ಬುಧವಾರ, ನವೆಂಬರ್ 10, 2010

ನನ್ನ ಕೂಸೇ...

ಕಣ್ಣ ಮುಂದೆಯೇ ಗಿಡವಾಗಿ ಬೆಳೆದೆವಳೇ
ಎದೆಯೆತ್ತರದ ಮಗಳೇ
ನೀನೀಗ ನನ್ನ ಗೆಳತಿ...

ನೀನು ಚಿಕ್ಕವಳಿದ್ದಾಗ
ಅತ್ತಾಗಲೆಲ್ಲ ಎತ್ತಿಕೊಳ್ಳುತ್ತಿದ್ದೆ...
ಅಲ್ಲ ಅಲ್ಲ ಮುದ್ದು ಬಂದಾಗಲೂ ಸಹ!
ಎಷ್ಟು ಪುಟ್ಟದಿತ್ತು ಮರೀ ನಿನ್ನ
ಬೆಳಲುಗಳು ಮೊದಲ ಸಲ
ಹೆರಿಗೆ ಮನೆಯಲಿ ತಾಕಿದಾಗ..

ನನಗೋ ಮುಗಿಯದ ಮನೆಗೆಲಸ
ಯಾರನು ಏಗ ಬೇಕೋ! ಮಗುವನೋ?
ಇಲ್ಲ, ಇನ್ನೂ ಕೂಸುತನ ಬಿಡದ ಅಪ್ಪನನೋ?
ನಡುವೆಲ್ಲಿತ್ತು ಹೇಳೇ ಅಂತರ...
ನೀನೋ ದಿನವಿಡೀ ಅಂಟಿಕೊಂಡಿರುತಿದ್ದೆ
ನಿದ್ರಿಸಲೆಲ್ಲಿ ಬಿಟ್ಟಿದ್ದೀ ನೀನಾಗ ನನಗೆ?...

ಮೊದಲು ಬೋರಲು ಬಿದ್ದಾಗ
ಕರ್ಜೀಕಾಯಿ ಕರೆದಿದ್ದೆ, ನಿನ್ನ ಬಾಯಿಗದರ ಚೂರು...
ಮೊದಲು ದೇಕಿದಾಗ ಚಪ್ಪಾಳೆ ತಟ್ಟಿದ್ದೆ
ಗೋಡೆಗಾತು ಪುಟ್ಟ ಹೆಜ್ಜೆಗಳನು
ಊರಿ ಊರಿ ನನ್ನೆಡೆಗೆ ಬಂದಾಗ ಕುಣಿದಾಡಿದ್ದೆ
ಆ ಜೇನ ಹೆಬ್ಬೆರಳನೆಷ್ಟು ಚೀಪಿದೆಯೋ
ಈಗೆಲ್ಲ ಅವೆಲ್ಲ ಆಲ್ಬಮಿನ ಚಿತ್ರಗಳು...

ಹೆಣ್ಣು ಹೆತ್ತವರಿಗೆ ವರ್ಷಗಳು ನಿಮಿಷಗಳು
ಬೆಳವಣಿಗೆ ವಾಯು ವೇಗ!
ನೀನು ನನ್ನೆತ್ತರ
ಮನಸು ಅದಕಿಂತ ಎತ್ತರ!
ಈಗ ನಾನೇ ನಿನ್ನ ಕೂಸು ಮಗಳೇ...


(ಚಿತ್ರ ಕೃಪೆ : ಅಂತರ್ಜಾಲ)

16 ಕಾಮೆಂಟ್‌ಗಳು:

  1. Fantastic Badari!!
    My eyes are moist reading this!! i could never have put it so beautifully
    thank you so much
    malathi S

    ಪ್ರತ್ಯುತ್ತರಅಳಿಸಿ
  2. 'ಈಗ ನಾನೇ ನಿನ್ನ ಕೂಸು ಮಗಳೆ!',ನೀನೆಗೆ ಅಮ್ಮ!ಇಂತಹ ಆಲೋಚನೆಗಳೇ ಅದ್ಭುತ!ಸುಂದರ ಕವನ.ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  3. ಬದರಿನಾಥರೆ,
    ತುಂಬ ಭಾವಪೂರ್ಣ ಕವನ. ಬೆಳೆಯುತ್ತಿರುವ ಮಕ್ಕಳನ್ನು ನೋಡಿದಾಗ ತಾಯ ಹೃದಯದಲ್ಲಿ ಮೂಡುವ ಭಾವನೆಗಳನ್ನು ಸೊಗಸಾಗಿ ವ್ಯಕ್ತ ಪಡಿಸಿದ್ದೀರಿ.

    ಪ್ರತ್ಯುತ್ತರಅಳಿಸಿ
  4. ಅದ್ಭುತ ಕವನ ಬದರಿನಾತಾರೆ. ತಮ್ಮ ಕಲ್ಪನೆ ತುಂಬಾ ಆಪ್ತವಾಗಿದೆ.

    ಪ್ರತ್ಯುತ್ತರಅಳಿಸಿ
  5. ಬದರಿನಾಥ್ ಅವರೆ,

    ಓಹ್..ಅದ್ಭುತ ಕವನ !
    ಕೊನೆಯ ಸಾಲು ಕಳಶವಿಟ್ಟಂತೆ ಇದೆ..

    ತುಂಬಾ ಇಷ್ಟವಾಯ್ತು

    ಪ್ರತ್ಯುತ್ತರಅಳಿಸಿ
  6. ಮೊದಲು ಬೋರಲು ಬಿದ್ದಾಗ
    ಕರ್ಜೀಕಾಯಿ ಕರೆದಿದ್ದೆ, ನಿನ್ನ ಬಾಯಿಗದರ ಚೂರು...
    ಮೊದಲು ದೇಕಿದಾಗ ಚಪ್ಪಾಳೆ ತಟ್ಟಿದ್ದೆ
    ಗೋಡೆಗಾತು ಪುಟ್ಟ ಹೆಜ್ಜೆಗಳನು
    ಊರಿ ಊರಿ ನನ್ನೆಡೆಗೆ ಬಂದಾಗ ಕುಣಿದಾಡಿದ್ದೆ
    ಆ ಜೇನ ಹೆಬ್ಬೆರಳನೆಷ್ಟು ಚೀಪಿದೆಯೋ
    ಈಗೆಲ್ಲ ಅವೆಲ್ಲ ಆಲ್ಬಮಿನ ಚಿತ್ರಗಳು...

    ಹೆಣ್ಣು ಹೆತ್ತವರಿಗೆ ವರ್ಷಗಳು ನಿಮಿಷಗಳು
    ಬೆಳವಣಿಗೆ ವಾಯು ವೇಗ!
    ನೀನು ನನ್ನೆತ್ತರ
    ಮನಸು ಅದಕಿಂತ ಎತ್ತರ!
    ಈಗ ನಾನೇ ನಿನ್ನ ಕೂಸು ಮಗಳೇ...ಭದ್ರಿನಾಥ್ ಪಲವಲ್ಲಿ ಸಾರ್ ಎಂತಹ ಮುಧನೀಡುವ ಸಾಲುಗಳು. ನನಗೆ ತುಂಬಾ ಇಷ್ಟವಾಯಿತು.ನನ್ನ ಬ್ಲಾಗಿಗೆ ಬಂದು ಬೆನ್ನುತತ್ತಿದ್ದೀರಿ ನಿಮಗೆ ಧನ್ಯವಾದಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.

    ಪ್ರತ್ಯುತ್ತರಅಳಿಸಿ
  7. ವಾಹ್, ಸೊಗಸಾದ ಕವನ!! ಪ್ರತಿಯೊಂದು ಸಾಲೂ ಇಷ್ಟವಾಯಿತು:)

    ಪ್ರತ್ಯುತ್ತರಅಳಿಸಿ
  8. ನಂಗೂ ಮಗಳೇ ಪಲವಳ್ಳಿ ಸರ್. ಚೆನ್ನಾಗಿ ವ್ಯಕ್ತವಾಗಿವೆ ತಂದೆಯ ಭಾವನೆಗಳು.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  9. ತುಂಬಾ ಸೊಗಸಾಗಿದೆ ಕವನ..
    ಈಗ ನಾನೇ ನಿನ್ನ ಕೂಸು ಮಗಳೇ..ಈ ಸಾಲು ಇಷ್ಟವಾಯ್ತು..ಮಕ್ಕಳು ಬೆಳಿದು ದೊಡ್ದವರಾಗಿದ್ದು ಗೊತ್ತಾಗೋದೇ ಇಲ್ಲ.

    ಪ್ರತ್ಯುತ್ತರಅಳಿಸಿ
  10. ತುಂಬಾ ಆಪ್ತವಾದ ಕವನ ಬದರಿ, ಎಲ್ಲ ಅಪ್ಪಂದಿರ ಎದೆ ಮಿಡಿತವನ್ನು ಹದವಾಗಿ ಹಿಡಿದಿದ್ದೀರಿ.

    ಪ್ರತ್ಯುತ್ತರಅಳಿಸಿ