಿತ್ಯಾದಿ,
    ಇಳಿದಂತೆ ಒಳಗೆ ಮಗಾ
    ಯಾವನಾ ಸೀ.ಎಂಊ ಈಗ?"

    ಮಧ್ಯೆ ಮಧ್ಯೆ ಮದ್ಯ ಇಳಿದಾಗ ಕಿಕ್ಕೂ
    ನಿಶೆಯಲ್ಲಿ ಅಕ್ಷರಗಳ ಮಧ್ಯೆ ಇಣುಕಿದಾಗ ಸಿಕ್ಕಿದ್ದು ಕಿಕ್ಕೂ
    ಬ್ಯಾಗಲ್ಲಿದ್ದ ಕಾಗದ ತೆಗೆದು ಗೀಚಿದೆ ಅಲ್ಲೂ ಸಿಕ್ತು ಕಿಕ್ಕೂ
    ತೂರಾಡುತ್ತಾ ಹೋದೆ ಮನೆಗೆ ಬಾಗಿಲ ತೆಗೆದ ಮಡದಿ ಕೊಟ್ಟಿದ್ದು ...... ?
    ಹ ಹ ಹ ಹ ನಾನು ಹೇಳೋಳಪ್ಪಾ!!!

    Super badari Sir!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನ್ನ ಕವಿತೆಯನ್ನು ಮೆಚ್ಚಿ ನೀವು ಬರೆದುಕೊಟ್ಟ ಸಾಲುಗಳು ಶ್ರೀಮಾನ್ ನಿಜವಾಗಲೂ ಮಹಾನ್. ಹುರ್ರೇ ಹುರ್ರೇ ಒಳ್ಳೆಯ ಕಾಮೆಂಟು ನಿಮ್ಮದು.

      ಅಳಿಸಿ
  11. ಕನ್ನಡದ "ಜಂಗ್ಲಿ" ಚಿತ್ರದ ರಂಗಾಯಣ ರಘು ಡೈಲಾಗ್ "ಬಾಟಲು ಹಿಂಡೋ " ನೆನಪಾಯ್ತು!! :-) super!!

    ಪ್ರತ್ಯುತ್ತರಅಳಿಸಿ
  12. En helbeko gottaagtilla sir. yavattoo kudidilla....aadre nimma kavana odi idoo sadhyana? anta annistide. Nisheloo chennag bardiddeera andre nivobba maahaan...............:P kavikaney irbeku annistu.

    Nicely written.

    Kusuma

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. :-P ಮೇಡಂ, ನಿಶೆಯಲ್ಲಿ ಬರೆದದ್ದು ಖಂಡಿತ ಅಲ್ಲವೇ ಅಲ್ಲ HRD ರಮ್ಮಿನ ಆಣೆಗೂ! ಕುಡಿದರೆ ಹಿಂಗುರುತ್ತೇ ಅಂತ ಕಲ್ಪನೆ ಮಾಡಿಕೊಂಡಷ್ಟೇ ಬರೆದೆ. ನಿಮಗೆ ಇಷ್ಟವಾದದ್ದು ನನಗೆ ಖುಷಿಕೊಟ್ಟಿತು.

      ಅಳಿಸಿ
  13. ಕವಿಯ ನಶೆ ಕವಿತೆಯಾಗಿ ಓದುಗರನ್ನು ಆವರಿಸುತ್ತಿದೆ. ಅಮಲು, ಅಮಲಾ, ಅಮಲ ಗಂಗಾ ಎಲ್ಲದಕ್ಕೂ ಸಲ್ಲುವ ಕವಿತೆ ಬರೆಯುವ ನಿಮಗೆ ಶರಣು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಮಲು, ಅಮಲಾ, ಅಮಲ ಗಂಗಾ ಮೂರಕ್ಕೂ ಸಲ್ಲುವ ಕವಿಯಾದರೆ ನನ್ನ ಬದುಕು ಸಾರ್ಥಕ. ನಿಮ್ಮ ಒಲುಮೆಗೆ ಇದೋ ನನ್ನ ಸಲಾಮುಗಳು.

      ಅಳಿಸಿ
  14. ಇಳಿದಂತೆ ಒಳಗೆ ಮಗಾ
    ಯಾವನಾ ಸೀ.ಎಂಊ ಈಗ?.eshto jana kudida mele ee dialogue hodeyodu nodiddini...

    Kudidaaga satya horage baruttanthe Badari sir... any how cheers !!!

    ಪ್ರತ್ಯುತ್ತರಅಳಿಸಿ
  15. ತುಂಬ ವಿಚಿತ್ರ ಅಲ್ವಾ ? ಅಲ್ಲಿನ ಅನುಭವ ಬ್ಲಾಗಿನಲ್ಲಿ ಬರಿ...ಅಬದರಿ ಭಾಯ್..
    ಮಸ್ತ್ ಆಗಿದೆ..
    ಕಿಕ್ ಹೊಡಿತು... "ಕುಡುಕನ" ಉವಾಚ... !!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹ್ಹಹ್ಹಹ್ಹ... ಕುಡುಕನ ಮತ್ತೇ ಗಮ್ಮತ್ತೂ ಅಲ್ವಾ ಪ್ರಕಾಶಣ್ಣ. ನಿಮ್ಮ ಒಲುಮೆಗೆ ಚಿಯರ್ಸೂ...

      ಅಳಿಸಿ
  16. ವಿಸ್ಕಿಯಲ್ಲಿ ಬೆರೆತ ನೀರಿನಂತೆ ಅಲ್ಲಲ್ಲಿ ಕನ್ನಡದಲ್ಲಿ ಬೆರೆತ ಆಂಗ್ಲ ಪದಗಳು ಕಿಕ್ಕು ಹತ್ತಿಸುವಂತಿವೆ..

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹ್ಹಹ್ಹಹ್ಹ ಒಂತಾರಾ ನಿಮ್ಮ ಮಾತು ನಿಜ ದಿಲೀಪ್ ಸಾರ್. ಕನ್ನಡವೇ ಸತ್ಯ. ಇಂಗ್ಲೀಷು ಬರೀ ಮಿತ್ಯಾ..

      ಅಳಿಸಿ
  17. ಬದರಿ ಸರ್ ಮದಿರೆಯ ಮತ್ತು ಮನದನ್ನೆಯ ಅಮಲಿನ ಕಲ್ಪನೆಯನ್ನ ನಲ್ಲಿ ನೀರಲ್ಲಿ ಮಜವಾಗಿ ಬೆರೆಸಿದ್ದೀರಿ.. ಚೆನ್ನಾಗಿದೆ..

    ಪ್ರತ್ಯುತ್ತರಅಳಿಸಿ
  18. ಅಸಲು ನೀರಿನದೇ ತಪ್ಪು
    ವಿಸ್ಕಿಗಾದರೂ ಅದೇ ರಮ್ಮಿಗಾದರೂ ಅದೇ
    ಮಿಳಿತ ಮನದೆನ್ನೆಯಂತೆ,
    ಅಮಲಿನಸಲು ಹಾಟಲ್ಲವೇ ಅಲ್ಲ
    ಗ್ಯಾರಂಟಿ ಅದು ನಲ್ಲಿ ನೀರೇ!

    WOW....!!! Sharanu sir... Chaliya belagallondu HOT kavite odide..:)

    ಪ್ರತ್ಯುತ್ತರಅಳಿಸಿ
  19. ಪ್ರತ್ಯುತ್ತರಗಳು
    1. ಅದೇ ಕಾಣಪ್ಪ ಕುಡುಕನ ಇಸೇಸತೆ ನ್ಯಾಪ್ಕಿನನ್ನೂ ಅವ ವೇಸ್ಟ್ ಮಾಡೋಹಂಗಿಲ್ಲ. ನನ್ನ ಕವನ ಓದಿ ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು.

      ಅಳಿಸಿ
  20. ಅ..ಣ್ನೋ ಏಏಏನ್ ಚೆಚೆನ್ನಾಆಆಗಿ ಬರ್ದ್ ಬರ್ದದಿರಿ... ಥೂ ಬಲೆ ಬಲೆ,,ಕಿಕ್ ಅತ್ತ್ ಬುಟ್ಟಯೈತೆ ಮಾತ್ ತೋ ದಲ್ತೈತೆ...

    ಪ್ರತ್ಯುತ್ತರಅಳಿಸಿ
  21. ಕುಡಿದಾಗ ಒಳಗಿರುವ ಎಲ್ಲ ಸತ್ಯಗಳು ಹೊರ ಬರುವುದಲ್ಲದೇ ಪುಕ್ಕಲ ಕೂಡ ರಾಜಾರೋಷವಾಗಿ ಮಾತಾಡ್ತಾನಂತೆ... :D

    ಮೊದಲ ಸಿಪ್ಪಿಗೂ ಮುನ್ನ
    ಭಯಗ್ರಸ್ತ ತಳಮಳ ಒಳಗೆ
    ಕರುಳು ಸುಟ್ಟೀತೆ ಎಂಬಿತ್ಯಾದಿ,
    ಇಳಿದಂತೆ ಒಳಗೆ ಮಗಾ
    ಯಾವನಾ ಸೀ.ಎಂಊ ಈಗ?

    ಈ ಸನ್ನಿವೇಶವನ್ನು ಸುಮಾರು ಮೂವೀಗಳಲ್ಲಿ ಕಂಡಿದೀವಿ. ಮೇಲಿನ ಸಾಲುಗಳು ಹಿಡಿಸಿದವು.

    ಪ್ರತ್ಯುತ್ತರಅಳಿಸಿ