Monday, August 29, 2016

ಮಲಿನವಾಯಿತು ಮನವೂ...

ಕಣ್ಣು ಕಟೆಯುವ ಮುನ್ನ
ಬೆಂಬೆಳಗ ಹಸಿರುಟ್ಟ ತೋಟ
ಮತ್ತರಗಳಿಗೆಯಲೇ ನೋಟ
ಸುವಿಶಾಲ ಮರಳಗಾಡು,
ಸೂತ್ರ ಸಂಬಂಧವಿರದಲ್ಲ
ಬದುಕೇ ನಿನ್ನ ದೊಂಬರಾಟ!

ನೆಲೆ ನಿಂತ ಹೆಬ್ಬೆಂಡೆಯನಂದು
ಸವರಿದ್ದು ಮಧುರ ಅಲೆಗಳು
ಸವಿಯಿತ್ತು ಉಪ್ಪುಪ್ಪು ಕಡಲು,
ರಾಟೆಯ ಇನ್ನೊಂದಾವರ್ತದಿ
ಅಮೃತಗಳಿಗೆಯದೂ ಮೃತವು
ಪ್ರಕಟವಾದ್ದು ವ್ಯಾಘ್ರನೆರುಗು

ಪಾತ್ರಗಳವವೇ ರಂಗಸ್ಥಳವೂ
ಪ್ರಸಾದನ ಕೇಶಾಲಂಕಾರ
ಉಡುಗೆ ತೊಡುಗೆಯೂ ಅವೇ,
ಪರಿಚಯಗಳಾದರು ಹಳತೇ
ಕಾಲಾಂತರದ ಸವೆತಕ್ಕೆ ಸಿಕ್ಕು
ಖಾಂಡಗಳೇ ಅದಲುಬದಲು!

ಜೀವ ನದಿಗಳ ಚರಂಡಿಗಳಾಗಿಸಿ
ಮಲಿನ ಮಾನವನ ಮನವೂ


(ಚಿತ್ರ ಕೃಪೆ: ಅಂತರ್ಜಾಲ)

8 comments:

  1. ಎಷ್ಟು ಸ್ವಚ್ಚತೆ ಬಯಸಿದರೂ ಎಲ್ಲೆಲ್ಲಿಯೂ ಮಲೀನವೆ.., ಅಂತರಂಗವೂ ಬಹಿರಂಗವೂ ಎಲ್ಲವೂ ಮಲೀನ. ಚೆಂದದ ಕಾವ್ಯ . :-)

    ReplyDelete
  2. ಮೂರು ತಿಂಗಳುಗಳ ಬಳಿಕ ಬ್ಲಾ^ಗಿಗೆ ಮತ್ತೆ ಬಂದಿರಲ್ಲ, ಬದರಿನಾಥರೆ! ನಿಮ್ಮ ಕಾವ್ಯಧಾರೆಗಾಗಿ ನೀರಡಿಸಿ ಕುಳಿತವನಿಗೆ ಅಮೃತಧಾರೆ ಎರೆದಂತಾಯಿತು. ಧನ್ಯವಾದಗಳು. ಮುಂದಿನ ಕವನಕ್ಕಾಗಿ ಹೆಚ್ಚಿಗೆ ಕಾಯಿಸಬೇಡಿ.

    ReplyDelete
  3. ಚರ-ಸ್ಥಿರ. ಒಂದರಿಂದೊಂದಕ್ಕೆ ಪರಿವರ್ತನ ಚಕ್ರ . ಚೆನಾಗಿದೆ ಸರ್. ಇಷ್ಟ ಆಯ್ತು :)

    ReplyDelete
  4. ಅಭಿನಂದನೆಗಳು ಬದರಿ ಸರ್.... ನಾನು ಬ್ಲಾಗ್ ನಿಂದ ದೂರವಿರಲು ಫೇಸ್ ಬುಕ್ ಹಾಗೂ ವಾಟ್ಸಾಪ್ ಕಾರಣವಲ್ಲದೇ ಇದ್ದರೂ ತುಂಬಾ ಕಾಲದಿಂದ ಬ್ಲಾಗ್ ಕಡೆ ಹೋಗದೆ ಇರುವುದಂತು ನಿಜ...... ಬಹುಬೇಗ ನಿಮ್ಮೆದುರು ಹೊಸ ಬ್ಲಾಗ್ ಪೋಸ್ಟ್ ನೊಂದಿಗೆ ಹಾಜರಾಗುವೆ... ಧನ್ಯವಾದಗಳು ಸರ್....


    ReplyDelete
  5. ಅಭಿನಂದನೆಗಳು ಬದರಿ ಸರ್.... ನಾನು ಬ್ಲಾಗ್ ನಿಂದ ದೂರವಿರಲು ಫೇಸ್ ಬುಕ್ ಹಾಗೂ ವಾಟ್ಸಾಪ್ ಕಾರಣವಲ್ಲದೇ ಇದ್ದರೂ ತುಂಬಾ ಕಾಲದಿಂದ ಬ್ಲಾಗ್ ಕಡೆ ಹೋಗದೆ ಇರುವುದಂತು ನಿಜ...... ಬಹುಬೇಗ ನಿಮ್ಮೆದುರು ಹೊಸ ಬ್ಲಾಗ್ ಪೋಸ್ಟ್ ನೊಂದಿಗೆ ಹಾಜರಾಗುವೆ... ಧನ್ಯವಾದಗಳು ಸರ್....


    ReplyDelete
  6. ಜೀವನದಿಗಳ ಚರಂಡಿಗಳಾಗಿಸಿ ಮಲಿನ ಮಾನವ ಮನಸು !!!!! ಅದ್ಭುತ ಸಾಲುಗಳು. ಎಂಥಾ ಸತ್ಯ !!!!

    ReplyDelete