ಸೋಮವಾರ, ಜನವರಿ 16, 2012

ಸೂರ್ಯ ನಮಸ್ಕಾರ...



ಆ ರವಿಯ ಬೆಳಕಿನಲೇ ಭೂಮಿಯ ಬದುಕು;
ಪಕ್ಷಕಲೆವಾತ್ಮ ತಿಂಗಳನ ಹೊಳಹು!
ಒಂದು ಪರಮಾತ್ಮ ಇನ್ನೊಂದು ಜೀವಾತ್ಮ
ಹುಟ್ಟಿನಿಂದೆರೆಡು ಸೌಮ್ಯ ಬಿಂದು...

ಎವೆಗೂ ನಿಲುಕದೀ ನಭೆಯು
ಶತ ಕೋಟಿ ತಾರೆಗಳ ಸಂತೆ;
ಹಾಳು ಸುರಿದಿದೆ ಬೆಳಕಿನೋಕುಳಿ
ನಡುವೆ ಏನೀ ಗಾಢಾಂಧಕಾರ?

ಏಳು ಕುದುರೆಗಳು ಮೇಲೆ ಸರದಾರ
ಮೂಡಣಕು ಪಡುವಣಕೂ ಸಂಚಾರ;
ತಾನುರಿದು ತನ್ನೊಳಗೆ, ಧಗಧಗಿಸೋ
ಆದಿ ಅಶಾಂತ ರುದ್ರ ರೂಪಿ!

ಕ್ರಮಿಸಿ ಜಗದುದ್ದ ತನ್ನದೇ ಹಾದಿ
ತಣಿದು ತುಸು ತಾನಿಳಿದು ಧರೆಗೀವ ಮುತ್ತು;
ಹಸಿದ ಜೀವ ಜಾಲಕೆ ಅನ್ನವ ಬಸಿದು
ಉಸಿರುಣಿಸಿ ಗುಕ್ಕು ಗುಕ್ಕು...

ಅವನಲ್ಲವೇ ನಿಜಕೂ ದೈವ?
ಕರ್ಣ ಧಾತುವಿನ ಕರುಣೆ ಅಪಾರ,
ಕಪ್ಪು ರಂಧ್ರವು ಬಾರದಿರಲಿ ಎಂದೂ
ಭುವಿಯತ್ತ ಚುಂಬನವು ಸಾಗುತಿರಲೆಂದೂ...





(ಚಿತ್ರ ಕೃಪೆ : ಅಂತರ್ಜಾಲ)

21 ಕಾಮೆಂಟ್‌ಗಳು:

  1. @ Badarinath Palavalli
    https://www.facebook.com/Badarinath.Palavalli
    ಅವನಲ್ಲವೇ ನಿಜಕೂ ದೈವ?
    ಕರ್ಣ ಧಾತುವಿನ ಕರುಣೆ ಅಪಾರ,
    ಕಪ್ಪು ರಂಧ್ರವು ಬಾರದಿರಲಿ ಎಂದೂ
    ಭುವಿಯತ್ತ ಚುಂಬನವು ಸಾಗುತಿರಲೆಂದೂ...
    ಇಲ್ಲಿಗೆ ಮುಗಿಸಿದ್ದು .. ಏನೋ ಒಂದು ಅತೃಪ್ತಿ ಓದುವಾಗ .. ಎಷ್ಟೊಂದು ಸುಂದರ ಸಾಲುಗಳು.. ವರ್ಣನೆಯೂ ಅತ್ಯದ್ಬುತ .. ಸೂರ್ಯನಿಗೆ ಎಷ್ಟು ಸಾರಿ ನಮಸ್ಕಾರ ಮಾಡಿದರೂ ಸಾಕಾಗೋದಿಲ್ಲ.. ಕವನ ಇನ್ನೂ ಮುಂದುವರೆದಿದ್ದರೆ ತುಂಬಾ ಚೆನ್ನ ಇರುತ್ತಿತ್ತು.. ಏಕಂದರೆ ಇಲ್ಲಿ ಓದೋವಾಗ ಅನ್ನೋದಕ್ಕಿಂತ ಹಾಡೋವಾಗ ಅಂದರೆ ಬಹಳಾ ಚೆನ್ನ.. ಹಾಡು ಇನ್ನು ಬೇಕಿತ್ತು ಅನಿಸುತ್ತಾ ಇದೆ.. ಪದೇ ಪದೇ ಹಾಡಲು , ಈ ಹಾಡನ್ನು ಕೇಳಲು ಅತೀ ಸೊಗಸು.. ಒಂದು ಸೊಗಸಾದ ಕವನ ಸರ್.. :)
    ಏಳು ಕುದುರೆಗಳು ಮೇಲೆ ಸರದಾರ
    ಮೂಡಣಕು ಪಡುವಣಕೂ ಸಂಚಾರ;
    ತಾನುರಿದು ತನ್ನೊಳಗೆ, ಧಗಧಗಿಸೋ
    ಆದಿ ಅಶಾಂತ ರುದ್ರ ರೂಪಿ!
    ಎಂಬ ಸಾಲುಗಳು ತುಂಬಾ ಇಷ್ಟ ಆಯಿತು... ಭಾರಿ ಆಕರ್ಷಣೆ ಚಿತ್ರದ ಜೊತೆಯಲ್ಲಿ ಈ ಕವನದಲ್ಲಿ... :)

    ಪ್ರತ್ಯುತ್ತರಅಳಿಸಿ
  2. ಬದರಿನಾಥರೆ,
    ಮಕರಸಂಕ್ರಮಣಕ್ಕೆ ನೀವು ನೀಡಿದ ‘ಸೂರ್ಯ ನಮಸ್ಕಾರ’ ಸೊಗಸಾಗಿದೆ. ಖಗೋಲದ ವಾಸ್ತವತೆಯನ್ನು ಪೌರಾಣಿಕ ನಂಬುಗೆಯೊಡನೆ ಬೆಸೆದ ನಿಮ್ಮ ಅನಾಯಾಸ ಕೌಶಲ್ಯ ಅಪೂರ್ವವಾಗಿದೆ.
    ಸಂಕ್ರಮಣದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  3. ಸೊಗಸಾಗಿ 'ಸೂರ್ಯ ನಮಸ್ಕಾರ' ಬರೆದ ನಿಮಗೆ ನಮಸ್ಕಾರ
    ಸ್ವರ್ಣಾ

    ಪ್ರತ್ಯುತ್ತರಅಳಿಸಿ
  4. ನೀವೊಂದು ಕನ್ನಡದ ನಿಘಂಟೇ ಸರಿ ಬದರಿ ಸರ್.. ಸುಂದರ ಪದಪ್ರಯೋಗ ಮತ್ತು ಭಾವಗಳನ್ನು ಹೆಕ್ಕಿ ಓರಣಗೊಳಿಸುವ ಚಾಕಚಕ್ಯತೆ ನಿಮ್ಮ ನಿರೂಪಣೆಯಲ್ಲಿ ವೈಶಿಷ್ಠ್ಯ.. ಸೂರ್ಯ ನಮಸ್ಕಾರ ಅರ್ಥಪೂರ್ಣವಾಗಿ ಮೂಡಿ ಬಂದಿದೆ.. ಮತ್ತು ಸೂರ್ಯ ಮತ್ತು ಭೂಮಿಯ ನಡುವಿನ ಶೃಂಗಾರ ಭಾವಗಳನ್ನು ಹೆಕ್ಕುವ ನಿಮ್ಮ ಕಾವ್ಯಧಾರೆ ವೈಶಿಷ್ಠ್ಯಪೂರ್ಣವೆನಿಸುತ್ತದೆ.. ತುಂಬಾ ಹಿಡಿಸಿತು ಕವಿತೆ..

    ಪ್ರತ್ಯುತ್ತರಅಳಿಸಿ
  5. ಸೂರ್ಯನ ಸಮಗ್ರ ರೂಪವನ್ನು ತೆರೆದಿಟ್ಟಿರುವ ನಿಮ್ಮ ಕವಿತೆ ಅದ್ಭುತ. ವೈಜ್ಞಾನಿಕ ಮಾತು ಪಾರಮಾರ್ಥಿಕ ಕೋನಗಳ ಸುಂದರ ವರ್ಣನೆ..................... ಬದ್ರಿಯವರೇ ಅತೀ ಸುಂದರ .

    ಪ್ರತ್ಯುತ್ತರಅಳಿಸಿ
  6. ನಿಮ್ಮ ಕವಿತೆ ಕಟ್ಟುವ ಸೂಕ್ಷ್ಮ ಶೈಲಿಗೊಂದು ಸಲಾಂ.. ನಿಮ್ಮ ಒಂದು ಕವಿತೆಯಿಂದ ಅದೆಷ್ಟೋ ಭಾವಗಳು ಹೊರಹೊಮ್ಮುತ್ತವೆ.
    ಕವಿತೆಯಲ್ಲಿನ ಪದಗಳ ಲಾಸ್ಯ, ಪ್ರಬುದ್ಧತೆ ನಿಜಕ್ಕೂ ಅದ್ಭುತ.

    ಪ್ರತ್ಯುತ್ತರಅಳಿಸಿ
  7. @ISHWARA BHAT K :

    ಸದಾ ನನ್ನ ಕವಿತೆಗಳನ್ನು ಮೆಚ್ಚುವ ನಿಮ್ಮ ಸಹೃದಯತೆಗೆ ಶರಣು.

    ಪ್ರತ್ಯುತ್ತರಅಳಿಸಿ
  8. @|| ಪ್ರಶಾಂತ್ ಖಟಾವಕರ್ ||
    *Prashanth P Khatavakar

    ಗೆಳೆಯ ನನ್ನ ಕವಿತೆಗಳನ್ನು ನೀವು ಮೆಚ್ಚಿಕೊಂಡು, ನನ್ನ ಬಗ್ಗೆ ಕವಿತನ್ನು ಬರೆದುಕೊಡುವ ನಿಮ್ಮ ದೊಡ್ಡ ಮನಸ್ಸು ನನಗೆ ಪ್ರೇರಣೆ ಕೊಡುತ್ತದೆ.

    ಈ ಪ್ರೀತಿ ಹೀಗೆ ಇರಲಿ.

    ಪ್ರತ್ಯುತ್ತರಅಳಿಸಿ
  9. @sunaath:

    ಗುರುಭ್ಯೋ ನಮಹ...

    ನಿಮ್ಮ ಕಮೆಂಟಿನ ಉದ್ದ ನೋಡಿಕೊಂಡು ಕವಿಯೆ ತೂಕವನ್ನು ಅಳೆಯುತ್ತೇನೆ.

    ಸದಾ ನನ್ನ ಬೆನ್ನಿಗಿರಿ ಸಾರ್.

    ಪ್ರತ್ಯುತ್ತರಅಳಿಸಿ
  10. @Dr.D.T.Krishna Murthy :

    ಬ್ಲಾಗುಗಳ ರಾಜ, ಕೊಳಲಿನ ದೊರೆ! ನಿಮ್ಮ ಒಲುಮೆ ಹೀಗೆ ಇರಲಿ...

    ಪ್ರತ್ಯುತ್ತರಅಳಿಸಿ
  11. @Gold13 :

    ಧನ್ಯವಾದಳು ಮೇಡಂ...

    ಸದಾ ಮೊದಲ ಓದುಗರಾದ ಸ್ವರ್ಣಾ ನಿಮಗೆ ನನ್ನ ಶರಣು.

    ಪ್ರತ್ಯುತ್ತರಅಳಿಸಿ
  12. @DEW DROP (ಮಂಜಿನ ಹನಿ):

    ಇಷ್ಟ ಮಾತ್ರದ ಹೊಗಳಿಕೆಗೆ ಅರಳುವ ಅಜ್ಞಾತ ಕುಸುಮವು ನಾನು.

    ತುಂಬು ಧನ್ಯವಾಗಳು.

    ಪ್ರತ್ಯುತ್ತರಅಳಿಸಿ
  13. @tiru:

    ಸಾರ್,

    ನಿಮ್ಮ ಬೆನ್ನು ತಟ್ಟುವ ಸಹೃದಯತೆ ನನಗೆ ಮಾರ್ಗರ್ದಶಕ.

    ತುಂಬು ಧನ್ಯವಾಗಳು.

    ಪ್ರತ್ಯುತ್ತರಅಳಿಸಿ
  14. @Paresh Saraf:

    ಮಿತ್ರ ಪರೇಶ್,

    ಹೀಗೆ ನನ್ನೊಟ್ಟಿಗೆ ಇರಿ.

    ತುಂಬು ಧನ್ಯವಾಗಳು.

    ಪ್ರತ್ಯುತ್ತರಅಳಿಸಿ
  15. ನಿಮ್ಮ ಕವನಗಳಿಗೆ ನೀವೇ ಸಾಟಿ.. ಬಹಳ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  16. ಪ್ರಕೃತಿ ಆರಾಧನೆಯಲ್ಲಿ ಸೂರ್ಯನ ಕುರಿತಾದ ತಮ್ಮ ಈ ಕವನ ನಿರಂತರತೆಗೆ ಅಶಾವತೆಗೆ ಒಂದು ಉತ್ತಮ ಸಂಕೇತ.
    ಅದ್ಭುತ ಕವನ

    ಪ್ರತ್ಯುತ್ತರಅಳಿಸಿ