ಭಾನುವಾರ, ಅಕ್ಟೋಬರ್ 27, 2013

ಚೊಚ್ಚಲ ಕವನ ಸಂಕಲನ ಬಿಡುಗಡೆಗೆ ಸ್ವಾಗತ.

ನಮಸ್ಕಾರ,

ಮುಂಬೈನ ಕುಶಿ ಪ್ರಕಾಶನದ ಸಹೋದರ, ಬ್ಲಾಗಿಗ ಶ್ರೀಯುತ. ಅಶೋಕ್. ವಿ.  ಶೆಟ್ಟಿ ಕೊಡ್ಲಾಡಿಯವರ ದಯೆಯಿಂದ ನನ್ನ ಚೊಚ್ಚಲ ಕವನ ಸಂಕಲನ ಬಿಡುಗಡೆಯಾಗುತ್ತಿದೆ. "ತಮ್ಮ ಆಸೆಗಳನ್ನೇ ಪೂರೈಸಿಕೊಳ್ಳಲು ಹೆಣಗುವ ಈ ಕಾಲದಲ್ಲೂ - ಗೆಳೆಯರ ಕನಸನ್ನು ಸಾಕಾರಗೊಳಿಸುವ" ಹಿಮ ಗಿರಿಗಿಂತಲೂ ಎತ್ತರದ  ಅವರ ಸಹೃದಯ ಮನಸ್ಸಿಗೆ ನಾನು ಚಿರರುಣಿ. ಅವರ ಈ ಪ್ರಯತ್ನವು ಭಗವಂತನ ಆಶೀರ್ವಾದದಿಂದ 'ಆರ್ಥಿಕ' ಯಶಸ್ಸು ಕಾಣಲಿ ಎನ್ನುವುದೇ ನನ್ನ ಆಶಯ.


ಬೆನ್ನುಡಿಯನ್ನು ಬ್ಲಾಗ್ ಚಿಂತಕ - ಪದಾರ್ಥ ಚಿಂತಾಮಣಿಯ ಪ್ರವರ್ತಕ ಶ್ರೀಯುತ. ಆಜಾದ್ ಸಾರ್ ಬರೆದಿದ್ದಾರೆ.

ಮುಖಪುಟವನ್ನು ಬ್ಲಾಗ್ ಸಹೋದರಿ ಶ್ರೀಮತಿ. ಸುಗುಣ ಮಹೇಶ್ ಅವರು ರಚಿಸಿಕೊಟ್ಟಿದ್ದಾರೆ.

ಮುನ್ನುಡಿಯನ್ನು ಆತ್ಮೀಯವಾಗಿ ನನ್ನ ಗುರು ಸಮಾನರಾದ ಬ್ಲಾಗರ್ ಧಾರವಾಡದ
ಶ್ರೀಯುತ. ಸುನಾಥ್ ಸಾರ್ ಅವರು ಬರೆದುಕೊಟ್ಟಿದ್ದಾರೆ.

ಅದೇ ದಿನ ಬ್ಲಾಗಿಗರಾದ ಗುರುವರ್ಯ
ಶ್ರೀಯುತ. ಸುನಾಥ್ ಸಾರ್ ಮತ್ತು  ಸದಾ ನನ್ನೊಂದಿಗಿರುವ ಶ್ರೀಯುತ. ದಿನಕರ್ ಮೊಗೇರ ಅವರ ಪುಸ್ತಕಗಳ ಜೊತೆ ಹೊಸ ಮಿತ್ರರೊಬ್ಬರ ಕೃತಿಯೂ ಲೋಕಾರ್ಪಣೆಯಾಗಲಿದೆ.

ನನ್ನ ಕಾವ್ಯ ಕೃಷಿಗೆ ನೀರೆರೆಯುತ್ತಾ ಬಂದ ನಲ್ಮೆಯ
ಬ್ಲಾಗಿಗರು, ಫೇಸ್ ಬುಕ್, ಕನ್ನಡ ಬ್ಲಾಗ್ ಮತ್ತು 3K ಬಳಗದ ಗೆಳೆಯ ಗೆಳತಿಯರೆಲ್ಲರೂ ನಮ್ಮನ್ನು ಆಶೀರ್ವಾದ ಮಾಡಲು ಆಗಮಿಸುತ್ತೀರೆಂದು ಆಶಿಸುತ್ತೇನೆ. 

ಈ ಮೂಲಕ ಸಹೃದಯಿಗಳಾದ
ಪ್ರಕಾಶ್ ಹೆಗ್ಡೆ ಸಾರ್, ರೂಪಾ ಸತೀಶ್ ಜೀ ಮತ್ತು ಗೆಳೆಯ ಪ್ರಮೋದ್ ಶ್ರೀನಿವಾಸ್ ಅವರಿಗೂ ನನ್ನ ಅನಂತ ನಮನಗಳು.

ಆಗಮನಾಕಾಂಕ್ಷೆಯಿಂದ,
ಸುನಾಥ್, ದಿನಕರ್ ಮೊಗೇರ, ಎಂ. ನಂಜುಂಡಸ್ವಾಮಿ, ಬದರಿನಾಥ ಪಳವಳ್ಳಿ

6 ಕಾಮೆಂಟ್‌ಗಳು:

  1. ನಮ್ಮ ಕಾಲದಲ್ಲಿ ನಿಮ್ಮಂತಹ ಕವಿ ಗೆಳೆಯ ಇರುವುದೇ ನಮಗೆ ಹೆಮ್ಮೆ, ಕಾರ್ಯಕ್ರಮಕ್ಕೆ ಬಂದೆ ಬರುವೆ ಸಾರ್,

    ಪ್ರತ್ಯುತ್ತರಅಳಿಸಿ
  2. ಸುಗುಣಾ ಅವರು ಲೇಖಕಿ ಎಂದಷ್ಟೇ ತಿಳಿದಿದ್ದೆ. ನಿಮ್ಮ ಮುಖಪುಟದ ಮೂಲಕ ಅವರ ಚಿತ್ರಕಲಾಸಾಮರ್ಥ್ಯ ತಿಳಿಯಿತು.
    ಜಲನಯನ ಅವರ ಬೆನ್ನುಡಿ ಚೆನ್ನಾಗಿದೆ. ಇನ್ನು ನಿಮ್ಮ ಕವನಗಳ ಬಗೆಗೆ ಹೇಳಬೇಕಾದದ್ದಿಲ್ಲ. ಸುಗುಣಾ ಹಾಗು ಜಲನಯನರು ಕಾವ್ಯಬಂಗಾರಕ್ಕೆ ಕುಂದಣವಿಟ್ಟಿದ್ದಾರೆ ಎಂದಷ್ಟೇ ಹೇಳಬಲ್ಲೆ. ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  3. ಬದರಿನಾಥ್ ರವರೆ, ನಿಮಗೆ ಮತ್ತು ಸುನಾಥ್ ಸಾರ್ ರವರಿಗೂ ಶುಭವಾಗಲಿ......ನಾವು ಈ ಪುಸ್ತಕಗಳನ್ನು ತಕ್ಷಣವೇ ಕೊಂಡುಕೊಳ್ಳುವುದು ಹೇಗೆ ತಿಳಿಸಿ....

    ಪ್ರತ್ಯುತ್ತರಅಳಿಸಿ
  4. ಬಿಡುಗಡೆ ಈ ನಾಲ್ಕೂ ಪುಸ್ತಕಗಳು ಪ್ರಸಿದ್ದಿಯನ್ನು ಪಡೆಯಲಿ, ಎಲ್ಲರೂ ಕೊಂಡು ಕೊಂಡು ಓದಲಿ ಎಂದು ಹಾರೈಸುತ್ತೇನೆ.

    ಪ್ರತ್ಯುತ್ತರಅಳಿಸಿ
  5. ಪಾಂಡವರ ಅಜ್ಞಾತವಾಸ ಕಳೆದು ಹೊಳಪಿಗೆ ಬಂದರು ವಿಜಯದಶಮಿಯ ದಿನ.. ಅಕ್ಷರಗಳ ಗಾರುಡಿಗ ಬದರಿ ಸರ್ ಅವರ ಅಜ್ಞಾತ ಕವಿ ಎಂಬ ಹಣೆ ಪಟ್ಟಿ ಜಾರುತಿದೆ ದೀಪದ ಹಬ್ಬಗಳ ಸಡಗರದಲ್ಲಿ.. ನಿಮಗೆ ಶುಭವಾಗುತ್ತದೆ.. ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ