ತುಂಟ ಕವಿಗೀಗ ಎಪ್ಪತ್ತು
ಮನಸು ಮೈನಸ್ಸು ಇಪ್ಪತ್ತು
ಮನಸು ಮೈನಸ್ಸು ಇಪ್ಪತ್ತು
ತಟ್ಟನೆ ಕೇಳಿದೆ
ಗಾಂಡಲಿನಳ ವಯಸ್ಸು?
ಗೋಪಿಗೇ ಮುಜುಗರ
ನಿಮ್ಮದೆಂತದು ಪಾಪಿ
ಅಸಂವಿಧಾನಿಕ ಪ್ರಶ್ನೆ!
ಗಾಂಡಲಿನಳ ವಯಸ್ಸು?
ಗೋಪಿಗೇ ಮುಜುಗರ
ನಿಮ್ಮದೆಂತದು ಪಾಪಿ
ಅಸಂವಿಧಾನಿಕ ಪ್ರಶ್ನೆ!
ಪುಣ್ಯವಂತನ ಕೊಬ್ಬಿಗೆ
ಕಾವಾದವಳ ನೆನೆನೆನೆದು
ಎಣಿಸುತ್ತ ಗಿಡದ ಮುಳ್ಳ
ಕಳೆಯಿತಲ್ಲ ಹಲಾ ಹರೆಯ
ನಿಂಬೆಯದ್ದದೇ ಹುಳಿ ಕಹಿ!
ಕಾವಾದವಳ ನೆನೆನೆನೆದು
ಎಣಿಸುತ್ತ ಗಿಡದ ಮುಳ್ಳ
ಕಳೆಯಿತಲ್ಲ ಹಲಾ ಹರೆಯ
ನಿಂಬೆಯದ್ದದೇ ಹುಳಿ ಕಹಿ!
ಅಡಿಗರಿಗೆ ಆವತ್ತು
ಚಿಂತಾಮಣಿಯಲಿ ಕಂಡ ಮುಖ,
ಅಂತ ದರುಶನದಲೂ
ಪಾಲಿದ್ದೀತು ರಾಯರದ್ದೂ
ಕಮ್ಮಿ ಏನಿಲ್ಲ ಇವರೂ!
ಚಿಂತಾಮಣಿಯಲಿ ಕಂಡ ಮುಖ,
ಅಂತ ದರುಶನದಲೂ
ಪಾಲಿದ್ದೀತು ರಾಯರದ್ದೂ
ಕಮ್ಮಿ ಏನಿಲ್ಲ ಇವರೂ!
ಅಂತೆಯೇ ನಮ್ಮ ಬಿ ಆರ್ ಎಲ್,
ಎಪ್ಪತ್ತರ ಕವಿಗೀಗ
ಮನಸ್ಸು ಮೈನಸ್ಸು ಇಪ್ಪತ್ತು
ತುಂಬಾ ಚೆನ್ನಾಗಿದೆ ಬದರಿ ಸರ್
ಪ್ರತ್ಯುತ್ತರಅಳಿಸಿದೇಹಕ್ಕಷ್ಟೇ ಮುಪ್ಪು ಮನಸ್ಸಿಗಲ್ಲ
ವಯಸ್ಸಿನರಿವಿಲ್ಲದ ಸದಾ ಯೌವನದ ಕವಿ ರಾಯರಿಗೆ ಇನ್ನೊಬ್ಬ ಸಹೃದಯ ಕವಿಯಿಂದ ಅಕ್ಕರೆಯ ಅಕ್ಷರಗಳ ಸಮರ್ಪಣೆ
ಪ್ರತ್ಯುತ್ತರಅಳಿಸಿಸುಂದರ ಬದರಿ ಸರ್.. ಬಹಳದಿನಗಳ ನಂತರ ಮತ್ತೆ ಕವಿತಾ ಲೋಕಕ್ಕೆ ಧುಮುಕಿದ್ದೀರಾ ಬಿಡಬೇಡಿ ಪಯಣ ಮುಂದುವರೆಸಿ
ಕವನವೇ ಅಭಿನಂದನೆ! ಬದರಿಯವರೆ, ನಿಮಗೂ ಸಹ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿ:)
ಪ್ರತ್ಯುತ್ತರಅಳಿಸಿಕವಿಗೆ ಕವಿಯ ನಮನ! ) ಓದಿ ಸ೦ತಸವಾಯಿತು ಬದರಿಯವರೇ :)
ಪ್ರತ್ಯುತ್ತರಅಳಿಸಿ