ಭಾನುವಾರ, ಡಿಸೆಂಬರ್ 15, 2013

ಮಿರ್ಜಾ ಗಾಲೀಬನ ಗಜ಼ಲು : 1

(ಇಂಗ್ಲೀಷ್ ಅವತರಣಿಕೆಯಿಂದ)
(ಭಾವಾನುವಾದದ ಪ್ರಯತ್ನ)

ನನ್ನೊಳಗೆ ತುಂಬಿರುವ ತೀರದಾಸೆಗಳ
ಖಾತೆ ಕರಗಲು ಬೇಕು ಮರು ಜನ್ಮ
ಗಿಟ್ಟಿದ್ದು ಗುಲಗಂಜಿ; ನೆನೆದದ್ದು ಆಕಾಶ
ದಕ್ಕಬಲ್ಲವೇ ಹೇಳಿ ಈ ಜನ್ಮದಲ್ಲಿ?

ನಿಮಗೂ ಗೊತ್ತಿದೆ ಈಗ ಆದೆಮ್ ಸ್ವರ್ಗವಾಸಿ
ಭೋರಿಟ್ಟು ಅತ್ತರಂತೆ ಈಡನ್ ಬಿಡುವಾಗ
ದೋಸ್ತ! ನಾನೂ ಹೊರಟು ಬಂದವನೇ ನಿಮ್ಮಿಂದ
ಪೀಡೆ ಕಳೆಯಿತೆಂಬಂತೆ ಕುಣಿದಾಡಿದಿರಂತೆ!

ಆಗೆಲ್ಲ ಕುಡಿತವೆಂದೆ ಗಾಲಿಬ್;
ಗಾಲಿಬ್ ಎಂದರೆ ಕುಡಿತ
ಹಾಗಿತು ನೋಡಿ ನನ್ನ ಜಮಾನಾ
ಮತ್ತೊಂದು ಶಕೆ ಬಂದಂತಿದೆ, ನೋಡಬೇಕು
ಜಂಶೇಡನ ಬಟ್ಟಲಿನಲ್ಲಿ ಕಾಣುವುದು ಏನೋ?

ಅರೆ ಭಾಯಿ ಸಾಹೇಬ! ನಾನು ಕೇಳಿದ್ದಾದರೂ ಏನು
ನನ್ನ ಸೋಲಿಗೆ ನಿನ್ನ ಸಮಾಧಾನ
ಹೇಗೆ ಅರೆತೇನು ನೀನು ಗದ್ಧಾರ್ ಮಗನೆಂದು
ಕಾದು ಇಕ್ಕುತ್ತೀಯಂತ ಬೆನ್ಗೆ ಚೂರಿ

ಓ! ಪ್ರವಾದಿಯೇ, ಅಲ್ಲಾಹುವಿನಾಣೆ
ಸರಿಸದಿರು ನೀನು ಖ್ವಾಬಾದ ಹೊದಿಕೆ
ಗಾಲಿಬ್! ನಿನ್ನ ಗ್ರಹಚಾರದ ಹಣೆ ಬರಹಕ್ಕೆ
ಅಲ್ಲಿ ಕಲ್ಲು ದೇವರು ನಿಂತು ಗಹ ಗಹಿಸಿ ನಕ್ಕೀತು...


___________________________________

ಜಂಶೇಡ: ಪರ್ಷಿಯನ್ ದೊರೆ, ಇವನ ಬಳಿ ಇದ್ದ
ಮಾಯಾ ಬಟ್ಟಲಿನಲ್ಲಿ ಭೂತ, ಭವಿಷ್ಯತ್ ಮತ್ತು ವರ್ತಮಾನ
ಕಾಲಗಳು ಕಾಣುತ್ತಿದ್ದವೆಂಬ ನಂಬಿಕೆ.

(ಚಿತ್ರ ಕೃಪೆ : ಅಂತರ್ಜಾಲ)

(ಹಾಯ್ ಬೆಂಗಳೂರ್!
ವಾರ ಪತ್ರಿಕೆಯ ನವೆಂಬರ್ 23, 2001ನೇ
ಸಂಚಿಕೆಯಲ್ಲಿ ಪ್ರಕಟಿತ)

11 ಕಾಮೆಂಟ್‌ಗಳು:

  1. ಸೊಗಸಾದ ಭಾಷಾಂತರ, ಭಾವನೆಗಳ ಪ್ರತಿ ಸಾಲೂ ಅಮೋಘ.

    ಪ್ರತ್ಯುತ್ತರಅಳಿಸಿ
  2. ಅನುವಾದಿತ ಸಾಲುಗಳು ಸೊಗಸಾಗಿ ಮೂಡಿ ಬಂದಿವೆ ಬದ್ರಿ ಸರ್.

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಬದರಿನಾಥರೆ,
    ಗಾಲಿಬ್‍ನ ಮೂಲಗಜಲುಗಳನ್ನು ನಾನು ಓದಿಲ್ಲ. ಆದರೆ ನೀವು ಮಾಡಿದ ಅನುವಾದವನ್ನು ಓದಿದಾಗ, ಗಾಲಿಬ್‍ನ ಗಜಲ್ ಓದಿದಷ್ಟೇ ಖುಶಿಯಾಯಿತು. ಬಹುಶಃ ಗಾಲಿಬ್ ಇವನ್ನು ಓದಿದ್ದರೆ, ಖಂಡಿತವಾಗಿಯೂ ಹೇಳುತ್ತಿದ್ದ: ‘ಸುಭಾನ್ ಅಲ್ಲಾ!’

    ಪ್ರತ್ಯುತ್ತರಅಳಿಸಿ
  5. ವಾಹ್..

    ಬಹಳ ಸುಂದರ ಕವಿತೆ ಬದರಿ ಸಾರ್.. ಚೆಂದಗೆ ಭಾಷಾಂತರಿಸಿದ್ದೀರ.. :)

    ಪ್ರತ್ಯುತ್ತರಅಳಿಸಿ
  6. ಗಝಲುಗಳನ್ನು ಕನ್ನಡೀಕರಿಸುವುದು ತುಂಬ ಕಷ್ಟದ ವಿಷಯ. ವಾಚ್ಯಾರ್ಥ ಭಾವಾರ್ಥಗಳೆರದರಲ್ಲೂ ನಿಮ್ಮ ಅನುವಾದ ಸೊಗಸಾಗಿದೆ.

    ಪ್ರತ್ಯುತ್ತರಅಳಿಸಿ
  7. ಬದರಿನಾಥ್,

    ಸೊಗಸಾದ ಅನುವಾದ !

    ಮೂಲ ಗಜಲ್ ಜೊತೆಗೆ ಕೊಟ್ಟಿದ್ದರೆ ಇನ್ನೂ ರುಚಿಯಾಗಿರುತಿತ್ತು ...

    ಪ್ರತ್ಯುತ್ತರಅಳಿಸಿ
  8. ನನ್ನೊಳಗೆ ತುಂಬಿರುವ ತೀರದಾಸೆಗಳ
    ಖಾತೆ ಕರಗಲು ಬೇಕು ಮರು ಜನ್ಮ
    ಗಿಟ್ಟಿದ್ದು ಗುಲಗಂಜಿ; ನೆನೆದದ್ದು ಆಕಾಶ
    ದಕ್ಕಬಲ್ಲವೇ ಹೇಳಿ ಈ ಜನ್ಮದಲ್ಲಿ?


    Likeable lines...super translation Badari sir

    ಪ್ರತ್ಯುತ್ತರಅಳಿಸಿ