ಮಂಗಳವಾರ, ಏಪ್ರಿಲ್ 7, 2015

ಶುರುವಿಡು ಈಗಲೇ...

ಇಲ್ಲದುತ್ಸಾಹವನು 
ಇದೆ ಎಂದೇಕೆ
ಸುಳ್ಳು ತೋರ್ಪಡಿಕೆ?
ಕಾಲವದು ರಾಟೆ
ಕಾಳಸರ್ಪಯೋಗ!

ಗಡಿಗೆ ಒಡೆದೀತು
ತಟ್ಟನೆ ಬೆನ್ನ ಹಿಂದೆ,
ನೀಲಗಟ್ಟಿದ ದೇಹದಿ
ಲೋಹಗಳೂ ನಿಕಾಲಿ,
ಚಾಲ್ತಿಯಿರಿ ಕಿಸಿದು

ಉತ್ಸಾಹದ ಕಿಡಿಯಲಿ
ಉತ್ತರ ಕುಮಾರತ್ವವೇ!
ಕುಂಬಳಾಕರದ ಕಾಯಿ
ಮಿಲೀ ಲೆಕ್ಕದ ನೀರೇ,
ಇರಲಿ ಉದಾರ ಭಾವ

ಪಾದುಕೆ ಸವೆದರೂ
ಪಾದ ಸಾಗದದು,
ದಿಕ್ಕುಮಾಲಿನ ದಿಕ್ಕು
ಸೆಳೆವದು ಸ್ವಮಡು,
ಇಂದೊಮ್ಮೆ ಬದುಕು

ಮೂಢಾತ್ಮ ಅಕ್ಕರಿಗಾ,
ಬಯಲು ಒಳಗಣ ಖಾಲಿ
ತೇಪೆಯೂ ಅರಬೆತ್ತಲೆ,
ಸ್ನಿಗ್ಧ ಸೌಂದರ್ಯವೊಂದೇ
ಅಂತರಂಗದಾ ಕನ್ನಡಿ

ಹೂವುಗಳವೇ ಬಳಕೆ
ಆರಾಧನೆಗು ಕಳೇವರಕೂ
ಮಲ್ಲಿಗೆ ಮಧು ಮಂಚಕೂ,
ಸಾರ್ಥಕ ಮಾಲಿಕನವ
ಮಾಲಿಗೂ ತುಸು ಗಿರಿಮೆ

11 ಕಾಮೆಂಟ್‌ಗಳು:

  1. "ಸ್ನಿಗ್ಧ ಸೌಂದರ್ಯವೊಂದೇ ಅಂತರಂಗದಾ ಕನ್ನಡಿ" ಸುಂದರ ಪದ ಪದ ಪ್ರಯೋಗ. ಒಂದೊಂದೇ ಆಯಾಮವನ್ನು ಬೆತ್ತಲಾಗಿಸುತ್ತಾ ಹೋಗುವ ಹಸಿ ಹಸಿ ಕವನ. ಬಾಗುಂದಪ್ಪಾ ಬದರಿ

    ಪ್ರತ್ಯುತ್ತರಅಳಿಸಿ
  2. ಮನುಷ್ಯನ ಬದುಕೇ ಹಾಗೆ ಅಲ್ಲವೇ ಈಗಿದ್ದಿ ಈಗಿಲ್ಲ ಅಷ್ಟೆ
    ತುಂಬಾ ಚೆನ್ನಾಗಿ ಅಂತರಂಗದ ಭಾವ ಬಿಚ್ಚಿಟ್ಟಿರಿ ಬದರಿಯವರೇ
    ಬದರಿಯ ಸಗ್ಗವಿದು
    ಫಲವಳ್ಳಿಯ ಕಗ್ಗ

    ಪ್ರತ್ಯುತ್ತರಅಳಿಸಿ
  3. ಪಾದುಕೆ ಸವೆದರೂ
    ಪಾದ ಸಾಗದದು,
    ದಿಕ್ಕುಮಾಲಿನ ದಿಕ್ಕು
    ಸೆಳೆವದು ಸ್ವಮಡು,
    ಇಂದೊಮ್ಮೆ ಬದುಕು " ಸ್ವಮಡು " ಹೊಸ ಪದ ಅನಿಸಿತು. ಚೆನ್ನಾಗಿದೆ. :)

    ಪ್ರತ್ಯುತ್ತರಅಳಿಸಿ
  4. ಪಾದುಕೆ ಸವೆದರೂ
    ಪಾದ ಸಾಗದದು,
    ದಿಕ್ಕುಮಾಲಿನ ದಿಕ್ಕು
    ಸೆಳೆವದು ಸ್ವಮಡು,
    ಇಂದೊಮ್ಮೆ ಬದುಕು " ಸ್ವಮಡು " ಹೊಸ ಪದ ಅನಿಸಿತು. ಚೆನ್ನಾಗಿದೆ. :)

    ಪ್ರತ್ಯುತ್ತರಅಳಿಸಿ
  5. "ಸ್ನಿಗ್ಧ ಸೌಂದರ್ಯವೊಂದೇ ಅಂತರಂಗದಾ ಕನ್ನಡಿ" ಚಂದದ ಸಾಲು. ಮುಖವಾಡಗಳ ಜಗತ್ತಿನಲ್ಲಿ ಕನ್ನಡಿ ನೋಡುವ ಪುರುಸೋತ್ತೆಲ್ಲಿ ?

    ಪ್ರತ್ಯುತ್ತರಅಳಿಸಿ
  6. ಸ್ನಿಗ್ಧ ಸೌಂದರ್ಯವೊಂದೇ ಅಂತರಂಗದಾ ಕನ್ನಡಿ ಈ ಸಾಲು ಪದ್ಯದ ಮೌಲ್ಯವನ್ನು ಹೆಚ್ಚಿಸಿದೆ... ಅಂತರಂಗವನು ಅರಿಯದ ಹಲವರು ಒಡೆವ ಗಾಜನ್ನು ನೋಡಿ ತಿಳಿಯಲು ಅಸಾಧ್ಯವಾದದ್ದು. ಅರ್ಥಪೂರ್ಣ ಸಾಲುಗಳು ಕವನದ ತುಂಬೆಲ್ಲ ಮನಸಿಗೆ ನಾಟುವ ಭಾವಪೂರ್ಣತೆಯ ಜೊತೆ. :)

    ಪ್ರತ್ಯುತ್ತರಅಳಿಸಿ
  7. "ಬಂದಾಗ ನಗುವು ಹೋದಾಗ ಮಾತ್ರ ಕಣ್ನೀರೆಕೋ ಕಾಣೆ.. ಕಸಿದು ಕೊಳ್ಳುವ ಹಕ್ಕು ಎಂದೂ ಕೊಟ್ಟೋನ್ ಗೇನೆ ತಾನೇ ಎನ್ನುವ ನಾಗರ ಹೊಳೆ ಚಿತ್ರದ ಹಾಡಿನಂತೆ.. ಇರುವುದು ಬರುವುದು ಹೋಗುವುದು ನಮ್ಮ ವಶದಲ್ಲಿಲ್ಲ.. ಆದರೆ ಇರುವಾಗ ಮತ್ತು ಹೋಗುವ ಮುನ್ನ ನಾವಿಡುವ ಹೆಜ್ಜೆಗಳು ಸಾಧುವಾಗಿರಬೇಕು.

    ಪ್ರತಿ ದಿನವೂ ಹೊಸತನದಲ್ಲಿ ಕೂಡಿರಬೇಕು ಎನ್ನುವ ಉದಾತ್ತ ಕವಿಯ ಆಶಯ ಇಲ್ಲಿ ಪ್ರಕಟವಾಗಿದೆ.. ಮೊದಲ ನೋಟಕ್ಕೆ ಋಣಾತ್ಮಕ ಕವನ ಎನ್ನಿಸಿದರೂ ಒಳಗಿನ ಸೌಂದರ್ಯ ಅರಿತಾಗ ಅದರ ಆಶಯ ಅರಿವಾಗುತ್ತದೆ
    ಬದರಿ ಸರ್ ಸೂಪರ್ ಸರ್

    ಪ್ರತ್ಯುತ್ತರಅಳಿಸಿ