ಶುಕ್ರವಾರ, ಮೇ 23, 2014

ಗೆರೆ ಹಿಂದೆಯೇ ನಿಂತರೇ...


ಪದೋನ್ನತಿಯೇ ಫುಲ್ ಸ್ಟಾಪಿಸಿದರೆ
ನಿಂತ ನೀರೂ ಗಬ್ಬು, ಬರಿಯ ಪಾಚಿ

ಗುಂಟೆ ಉತ್ತವನ ಕನಸು
ಎಕರೆಗಟ್ಟಲೆಯ ಫಸಲು,
ಕನಿಷ್ಠ ಬಿಲ್ಲೆಯ ಬೀಟೂ
ಕನಿಷ್ಟ ನಿರೀಕ್ಷಕನ ಹುದ್ದೆ

ಒಡೆದ ಗೋಲಕದ ಎಣಿಕೆಗೆ
ನಾಳೆ ನೋಟೆಣಿಕೆ ಯಂತ್ರ,
ಕಟ್ಟೇ ಸನ್ಯಾಸಿಯ ಜಪವೂ
ಬೃಹನ್ಮಠದ ರೂಪುರೇಷೆ

ಕುಂಟೆ ಬಿಲ್ಲೆಯ ಪೋರಿಯ
ಸಿದ್ಧಿಗೆ ಒಲಂಪಿಕ್ಕು ಮೆಡಲು,
ಲಂಗೋಟಿ ಬಾವಿ ಧೀರನಿಗೆ
ಸಪ್ತ ಸಾಗರದಾಟೋ ಈಜು

ಅತೀ ಆಸೆಯೂ ತಪ್ಪಲ್ಲ
ಆಗಲೇ ಸಾಧನೆಗೂ ಗುರಿಯು,
ಗೆರೆ ಹಿಂದೆಯೇ ನಿಂತರೇ
ಲಂಘನಗಳಾದರೂ ಭ್ರಮೆಯು


(ಚಿತ್ರ ಕೃಪೆ: ಅಂತರ್ಜಾಲ)

16 ಕಾಮೆಂಟ್‌ಗಳು:

  1. very true... ಅತಿ ಆಸೆಯೂ ತಪ್ಪಲ್ಲ.. ಸಾಧನೆ ಆಗ ಮಾತ್ರ ಸಾಧ್ಯ

    ಪ್ರತ್ಯುತ್ತರಅಳಿಸಿ
  2. ಆಸೆಗಳು ಅತಿಯಾಗಿದ್ದಲ್ಲಿ ಮಿತವಾಗಿಯಾದರೂ ನೆರವೇರುವುದು ಖಂಡಿತಾ..

    ಪ್ರತ್ಯುತ್ತರಅಳಿಸಿ
  3. ಸುಂದರ ಸಾಲುಗಳು..ಯಶಸ್ಸಿಗೆ ಪರಿಧಿ ಇಲ್ಲ ಎಂಬ ಸಂದೇಶವನ್ನು ಕೊಡುತ್ತದೆ..

    ಪ್ರತ್ಯುತ್ತರಅಳಿಸಿ
  4. ಕನಸು ಗುರಿಯತ್ತ ದೂಡುವ ಮಾರ್ಗ, ಸೋತು ನಿಂತವನಿಗೆ ಬರಿ ನಿರಾಸೆ ಲಭ್ಯ, ಸತತ ಪ್ರಯತ್ನದಿಂದ ಗೆಲುವು ಸಾಧಿಸಲು ಸಾಧ್ಯ.

    ಪ್ರತ್ಯುತ್ತರಅಳಿಸಿ
  5. ಏಳು ಬೀಳುಗಳ ನಡುವೆ ಕನಸುಗಳ ಕಟ್ಟಿಕೊಂಡು ಒಂದೊಂದೇ ಯಶಸ್ಸಿನ ಮೆಟ್ಟಿಲುಗಳ ಹತ್ತಿಕೊಂಡು, ಭ್ರಮೆಯಲ್ಲಿಯೇ ಬದುಕ ಸಾಗಿಸುವ ಸಾಧಕರ ಚಿತ್ರಣ....

    ಪ್ರತ್ಯುತ್ತರಅಳಿಸಿ
  6. 'ಅತಿ ಆಸೆಯು ತಪ್ಪಲ್ಲ, ಆಗಲೇ ಸಾಧನೆಗೆ ಗುರಿಯು' ಅರ್ಥವತ್ತಾದ ಸಾಲುಗಳು. ಒಳ್ಳೆಯ ಕವಿತೆ.
    -ಪ್ರಸಾದ್

    ಪ್ರತ್ಯುತ್ತರಅಳಿಸಿ
  7. ಬದರಿ ಸರ್...
    ಚಂದದ ಕವನ...ಮೊದಲೆರಡು ಸಾಲುಗಳ ನಂತರ ಒಂದು ಇಂಟರ್ವಲ್ಲು..ಜೊತೆಗೆ ಕನಿಷ್ಟ,ಕನಿಷ್ಠಗಳನ್ನು ಬಳಸಿರುವ ಸೂಕ್ಷ್ಮತೆ ಇಷ್ಟವಾಯ್ತು :)...
    ಬರೆಯುತ್ತಿರಿ..ನಮಸ್ತೆ :)

    ಪ್ರತ್ಯುತ್ತರಅಳಿಸಿ
  8. ಆಸೆ ಪಡುವುದು ತಪ್ಪಲ್ಲಾ ಆದರೆ ಆ ಆಸೆಗಳನ್ನು ಪೂರೈಸಿಕೊಳ್ಳಲು ಶ್ರಮ ಅತೀ ಮುಖ್ಯ. ಗುರಿ ಇಟ್ಟರೆ ಸಾಲದು ಅದನ್ನು ತಲುಪಲೆ ತಕ್ಕ ಪರಿಶ್ರಮ ಕೂಡಾ ಇರಬೇಕು ಅನ್ನುವುದನ್ನು ಸಾರುವ ಕವನ ಬಹಳ ಚೆನ್ನಾಗಿದೆ ಸರ್. :)

    ಪ್ರತ್ಯುತ್ತರಅಳಿಸಿ
  9. ಬದರಿನಾಥರೆ,
    ಜೀವನದ ದ್ವಂದ್ವವನ್ನು ಚೆನ್ನಾಗಿ ಕವನಿಸಿರುವಿರಿ.

    ಪ್ರತ್ಯುತ್ತರಅಳಿಸಿ

  10. 'ತೆರೆದ ಮನ'ದ ಕವಿತೆ ಇದು. ಎರಡು ಹನಿಯೊಂದಿಗೆ ಸಾಗುವ ಸಣ್ಣತೊರೆಗೂ ಬೆಟ್ಟಸೀಳಿ ನದಿಯಾಗುವ ಬಯಕೆ. ನಿಲ್ಲಕೂಡದು ಆಸೆ, ನಾಳೆ ಕಡಲು ಸೇರುವುದರೊಳಗೆ ಈ ಬೆಟ್ಟವಲ್ಲದಿದ್ದರೆ ಇನ್ನೊಂದು ಗುಡ್ಡವನ್ನಾದರೂ ಏರಿ ಸಾಗಬಹುದು!

    ಪ್ರತ್ಯುತ್ತರಅಳಿಸಿ
  11. ಒಳ್ಳೆಯ ಮತ್ತು ಅರ್ಥಪೂರ್ಣ ಸಾಲುಗಳು ಸರ್ ......

    ಪ್ರತ್ಯುತ್ತರಅಳಿಸಿ
  12. ಗೆರೆ ಹಣೆಯ ಮೇಲೆ ಮೂಡುವುದಕ್ಕೆ ಮೊದಲು ನೆಲದ ಮೇಲೆ ಮೂಡಿದಾಗ ಗೆಲುವು ಶತಃ ಸಿದ್ಧ.. ಹಲವಾರು ಗೆರೆಗಳ ಹಿಂದಿನ ಕಥೆಯನ್ನು ಪದಗಳ ಮೂಲಕ ಮೂಡಿಸುವ ನಿಮ್ಮ ಶಕ್ತಿ ಇಷ್ಟವಾಗುತ್ತದೆ ಬದರಿ ಸರ್.. ಸೂಪರ್ ಸೂಪರ್

    ಪ್ರತ್ಯುತ್ತರಅಳಿಸಿ
  13. ಆಸೆ ಪಡುವುದು ತಪ್ಪಲ್ಲಾ ಆದರೆ,
    ಆ ಆಸೆಗಳನ್ನು ಪೂರೈಸಿಕೊಳ್ಳಲು ಈ ಸ್ಪರ್ದಾ ಯುಗದಲ್ಲಿ ಅತೀ ಮುಖ್ಯ
    http://spn3187.blogspot.in/


    .

    ಪ್ರತ್ಯುತ್ತರಅಳಿಸಿ