Monday, December 10, 2012

ಕ್ರಿಷ್ ಜೋಶಿಯವರ In Illusion.....

"ಪರಸ್ಪರ" 
ನನ್ನ ಓರಿಗೆಯ ಬರಹಗಾರರನ್ನು ಪರಿಚಯಿಸುವ ನನ್ನ ಪುಟ್ಟ ಯತ್ನ.
In Illusion .....

How long do we live. . . .
. . . . . In illusion?


Of course, life itself is an illusion
is the ultimate philosophy


But death is beyond. . . .
Coz it’s real
let’s be ready to face it


Let’s be ready to take the death of loved ones
let’s be ready to face the death
let’s be ready


Let’s learn to live to the fullest
when we are, we are.
When we aren’t, we aren’t.


When death arrives,
let us welcome it. . .
. . . Without any fear


Let’s die contented.

- Krish Joshi
 ಭ್ರಮಾದೀನ...

ಭ್ರಮೆಯಲೆಮ್ಮ ಬದುಕೆ...
...ಎನಿತು ದಿನ ಹೀಗೆ?

ಜೀವನವದು ನಿಜ ಭ್ರಮೆಯೇ
ಅದಕಿಂತ ತತ್ವಪದವಿಲ್ಲ

ಅದರದು ಸಾವೇ ಎಲ್ಲೆಯು...
ಅದುವೇ ಸಾಕ್ಷಾತ್ಕಾರ
ಸಿದ್ಧಗೊಳ್ಳುವ ಸಾವಿಗೆ

ನಲ್ಮೆ ಜೀವಗಳ ಮರಣಕು ಸಿದ್ಧ
ನಮ್ಮ ಸಾವಿಗು ಸಿದ್ಧವೇ
ಎದೆಗಟ್ಟಿ ಮಾಡಿಯೇ ...

ಸವಿಯಬೇಕು ತುಂಬು ಜೀವನ
ಹೇಗಿರುವೆವೋ ಅಂತೆಯೇ
ಕಳೆದೆದ್ದು ಕಂತೆಯೇ

ಜವರಾಯ ಬಂದಾಗ
ನಕ್ಕು ಬರಮಾಡಿ
ಭಯವಿರದೆ ದಾಟಿಕೊಂಡು

ಸಂತೃಪ್ತ ಅಂತ್ಯ ಕಾಣೋಣ

-  ಬದರಿನಾಥ ಪಲವಳ್ಳಿ
Krish Joshi

Writer and Filmmaker.
He is a Writer and Director. Has worked in the Advertising Industry for almost 15 years in different capacities such as Copywriter, Creative Director, Brand Consultant, Content Provider and Ad Filmmaker. 
 He has been directing Documentary Films and have directed one much acclaimed Movie 
“GANDHI SMILES”. 
The movie was awarded as the “BEST FILM” in the recently held 
BANGALORE INTERNATIONAL FILM FESTIVAL.

Kindly visit his blog:

9 comments:

 1. THNQ VERY MUCH SIRRRR.....CNT THANK ENOUGH.......GRTFUL...

  ReplyDelete
 2. ಕವಿತೆಯ ಭಾವ ಚೆನ್ನಾಗಿದೆ. ನಿಮ್ಮ ಭಾವಾನುವಾದ ಕೂಡ!

  ReplyDelete
 3. ಕನ್ನಡ ಕವನದ ಸೊಗಡೇ ಬೇರೆ ಸರ್... ಅದಕ್ಕೆ ಸಮನಾದ ಭಾಷೆ ಇಲ್ಲ.... ಆಂಗ್ಲದ ಪದಗಳಲ್ಲಿ ಭಾವ ಇರಲ್ಲ... ನಮ್ಮ ಭಾಷೆಗೆ ಎಲ್ಲಾ ಇದೆ..

  ನಿಮ್ಮ ಕವನಕ್ಕೂ ಇದೇ ಅನಿಸಿಕೆ ನನ್ನದು.... ಖುಶಿಯಾಯಿತು...

  ReplyDelete
 4. Optimism is life; Pessimism is death itself. ಆಶಾವಾದವೇ ಜೀವನ; ನಿರಾಶಾವಾದವೇ ಸಾವು. ಬದುಕೋಣ, ಸಾಯದಿರೋಣ. ಸಾವು ಬಂದಾಗ ಸಂತೋಷದಿಂದ ಸ್ವಾಗತಿಸೋಣ.
  ಬದರೀನಾಥರೇ, ಧನ್ಯವಾದಗಳು.

  ReplyDelete
 5. ಬದರಿನಾಥರೆ,
  ಕ್ರಿಷ್ ಜೋಶಿಯವರ ಮೂಲ ಆಂಗ್ಲ ಕವನಕ್ಕಿಂತ ನಿಮ್ಮ ಕನ್ನಡ ಅನುವಾದವೇ ಚೆನ್ನಾಗಿದೆ. ಹೀಗೆ ಹೇಳುವಾಗ ನನಗೆ ಸಂಕೋಚವಾಗುತ್ತದೆ. ಜೋಶಿಯವರ ಕ್ಷಮೆಯನ್ನು ಕೋರುವೆ. ಆದರೆ ಸತ್ಯವನ್ನು ಹೇಳಲೇ ಬೇಕು.

  ReplyDelete
 6. ಬದರೀ ಸಾರ್..

  ತುಂಬಾ ವಿಶಾಲಾರ್ಥ ನೀಡುವ ಕವನ..

  ಜೀವನವಿದು ನಿಜ ಭ್ರಮೆಯೇ ಅದಕಿಂತ ದೊಡ್ಡ ತತ್ವಪದವಿಲ್ಲ... :) :)

  ನಮ್ಮ ಸಾವಿಗೆ ಬೇಕಿದ್ರೆ ಗಟ್ಟಿ ಎದೆ ಮಾಡ್ಕೊಳ್ಳೋಣ ಹೇಳಿ.. ಆದ್ರೆ ನೆಚ್ಚಿನವರದ್ದು ಅಂದ್ರೆ ಎದೆ ಅದುರುತ್ತೆ.. ತುಂಬಾನೆ ಕಷ್ಟ..

  ನಾವ್ ಸಾಯೋ ತನಕ ಅವರಿಗೇನು ಆಗಬಾರದು ಅನ್ನೋದೇ ಸದಾಶಯ..

  ಯಾಕಂದ್ರೆ ಸಂತೃಪ್ತ ಅಂತ್ಯ ಅನ್ನೋದು ನಮ್ಮ ಸಂತೋಷದಲ್ಲಿರತ್ತೆ.. ನಮ್ಮ ಸಂತೋಷ ನಮ್ಮ ನೆಚ್ಚಿನವರ ಸಂತೋಷದಲ್ಲಿರತ್ತೆ..

  ತುಂಬಾನೇ ಇಷ್ಟ ಆಯಿತು ಸಾರ್..

  ಜೋಷಿ ಸಾರ್ ರವರ ಇಂಗ್ಲಿಷ್ ಕವನ ಕೂಡ..

  ಆದ್ರೆ ಕನ್ನಡದ ಕಸ್ತೂರಿಯೇ ಬೇರೆ.. ಅದರ ಗಂಧವೇ ಬೇರೆ..

  ಇಂಗ್ಲಿಷ್ ಕವನಗಳಲ್ಲಿ ಜೀವ ಇರತ್ತೆ ನಿಜ.. ಆದ್ರೆ ದಕ್ಕ ಬೇಕಾದ ಭಾವ.. ಅದೆಷ್ಟೋ ಸಾರಿ ದಕ್ಕೋದೆ ಇಲ್ಲ..

  ಹಾಗಾಗಿ ಇಂಗ್ಲಿಶ್ ಕವನಗಳನ್ನ ಓದಿ ಅರ್ಥ ಮಾಡ್ಕೊಂಡು ಉಘೆ ಅನ್ನಬಹುದೇ ವಿನಃ..

  ನಮ್ಮ ಕನ್ನಡ ಕವನಗಳ ಹಾಗೆ ಅಸ್ವಾಧಿಸಿ ಆಹಾ ಅನ್ನೋಕ್ಕಾಗಲ್ಲ..

  ನಿಮ್ ಕವನಗಳಿಗೆ ನೀವೇ ಸಾಟಿ.. ಅದಕ್ಕೆ ಮತ್ತೊಂದು ಸಾಕ್ಷಿ.. ಭ್ರಮಾದೀನ.. :) :)

  ReplyDelete
 7. ನಾಣ್ಯದ ಒಂದು ಮುಖವನ್ನ ನೋಡಿ ಇನ್ನೊಂದು ಮುಖ ನೋಡದೆ ಹೋದರೆ ಅಪೂರ್ಣವಾಗುತ್ತದೆ..ಹಾಗೆಯೇ ಹುಟ್ಟಿದ್ದ ಮೇಲೆ ಸಾವು ಇರಲೇಬೇಕು...
  ಅಂಗ್ಲ ಭಾಷೆಯಲ್ಲಿನ ಮೇಲ್ಮಟ್ಟದ ಪದಗಳಿಗೆ..ಕನ್ನಡದ್ದೇ ಆದ ಆಪ್ತ ಪದಗಳನ್ನ ಸಮೀಕರಿಸಿ ಹೃದಯದಾಳದಲ್ಲಿ ಕೂರುವಂತೆ ಮಾಡುವ ನಿಮ್ಮ ಪದಗಳ ಚಾತುರ್ಯ ಮನಸ್ಸಿಗೆ ಮುದ ನೀಡುತ್ತೆ..ಅಮ್ಮ ಹೆತ್ತ ಮಕ್ಕಳಲ್ಲಿ ಮೊದಲನೆಯದು ಸರಿಯೇ..ಎರಡನೆಯದು ಸರಿಯೇ ಎನ್ನುವುದು ತಪ್ಪು..ಎಲ್ಲವು ಅವಳ ಬಳ್ಳಿಯ ಹೂಗಳೇ..ಹಾಗೆಯೇ ಕವಿ ಹೃದಯದ ಭಾವಗಳು ಎಲ್ಲವು ಒಂದೇ ಭಾಷೆ ಯಾವುದಾದರೇನು...ಜೋಷಿ ಸರ್ ಅವರ ಕವಿತೆ..ಚಂದ್ರನಾದರೆ..ನಿಮ್ಮ ಅನುವಾದ ಬೆಳದಿಂಗಳು...ಇಬ್ಬರಿಗೂ ಅಭಿನಂದನೆಗಳು...

  ReplyDelete
 8. ಬದ್ರಿ ಭಾಯ್ ಒಂದು ಒಳ್ಳೆಕೆಲ್ಸ ನಿಮ್ಮಿಂದ ನಡೆಯುತ್ತಿದೆ
  ಅಭಿನಂದನೆಗಳು..

  ReplyDelete
 9. Excellent sir.... Good job..nimma kavana kooda sakath agide..

  ReplyDelete