Sunday, May 17, 2015

ನಗರದ ಮಳೆ....

ಬಿದ್ದಷ್ಟೂ ಮಳೆ ತೊರೆಗಟ್ಟಿ
ಬಯಲು ತುಂಬೆಲ್ಲ ಅಡಿಗಟ್ಟಿ
ಇಂಗಿ ನೆಲದಾಳಕಿಳಿದಾಗ
ಉಕ್ಕುತ್ತವವು ಅಪರೂಪಕೆ
ಶಹರಿಗರ ಬೋರುಗಳು

ಬೆತ್ತಲೆ ನೆಲವೆಲ್ಲಿ ನಮ್ಮಲ್ಲಿ
ಹೊದ್ದುಕೊಂಡಿವೆ ಫ್ಲೆಕ್ಸು
ಟಾರು ಕಾಂಕ್ರೀಟು ಹಾಸು
ಪ್ಲಾಸ್ಟಿಕ್ಕು ಕವರುಗಳಿನ್ನಿತರೇ
ಇಳಿಯಗೊಡವು ಹನಿಯನೂ

ಮೊಂಡು ಬಿದ್ದು ಹಳ್ಳ ಹಿಡಿದು
ಅಲ್ಲಿ ಇಲ್ಲಿ ಮಡಗಟ್ಟಿ ನಿಂತು
ತತ್ತಿ ಇಕ್ಕಿಸಿಕೊಂಡ ನೀರದು
ಒಡಲಾಯಿತು ಹಿಂಡು ಸೊಳ್ಳೆಗಳಿಗೆ
ಕಡಿಸಿಕೊಂಡವ ದವಾಖಾನೆಗೆ

ಬೇಸಿಗೆಯ ಕುಂಭ ವೃಷ್ಟಿ
ಪುಟ್ಟ ಚರಂಡಿಗೆ ಸ್ವಚ್ಛತಾ ಭಾಗ್ಯ,
ದೊಡ್ಡ ಮೋರಿಗಳಾಗಲೇ ಭರ್ತಿ
ಆಳೆತ್ತರದ ಕಳೆಗಂಟಿ ನಡುವೆ
ಅವರಿವರ ಮನೆ ಕಸದ ಗುಪ್ಪೆ

ಭಾರೀ ಮಳೆ ಬಿದ್ದಾಗ ಎಚ್ಚರ
ಪುರ ಪ್ರಭುಗಳಿಗೂ ಆಗಾಗ

11 comments:

  1. ಈ ಕಾಂಕ್ರೀಟಿನ ಕಾಡುಗಳಲ್ಲಿ ಬಿದ್ದ ಪ್ರತಿ
    ಮಳೆ ನೀರ ಹನಿಯೂ ಕಲ್ಮಷವೇ..
    ಮತ್ತೊಮ್ಮೆ ಮಗದೊಮ್ಮೆ ನೀರಿಗಾಗಿ ಹಾಹಾಕಾರ.
    ಬೊಗಸೆಯ ನೀರೊ.. ವ್ಯರ್ಥ ವ್ಯರ್ಥ..
    ಎಂದಿಗೆ ಬುದ್ದಿ ಬಂದೀತು ನಮಗೆ...??

    ReplyDelete
  2. ಹೌದು ಬದ್ರಿ ಭಾಯ್.. ಇಂಚಿಂಚು ನೆಲವನ್ನೂ ಬಿಡದೆ ಜಮೀನನ್ನೆಲ್ಲಾ ಕಾಂಕ್ರೀಟ್ ಕಾಡಾಗಿಸಿದರೆ ಬಿದ್ದ ಮಳೆಯ ನೀರೆಲ್ಲಿ ಇಂಗಬೇಕು ? ಕಾಲ ಕೆಟ್ಟಾಗ ಬೆಂಕಿಯ ಮಳೆ ಬರ್ತದೆ ಅಂತಿದ್ರು ಜನ. ಆದ್ರೆ ನೋಡಿ ಮಳೆ ನೀರು ಹರಿವ ಕೆರೆಯ ನೀರೇ ನೊರೆಯಾಗಿ ಅದಕ್ಕೆ ಬೆಂಕಿ ಬಂದಿದೆ ! ಇನ್ನಾದರೂ ಎಚ್ಚೆತ್ತುಕೊಳ್ಳುತ್ತೇವೆಯೇ ನಾವು ? !

    ReplyDelete
  3. ಕಾಲದ ಕೆಳಗೆ ಬದಲಾವಣೆಯ ವಾಸ

    ReplyDelete
  4. ಮಳೆಯೇನೋ ಚಂದವೇ! ಆದರೆ ನಗರದ ಮಳೆ ಹಾಹಾಕಾರವನ್ನೇ ಎಬ್ಬಿಸಬಲ್ಲದು. ತಮ್ಮ ಅನೇಕ ಕವನಗಳಂತೆ ಈ ಕವನವೂ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ!

    ReplyDelete
  5. ಮನೆಗೊ೦ದಿಷ್ಟು ಜಾಗ ಬಿಟ್ಟರಲ್ಲವೇ ಭೂಮಿಗೆ ನೀರಿಳಿಯಲು!

    ReplyDelete
  6. ನಗರದ ಮಳೆಯ ಭಾವಗಳು ಹನಿಯಾಗಿ ಹರಿದ ರೀತಿ ಬಹಳ ಚೆನ್ನಾಗಿದೆ ಪಲವಳ್ಳಿ ಸರ್,,,,,

    ReplyDelete
  7. Nice lines....as usual sooooooper...😊

    ReplyDelete
  8. Vaastavavanna samarthavaagi hiDidiTTiruva kavite.. :) iLiyagoDavoo haniyanoo... hoddukoMDiruva aaDambaravanna tegedare maatra hani edeyaaLakkiLiyalu saadhya alva :)

    ReplyDelete
  9. Hi BP Ji,
    Its a rainy way - message well presented..... sadhyakke ee kavithe oduvaagalu jOru maLe beeLthide horage....

    ReplyDelete
  10. after rain ....
    nothing has happend since may 17 .... :-)

    ReplyDelete
  11. ಮಳೆಯ ರೌದ್ರಾವತಾರ ಹಾಗೂ ನಗರ ಪ್ರದೇಶಗಳ ಕರಾಳ ರೂಪದ ನೋಟವನ್ನು ಬಲು ಮನೋಜ್ಞವಾಗಿ ಕಟ್ಟಿದ್ದೀರಾ .. ಸೂಪರ್ ಸರ್ ಜೀ .. :)

    ReplyDelete