Thursday, December 29, 2016

ಕಳಚಿ ಬಿದ್ದ ಮೇಲೆ...

ಕೆಳ ಕಾಂಡದಿ ಮೇಲೇರಿ ನಭಕೆ
ಕೊಂಬೆ ರೆಂಬೆಗಳಾಗಿ ಟಿಸಿಲೊಡೆದ
ಭೀಮ ಗಾತ್ರದ ಮರವೂ.. 
ಗರಗಸದ ಹಲ್ಲಿಗೆ ಸಿಕ್ಕು ಅಮರ...

ಅದರ ತುಂಬೆಲ್ಲ ಅಂಟುತ್ತ ಬೀಳುತ್ತ
ಚಿಗುರಿಂದ ಹಣ್ಣಾಗುತ್ತ ಅರಳುವವು
ಹಸಿರು ಹೃದಯಗಳು ಕಾಲ ಕಾಲಕೆ,
ಎಣಿಕೆಗೆಲ್ಲಿ ಸಿಕ್ಕಾವು ನಗಣ್ಯ ಅಗಣಿತ

ಬಿಸಿಲ ಹೀರಿ ದ್ಯುತಿಸಂಶ್ಲೇಷಿಸಿ ಕೊಟ್ಟರವು
ಜೀರ್ಣವಾದೀತು ಮರಕೂ ಉಂಡನ್ನ,
ಶಿಶಿರನಾಘಾತಕೆ ಬೋಳು ಬಿದ್ದದು ಬೇಡುತ್ತೆ
ದೇಹೀ ರಿಕ್ತ ಹಸ್ತಗಳ ಚಾಚಿ ಹಸಿರ ಭಿಕ್ಷೆ

ಚಲಾವಣೆ ತನಕ ಎಲೆಯ ಹಂಗು,
ಯವ್ವನವು ಒಣಗಿ ವಯಸೂ ಮೀರಿ
ನೆಲಕುದುರು ನನ್ನಂತ ಅನಾಮಿಕರ
ಬಗ್ಗಿಯೂ ನೋಡದದು ಒಮ್ಮೆಗೂ

ಕೇಳಿ ನೋಡಿ ನಿಂತಲ್ಲೇ ನಿಂತ ಅದನು
ಹೃದಯಗಳ ಹೆಸರಾದರೂ ಗೊತ್ತಿದೆಯೇ?
ಆಗಲೂ ಎಂದಿನಂತೆಯೇ ಮೌನಿಯದು
ಋಣ ಸಂದಾಯ ಕಾಲಕೆ ಜಾಣ ಮರೆವು!


(ಫೇಸ್ ಬುಕ್ ಅಂಗಳದಲ್ಲಿ ಕಲಾವಿದ ಮಿತ್ರ ವಿ.ಜಿ. ಬಿಂಗಿಯವರ ಈ ಹೊಸ ರೇಖಾ ಚಿತ್ರವು ನನಗೆ ಈ ಕವನ ಬರೆಯಲು ಪ್ರೇರೇಪಿಸಿತು.

ಬ್ಲಾಗಿನಲ್ಲಿ ಕವನವನ್ನು ಪ್ರಕಟಿಸುವಾಗ ತಮ್ಮ ಚಿತ್ರವನ್ನುಬಳಸಿಕೊಳ್ಳಲು ಅನುಮತಿಸಿದ ಅವರಿಗೆ ನಾನು ಆಭಾರಿಯಾಗಿದ್ದೇನೆ.

ವಿ.ಜಿ. ಬಿಂಗಿಯವರ ಬ್ಲಾಗ್ http://nannahanigalu.blogspot.in )

13 comments:

  1. ಚಲಾವಣೆ ತನಕ ಎಲೆಯ ಹಂಗು,
    ಯವ್ವನವು ಒಣಗಿ ವಯಸೂ ಮೀರುವುದು ಹೋಲಿಕೆಯ ಹರಿತ ವಾಸ್ತವದ ಅನಾವರಣ ಮಾಡಿತು.

    ಚಿತ್ರ ಚೆನ್ನವೋ? ಬರಹ ಚೆನ್ನವೋ? ಓದುಗನಿಗೆ ಔತಣ, ಚಿತ್ರ ರಸಿಕರಿಗೆ ಚಂದನ.

    ReplyDelete
  2. ನನ್ನ ಚಿತ್ರ ನಿಮಗೆ ಇಷ್ಟ ಆಗಿದ್ದೆ ನನಗೆ ಖುಷಿ ಸರ್. ಬರಹ ತುಂಬಾ ಇಷ್ಟ ಆಯ್ತು.
    ನನ್ನ ಚಿತ್ರ ಬಳಸಿಕೊಂಡಿದ್ದಕ್ಕೆ ಧನ್ಯವಾದಗಳು ಸರ್

    ReplyDelete
  3. ತುಂಬ ಇಷ್ಟವಾಯ್ತು ... ಕೊನೆಯ ನಾಲ್ಕು ಸಾಲಂತೂ ಮತ್ತೆ ಮತ್ತೆ ಓದುವಂತಿದೆ ...

    ReplyDelete
  4. Super as usual Badari sir.
    Garagasada halligoo sokku amara is very phylosophic touch.
    First stranza will appear odd to flow of next lines of the poem.

    ReplyDelete
  5. ಸರ್ ಈ ಚಿತ್ರ ಈ ಲಿಂಕ್‌ಲ್ಲಿದೆ
    http://nannachithragalu.blogspot.in/2016/12/10.html?m=1

    ReplyDelete
  6. ಕಛೇರಿಯ ಕಡತಗಳಲ್ಲಿ ಕಳೆದುಹೋಗಿದ್ದ ಬದರಿ ಮತ್ತೆ ಮರಳಲು ಶಿಶಿರ ಬರಬೇಕಾಯಿತು

    ಅ ಆ ಇ ಈ ಮರೆಯೊಲ್ಲ
    ಬದರಿ ಸರ್ ಕವಿತೆ ಮರೆಯೋಲ್ಲ
    ನಾಣ್ಯ ಚಿಮ್ಮಿ ಚೀಟಿ ಎತ್ತಿ ವಿಷಯ ಕೊಡಿ
    ಅಲ್ಲೂ ಚಿಗುರುತ್ತದೆ ಕವಿತೆ
    ಸೂಪರ್ ಬದರಿ ಸರ್ ಚಿತ್ರದಿಂದ ಕವಿತೆ ಸೂಪರ್

    ReplyDelete
  7. "ಶಿಶಿರನಾಘಾತಕೆ ಬೋಳು ಬಿದ್ದದು ಬೇಡುತ್ತೆ
    ದೇಹೀ ರಿಕ್ತ ಹಸ್ತಗಳ ಚಾಚಿ ಹಸಿರ ಭಿಕ್ಷೆ"
    "ನನ್ನಂತ ಅನಾಮಿಕರ
    ಬಗ್ಗಿಯೂ ನೋಡದದು ಒಮ್ಮೆಗೂ"
    "ಋಣ ಸಂದಾಯ ಕಾಲಕೆ ಜಾಣ ಮರೆವು!" ವಾಸ್ತವದ ಕೆಲವು ಘಟನೆಗಳನ್ನು ನೆನಪಿಸಿ ಭಾವ ಲಹರಿಯಲ್ಲಿ ತೀಲಿಸಿತು. ಪ್ರತಿ ಸಲದಂತೆ ಅದ್ಭುತ ಕವನ!
    Pradeep Rao

    ReplyDelete
  8. Tumbaa maarmikavaakide badari like it 👌👌👌

    ReplyDelete
  9. Tumbaa maarmikavaakide badari like it 👌👌👌

    ReplyDelete
  10. tumbaa oLLEya kavana.. innomme bandu odisitu...

    ReplyDelete
  11. ಪ್ರತಿಯೊಂದು ಸಾಲೂ ಕಾವ್ಯಮಯವಾಗಿದೆ. ಹೊಸ ವರುಷದ ಈ ದಿನ ನಿಮ್ಮ ಕವನವನ್ನು ಓದಿದ ನನಗೆ, ಕವನವು ಹೊಸ ವರುಷದ ಉಡುಗೊರೆಯಂತೆ ಭಾಸವಾಯಿತು.

    ReplyDelete
  12. Wah BP Ji :)
    ಕೇಳಿ ನೋಡಿ ನಿಂತಲ್ಲೇ ನಿಂತ ಅದನು
    ಹೃದಯಗಳ ಹೆಸರಾದರೂ ಗೊತ್ತಿದೆಯೇ?

    ReplyDelete