Sunday, August 9, 2015

ಒಬ್ಬಂಟಿ ಸಿಪಾಯಿ...

ಹೊರಗೆ ಹಿಮಪಾತ 
ಮೂಳೆಯೂ ಘನೀಭವಿಸುತಿದೆ ಗಾಳಿ,
ಪುಟ್ಟ ಡೇರಿಯ ಬಾಗಿಲಲಿ
ಮೂರ್ತೀಭವಿಸಿದ್ದಾನೆ ಒಬ್ಬಂಟಿ ಸಿಪಾಯಿ,
ಉಸಿರೇ ಪಣಕಿಟ್ಟವರಿವರು
ಕಾಯ್ವರು ಕಣ್ಣೆವೆಯಿಕ್ಕದೇ ಅಹರ್ನಿಶಿ

ಯುದ್ಧ ನೀತಿಗಳೆಲ್ಲ
ಮಹಾಕಾವ್ಯಗಳಿಗೇ ಕೊನೆಯಾಯ್ತು,
ಹಗಲೋ ನಟ್ಟಿರುಳೋ
ಮರೆಸು ದಾಳಿಯ ಶತ್ರುವಿಗೆಂತು?
ಗಡಿ ಒತ್ತುವರಿಯೊಂದೇ
ನೆರೆ ಮನೆಯ ಪಿತೂರಿ ದಿನಂಪ್ರತಿ

ಸಣ್ಣ ಸುಳಿವೂ ಕೊಡದು
ಗುಪ್ತದಳವು ವಿಧಿಯೂ ಒಮ್ಮೊಮ್ಮೆ,
ನುಸುಳಲೂ ಸಲೀಸು
ಸುಧೀರ್ಘ ಗಡಿಗುಂಟ ಘಾತುಕರಿಗೆ,
ಗುಂಡಿಕ್ಕಿ ಕೊಲ್ಲುವರು
ಹಳತು ತುಪಾಕಿಯ ಸೈನಿಕನನೇ!

ದಿಲ್ಲೀ ಸುಲ್ತಾನರಿಗೆ
ತಿಪ್ಪೆ ಸಾರಿಸುವ ಕಲೆ ಕರತಲಾಮಲಕ,
ಉರುಳು ದೇಹಗಳ
ಲೆಕ್ಕವಿಡಲೂ ಪುರುಸೊತ್ತಿರದಲ್ಲ
ತಕ್ಕ ಪಾಠವ ಕಲಿಸೋ
ಉಮ್ಮೇದಿಯು ಇರದ ನಪುಂಸಾಡಳಿತ!

ದೇಶ ಪ್ರೇಮದಿ
ಹುತಾತ್ಮರಾಗುವರು ನಮ್ಮುಳುವಿಗಾಗಿ,
ಮಡಿದಂದು ಮಾತ್ರವೇ
ಮರುಗಿದರೊಮ್ಮೆ ಅದುವೇ ಅಕ್ಷಮ್ಯ...

(ಕನ್ನಡ ಮಾಣಿಕ್ಯ ಪತ್ರಿಕೆಯಲ್ಲಿ ಪ್ರಕಟಿತ, 
ಸಂಪಾದಕರಾದ ಚಿತ್ರ ಸಾಹಿತಿ, ನಿರ್ದೇಶಕರಾದ
ಶ್ರೀಯುತ. ನಾಗೇಂದ್ರಪ್ರಸಾದ್ ಅವರಿಗೆ
ಅನಂತ ಧನ್ಯವಾದಗಳು.)

ಚಿತ್ರ ಕೃಪೆ: ಅಂತರ್ಜಾಲ

8 comments:

 1. ಇತ್ತೀಚೆಗಷ್ಟೇ ಫೇಸ್ಬುಕ್ಕಿನಲ್ಲಿ ನೋಡಿದ್ದೆ .. ತುಂಬಾ ಸೊಗಸಾಗಿದೆ .. ಕವಿತೆಯು ಸ್ವಾತಂತ್ರ್ಯ ದಿನೋತ್ಸವದ ಸಮಯದಲ್ಲಿ ಖಂಡಿತವಾಗಿಯೂ ನೆನಪಾಗುವುದು ಸರ್ ಜೀ .. :)

  ReplyDelete
 2. ದಿಲ್ಲೀ ಸುಲ್ತಾನರಿಗೆ
  ತಿಪ್ಪೆ ಸಾರಿಸುವ ಕಲೆ ಕರತಲಾಮಲಕ,
  ಉರುಳು ದೇಹಗಳ
  ಲೆಕ್ಕವಿಡಲೂ ಪುರುಸೊತ್ತಿರದಲ್ಲ
  ತಕ್ಕ ಪಾಠವ ಕಲಿಸೋ
  ಉಮ್ಮೇದಿಯು ಇರದ ನಪುಂಸಾಡಳಿತ!..

  ಮನಸ್ಸಿಗೆ ನಾಟುವ ಸಾಲುಗಳು. ಅದ್ಭುತವಾಗಿ ಬರೆದಿದ್ದೀರಿ

  ReplyDelete
 3. ಯುದ್ಧ ನೀತಿಗಳೆಲ್ಲ ಮಹಾಕಾವ್ಯಗಳಿಗೇ ಕೊನೆಯಾಯ್ತು....
  ನಿಜ, ನಮ್ಮಂಥವರ ಕನಸಿಗಾಗಿ ನಿದ್ದೆಯನ್ನೆ ಮರೆತವರವರು....
  ಇಷ್ಟವಾಯ್ತು ತುಂಬಾ......

  ReplyDelete
 4. ಅವರಿದ್ದಾರೆಂದು ನಮ್ಮ ಕಣ್ಣಿಗೆ ನಿದ್ರೆ. ಚೆನ್ನಾಗಿದೆ

  ReplyDelete
 5. ನಿಮ್ಮ ಕವವನ್ನು ಓದಿ ಬಹಳ ದಿನಗಳಾಗಿತ್ತು, ಬದರಿನಾಥರೆ. ಬ್ಲಾ^ಗಿಗೆ ಮರಳಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಜವಾನರ ಕರ್ತವ್ಯನಿಷ್ಠೆಯನ್ನು ಹಾಗು ರಾಜಕಾರಣಿಗಳ ನೀಚತನವನ್ನು ಸರಿಯಾಗಿ ವರ್ಣಿಸಿದ್ದೀರಿ!

  ReplyDelete
 6. ಚೆನ್ನಾಗಿದೆ... ವೀರರಿಗೆ ನಮನ

  ReplyDelete
 7. ನಮಸ್ಕಾರ,
  I am Basavaraj Kanthi. I have a ebook publishing website where you can publish your writings. With online publishing you can reach more number of readers. Also you can decide price of books yourself. Contact me for more details.
  email: kanthibasu@gmail.com

  Thanks,
  Basavaraj

  ReplyDelete