Friday, April 24, 2015

ರೋಗ ನಿರೋಧಕ...

ತುಪಾಕಿ ಪಿರಂಗಿ ಫಾಸಿಗಳು ಬೇಕಿಲ್ಲೀಗ
ಚುಚ್ವು ಮುದ್ದುಗಳೀಗವು ಮದ್ದು ಗುಂಡು

ನಾಟಿ ಅಯುರ್ವೇದಕೆ ಒಗ್ಗಿದ್ದ ಗಟ್ಟಿಯಾಳು
ಬಂಡವಾಳಿಶಾಹಿ ರಕ್ಕಸ ಮನಸ್ವೀ
ಕಂಪನಿಗಳ ಪಿತೂರಿಯ ಫಲಕೆ ಅಡಿಯಾಳು

ಕಣ್ಮುಚ್ಚಿ ಸೇವಿಸಿದ ರೋಗ ನಿರೋಧಕಗಳು
ಕಾಯವವು ಸ್ವಾಸ್ತ್ಯವನು ಉಲ್ಭಣಿಸುತಲಿದೆ
ಕೇಳಿ ಕಂಡರಿಯದ ತಲೆಮಾರಲಿರದ ರೋಗ,
ದೇಶವೀಗಿದು ಮಧುಮೇಹ ರಾಜಧಾನಿ!

ಬಡವನಿಗೆ ಕೈಗೆಟುಕದು ಔಷಧಿಗಳ ಬೆಲೆ
ಜೀವರಕ್ಷಕವಿಲ್ಲ ಸರ್ಕಾರಿ ದವಾಖಾನೆಯಲೇ,
ವೈದ್ಯರ ಬಳಿ ರಾಮಬಾಣಗಳ ಬತ್ತಳಿಕೆಯಿದೆ
ನೂರಾರು ರೂಪಾಯಿ ತೆತ್ತಲಂಜಿಯು ಜುಗ್ಗ
ಅಂಗಡಿಯವನ ಬಳಿ ಗೋಗರೆದ ಮಾತ್ರೆಗೆ

ಸ್ವಯಂ ಚಿಕಿತ್ಸೆಯು ಆತ್ಮಹತ್ಯಗೆ ಸಮವು
ಉಪರೋಗಗಳ ಸರಮಾಲೆಯೇ ಅರವುಗೇಡಿ!
ಹೀಗೆ ನುಂಗಿದರಗೋ ನೋವು ಮಂಗಮಾಯ
ಮತ್ತೆ ನಾಳೆಗೆ ಹಠ ಮಾಡುತ್ತದನೆ ಒಳ ಮಗು,
ಸರಾಗ ಉಸಿರಾಟದ ಗುಳಿಗೆಯಿಂದ ಎದೆ ಉರಿ
ಅದಕುಪಚಾರವು ಮಲೋತ್ಕರ್ಷಕೆ ರಹದಾರಿ

ವಿದೇಶೀ ಕಂಪನಿಗಳಿಗಿದು ಸಂತೆ ಮೈದಾನ
ಈ ನೆಲಕೆ ಸುರಿಯುವವು ಅಲ್ಲಿ ಉಗಿದಟ್ಟಿದ್ದನ್ನ,
ವಿಷವರೆದು ಕುಡಿಸುತ್ತಿವೆ ಪೂತನಿ ಸಂತಾನ
ಭಾರತವೆಂಬುದೀಗ ಸಹಸ್ರ ರೋಗಗಳ ತಾಣ,
ರೂಡಿಯಾಗಿದೆ ನುಂಗಿ ನುಂಗಿ ಪ್ರತಿಜೀವಕ
ಒಳಗೇ ಟೊಳ್ಳು ಮಾಡಿತಿವೆ ಹಿಂಡುತ್ತ ಜೀವ
ಅಮೃತವಾಗಬೇಕಾದ್ದು ಪ್ರಾಪ್ತ ಹಾಲಾಹಲ

ಅಕಾಲ ಮೈನೆರೆತ ಬಾಲನೆರೆ ಬೊಕ್ಕತಲೆ ಈಗ
ಅಷ್ಟಾವಕ್ರ ಪೀಳಿಗೆಯಿದು ಅತೀ ಸೇವನೆಯಿಂದ,
ಮನೋಧೈರ್ಯವೇ ಕಳಕೊಂಡಿದೆ ಜನಾಂಗ
ಚಿಕ್ಕ ಹುಣ್ಣಿಗೂ ಹುಡುಕ ತೊಡಗುತ್ತೆ ಮುಲಾಮ!


(ಚಿತ್ರ ಕೃಪೆ : ಅಂತರ್ಜಾಲ)

________________
ಪ್ರತಿಜೀವಕ, ರೋಗ ನಿರೋಧಕ = Antibiotics

13 comments:

 1. Sooper sir.....nimma kavanagalu tumbaa arthagharbhita..!!

  ReplyDelete
 2. ಯಮಲೋಕದಲ್ಲಿ ಜನಸಂಖ್ಯೆ ಅಧಿಕವಾಗಿ ಮಿತಿಗಿಂತ ಹೆಚ್ಚಾದವರನ್ನು ಭುವಿಗೆ ಅದರಲ್ಲೂ ಭಾರತಕ್ಕೆ ಡಾಕ್ಟರ್ ಗಳ ರೂಪದಲ್ಲಿ ಕಳುಹಿಸಿದ್ದಾರಂತೆ. ಒಮ್ಮೆ ಅವರ ಕೈಗೆ ಸಿಕ್ಕರೆ ಸಾಕು ನೇರ ನರಕಕ್ಕೆ ದಾರಿ. ಚೆನ್ನಾಗಿದೆ ವಿಡಂಬನಾತ್ಮಕ ಕವನ. ಆದರೆ ಆ ಪೂತನೆಯನ್ನು ಇಲ್ಲಿ ತಂದದ್ದು ಏಕೋ ಸ್ವಲ್ಪ ಕಸಿವಿಸಿ. ಪಾಪ ಪೂತನೆ. ಅವಳಿಗೊಂದು ಕೆಟ್ಟ ಹೆಸರು, ಈ ದುಷ್ಟ ಜನರನ್ನು ಬಣ್ಣಿಸಲು ಅವಳ ಹೆಸರ ಉಪಯೋಗ !!!!!!!!!!!

  ReplyDelete
  Replies
  1. ಪಾಪ ಮಾಡಿದವರು ನರಕಕ್ಕೆ ಹೋಗುತ್ತಾರೆ. ಅದರಲ್ಲಿ ವೈದ್ಯರ ಕೈವಾಡವೇನು?

   Delete
  2. ನಿಜ ನಿಜ...
   ವೈದ್ಯೋ ನಾರಾಯಣೋ ಹರಿಃ

   Delete
 3. ವಿದೇಶಿ ಕಂಪನಿಗಳಿಂದಾಗಿ ಭಾರತದಲ್ಲಿ ಪ್ರತಿಜೀವಕಗಳ ಬೆಲೆ ಸಾಮಾನ್ಯರ ಕೈಗೆ ಎಟುಕದಂತಾಗಿದೆ. ಈ ಘಾತುಕ ಪರಿಸ್ಥಿತಿಯನ್ನು ಮನಕ್ಕೆ ನಾಟುವಂತೆ (!) ಕವನಿಸಿದ್ದೀರಿ!

  ReplyDelete
 4. ವೈದ್ಯಕೀಯ ಪ್ರಪಂಚದ ದರ್ಶನ

  ReplyDelete
 5. ಮೈ ಬಗ್ಗಿ ದುಡಿಯುವ ಕೆಲಸಕ್ಕೆ ವಿರಾಮ ಕೊಟ್ಟು, ಸಿಕ್ಕದ್ದು ತಿಂದು, ಮೈಗೆಡಿಸಿಕೊಂಡು ಗಣಕಯಂತ್ರದ ಮುಂದೆ ಕುಳಿತು ಮಾತ್ರೆಗಳನ್ನೇ ಹುರಿಗಾಳಿನಂತೆ ತಿನ್ನುವವರ ಜೀವನಕ್ಕೊಂದು ಕೈಗನ್ನಡಿ ಈ ಕವಿತೆ.!

  ReplyDelete
 6. ಕಡಿಮೆ ಬೆಲೆಗೆ ಜನರಿಕ್ ಮಾತ್ರೆಗಳು ಸಿಗುತ್ತವೆ. ವೈದ್ಯರುಗಳಿಗೆ ಅವುಗಳ ಬಗ್ಗೆ ಗೊತ್ತಿಲ್ಲ!!!

  ReplyDelete
 7. ಮರನೇವಾಲ ಕೋಯಿ ಜಿಂದಗಿ ಚಾಹಥಾಹೋ ಜೈಸೆ ಎನ್ನುವ ಕುರ್ಬಾನಿ ಹಾಡಿನಂತೆ.. ಪ್ರತಿ ಜೀವಿಗೂ ಬದುಕಬೇಕು ಎನ್ನುವ ಛಲ ಈ ವೈದ್ಯಕೀಯ ಜಗತ್ತಿನಲ್ಲಿ ತರಹಾವರಿ ಗುಳಿಗೆಗಳು ಹುಟ್ಟು ಕೊಂಡಿವೆ. ಎಲ್ಲಾ ಗುಳಿಗೆಗಳು ರೋಗವನ್ನು ಗುಣಪಡಿಸದಿದ್ದರೂ ರೋಗದ ಪರಿಣಾಮ ಕಡಿಮೆ ಮಾಡುವುದು ಸುಳ್ಳಲ್ಲ. ನಮಗೆ ಬೇಡದ್ದು ಇತರರಿಗೂ ಬೇಡ ಎನ್ನುವ ಈ ಬಹುರಾಷ್ಟ್ರೀಯ ಸಂಸ್ಥೆಗಳ ಇಬ್ಬಗೆ ನೀತಿ ಇದಕ್ಕೆ ಮಾರಕವಾಗಿದೆ.

  ತಮ್ಮ ಅಭಿಪ್ರಾಯವನ್ನು ಬಲವಂತವಾಗಿ ಹೇರಿ ಒಳ್ಳೆ ಗುಳಿಗೆಗಳನ್ನು ಕೂಡ ಅನುಮಾನ ದೃಷ್ಟಿಯಿಂದ ನೋಡುವಂತೆ ಮಾಡಿರುವುದು ಈ ದೊಡ್ಡಣ್ಣ ದೇಶಗಳ ಉಡುಗೊರೆ

  ಸುಂದರವಾದ ವಿಷಯ.. ಅಷ್ಟೇ ಪರಿಣಾಮಕಾರಿ ನಿಮ್ಮ ಕವಿತಾ ಪದಗಳ ಸಾಲು ಸೂಪರ್ ಬದರಿ ಸರ್

  ReplyDelete
 8. ವಿಡಂಬನೆ ಅರ್ಥವತ್ತಾಗಿದೆ.

  ReplyDelete
 9. ಔಷಧಿಗಳಿಗೆ ಔಷಧಿ, ನಿಮ್ಮ ಈ ಕವನದ ಚುಚ್ಚುಮದ್ದು ಪರಿಣಾಮಕಾರಿಯಾಗಿದೆ.

  ReplyDelete
 10. ವೈದ್ಯೋ ನಾರಾಯಣೋ . . ಯಮಃ

  ReplyDelete
 11. ವೈದ್ಯೋ ನಾರಾಯಣೋ . . ಯಮಃ

  ReplyDelete