ತೋಟಗಳೊಡಲಲಿ ಅರಳು
ಸುಮಗಳ ಕೀಳು ಮುತವರ್ಜಿ
ಹಸಿ ದಾರದಿ ಹೊಸೆವ ಕೈಗಳದೂ,
ಬುಟ್ಟಿ ಹೊತ್ತವರದದೇ ಹಸಿವು
ಸುಮಗಳ ಕೀಳು ಮುತವರ್ಜಿ
ಹಸಿ ದಾರದಿ ಹೊಸೆವ ಕೈಗಳದೂ,
ಬುಟ್ಟಿ ಹೊತ್ತವರದದೇ ಹಸಿವು
ದಾಸವಾಳಕೆ ತಾಯಿ ಹೃದಯ
ಸಂಪಿಗೆಯು ನಲ್ಲೆ ಎಟುಕದೆತ್ತರ,
ವಚನಕದೇ ರೋಜಾ ಪಚನಕೂ
ಸೂತಕಕದು ಕಡುಗಪ್ಪು ಸೂಚಕ
ಸಂಪಿಗೆಯು ನಲ್ಲೆ ಎಟುಕದೆತ್ತರ,
ವಚನಕದೇ ರೋಜಾ ಪಚನಕೂ
ಸೂತಕಕದು ಕಡುಗಪ್ಪು ಸೂಚಕ
ವರಕೊದಗು ಕಳೇವರಕೆ ಕೌದಿ
ಅಪಾತ್ರನ ಕೊಬ್ಬಿದ ಕೊರಳಿಗೆ
ಮೊಳಕಾಲೂರಿದ ಬಿನ್ನಹಕೆ ಗುಚ್ಛ
ಸಲ್ಲು ವಿಳಾಸವೇ ಹಣೆಯ ಬರಹ!
ಅಪಾತ್ರನ ಕೊಬ್ಬಿದ ಕೊರಳಿಗೆ
ಮೊಳಕಾಲೂರಿದ ಬಿನ್ನಹಕೆ ಗುಚ್ಛ
ಸಲ್ಲು ವಿಳಾಸವೇ ಹಣೆಯ ಬರಹ!
ಕೊಂಡು ಸುರಿಸಿಕೊಂಡ ವೃಷ್ಟಿ
ಪೃಷ್ಠ ಬುಡಕವೇ ಮೆತ್ತೆ ಮೆತ್ತೆ
ನಲುಗು ಪಕಳೆಗಳು ಪಾದದಡಿ
ಪಲ್ಲಕಿ ಸೇವೆಗದು ಪಲ್ಲಂಗಕೂ
ಪೃಷ್ಠ ಬುಡಕವೇ ಮೆತ್ತೆ ಮೆತ್ತೆ
ನಲುಗು ಪಕಳೆಗಳು ಪಾದದಡಿ
ಪಲ್ಲಕಿ ಸೇವೆಗದು ಪಲ್ಲಂಗಕೂ
ಮಲ್ಲಿಗೆಯು ಚಂಡು ಸೇವಂತಿಗೆ
ಸುಗಂಧರಾಜ ಕನಕಾಂಬರಿ ಇತರೇ
ವಿಗ್ರಹದ ಮುಡಿಗೇರಿ ಮರುದಿನಕೆ
ನಿರ್ಮಾಲ್ಯವದೂ ನಮ್ಮ ನಿಮ್ಮಂತೆ
ಸುಗಂಧರಾಜ ಕನಕಾಂಬರಿ ಇತರೇ
ವಿಗ್ರಹದ ಮುಡಿಗೇರಿ ಮರುದಿನಕೆ
ನಿರ್ಮಾಲ್ಯವದೂ ನಮ್ಮ ನಿಮ್ಮಂತೆ
(ಚಿತ್ರ ಕೃಪೆ: ಅಂತರ್ಜಾಲ)
Super badarisir. Last line is excellent
ಪ್ರತ್ಯುತ್ತರಅಳಿಸಿಪುಷ್ಪದ ಜನ್ಮ ಸಾರ್ಥಕವೋ? ನಿಸ್ವಾರ್ಥವೋ? ಎಂಬ ಜಿಜ್ಞಾಸೆ ಮೂಡುವಂತಾಗಿದೆ. ಚಂದವಾದ ವರ್ಣನೆ ಮನ ತಲುಪಿತು.
ಪ್ರತ್ಯುತ್ತರಅಳಿಸಿSuperb badari 👌👌
ಪ್ರತ್ಯುತ್ತರಅಳಿಸಿಎಲ್ಲೆಲ್ಲೂ ಹೂಗಳದೇ ಬಳಕೆ, ಎಲ್ಲ ಸೃಷ್ಟಿಯೂ ತನಗಾಗೇ ಎಂದು ತಿಳಿದ ಮಾನವನ ಅಹಮಿಕೆ ☺👍
ಪ್ರತ್ಯುತ್ತರಅಳಿಸಿಕೊಂಡು ಸುರಿಸಿಕೊಂಡ ವೃಷ್ಟಿ
ಪ್ರತ್ಯುತ್ತರಅಳಿಸಿಪೃಷ್ಠ ಬುಡಕವೇ ಮೆತ್ತೆ ಮೆತ್ತೆ
ನಲುಗು ಪಕಳೆಗಳು ಪಾದದಡಿ
ಪಲ್ಲಕಿ ಸೇವೆಗದು ಪಲ್ಲಂಗಕೂ... ಈ ಸಾಲುಗಳು ಸೂಪರ್ ಬದ್ರಿ ಸರ್
ಹೂವುಗಳನ್ನು ಎದೆಗೊತ್ತಿಕೊಂಡು ಕವನಗಳನ್ನು ಬರೆದ ಪುಷ್ಪಕವಿಗಳು ಅನೇಕರಿದ್ದಾರೆ. ಈ ಕವನವು ನಿಮ್ಮ ವಿಭಿನ್ನ ವಿಚಾರವನ್ನು ನಿಮ್ಮ ವಿಭಿನ್ನ ಶೈಲಿಯಲ್ಲಿ ಸುಂದರವಾಗಿ ತಿಳಿಸಿದೆ. ಇಂತಹ ಕವನಗಳಿಂದಲೇ ನೀವು ಅನೇಕ ಓದುಗರಿಗೆ ಹತ್ತಿರವಾಗಿದ್ದೀರಿ.
ಪ್ರತ್ಯುತ್ತರಅಳಿಸಿಹೂವಿನ ಸಾರ್ಥಕದ ಜೀವನ, ವರ್ಣನೆ ತುಂಬಾ ಚೆನ್ನಾಗಿ ಬಣ್ಣಿಸಿದಗದ್ದೀರಿ ಸರ್. ಚಂದನೆಯ ಕವನ.
ಪ್ರತ್ಯುತ್ತರಅಳಿಸಿಹೂವಿನ ಬದುಕಿನ ಬವಣೆಯ ಜೊತೆಜೊತೆಗೇ ಮಾನವನ ಅಹಮ್ಮಿಕೆಯ ಬಗ್ಗೆ ಹದವಾಗಿ ಪದಪುಂಜವನ್ನು ಪೋಣಿಸಿದ್ದೀರಿ 👍🏻👌🏻
ಪ್ರತ್ಯುತ್ತರಅಳಿಸಿToo gud bp Ji. Koneya saalugalanthu baalinedege vaastavada drushtikonave needuttade.
ಪ್ರತ್ಯುತ್ತರಅಳಿಸಿ