ಕವಿಯಾಗಿ,
ಜೆನೆರಲ್ ಶೆರ್ಮನ್ ಮರವೇ
ಆಗಬೇಕಿದ್ದವನು ಇವನು
ಕುಂಡದಲಿಂದು ಬೊನ್ಸಾಯ್!
ವಿಶಾಲ 'ಬಾಣಲಿ' ತುಂಬ
ಅಕ್ಕರಗಳ ಗಟ್ಟಿ ಹಾಲನುಯ್ದು
ಸಳ ಸಳನೆ ಕುದಿಸಿ ಇಂಗಿಸಿ
ತಣಿಸಿ ಪಾಕವ ರಮಿಸಿ ಕುಯ್ದು
ಎಬ್ಬಿದ ಒಂದೊಂದು ಪದವೂ
ಹೊಮ್ಮಿಸ ಬೇಕಿತ್ತು ಪೃಚ್ಛಕರಿಗೆ
ಶತಾವಧಾನದ ಸಮಾಧಾನ
ಬಹುದಿತ್ತು ಬಹುವಾಗಿ
ರಾಗರತಿ ಮೀಟು ತಂತಿ
ಕಟ್ಟಿದ್ದು ಮಣ್ಣಾಂಗಟ್ಟಿ
ಕನವರಿಕೆ ಕಾವ್ಯ ಕನ್ನಿಕೆ!
ವಿಸ್ತರಿಸಿ ಶಬ್ದಾರ್ಥ ಕೋಶ
ಹರವಿ ಬಿಡಬಹುದಿತ್ತಲ್ಲ
ಅದೆಂತದೋ ಅಂಟು ಬಲೆ
ಕವಿಯ ಪಿನಾಕಿನಿ ಒಡಲು
ಹರಿವು ಮರೆತುಳಿದ ಮರಳು
Read it twice..It's beautiful..Ironical..Sir..
ಪ್ರತ್ಯುತ್ತರಅಳಿಸಿಬಹುದಿತ್ತು ಬಹುವಾಗಿ
ರಾಗರತಿ ಮೀಟು ತಂತಿ
ಕಟ್ಟಿದ್ದು ಮಣ್ಣಾಂಗಟ್ಟಿ
ಕನವರಿಕೆ ಕಾವ್ಯ ಕನ್ನಿಕೆ!
Outstanding sir
- ಸತ್ಯ ಬೋಧ ಜೋಶಿ
ತುಂಬಾ ಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಬಾಣಲಿಯಲಿ ಅಕ್ಕರಗಳ ಗಟ್ಟಿ ಹಾಲು...ವಾಹ್ ವಾಹ್ ಬದರಿಗೆ ಬದರಿಯೇ ಸಾಟಿ...ಚಂದದ ಕವನ
ಪ್ರತ್ಯುತ್ತರಅಳಿಸಿಬದರಿ ಸರ್..ತುಂಬಾ ಸೊಗಸಾಗಿದೆ...
ಪ್ರತ್ಯುತ್ತರಅಳಿಸಿಸೂಪರ್!
ಪ್ರತ್ಯುತ್ತರಅಳಿಸಿಬದರಿನಾಥರೆ,
ಪ್ರತ್ಯುತ್ತರಅಳಿಸಿಏನೋ ಆಗಬಹುದಿತ್ತು ಎಂದೇಕೆ ಕೊರಗುವಿರಿ?
ನೀವಿಗ ಬೆಳೆದ ಎತ್ತರವು ಆಗಸಕ್ಕೆ ತಲುಪಿಹುದು!
ನಿಮ್ಮ ಪದಗಳ ಆಯ್ಕೆ, ನಿಮ್ಮ ಲೇಖನಿ ಶೈಲಿ
ಕನ್ನಡಮ್ಮಗೆ ಸೊಗಸು, ನಿಮ್ಮ ಕವನಾವಳಿ!
Super Sir
ಪ್ರತ್ಯುತ್ತರಅಳಿಸಿಎಂದಿನಂತೆ ಬದರಿ ಸರ್ ಶೈಲಿ
ಪ್ರತ್ಯುತ್ತರಅಳಿಸಿಚಂದದ ಕವನ..
ಪ್ರತ್ಯುತ್ತರಅಳಿಸಿಬಹುದಿನಗಳ ನಂತರ ಅಖಾಡಕ್ಕೆ ಮರಳಿರುವ ನಮ್ಮೆಲ್ಲರ ನೆಚ್ಚಿನ ಕವಿ ಬದರಿ ಸರ್.. ನಿಮ್ಮ ಅಕ್ಷರ ಜ್ಞಾನ ಭಂಡಾರಕ್ಕೆ ಶರಣು..
ಪ್ರತ್ಯುತ್ತರಅಳಿಸಿಸೂಪರ್ ಇದೆ.. ಪ್ರತಿ ಚರಣ ಹೊಸ ಹೊಸ ಭಾವಗಳನ್ನು ಬೀಸುತ್ತಾ ಹೋಗಿದೆ..
ಸೂಪರ್ ಇದೆ
ನಿಮ್ಮ ಕವನಗಳು ನಿಮ್ಮ ಸಾಹಿತ್ಯದ ಘಾಡತೆ ತಿಳಿಸುತ್ತವೆ. ಅದ್ಭುತ ಸಾಲುಗಳುಳ್ಳ ಕವನ. ��
ಪ್ರತ್ಯುತ್ತರಅಳಿಸಿಬದರಿಯವರೇ....ಕವನಗಳು ಚೆನ್ನಾಗಿವೆ.
ಪ್ರತ್ಯುತ್ತರಅಳಿಸಿನೀವು FB ಯಲ್ಲಿ ಹಾಕಬಾರದೇಕೇ....