Saturday, July 15, 2017

ನಿಲುಕದ್ದು...

ಮೊದಲು ಚೌಕಟ್ಟಿನೊಳಗೆ
ಬರಿಯ ಚಿತ್ರದಂತೆ ಕಂಡಿದ್ದೆ
ಎತ್ತ ಕಡೆ ನಿಂತು ನಿಟ್ಟಿಸಿದರೂ
ಕಣ್ಣ ನೆಟ್ಟಂತೆ ನೋಡುತಿದ್ದೆ

ಎಟುಕಿದೆ ಎಂದೆಣೆಸಿ ಬಾಚಿದೆ
ಬರ ಸೆಳೆದು ತಬ್ಬಿದೆ ಬಸೆದುಕೊಂಡೆ
ನೆರೆತು ಬೋಳುಬಿದ್ದವ ಬರಿದೇ
ಬರಿದಾದ ಒಡಲ ಕಂಡುಕೊಂಡೆ

ಆಗೆಲ್ಲ ಸ್ವಯಂ ಪ್ರಕಾಶವಿತ್ತದು
ದೇದೀಪ್ಯಮಾನವಾಗಿದ್ದೆ ಬೀರಿ ಬೆಂಬೆಳಕು,
ಇತ್ತಿತ್ತಲಾಗೆ ನೆರಳೇ ದೀರ್ಘವದು
ಕತ್ತಲಿಗೆ ಒಪ್ಪಿಕೊಂಡಂತಿದೆ ನೀನೂ

ತೀಡದಿರೆ ಲಕಲಕಿಸದಪ್ಪ ಮೇನಕೆ!
ಹೊಳೆವ ಚಿನ್ನವೂ ಮಂಕು ಮೈಗುಜ್ಜಿ,
ಉಳಿದದ್ದಿಷ್ಟು ಅಷ್ಟಾವಕ್ರತೆ ಮನಕೆ
ಚಮಡಾವೂ ರಕ್ತಸಿಕ್ತ ಪ್ರಾಪ್ತ ಕಜ್ಜಿ


ಬದುಕೇ ಹಾಗೆ ನಿಲುಕಿಸುತ್ತೆ ಕೈಗತ್ತದೆ,
ಕೊರಗ ಬಾರದು ನಮ್ಮಂತ ಗ್ರಸ್ತರೂ

14 comments:

  1. Waah wah badari superb lines 👌👌👌👌👌
    @ G.V.Jayashree

    ReplyDelete
  2. ನಿಜವಾಗಿಯೂ ಹೌದು, ಕೊರಗ ಬಾರದು ನಮ್ಮಂತ ಗ್ರಸ್ತರು....ಯಾಕೆಂದರೆ ಕಳೆದ ಸರಸ ವಿರಸಗಳು ಒಂದಿಣಿತೂ ಮರಳದು. ಅದರಲ್ಲೂ ಈ ಬದುಕೇ ಹಾಗೆ, ಹೇಗೆಂದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಅನುಭವವನ್ನು ಉಣಬಡಿಸುತ್ತಲೇ ಇರುತ್ತದೆ ಈ ದೇಹದ ತ್ರಾಣ ಒಣಗುವವರೆಗೂ.

    ಎಂದಿನಂತೆ ಮೇಲ್ತರದಲ್ಲಿ ಓದುವ ಗೀಳ್ಹೆಚ್ಚಿಸುವ ಸಾಲುಗಳ ಕವನ.

    ReplyDelete
  3. ಅದ್ಭುತ ಕವನ
    ಆತ್ಮಾವಲೋಕನದ ಸತ್ಯ ಚಿತ್ರ.

    ReplyDelete
  4. ನಮ್ಮೊಳಗೆ ನಾವು ಹೊಕ್ಕು ನೋಡುವಂತೆ. ಚೆಂದದ ಕವನ.

    ReplyDelete
  5. ಅವಲೋಕನದಲ್ಲಿ ಅನಂತತೆ, ಅದರೆಡೆಗಿನ ತುಂಬದ ಪಾತ್ರೆ ತುಂಬುವ ಹುಂಬತನ, ಸರಿ... ಸೋಲುವಲ್ಲಿನ ವಿಷಾದವೇಕೆ ?

    ReplyDelete
  6. ಜಯಪ್ರಕಾಶ್ ಇJuly 16, 2017 at 4:36 AM

    ಚೌಕಟ್ಟಿನ ಜೀವನವಾದರೇನು? ಕಟ್ಟಿಗೆಯೊಳಗೆ ಹೋಗದಿರದೇ? ಭ್ರಮಾಧೀನವಾದ ಬದುಕಿಗೆ ಕೊರಗಬಾರದು. ಅದ್ಭುತವಾದ ಕವನ. ಬಹಳ ಚೆನ್ನಾಗಿದೆ.

    ReplyDelete
  7. ಇಷ್ಟವಾದ ಕವಿತೆ ಇದು, ಒಬ್ಬ ಕವಿ ತನ್ನ ಗರಡಿಯಲ್ಲಿ ಪದಗಳನ್ನು ಹೇಗೆ ಪಳಗಿಸಬಹುದು ಎಂಬುದಕ್ಕೆ ನೀವು ಉದಾಹರಣೆ. ನಿಮ್ಮ ಕವಿತೆ ಓದಲು ಶುರು ಮಾಡಿದರೆ ಮನದೊಳಗೆ ಹಾಗೆ ಬಸಿದುಕೊಂಡು ನಿಂತುಬಿಡುತ್ತದೆ. ಇಷ್ಟವಾದ ಸಾಲುಗಳು ತೀಡದಿರೆ ಲಕಲಕಿಸದಪ್ಪ ಮೇನಕೆ!
    ಹೊಳೆವ ಚಿನ್ನವೂ ಮಂಕು ಮೈಗುಜ್ಜಿ,
    ಉಳಿದದ್ದಿಷ್ಟು ಅಷ್ಟಾವಕ್ರತೆ ಮನಕೆ
    ಚಮಡಾವೂ ರಕ್ತಸಿಕ್ತ ಪ್ರಾಪ್ತ ಕಜ್ಜಿ


    ಬದುಕೇ ಹಾಗೆ ನಿಲುಕಿಸುತ್ತೆ ಕೈಗತ್ತದೆ,
    ಕೊರಗ ಬಾರದು ನಮ್ಮಂತ ಗ್ರಸ್ತರೂ

    ReplyDelete
  8. ಬದುಕೇ ಹಾಗೆ ನಿಲುಕಿಸುತ್ತೆ ಕೈಗತ್ತದೆ,
    ಕೊರಗಬಾರದು ನಮ್ಮಂತ ಗ್ರಸ್ತರೂ... saavira padagala artha saaruva ondu saalidu... jeevisalu Ondu jeevana saaladu....

    ReplyDelete
  9. ನಮಸ್ಕಾರ. ಅದ್ಭುತ ಪ್ರತಿಮೆಯೊಂದಿಗೆ ಕವಿತೆ ಮೈದಾಳಿದೆ.ಬದುಕಿನ ಮಜಲುಗಳ ನೈಜ ಅನಾವರಣವಾಗಿದೆ.ಜೀವನ ಪ್ರೀತಿಗೂ ಸ್ಪೂರ್ತಿ ನೀಡಿ ಧೈರ್ಯ ತುಂಬಿದ ರಚನೆ ಇದು.ಸೊಗಸಾಗಿದೆ.ಶುಭವಾಗಲಿ.

    ReplyDelete
  10. ಬದರಿನಾಥರೆ, ಹದಿನೈದು ದಿನ ಊರಲ್ಲಿ ಇರಲಿಲ್ಲ. ಈಗ ತಾನೆ, ನಿಮ್ಮ ಕವನ ನೋಡಿದೆ. ಖುಶಿಯಾಯಿತು. ಅಲ್ಲರೀ, ಇಂತಹ ಒಳ್ಳೆಯ ಕವನ ಬರೆಯುವ ನೀವಾಗಲಿ, ಓದುವ ನಾವಾಗಲಿ, ಕೊರಗಲು ಸಾಧ್ಯವಿಲ್ಲ. ಬದುಕು ಸುಂದರವಾಗಿದೆ.

    ReplyDelete
  11. ಬದರಿ ಸರ್ ರವರ ಕವನ ಎಂದರೆ ಹಾಗೆನೇ ಮನಸ್ಸಿಗೆ ಮುಟ್ಟುವಂತಿರುತ್ತದೆ. ಸೊಗಸಾದ ಕವನ. ಸರ್ ನಾನು ಸುಮಾರು ಮೂರು ವರ್ಷದ ನಂತರ ನನ್ನ ಬ್ಲಾಗಿನಲ್ಲಿ ಕವನ ಬರೆದ್ದಿದ್ದೇನೆ. ಓದಿ ಸರ್.

    ReplyDelete
  12. ನವಿಲಗಿರಿಯಿಂದ ಬಣ್ಣವನ್ನು ಅದ್ದಿದ ಹಾಗಿದೆ...

    ReplyDelete
  13. Super chenagide sir
    Nan blog nodi sir
    https://mounaseleyinda.blogspot.com

    ReplyDelete