ಶನಿವಾರ, ಮೇ 2, 2015

ನಿಲುವುಗನ್ನಡಿ ನಿಲುವು...

ಇದ್ದದ್ದನ್ನ ಇದ್ದಂತೆಯೇ
ನುಡಿಯುತ್ತೆ ಸಾಕ್ಷಿಯದು

ಮುಂಗುರುಳ ತಿದ್ದು ತರಳೆ
ಸ್ವಮೋಹನ ಗುಂಗಲವಳೇ
ಮುಗುಳ್ನಗುವಳು ತನ್ನೊಳೇ

ಅಕಾಲಕೆ ಕ್ರಾಪಲಿ ಬೆಳ್ಳಗೆ 
ಕೊರಗು ಮಧ್ಯಸ್ಥ ಮುಳ್ಳಗೆ
ಹಂಗಿಸುತ್ತೆ ಗತ ತರುಣಗೆ

ಸವಿದದ್ದು ಸವೆದದ್ದು ರುಚಿಗೆ
ಕಡೆ ಪಾದವು ಆಶ್ರಮಾವಸ್ಥೆ
ಸುಕ್ಕು ಮುಖವದರ ಉಳಿಕೆ

ಅಚ್ಚುಳಿಸದೆ ಸೆಲ್ಫಿ ತೋರುವ
ನಿಲುವುಗನ್ನಡಿಗಿಲ್ಲ ನಿಲುವು!

9 ಕಾಮೆಂಟ್‌ಗಳು:

  1. ನಿಲುವು ಇದೆಯೋ ಇಲ್ಲವೋ..ಎದುರು ಬ೦ದವರು ಒಮ್ಮೆ ತನ್ನತ್ತ ಸೆಳೆವ ಗೆಲುವ೦ತೂ ಕನ್ನಡಿಯದ್ದು!

    ಪ್ರತ್ಯುತ್ತರಅಳಿಸಿ
  2. ಇರುವುದರದರಹಾಗೆ ತೋರುವ ಸಾಕ್ಷಿಯೇ ಅದು ಬಿಡಿ. ಕಾಲಗತಿಯ ಬದಲಾವಣೆ ಅರಿವಾಗಬೇಕಿದೆ ನಮಗೆ ಅದ ಕಾಣುತ್ತ.

    ಪ್ರತ್ಯುತ್ತರಅಳಿಸಿ
  3. ಮಮನಸ್ಸಾಕ್ಷಿಗಿಂತಲೂ ಅಧಿಕ ನಿಖರ ಹಾಗೂ ಕರಾರುವಾಕ್ಕು
    ನೋಡಬಯಸಿದರೆ ಮಾತ್ರ

    ಚೆನ್ನು

    ಪ್ರತ್ಯುತ್ತರಅಳಿಸಿ
  4. ಮಮನಸ್ಸಾಕ್ಷಿಗಿಂತಲೂ ಅಧಿಕ ನಿಖರ ಹಾಗೂ ಕರಾರುವಾಕ್ಕು
    ನೋಡಬಯಸಿದರೆ ಮಾತ್ರ

    ಚೆನ್ನು

    ಪ್ರತ್ಯುತ್ತರಅಳಿಸಿ
  5. ನಿಮ್ಮ ಕವನವೇ ನಮ್ಮ ಬಯಕೆಗಳಿಗೆ ನಿಲವುಗನ್ನಡಿಯಾಗಿದೆ!

    ಪ್ರತ್ಯುತ್ತರಅಳಿಸಿ
  6. ಇದ್ದದ್ದನ್ನ ಇದ್ದಂಗೆ ಹೇಳುತ್ತಲೇ ಇರುತ್ತದೆ ಈ ಕನ್ನಡಿ... ಚೆನ್ನಾಗಿದೆ ಸರ್ ಕವನ

    ಪ್ರತ್ಯುತ್ತರಅಳಿಸಿ
  7. ಚೆನ್ನಾಗಿದೆ ಬದ್ರಿ ಭಾಯ್.. ನಿಲುವುಗನ್ನಡಿಯೆಂಬುದು ನಮ್ಮ ಪ್ರತಿರೂಪ ತೋರೋದಕ್ಕಿಂತಲೂ ಹೆಚ್ಚಾಗಿ ಕಲ್ಪನೆ, ವಾಸ್ತವತೆಗಳ ತೆರೆದಿಡೋ ದೀವಿಗೆಯಾಗಿ ಕಾಣುತ್ತದೆ. ವಯಸ್ಸಾದರೂ ತಾನಿನ್ನೂ ತರುಣನೆಂದುಕೊಳ್ಳುವವನ ಎಚ್ಚರಿಸೋ ಬಿಳಿಕ್ರಾಪು, ಸುಕ್ಕಾದ ಚರ್ಮ ವಾಸ್ತವತೆಯನ್ನು ಬಿಂಬಿಸೋ ಪರಿ ಅನನ್ಯ.. ಚೆಂದದ ಕವನ..

    ಪ್ರತ್ಯುತ್ತರಅಳಿಸಿ