ಶುಕ್ರವಾರ, ಡಿಸೆಂಬರ್ 8, 2023

ಪರದೆ ಕರೆ...

 


ಕಾದದ್ದೇ ಬಂತು ಹೆಂಚಿಗೆ

ಹುಯ್ಯುವ ಆಸಾಮಿ ಇಲ್ಲ!

ಹಿಟ್ಟು ಉಕ್ಕಿದೆ ಉಕ್ಕುತ್ತಲೇ ಇದೆ

ಹಿಡಿದಿಟ್ಟ ಪಾತ್ರಕ್ಕೂ ಮೀರಿ


ಎವೆ ಮುಚ್ಚಿ ತೆರೆಯುವುದರ

ಒಳಗೊಂದು ಬೇಯದ ಕನಸು,

ಕಟ್ಟಲೂ ಬಹುದು ಕೆಡವಲದು

ನನಸ ನೇವರಿಕೆಯಲೇ ಚಿತ್ತ


ಉರವಲು ನಿಗಿ ನಿಗಿ ಕೆಂಡ 

ಅಂಡ ಕೆಳಗೆ, ಹೆಂಚು ನಿರ್ಲಿಪ್ತ

ಪ್ರಾಪ್ತ ಘ್ರಾಣಕ್ಕೆ ಸುಟ್ಟ ನಾತ!

ದಿಕ್ಕೆಟ್ಟ ಬದುಕು ಆವರ್ತ...


ಅವಧಿಯಲ್ಲಿ ಪ್ರಕಟಿತ 

08/12/2023


(ಚಿತ್ರ ಕೃಪೆ: ಅಂತರ್ಜಾಲ)