Saturday, April 16, 2016

ಮರ್ಯಾದೆಗೇಡು...

ಹೊಸ ಶಕೆಯಲಾದರೂ,
ಲಂಘಿಸಿರಿ ಅಡ್ಡ ಗೋಡೆಗಳನೆಲ್ಲ
ಮೀರಿ ಬಿಡಿ ಗಡಿ ರೇಖೆ ಪೊಳ್ಳ

ಭಂಗವಾಗಲಿ ಅಂತರಂಗದಹಂ
ಪೊರೆ ಕಳಚಲಿ ವಿಷ ದಂತ ಉರಗ,
ಪ್ರಾಯಶ್ಚಿತ್ತವೇಕೆ ಸೆರೆ ಮನೆಯಲ್ಲಿ
ದುಡುಕಿಗಿರಲಿ ಸಹನೆ ಲಗಾಮು

ಮತಗಟ್ಟೆಗಿಲ್ಲವಲ್ಲ ಮಡಿ ಮೈಲಿಗೆ
ಅಂತೆಯೇ ಗರಿಗರಿ ನೋಟು ಕಂತೆಗೂ,
ಮತ್ತೇಕೆ ಗೀರು ಗಾಯಗಳು ಚರಿತೆಯಲಿ
ಮಾಯದ ಕಲೆಗಳೆನಿತೋ ನಸೀಬಲಿ

ಜೋಲಿ ತೂಗಿ ಮಲಗಿಸಿದ ಹೆತ್ತವರೇ
ಚಿತೆಗೊಡ್ಡಿದರು ಮರ್ಯಾದೆಗೇಡಲಿ,
ಜಾತಿ ಮತವೇ ಹಿರಿದೆ ಒಲವಿಗಿಂತಲು
ಉಣಿಸಿದರು ತುತ್ತಿಟ್ಟವರೇ ಹಾಲಾಹಲ?

ಸೂಕ್ಷ್ಮ ದರ್ಶದರ್ಶಕವೂ ಯಾಮಾರೋ
ಐನಾತಿ ಹೊಸದೊಂದು ರೋಗಾಣು
ರುಜಿನಗ್ರಸ್ತವಾಗಿಸೀತು ಮನುಜ ಮನ
ಹೀಗೊಮ್ಮೆ ನಕಲಿ ಮೊಹರನು ಹೊತ್ತು!

8 comments:

  1. ಮಾನವೀಯತೆಗಿಂತ ಪೊಳ್ಳು ಮರ್ಯಾದೆಯೇ ಈ ದಡ್ಡರಿಗೆ ಹೆಚ್ಚಿನದು. ಹೊಸ ಶಕೆಯಲ್ಲಾದರೂ ನಾವು ನಮ್ಮನ್ನು ತಿದ್ದಿಕೊಳ್ಳಲಾದೀತೆ? ನಿಮ್ಮ ಕವನ ಸಮಾಜಕ್ಕೊಂದು ದಾರಿದೀಪವಾಗಿದೆ.

    ReplyDelete
  2. ಉತ್ತಮ ಸಂದೇಶ ಕೊಟ್ಟಿದ್ದೀರಿ. ಇಷ್ಟು ಅರ್ಥ ಮಾಡಿಕೊಂಡರೆ ಸ್ವಸ್ಥ ಮತ್ತು ಸುಂದರ ಸಮಾಜ ನಿರ್ಮಾಣವಾಗುವುದರಲ್ಲಿ ಅನುಮಾನವೇ ಇಲ್ಲ.

    ReplyDelete
  3. ಸೊಗಸಾಗಿದೆ ...
    ಲಂಘಿಸಿರಿ..?

    ReplyDelete
  4. ವಾವ್
    ಬದರಿ ಗೆ ಬದರಿ ಯೇ ಸಾಟಿ
    ಸೂಕ್ಷ್ಮ ದರ್ಶನವೂ
    ಯಾಮಾರೋ ಐನಾತಿ ರೋಗಾಣು ...ವಾವ್������

    ReplyDelete
  5. ವಾವ್
    ಬದರಿ ಗೆ ಬದರಿ ಯೇ ಸಾಟಿ
    ಸೂಕ್ಷ್ಮ ದರ್ಶನವೂ
    ಯಾಮಾರೋ ಐನಾತಿ ರೋಗಾಣು ...ವಾವ್������

    ReplyDelete