ಸೋಮವಾರ, ಡಿಸೆಂಬರ್ 23, 2024

ಬೊಗಸೆ....

 


ಅವರವರ ಎತ್ತರಕ್ಕೆ 

ಅವರವರ ಮೇವು

ಒಡ್ಡಿದ ಬೊಗಸೆ ಅಳತೆಗೆ

ಭಗವಂತನೀವ ಭಿಕ್ಕೆ


ಛಾವಣಿಗೆ ಆಗಸದ ಚಿತ್ತಾರ

ಆಳಬಲ್ಲ ಸುವಿಸ್ತಾರ ಅವನಿ

ಒಗ್ಗಿಸಲು ಕಾದ ಕಿರಾತಕ ಪಡೆ

ಮೆದುಳಿಗೂ ಮಿಗಿಲೇ ತುಪಾಕಿ


ಅದೇ ಸಪ್ತ ಸ್ವರ ಲೋಕ ಸಂಗೀತ

ನವಗ್ರಹಗಳು ಮುಂದಿನ ನಿಲ್ದಾಣ

ಒಲಿಯದೇ ಹುಮ್ಮಸ್ಸಿಗ ಅಪ್ಪುಗೆ 

ಮೂರು ಬಣ್ಣಗಳೇ ಕಾಮನಬಿಲ್ಲು


ಅವರವರ ತಲುಪಿಗೆ ಪದಕ

ಕೊಡವಿಕೊಳ್ಳಲು ಅಪಾತ್ರ ದಾನಿ

ಬೆಳಲು ಕಣ್ಣೆವೆ ಮಾತ್ರ ಭಿನ್ನ

ಅವರವರ ಮೇವಿನ ಹುಡುಕಾಟ!


ಅಬೋದ ನಗುವಿನಲೇ ಸೆಳೆತ

ಸ್ನಿಗ್ದ ಸೌಂದರ್ಯ ಅವರವರ ನೋಟ

ಮೈಮಾಟ ತಂತುಗಳ ಕೃಪಾಲಂಕಾರ

ಉಳಿವ ದಿನಗಳೆಮ್ಮ ರಾಜ್ಯಭಾರ


ಇದ್ದಾಗಲೇ ಪಂಚೇಂದ್ರಿಯ ಗಟ್ಟಿ

ಗೆದ್ದು ಬೀಗ ಬೇಕು ಬಾಳ್ಮೆ ಪಗಡೆ...


(ಮುಖಪುಟದಲ್ಲಿ ತಿರು ಶ್ರೀಧರ ಸಾರ್ ಅವರು ಹಂಚಿಕೊಂಡ ಸಾಲುಗಳು ಮತ್ತು ಚಿತ್ರ ನೋಡಿ ಬರೆದದ್ದು)

(ಚಿತ್ರ ಕೃಪೆ: ಅಂತರ್ಜಾಲ)

1 ಕಾಮೆಂಟ್‌: