ಶುಕ್ರವಾರ, ಆಗಸ್ಟ್ 2, 2013

ಅಂತಃಪುರ ಗೀತೆ...


ಅರಮನೆ ತುಂಬ 
ಪರಿಚಾರಕರು, ಸಖಿಯರು
ಕಾವಲಿಗೆ ಬಿಚ್ಚುಗತ್ತಿ 
ಸಿಪಾಯಿಗಳ ಪಡೆ

ಬೇಕಾದ್ದು ಬೇಡದ್ದು 
ಎಡತಾಕುವವು ಕೈಗೆ
ಆದರೂ ಬರಿ ಕೈಯೇ
ಧನಿಕ ದರಿದ್ರತೆ ಇಲ್ಲಿ

ಇಲ್ಲವಲ್ಲೇ ಎನ್ನರಸ 
ರಾಜಧಾನಿಯಲ್ಲಿ!

(ಚಿತ್ರ ಕೃಪೆ: ಅಂತರ್ಜಾಲ) 

30 ಕಾಮೆಂಟ್‌ಗಳು:

  1. ಹಾಯ್ ಹಾಯ್...
    ಬೇಕಾದ್ದು ಬೇಡದ್ದು ತೊಡರಿಕೊಳ್ಳುವಂತೆ ಬಿದ್ದಿವೆ
    ಧನಿಕ ದರಿದ್ರತೆ,,,ಇದೂ ಒಂಥರಾ ಆರ್ದ್ರತೆ...ವಿರಳವಾದ ಸಾಂದ್ರತೆ.. ಶ್ರೀಮಂತ ಬಡತನ...ಸುಂದರ ಬದರಿ ಕಲ್ಪನೆ.

    ಪ್ರತ್ಯುತ್ತರಅಳಿಸಿ
  2. ಹೃದಯಕ್ಕೆ ಬೇಕಾದದ್ದೇ ಇಲ್ಲವಲ್ಲ! ಇದೇ ನೈಜ ದರಿದ್ರತೆ!

    ಪ್ರತ್ಯುತ್ತರಅಳಿಸಿ
  3. ರಾಣಿಗೆ ಏನಿದ್ದರೇನು ತನ್ನ ಅರಸನಿಲ್ಲದ ಮೇಲೆ .... ಚೆನ್ನಾಗಿದೆ ಬದರೇಜಿ.

    ಪ್ರತ್ಯುತ್ತರಅಳಿಸಿ
  4. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ವಿರಹಿಯ ತುಮುಲ ತಲ್ಲಣಕಗಳ ನೇರ ಅನಾವರಣ!!! ಚೆನ್ನಿದೆ :)

    ಪ್ರತ್ಯುತ್ತರಅಳಿಸಿ
  6. ಎಲ್ಲೂ ಇದ್ದು, ಮನದ ಇಂಗಿತವ ಬಲ್ಲ ನಲ್ಲನಿಲ್ಲದಿರೆ; ಈ ಸುಖದ ಸಂಪತ್ತಿಗೆ ಕಿಚ್ಚು ಬಿದ್ದರೂ ಸರಿಯೆ ನನ್ನಿಚ್ಚೆ ತಣಿಪುದೆ. ಮತ್ತಷ್ಟು ವಿಸ್ತರಿಸಿ ಬರೆದಿದ್ದೆ ಚೆನ್ನಿತ್ತು.

    ಪ್ರತ್ಯುತ್ತರಅಳಿಸಿ
  7. ಕೆಲವೊಮ್ಮೆ ಎಲ್ಲಾವೂ ಇದ್ದರೂ ಏನೂ ಇಲ್ಲದಂತೆ ಭಾಸವಾಗುತ್ತದೆ... ಚೆನ್ನಾಗಿದೆ ಸರ್ ಸಾಲುಗಳು

    ಪ್ರತ್ಯುತ್ತರಅಳಿಸಿ
  8. ಅರಸನಿಲ್ಲದ ಅಂತಃಪುರವೆಂದರೆ ಬಂಗಾರದ ಪಂಜರವೇ ಸೈ!

    ಪ್ರತ್ಯುತ್ತರಅಳಿಸಿ
  9. ನಿಮ್ಮ ಕಲ್ಪನೆಯ ಎಲ್ಲೆಯನ್ನು ಉಹಿಸುವುದು ಕಷ್ಟ ಸಾರ್....ಸೂಪರ್ !

    ಪ್ರತ್ಯುತ್ತರಅಳಿಸಿ
  10. ಎಲ್ಲವೂ ಇದ್ದರೂ ಏನೂ ಇಲ್ಲದ೦ತೆ....ನಿಮ್ಮ ಕಲ್ಪನೆ ತು೦ಬಾ ಚೆನ್ನಾಗಿದೆ ಸರ್..

    ಪ್ರತ್ಯುತ್ತರಅಳಿಸಿ
  11. ಸೂಪರ್ ಸೂಪರ್... ಚೆನ್ನಾಗಿದೆ ಬೇರೆ ಮಾತೇ ಇಲ್ಲ ..

    ಪ್ರತ್ಯುತ್ತರಅಳಿಸಿ
  12. "ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ.... " :)

    ಪ್ರತ್ಯುತ್ತರಅಳಿಸಿ
  13. ಏನಿದ್ದರೇನು ರಾಜನಿಲ್ಲದ ಮೇಲೆ..?
    ವಾಹ್ ಸೂಪರ್...

    ಪ್ರತ್ಯುತ್ತರಅಳಿಸಿ
  14. ಕವನ ಚೆನ್ನಾಗಿದೆ ಬದರಿ ಸರ್.. ಎಲ್ಲವನ್ನೂ ಓದಿದೆ.. :)

    ಪ್ರತ್ಯುತ್ತರಅಳಿಸಿ
  15. "ಕಾಂತನಿಲ್ಲದ ಮ್ಯಾಲೆ .......... haadina saalu nenapaitu :) wow awesome bro

    ಪ್ರತ್ಯುತ್ತರಅಳಿಸಿ
  16. ಪಲ್ಲಕ್ಕಿಯಲ್ಲಿ ಕೂತಿದ್ದರೂ ಹೊಟ್ಟೆ ತುಂಬಿಸುವ ಅನ್ನ ಸಿಕ್ಕದಿದ್ದರೆ 'ಮನಸು' ಬರಡಾದಂತೆ. ವಿಸ್ತಾರಗೊಳಿಸಬಹುದಿತ್ತು ವಸ್ತು. ಅರ್ಧಕ್ಕೆ ನಿಂತಂತೆ ಭಾಸವಾಯ್ತು. ಯಾಕೋ ಕಾಣೆ!

    ಪ್ರತ್ಯುತ್ತರಅಳಿಸಿ
  17. ಹೆಣ್ಣು ರಾಣಿಯಾದ್ರೂ,ಸೇವಕಿಯಾದ್ರೂ ಎದೆಬಡಿತದ ಸದ್ದಿಗೊಂದು ನಲ್ಲನ ಬಿಸಿಯುಸಿರು ಇಲ್ಲದಿದ್ರೆ ಹೇಗೆ ಅಲ್ವಾ ಅಣ್ಣ.
    ಭಾವಪೂರ್ಣ ವರ್ಣನೆ

    ಪ್ರತ್ಯುತ್ತರಅಳಿಸಿ
  18. ರಾಜ ಯೋಗ ದರಿದ್ರ ಜಾತಕ ಎನ್ನುವಂತೆ.. ಇರುವುದು ಇಲ್ಲ ಬೇಡದ್ದು ದಂಡಿಗಾಗುವಷ್ಟು. ಅಂತಃಪುರದ ಕಥೆಗಳು ಬಲು ಭೋಗ ಭಾಗ್ಯಕ್ಕೆ ಎನ್ನುವ ಹಾಗೆ ಇದೆ ಸುಂದರ ಪದಗಳ ಮೆರವಣಿಗೆ ಬದರಿ ಸರ್

    ಪ್ರತ್ಯುತ್ತರಅಳಿಸಿ