ನನ್ನ ಅಜ್ಞಾತ ಬ್ಲಾಗಿಗೆ 5 ವರ್ಷ ತುಂಬಿದ ಸಂಭ್ರಮ. ಇಷ್ಟು ಜನ ಬ್ಲಾಗ್ ಗೆಳೆಯರು - ಫೇಸ್ ಬುಕ್ ಗೆಳೆಯರು ನನಗೆ ಸಿಗುತ್ತಾರೆ, ಇಷ್ಟು ಪ್ರೋತ್ಸಾಹಿಸಿ ಬರೆಸುತ್ತಾರೆ, ಅಂತ ಕನಸಲ್ಲೂ ಎಣೆಸಿರಲಿಲ್ಲ.
ಕಳೆದ ವರ್ಷ:
- ಫೇಸ್ ಬುಕ್ಕಿನ 3K ಗುಂಪು ತನ್ನ ಶತಮಾನಂಭವತಿ - 100 ಕವಿಗಳ ಕವನ ಸಂಕಲನದಲ್ಲಿ ನನ್ನ 'ಕಾಮನ ಹುಣ್ಣಿಮೆ'ಗೂ ಅವಕಾಶ ಮಾಡಿಕೊಟ್ಟಿತು.
- ಫೇಸ್ ಬುಕ್ಕಿನ 3K ಗುಂಪು ನಡೆಸುವ ನವೆಂಬರ್ ಕವಿತೆ ಸ್ಪರ್ಧೆಯಲ್ಲಿ ನನ್ನ ಕವಿತೆ 'ತ್ಯಾಜ್ಯ ವ್ಯಾಜ್ಯ'ವು ನನ್ನ ಆತ್ಮೀಕ ಗೆಳೆಯ ಪುಷ್ಪರಾಜ್ ಚೌಟ ಅವರ ಜೊತೆ ಪ್ರಶಸ್ತಿ ಹಂಚಿಕೊಂಡಿತು.
- ಫೇಸ್ ಬುಕ್ಕಿನ 3K ಗುಂಪು ಶತಮಾನಂಭವತಿ ಹೆಸರು ಸೂಚಿಸಿದ್ದಕ್ಕಾಗಿ ಮತ್ತು ನವೆಂಬರ್ ಕವಿತೆ ಪ್ರಶಸ್ತಿ ಗೆದ್ದದ್ದಕ್ಕಾಗಿ, 3K ಲಾಂಛನದ ಒಂದು ಟೈಟಾನ್ ವಾಚು, ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಮತ್ತು ಇಸ್ಕಾನ್ ಅವರ 'ಭಗವದ್ಗೀತ' ನೀಡಿ ಪ್ರೋತ್ಸಾಹ ನೀಡಿತು.
- 'ಸಂಗಮ ಸುಖ' ಕವನವು ಯಾಮಿನಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಯಿತು.
- 'ಛಾವಣಿಯ ಬಾವಲಿ' ಕವನವು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಬೆಳಕು ಕಂಡಿತು.
- 17 ವಾರಗಳ ಕಾಲ ಗಲ್ಫ್ ಕನ್ನಡಿಗ ಅಂತರ್ಜಾಲ ಪತ್ರಿಕೆಯಲ್ಲಿ ಪಲವಳ್ಳಿ ಅಂಕಣ ಬರೆದ ತೃಪ್ತಿ ಇದೆ.
"ಕಲ್ಲನ್ನು ದೇವರ ವಿಗೃಹವಾಗದಿದ್ದರೂ ದ್ವಾರಪಾಲಕನ ಮಟ್ಟಿಗಾದರೂ" ಎಂಬ ಮಾತು ಇಷ್ಟವಾಯಿತು. ನಿಮ್ಮ ಬ್ಲಾಗ್ ನ ೫ನೇ ವರ್ಷದ ಸಂಭ್ರಮಕ್ಕೆ ಶುಭಾಶಯಗಳು. ನಿಮ್ಮಿಂದ ಇನ್ನೂ ಹೆಚ್ಚಿನ ಬರಹಗಳು ಹುಟ್ಟಿ ಬರಲಿ, ಅದನ್ನೆಲ್ಲ ನಾವು ಕಾತರದಿಂದ ಕಾಯುವಂತೆ ಮಾಡಲಿ.
ಪ್ರತ್ಯುತ್ತರಅಳಿಸಿಐದು ವರುಷದ ಸಂಭ್ರಮ ನಿಮ್ಮ ಬ್ಲಾಗಿಗೆ
ಪ್ರತ್ಯುತ್ತರಅಳಿಸಿಅದು ಅಜ್ಞಾತ ಹೇಗೆ ಗುರುಗಳೇ?
ಶುಭಾಶಯಗಳು
ಹೀಗೆ ಇನ್ನು ಐವತ್ತು ಪಟ್ಟು ವರುಷಗಳಾಗಲಿ
ನಮಗೆ ನಿಮ್ಮ ಜ್ಞಾನ ಸುಧೆ ಸಿಗುತ್ತಾ ಇರಲಿ
ನನ್ನನ್ನು ಬ್ಲಾಗ್ ಸರಸ್ವತಿಯರಲ್ಲಿ ಸೇರಿಸಿದ್ದಕ್ಕೆ ಧನ್ಯವಾದಗಳು
ನಿಮ್ಮ ಸಾಧನೆಗಳಿಗೆ ಶುಭಾಶಯಗಳು
ನಿಮ್ಮ ಐದು ವರ್ಷದ ಮಗು (ಬ್ಲಾಗು )ಇನ್ನೂ ಬೆಳೆದು ದೊಡ್ಡದಾಗಲಿ. ಓದುಗರಿಗೆ ಕಾವ್ಯದ ರಸದೌತಣ ನೀಡುತ್ತಾ ಸಾಗಲಿ. ಅಭಿನಂದನೆಗಳು ಬದ್ರಿ ಸರ್.
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿಶುಭಾಶಯಗಳು ಸರ್. ನಿಮ್ಮಂಥ ಕವಿ ಗೆಳಯರನ್ನು ಪಡೆದುದಕ್ಕೆ ನಮಗೂ ಖುಷಿ. ನಿಮ್ಮ ಲೇಖನಿ ಎಂದೂ ನಿಲ್ಲದಿರಲಿ. ಐದು ವರ್ಷದ ಹುಟ್ಟಿದ ಹಬ್ಬ ಅಂದ್ರೆ ಜೋರಾಗಿ ಒಂದು ಊಟ ಹಾಕಿಸ್ಬೇಕಪ್ಪ :)
ವಾ ವಾ.. ಕ್ಯಾ ಬಾತ್ ಹೇ..!! ನಾನು ಸಹ ಈ ಲಿಸ್ಟ್ ನಲ್ಲಿದ್ದೀನಿ ಖುಷಿ ಆಯ್ತು. ೫ ವರ್ಷಗಳು ಹೆಚ್ಚುತ್ತ ಹೋಗುತ್ತಿರಲಿ ಸರ್. ನೀವು ಬರೆಯುವ ಪ್ರತಿ ಕವಿತೆಗಳು ಹಾಗೂ ಇತ್ತೀಚೆಗೆ ಸಕ್ಕತ್ ಕಥೆಗಳು ಸದಾ ನಮ್ಮೆಲ್ಲರಿಗೂ ಇಷ್ಟವಾಗಿವೆ. ನೀವು ವಿಭಿನ್ನ ಶೈಲಿಯ ಬರಹಗಾರರು ಮತ್ತು ಕವಿಗಳು ನಿಮ್ಮೊಂದಿಗೆ ನಮ್ಮ ಸ್ನೇಹವಿರುದೇ ನಮಗೆ ಹೆಮ್ಮೆ.
ಪ್ರತ್ಯುತ್ತರಅಳಿಸಿಶುಭವಾಗಲಿ ಮತ್ತಷ್ಟು, ಮಗದಷ್ಟು ಕವಿತೆಗಳು ಹೊರಬರಲಿ
ಜೈ ಬದರಿ ಸರ್
ಹೃತ್ಪೂರ್ವಕ ಅಭಿನಂದನೆಗಳು. ಹೀಗೆ ಸುಂದರವಾಗಿ ಮತ್ತಷ್ಟು ಬಲಯುತವಾಗಿ ನಿರಂತರವಾಗಿ ಮುನ್ನಡೆಯುತ್ತಿರಲಿ.
ಪ್ರತ್ಯುತ್ತರಅಳಿಸಿಶುಭಾಶಯಗಳು ಬದರಿ ಜೀ...
ಪ್ರತ್ಯುತ್ತರಅಳಿಸಿಈ ಅಕ್ಷರ ಸಂಭ್ರಮ ಕಾಲ ಮಿತಿಯನೂ ಮೀರಿ ಜಾರಿಯಲಿರಲಿ ಹೀಗೆಯೇ ಸದಾ...:)
ನನ್ನಂಥ ಅಲ್ಪನನ್ನೂ ಮೇಸ್ಟ್ರುಗಳ ಸಾಲಿಗೆ ಸೇರಿಸಿದ ನಿಮ್ಮ ಪ್ರೀತಿ ಮತ್ತು ವಿನಯಕ್ಕೆ ತಲೆಬಾಗುತ್ತಾ - ಶ್ರೀವತ್ಸ ಕಂಚೀಮನೆ.
Shubhashayagalu sir..:)
ಪ್ರತ್ಯುತ್ತರಅಳಿಸಿಬದರಿನಾಥರೆ,
ಪ್ರತ್ಯುತ್ತರಅಳಿಸಿಐದು ವರ್ಷಪೂರ್ತಿ ನಮಗೆ ಸಿಹಿ ಉಣ್ಣಿಸುತ್ತ ಬಂದಿದ್ದೀರಿ. ಇಂದು ನಿಮಗೆ ಸಿಹಿ ಸಿಹಿ ಶುಭಾಶಯಗಳು.
ನಿಮ್ಮ ಬ್ಲಾಗ್ ನಿಮ್ಮ ಕವನಗಳು ಎಲ್ಲರನ್ನು ಮರೆಯದೆ ನೆನೆಸಿಕೊಳ್ಳುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗುತ್ತದೆ ಖಂಡಿತ
ಪ್ರತ್ಯುತ್ತರಅಳಿಸಿವಿಶ್ವಾಸಗಳೊಡನೆ
ಪಾರ್ಥಸಾರಥಿ
ಐದನೇ ವರ್ಷಾಚರಣೆಯ ಶುಭಾಶಯಗಳು.
ಪ್ರತ್ಯುತ್ತರಅಳಿಸಿಮಂಜು ಹಿಚ್ಕಡ್
ಶುಭಾಶಯಗಳು ಪ್ರೀತಿಯ ಬದರಿ ಜಿ , ನಿಮ್ಮ ಕವಿತೆಗಳ ಪದಗಳ ಭಂಡಾರ ನಮ್ಮ ಜ್ಞಾನ ಹೆಚ್ಚಿಸಿದೆ . ನಿಮ್ಮ ಬ್ಲಾಗ್ ನೂರುಕಾಲ ನಿರಂತರವಾಗಿ ಸಾಗಲಿ. ಅದನ್ನು ಓದಿ ನಲಿಯುವ ಅವಕಾಶ ನಮ್ಮೆಲ್ಲರಿಗೆ ಸಿಗಲಿ.
ಪ್ರತ್ಯುತ್ತರಅಳಿಸಿ5 4 3 2 1 ....... ಶುಭಾಶಯಗಳು ಸರ್ ... :)
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗ್ ನ ೫ನೇ ವರ್ಷದ ಸಂಭ್ರಮಕ್ಕೆ ಶುಭಾಶಯಗಳು; ಎಲ್ಲರನ್ನು ಮರೆಯದೆ ನೆನೆಸಿಕೊಳ್ಳುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗುತ್ತದೆ. ನನ್ನನ್ನು ನಿಮ್ಮ' ಬ್ಲಾಗ್ ಸರಸ್ವತಿ' ಯ ಲಿಸ್ಟ್ಲ್ಲಿ ಸೇರಿಸಿದ್ದಕ್ಕೆ ಧನ್ಯವಾದಗಳು ; ಶುಭವಾಗಲಿ ಬದರಿ :)
ಪ್ರತ್ಯುತ್ತರಅಳಿಸಿ''ನನಗೆ ಬೆನ್ನು ತಟ್ಟಿ ಈ ಕಲ್ಲನ್ನು ದೇವರ ವಿಗ್ರಹವಾಗಲಿಲ್ಲವಾದರೂ ಕನಿಷ್ಠ ದ್ವಾರಪಾಲಕನ ಮಟ್ಟಿಗಾದರೂ ತಿದ್ದಿದ ನಿಮಗೆಲ್ಲ ನನ್ನ ನಮನಗಳು.'' dodda maatu badri, yavattu ashte 'Tumbida koda tulukolla' annodakke neeve sakshi. I am really blessed to have u as my brother. god bless u
ಪ್ರತ್ಯುತ್ತರಅಳಿಸಿಬದರಿ ಸರ್ ನಿಮಗೆ ಆತ್ಮೀಯ ಅಭಿನಂದನೆಗಳು .. ನಿಮ್ಮಂಥ ಸ್ನೇಹಿತರನ್ನು ಪಡೆಯಲು ಈ ಬ್ಲಾಗ್ ಲೋಕವು ಒಂದು ಕಾರಣ .. ನಮಗೆ ನಿಮ್ಮಿಂದ ಕಲಿಯಬೇಕಾದ್ದು ಬಹಳ ಇದೆ .. ನಿಮ್ಮ ಕವಿತೆಗಳ ಪಯಣ ಹೀಗೆ ಮುಂದುವರೆಯಲಿ
ಪ್ರತ್ಯುತ್ತರಅಳಿಸಿCongratulations Badari Sir... Heege nimma kavya sudhe ukki hariyutirali...
ಪ್ರತ್ಯುತ್ತರಅಳಿಸಿಐದು ಒಂದು ಮುಖ್ಯ ಸಂಖ್ಯೆ.. ಮಗುವಿನ ಮೊದಲ ಐದು ವರ್ಷ ಸೊಗಸು,.. ಕಂಪನಿಯಲ್ಲಿ ಐದು ವರ್ಷ ಗ್ರಾಚುಟಿ ಹಕ್ಕು ಸಿಗುತ್ತದೆ, ಪಾಂಡವರು ಐದು, ಬೆರಳುಗಳು ಐದು, ಪಂಚಾಂಗದಲ್ಲಿ ಐದು, ಮುತ್ತೈದೆಗೆ ಐದು ಒಡವೆಗಳು ಹೀಗೆ ಐದು ತಲುಪಿದ ನಿಮ್ಮ ಬ್ಲಾಗಿಗೆ ಸಂಭ್ರಮದ ಶುಭಾಶಯಗಳು ಐದು ಐವತ್ತಾಗಲಿ..
ಪ್ರತ್ಯುತ್ತರಅಳಿಸಿ