ಸೋಮವಾರ, ಜುಲೈ 9, 2012

ಮಿರ್ಜಾ ಗಾಲೀಬನ ಗಜ಼ಲು - 2

(ಇಂಗ್ಲೀಷ್ ಅವತರಣಿಕೆಯಿಂದ)
(ಭಾವಾನುವಾದದ ಪ್ರಯತ್ನ)


ಹೂವ ಮೇಲೊಂದು ಇಬ್ಬನಿಯ ಬಿಂದು,
  ಕಣ್ಣೀರೋ ಅದು ಮತ್ತೊಂದೋ?
ನನ್ನ ಸುಟ್ಟ ಗಾಯಗಳ ಹಿಂದಿದ್ದಾಳೆ,
  ಅವಳೇ ಆ ಕ್ರೂರಿ ಹೆಣ್ಣು...


ಮುಂಜಾವು ಒಂದಿಡೀ ಬೂದಿ,
  ಕೋಗಿಲೆಯೂ ಸಹ ಕಪ್ಪನೆ ಚಿನ್ಹೆ;
ಬೆಂದ ಹೃದಯದ ಚೀತ್ಕಾರ,
  ಅವಳಿಗೇನೂ ಅಲ್ಲವೇ ಅಲ್ಲ!


ಅಗ್ನಿ ಏನು ಮಾಡಬಲ್ಲದು ಹೇಳಿ?
  ಕೆನ್ನಾಲಿಗೆ ಸಾಕಲ್ಲವೇ ಸುಡಲಿಕ್ಕೆ;
ಎಷ್ಟು ನೋವ ತಿನ್ನಲಿ ಹೇಳಿ,
  ಹೇಳಿ ಮುಚ್ಚಿಕೊಳ್ಳಲಿ ಇನ್ನೆಷ್ಟು ಗಾಯ?


ಪ್ರೇಮ ಕೈದಿಯ ಅಳಲು;
  ಪ್ರೇಮ ಕೈದಿಗೇ ತಿಳಿದಾವು,
ನೋಡಿ ಸ್ವಾಮಿ! ನನ್ನ ಬದುಕ
  ಸಿಕ್ಕಿಕೊಂಡಿದೆ ಚಪ್ಪಡಿ ಅಡಿಯಲ್ಲಿ


ಓ ಸೂರ್ಯ ದೇವ!
  ಧರೆಗೆಲ್ಲ ಬೆಳಕನೀಯುವವನೇ,
ಕೃಪೆ ತೋರಿ ಕಣ್ಣ ತೆರೆ;
  ಚಾಚಿಕೊಂಡಿದೆ ಕಾಲನ ದೀರ್ಘ ನೆರಳು



(ಚಿತ್ರ ಕೃಪೆ : ಅಂತರ್ಜಾಲ)

8 ಕಾಮೆಂಟ್‌ಗಳು:

  1. ಆಹ್ ಭರ್ಜರಿಯಾಗಿದೆ. ಮುಂದಿನ ಹನಿಗವನಗಳಿಗೆ ಕಾಯುವಂತಿದೆ.

    ಪ್ರತ್ಯುತ್ತರಅಳಿಸಿ
  2. ಚಾಚಿಕೊಂಡಿದೆ ಕಾಲನ ದೀರ್ಘ ನೆರಳು......
    ಅಬ್ಭಾ..ಎಂಥಾ ಸಾಲುಗಳು. ನಿಮ್ಮ ಕವನದೆದುರು ನನ್ನ ಕಾಮೆಂಟ್ ಗಳೆಲ್ಲಾ ಇರುವೆಯೊಂದು ಪರ್ವತವನ್ನು ಅಳೆಯಲು ಹೊರಟಂತೆ.

    ಪ್ರತ್ಯುತ್ತರಅಳಿಸಿ
  3. ಗಾಲೀಬನಿಗೊಂದು ಸಲಾಮು; ನಿಮಗೂ ಒಂದು ಸಲಾಮು. ಗಾಲೀಬನ ಗಜಲುಗಳನ್ನು ಕನ್ನಡಕ್ಕೆ ಕೊಡುವುದನ್ನು ಮುಂದುವರೆಸಿ.

    ಪ್ರತ್ಯುತ್ತರಅಳಿಸಿ
  4. ನೀವೇನಾದರೂ ಇದನ್ನು ಇಷ್ಟಕ್ಕೇ ನಿಲ್ಲಿಸಿದಿರೋ ಆ ಮಿರ್ಜಾ ಗಾಲೀಬನ ಮೇಲಾಣೆ

    ಪ್ರತ್ಯುತ್ತರಅಳಿಸಿ
  5. ಆಹಾ .. ಒಂದು ಎರಡು ಮೂರು ನಾಲ್ಕು ಐದು .... ಎಲ್ಲವೂ ಅತೀ ಸೊಗಸು ... ಹೀಗೆಯೇ ಬರೆಯಿರಿ ಇನ್ನೂ ಐದೈದು ಸೊಗಸಿನ ಸಿಹಿ ಕಹಿ ಸುದ್ದಿಗಳ ಸಮ್ಮಿಶ್ರಣ ... ಮ್...ಮ್.. ಸೂಪರ್ ಸೂಪರ್ ಸರ್... ವೆರಿ ನೈಸ್ .. :)

    ಪ್ರತ್ಯುತ್ತರಅಳಿಸಿ
  6. ವಾವ್ ವಾವ್.....ಒಂದಕ್ಕಿಂತ ಒಂದು ಮಿಗಿಲು.....ಮುಂದುವರಿಸಿ ಸರ್.....

    ಪ್ರತ್ಯುತ್ತರಅಳಿಸಿ
  7. ಸೂಪರ್ ಆಗಿವೆ ... ಕೊನೆಯ ಗಜಲಂತೂ ತುಂಬಾನೇ ಇಷ್ಟವಾಯ್ತು ..

    ಪ್ರತ್ಯುತ್ತರಅಳಿಸಿ