ಸೋಮವಾರ, ಜನವರಿ 4, 2016

ನೀ.. ಹಕ್ಕಿ!










ಉಳಿಸಿ ಹೋದ ಗೂಡುಗಳೊಳು
ಮರಳಿ ಮರಳಿ ತಡಕುತಿರುವೆ
ಪಳಯುಳಿಕೆ ತಾಕಿತಷ್ಟೇ ಎನಗೆ,
ಹಾರಿ ಹೋದೆಯಲ್ಲಾ ನೀ.. ಹಕ್ಕಿ!

ಇಹದ ನಂಟು ಸಾಕೆನಿಸಿತೇ
ಪರದ ಕರೆಯೇ ಹಿರಿದಾಯಿತೇ
ಇನಿತು ಜರೂರು ಯಾನವೇತಕೆ?
ಸಾಧನೆಯೋ ವಜನಾದ ಗಂಟು
ಕೆಡವಿ ಹೊರಟೆ ನಿನ್ನ ಹೊರೆ
ಹರವಿ ಹೆಕ್ಕಲೆನಿತೆನ್ನ ಪಾಲು

ದಿಶೆ ತೋರು ನೀನೇ ದೀವಟಿಗೆ
ಬೆಳಕು ಆರಿಹೋಯಿತೀ ಗಳಿಗೆ,
ತಪ್ತ ಮನ ತಪಿಸಿ ಹೋಯಿತದೂ
ಗಳಿಗೆಗೊಂದಾವರ್ತೀ ದಿಕ್ಕು ತಪ್ಪಿ,
ಮತಿಗೇಡಿಗಳಿಗೆ ಯಾರು ತಿದ್ದು
ಮರಳಿ ಕುರುಡೇ ಒಳಗಣ್ಣಿಗೆ?

ಮರೆಯಬಲ್ಲೆನೇನು ಕುಳಿತೆಲ್ಲೋ
ಮೆಲ್ಲನೆ ಅಗೋಚರ ಆ ಕಿವಿ ಹಿಂಡು!
ಹಾರಿ ಹೋದೆಯಲ್ಲಾ ನೀ... ಹಕ್ಕಿ

7 ಕಾಮೆಂಟ್‌ಗಳು:

  1. ಎಲ್ಲರ ಮನಸು ಅಸ್ತವ್ಯಸ್ತಗೊಂಡಿದೆ,
    ಆದರೆ ಅಂತಹ ಮನಸುಗಳಿಗೆ ಸಾಂತ್ವಾನ
    ತಮಗೆ ತಾವೆ ಪಡೆಯಬೇಕಾಗಿದೆ.

    ಪ್ರತ್ಯುತ್ತರಅಳಿಸಿ
  2. ಅತಿ ಮನ ಕಲಕುವ ಭಾವನಾತ್ಮಕ ನುಡಿ ನಮನ.. ಅಕ್ಕಾ...ಕೇಳಿ..ಅಲ್ಲಿಂದಲೇ... ಒಮ್ಮೆ ಆ ನಿಮ್ಮ ಮುಗ್ಧ ನಗು ನಕ್ಕು ಹರಸಿಬಿಡಿ,,,, :(

    ಪ್ರತ್ಯುತ್ತರಅಳಿಸಿ
  3. ಹರಿಣಿ ಅಮ್ಮನ ಬಗೆಗಿನ ಗೌರವ ಪ್ರೀತಿಯನ್ನು ನಿಮ್ಮ ಸಾಲುಗಳು ಕಟ್ಟಿಟ್ಟಿವೆ ಸರ್.

    ಪ್ರತ್ಯುತ್ತರಅಳಿಸಿ
  4. ಭಾವಪೂರ್ಣ ಸಾಲುಗಳು ತುಂಬಾ ಕಾಡುತ್ತದೆ...

    ಪ್ರತ್ಯುತ್ತರಅಳಿಸಿ
  5. ಶರಣರ ಜೀವನ ಮರಣದಲ್ಲಿ ನೋಡು ಎನ್ನುತ್ತದೆ ಮಾತು
    ಆ ಐದು ನಿಮಿಷ ಪಟ್ಟ ಯಾತನೆ ಯಾವ ಮಟ್ಟದಿರಬಹುದು ಅಥವಾ ಕುಟುಂಬದ ಯಾತನೆಗೆ ಎಲ್ಲಿದೆ ಸಮಾಧಾನ

    ಹರಿಣಿ ಅಮ್ಮನವರ ಚಟುವಟಿಕೆ, ಉತ್ಸಾಹ, ಸ್ಫೂರ್ತಿ ತುಂಬುವ ಜೀವನಗಾಥೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟ ಪರಿ ಅದ್ಭುತ,

    ಹರಿಣಿ ಅಮ್ಮ ಎಂಬ ಅದ್ಭುತ ಸೃಷ್ಟಿಗೆ ಅಕ್ಷರಗಳ ನಮನಗಳು

    ಪ್ರತ್ಯುತ್ತರಅಳಿಸಿ