Sunday, February 1, 2015

ಅಪಾಯಕಾರಿಯ ಸಂಗ!

ನಿರುಪದ್ರವಿ ಹುಳುವೊಂದು
ಉಟ್ಟ ಶರಾಯಿಯ ಮೇಲೆ
ತೆವಳಲಾರದೇ ತೆವಳುತಿದೆ,
ಏರುವುದೋ ಇಳಿಯುವುದೋ
ಅದಕದೇ ಮೂಲ ಪ್ರಶ್ನೆ!

ಪಾಪವದಕೀಗ ಯಮಗಂಡ
ನಂಬಲನರ್ಹ ಜೀವಿಯ ಸಂಗ,
ಅಂಡ ಪಿಂಡ ಬ್ರಹ್ಮಾಡದೊಳೆಲ್ಲ
ನರನಿಗಿಂತಲೂ ಕ್ರೂರಿ ಯಾರಿಲ್ಲ
ನರಹರಿ ಅಂಕೆ ಮೀರಿದ ಹುಂಬ

ಹುಲಿಯ ಹಣೆಗೂ ಬಂದೂಕಿಟ್ಟ
ದಂತವನು ಕಿತ್ತು ಸಾಯಬಡಿದ
ಹಾರಗೊಡದೆಯೇ ಪಂಜರದಲಿಟ್ಟ
ಸೋಸಿ ಉಸಿರುಗಟ್ಟಿಸಿಯೇ ತಿಂದ
ತನ್ನವರನೇ ಕೊಂದ ನರಹಂತಕ!

ಗುಲಗಂಜಿಯಷ್ಟದರ ಹೊಟ್ಟೆ ಪಥ್ಯ
ಅರಗುವವರೆಗೂ ಮತ್ತೆ ಬೇಟೆಯಿಲ್ಲ,
ಮನುಜನು ಹಾಗಲ್ಲ ಸರ್ವ ಭಕ್ಷಕ!
ಹೊಸಕುವನೋ ಮೆಲ್ಲುವನೋ
ಬಲ್ಲವನ್ಯಾರದರ ಹಣೆ ಬರಹ?


(ಚಿತ್ರ ಕೃಪೆ: ಅಂತರ್ಜಾಲ)

45 comments:

 1. ಮನುಜನ ಕ್ರೂರತೆಯ ಚಿತ್ರಣ.. ಸುಂದರವಾಗಿದೆ..

  ReplyDelete
  Replies
  1. ನನ್ನ ಬ್ಲಾಗಿಗೆ ಬಂದು ಕವನವನ್ನು ಓದಿದ ತಮಗೆ ಶರಣು ಸಾರ್. :-)

   Delete
 2. ನಾಗಲಕ್ಷ್ಮೀ ಕಡೂರುFebruary 1, 2015 at 1:42 PM

  ಹೌದು. ಪ್ರಾಣಿ ಪಕ್ಷಿಗಳು ಆಹಾರದ ಸರಪಳಿಯಂತೆ ಕೊಂದು ತಿಂದರೂ ಆ ಕ್ಷಣದ ಹಸಿವೆ ತೀರಿಕೆಗಾಗಿ., ಅಲ್ಪತೃಪ್ತರು. ಆದರೆ ಈ ಆತಂಕಕಾರಿ, ಅಹಂಕಾರಿಯೂ ಮನುಜನಿಗೆ ತೀರದ ದಾಹ ತೃಷೆ ಇಂದಿಗಷ್ಠೇ ಅಲ್ಲ, ನಾಳೆ ತಿಂಗಳು ವರುಷ ಕೊನೆಗೆ ಜೀವಿತಾವಧಿಗೂ ಬೇಕೆನುವಷ್ಟು! ತನ್ನ ಸ್ವಾರ್ಥಕ್ಕಾಗಿ ಯಾರನ್ನೂ ಉಳಿಸಲಾರ ಬೇಳೆಸಲಾರ...

  ReplyDelete
  Replies
  1. ಮನುಜನ ಕ್ರೂರತೆಯ ಪರಮಾವದಿಗೆ ಬಲಿಯಾಗಿ ಹೋದ ಪ್ರಬೇಧಗಳೆಷ್ಟೋ! ಅವುಗಳ ಆತ್ಮಶಾಂತಿಗೆ ಈ ಕವನವು ಅಶೃಪೂರ್ಣ ಅರ್ಪಣೆ... :-(

   Delete
 3. ಸ್ವಾರ್ಥವನ್ನು ಬಿಂಬಿಸುವ ಕವಿತೆ ಚೆನ್ನಾಗಿ ಮೂಡಿಬಂದಿದೆ ಆದರೆ ಚಿತ್ರ ನೋಡಲಾಗುತ್ತಿಲ್ಲ ಸರ್ :(

  ReplyDelete
  Replies
  1. ಮನುಜನನ್ನೇ ಕೊಲ್ಲುವ ಅವನ ರಾಕ್ಷಸ ಹಸಿವಿಗೆ ಈ ಕವನದ ಮೂಲಕ ಧಿಕ್ಕಾರವಿದೆ. :-(

   Delete
 4. ಮನುಜನು ಹಾಗಲ್ಲ ಸರ್ವ ಭಕ್ಷಕ!
  ಹೊಸಕುವನೋ ಮೆಲ್ಲುವನೋ
  ಬಲ್ಲವನ್ಯಾರವನ ಹಣೆ ಬರಹ?
  ಅತ್ಯುತ್ತಮ ಸಾಲುಗಳು.

  ReplyDelete
  Replies
  1. ಧನ್ಯವಾದಗಳು ಸಾರ್ :-)

   Delete
 5. ಅತ್ಯುತ್ತಮ ಕವಿತೆ.
  ಪ್ರಸಾದ್.

  ReplyDelete
  Replies
  1. ಧನ್ಯವಾದಗಳು ಪ್ರಸಾದ್ ಸಾರ್.

   Delete
 6. ಸರ್ವಂ ಭಕ್ಷಯಾಮಿ ಸಾಗರಂ ಭಕ್ಷಯಾಮಿ ಎನ್ನುವುದು ಮಾನವನ ದುರಾಸೆಗೆ ದ್ಯೋತಕ. ಹಸುವಿಗೆ ಸೊಪ್ಪು, ಸೊದೆ, ಹುಲ್ಲು,- ಹುಲಿಗೆ ಹುಲ್ಲೆ etc ಹೀಗೆ ಪ್ರತಿಯೊಂದಕ್ಕೂ ನಿಗದಿತ. ಮಾನವನ ಹಸಿವನ್ನು ಮತ್ತು ಚಪಲವನ್ನು ಇಂಗಿಸಲು ಜಗದ ಎಲ್ಲಕ್ಕೂ ಸಾಧ್ಯವಿಲ್ಲ . ಸುಂದರ ಕವಿತೆ

  ReplyDelete
  Replies
  1. ಹೌದಲ್ಲವೇ ಗುರುವರ್ಯ! ಮನುಜ ಕಬಳಿಸದ್ದು ಬಹುಶಃ ಬ್ರಹ್ಮಾಂಡದಲೇ ಇಲ್ಲ ಅಲ್ಲವೇ? :-(

   ನನ್ನ ಬ್ಲಾಗಿಗೆ ಬಂದು ಕವನವನ್ನು ಓದಿದ ತಮಗೆ ನಮನಗಳು ಸಾರ್. :-)

   Delete
 7. ಕವನ ಬುದ್ಧಿ ಕಲಕಿದರೆ ಚಿತ್ರ ಮನಸು ಕಲಕುತ್ತಿದೆ ಗುರುವೇ, ಚಿತ್ರ ತೆಗೆಯಿರಿ. ಪ್ರಾಣಿ ಹುಚ್ಚು ಹಿಡಿಯದೇ ಇದ್ದರೆ ಅನ್ಯರ ಕಾಡದು...ಆದರೆ ಮಾನವ ಹುಚ್ಚು ಇಲ್ಲದೆಯೇ ಹೀಗೆ,

  ReplyDelete
  Replies
  1. ಚಿತ್ರವನ್ನು ಬದಲಾಯಿಸಿ ಹಾಕಿದ್ದೇನೆ ಅಜಾದ್ ಸಾರ್.
   ಮನುಷ್ಯನ ಹಪಹಪಿಯು ಅಸಹ್ಯ ಹುಟ್ಟಿಸುತ್ತದೆ.
   ಪ್ರತಿ ಪ್ರಬೇಧಕೂ ಅದರದೇ ಭೋಜನ ಕ್ರಮ. ಆದರೆ, ಮನುಜನಿಗೆ ಅದು ಸಸ್ಯಾಹಾರ, ಮಾಂಸಾಹಾರ, ಹೆಣ್ಣು, ಹೊನ್ನು ಅಥವಾ ಮಣ್ಣಾದರೂ ಆದೀತು! ಛೀ..

   Delete
 8. ಅಂಕೆ ಮೀರಿದ ಮನುಷ್ಯನ ಕ್ರೂರತೆಗೆ ಕನ್ನಡಿ ಹಿಡಿದಂತಿರುವ ತಮ್ಮ ಕವಿತೆ ತುಂಬಾ ಚೆನ್ನಾಗಿದೆ.

  ReplyDelete
  Replies
  1. ಮಂಜುನಾಥ್ ಸಾರ್, ಸ್ವಾರ್ಥಿ ಮನುಜನ ಹಸಿವಿನ ಅಗಾಧತೆಗೆ ಹೀಗೋಂದು ಹಿಡಿ ಶಾಪ. :-(

   Delete
 9. ಕ್ರೂರ ಮನುಷ್ಯನ ಭಯಾನಕತೆಯನ್ನು ಅನಾವರಣಗೊಳಿಸಿದ ಹೃದಯ ವಿದ್ರಾವಕ ಕವಿತೆ

  ReplyDelete
  Replies
  1. ಅಂತೂ ಪ್ರೀತಿಯ ಬನವಾಸಿಯವರು ಬ್ಲಾಗಿಗೆ ಬಂದಾಯಿತು. ಈ ವಾರದಲ್ಲಿ ಅವರ ಬ್ಲಾಗಲೂ ಹೊಸ ಪೋಸ್ಟ್ ಬಂದರೆ ಹಮ್ ಭೀ ಖುಷ್.. :-)

   Delete
 10. ಒಂದು ನಿರುಪದ್ರವಿ ಹುಳದ ಮೂಲಕ ಒಂದು ಸತ್ಯವನ್ನು ಅರುಹಿದ್ದೀರಿ. ಇದು ಸಾಹಿತ್ಯದ ರೀತಿ!

  ReplyDelete
  Replies
  1. ಅನಂತ ಧನ್ಯವಾದಗಳು ಸಾರ್.

   Delete
 11. ಬಹಳ ಚೆನ್ನಾಗಿದೆ

  ReplyDelete
  Replies
  1. ನನ್ನ ಬ್ಲಾಗಿಗೆ ಬಂದು ಕವನವನ್ನು ಓದಿದ ತಮಗೆ ನಮನಗಳು ಮೇಡಂ. :-)

   Delete
 12. ಉತ್ತಮ ಕವನ.
  ಪ್ರಾಣಿಹಿಂಸೆ ಮಹಾಪಾಪ ಅನ್ನೋದು ಬರೀ ಪುಸ್ತಕಗಳಿಗಷ್ಟೆ ಸೀಮಿತವಾಗಿರುವ ಇಂದು ನಿರುಪದ್ರವಿ ಹುಳ ಎಲ್ಲೇ ತೆವಳಲೂ ಯೋಚಿಸಬೇಕು ಬಿಡಿ! ಹುಡುಕಿಕೊಂಡು ಹೋಗಿ ಹೊಸಕುವ ಮನುಷ್ಯ ಪ್ರಾಣಿಗಳಿಗೇನೂ ಕಮ್ಮಿಯಿಲ್ಲ!

  ReplyDelete
  Replies
  1. ಸುಮ್ಮನೆ ಹೊಸಕುವನು ಬರೀ ಮನುಜನಲ್ಲವೇ! ಅವನಿಗೆ ಈ ಕವನದ ಮೂಲಕ ಛೀಮಾರೀ! :-(

   ನನ್ನ ಬ್ಲಾಗಿಗೆ ಬಂದು ಕವನವನ್ನು ಓದಿದ ತಮಗೆ ನಮನಗಳು ಮೇಡಂ. :-)

   Delete
 13. ಅಬ್ಬಾ ... ಈ ಮಾನವನ ದಾನವತ್ವದ ಕವನ ಓದಿ 'ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ' ಹಾಡು ನೆನಪಾಯ್ತು .... ಒಳ್ಳೆಯ ಕವನ..!

  ReplyDelete
  Replies
  1. ತಾವು ಉಲ್ಲೇಖಿಸಿರುವ ಚಿತ್ರಗೀತೆ ನನಗೂ ತುಂಬ ಇಷ್ಟದ್ದು. ಮಾರ್ಮಿಕವಾದ ಸಾಹಿತ್ಯ.

   Delete
 14. ಪ್ರಕೃತಿ ಮನುಷ್ಯನಿಗೆ ವಿಶೇಷವಾದ ಅಧಿಕಾರ ನೀಡಿದೆ...ಅದು power of choice ...ತನಗೆ ಬೇಕಾದ್ದನ್ನು ಆಯ್ದುಕೊಳ್ಳುವ ಆ ಸ್ವಾತಂತ್ರ್ಯವನ್ನು ಕೊಟ್ಟಿದ್ದು ಮನುಜನ ಉನ್ನತ ವಿಕಸನಕ್ಕೆ.. ಆದರೆ ಇಂದು ಅದೇ ಮನುಜ ಹಾಲು ಕುಡಿದ ಕೆಚ್ಚಲಿಗೆ ಚೂರಿಹಾಕಿ ತನ್ನ ಸಂತತಿಗೆ ತಾನೇ ಕಂಟಕ ಪ್ರಾಯನಾಗಿದ್ದಾನೆ. ಈ ವಿಶೇಷ ಅಧಿಕಾರ ಇದ್ದರೂ ಪ್ರಕೃತಿಯ ಎದುರು ನಿಲ್ಲುವ ಆ ಅಧಿಕಾರ ಮಾನವನನ್ನು ಸೇರಿಸಿ ಯಾವ ಜೀವ ಸಂಕುಲಕ್ಕೂ ಇಲ್ಲ... ಇದೇ ಅಧಿಕಾರದ ಮದ ಅವನನ್ನು ರಾಕ್ಷಸತ್ವಕ್ಕೆ ದೂಡಿದೆ. .. ಈ ಹಾಳು ಮನುಜನಿಗೆ ಅಧಿಕಾರದ ಮದವಿಳಿಸಲು ಆ ಪ್ರಕೃತಿಯಿಂದಲೇ ಸಾಧ್ಯ.. ಅದು ಪ್ರಕೃತಿಗೆ ಕ್ಷಣ ಮಾತ್ರದ ಕೆಲಸ ..ಆದರೆ ಅದು ಅರ್ಥ ಆದಾಗ ಮಾತ್ರ ಮನುಜನ ಉಳಿವು.... ಇಲ್ಲ ಅಳಿವು
  ಕಣ್ತೆರೆಸುವ ಕವನ ಸರ್

  ReplyDelete
  Replies
  1. ತಾವು ಉಲ್ಲೇಖಿಸಿದ ಎಲ್ಲ ವಿಚಾರಗಳೂ ಸಹ ಪ್ರಬುದ್ಧವಾಗಿವೆ ಸಾರ್.
   ನರಾಧಮನಿಗೆ ಸಿಕ್ಕ ಈ ಆಯ್ಕೆಯ ಸ್ವಾತಂತ್ರ್ಯವೇ ಪರಿಸರಕ್ಕೆ ಮಾರಕವಾಗಿದೆ, ನಿಜ.
   ತಾವು ಪ್ರೀತಿಯಿಂದ ಕೊಟ್ಟ ಅಭಿಪ್ರಾಯಕ್ಕೆ ನನ್ನ ಶರಣುಗಳು. :-)

   Delete
 15. ಮಾನವನ ಹಸಿವು ಹಲವಾರು ಆಯಾಮಗಳನ್ನು ಹೊಂದಿದೆ. ಪ್ರಕೃತಿಯ ಸಕಲ ಜೀವಿಗಳೂ ಕೇವಲ ಉದರ ಪೋಷಣೆಗೆ ಆದ್ಯತೆಯಿತ್ತರೆ ಮಾನವನ ಸಂಗ್ರಹಣಾ ಬುದ್ಧಿ ಏನೇಲ್ಲಾ ಅಕಾರ್ಯಗಳನ್ನು ಮಾಡಿಸುತ್ತದೆ ಎನ್ನುವುದು ಅತ್ಯಂತ ವಿಡಂಬನಾತ್ಮಕವಾಗಿ ಮೂಡಿಬಂದಿದೆ...
  ಅಭಿನಂದನೆಗಳು ಸರ್....

  ReplyDelete
  Replies
  1. ಮನುಜನ ಏಕ ಚಕ್ರಾಧಿಪತ್ಯದ ಮನಸ್ಥಿತಿ ಜಗತ್ತಿನ ಸ್ವಾಸ್ತ್ಯ ಸದಾ ಕೆಡುಸುತ್ತಿದೆ.
   ತಮ್ಮ ಮಾತುಗಳೆಲ್ಲವೂ ಸರ್ವಕಾಲಿಕವಾಗಿದೆ.

   Delete
 16. manujakulakke serida sreshtathege mereyabeko, manushyathvakke arthaheenaraagi badukuttideve endu marugabeko... vichitra BP ji, kavana manakalakide.

  ReplyDelete
  Replies
  1. ನಿಜವಾದ ಮಾತು ಮೇಡಂ, ಮೆರೆಯಬೇಕೋ ಮರುಗಬೇಕೋ ಎಂಬುದೇ ಅರ್ಥವಾಗದ ವಿಚಾರ! :-(

   ಇದೇ ಖುಷಿಯಲ್ಲಿ, ಈ ವಾರದಲ್ಲಿ ಬಿಳಿ ಮುಗಿಲು ಬ್ಲಾಗಲೂ ಹೊಸ ಪೋಸ್ಟ್ ಬಂದರೆ ಅಭಿಮಾನಿಗಳಿಗೂ ಅಮಿತಾನಂದವು... :-)

   Delete
 17. ಮನುಷ್ಯನಿಗಿಂತ ಕ್ರೂರ ಪ್ರಾಣಿ ಇನ್ನೊಂದು ಇಲ್ಲಾ ಅನ್ನುವುದು ಶತಸಿದ್ದ. ಉದಾಹರಣಯೆಗಳೂ ಬಹಳ ಇವೆ. ನಿಮ್ಮ ಆಲೋಚನೆಗಳು ಹಾಗು ನಿಮ್ಮ ಕವನಗಳು ವಿಭಿನ್ನವಾಗಿರುತ್ತವೆ.

  ReplyDelete
  Replies
  1. ನನ್ನ ಕವನಗಳನ್ನು ತಾವೆಲ್ಲರೂ ಓದುತ್ತೀರೆಂಬ ಅಮಿತಾಸೆಯಿಂದಲೇ ನಾನೂ ಬರೆಯುತ್ತೇನೆ. :-)

   ಮನುಷ್ಯನ ದುರಾಸೆಯಿಂದ ಭೂಮಿ ಹೊರಲಾರದೆ ಹೊರುತ್ತಿದೆ ಅವನ ಪಾಪಗಳನು. :-(

   Delete
 18. ಹೌದು ನಿಜ ಈ ಭೂ ಪರಿಸರದ ಮೇಲೆ ಅತ್ಯಾಚಾರ ಹೆಚ್ಚಾಗ್ತಾ ಇದೆ...!

  ReplyDelete
  Replies
  1. ತಾವು ಹೇಳುವಂತೆ 'ಭೂ ಪರಿಸರದ ಮೇಲೆ ಅತ್ಯಾಚಾರ ಹೆಚ್ಚಾಗ್ತಾ ಇದೆ' ಮತ್ತದು ಮನುಜನಿಂದಲೇ ನಡೆಯುತಿರುವುದು ಖಂಡನಾರ್ಹ ಅಲ್ಲವೇ ಸಾರ್?

   Delete
 19. ಚನ್ನಾಗಿದೆ...ಹೌದು ಮನುಷ್ಯನಂತ ಕೆಟ್ಟ ಪ್ರಾಣಿ ಬೇರೆ ಇಲ್ಲ....

  ReplyDelete
  Replies
  1. ಮನುಷ್ಯನ ಸರ್ವಾಧಿಕಾರೀ ಧೋರಣೆಗೆ ಪ್ರಕೃತಿಯೇ ಪಾಠ ಕಲಿಸಬೇಕೇನೋ ಅಲ್ಲವೇ?

   ತಮ್ಮ ಬ್ಲಾಗನ್ನು ಮರೆತಿದ್ದೀರೋ ಹೇಗೆ!

   Delete
 20. ಅಂಡ ಪಿಂಡ ಬ್ರಹ್ಮಾಡದೊಳೆಲ್ಲ
  ನರನಿಗಿಂತಲೂ ಕ್ರೂರಿ ಯಾರಿಲ್ಲ !! .. ಹೌದು !

  ReplyDelete
  Replies
  1. ಧನ್ಯವಾದಗಳು ಗೆಳಯ. :-)

   Delete
 21. ಅದೇನೊ ಚಿತ್ರ ನೋಡಿದಾಗಲೆಲ್ಲ , ಇಲ್ಲಿ ಬಂದು ಪ್ರತಿಕ್ರಿಯಿಸಲು ಮನ ಹಿಂಜರಿಯುತ್ತಿತ್ತು, ಈ ದಿನ ಹೇಗಾದರು ಆಗಲಿ ಎಂದು ಒಳ ಬಂದೆ, ಇಲ್ಲಿ ಬೇರೆಯದೇ ಆದ ಚಿತ್ರವಿದೆ.
  ನರನಿಗಿಂತ ಕ್ರೂರಿ ಯಾರು
  ಇದ್ದಾರೆ ಖಂಡೀತ..
  .
  .
  ,
  ಮತ್ತೊಬ್ಬ ನರ

  ReplyDelete
  Replies
  1. ಮತ್ತೊಬ್ಬ ನರ exactly, ತಿನ್ನುವುದು ಎಂಬುದು ಭೋಗ ಮತ್ತು ದಬ್ಬಾಳಿಕೆಗೂ ಅನ್ವಯಿಸಿ ನೋಡಿದಾಗ ನಿಮ್ಮ ಮಾತು ಸರ್ವಕಾಲೀನ. :-(

   Delete
 22. ಮನುಜನ ಗುಣ ಭಸ್ಮಾಸುರನ ಹಾಗೆ.. ತನಗೆ ಸಿಕ್ಕ ವರವೇ ತನ್ನ ಅಂತ್ಯಕ್ಕೂ ಕಾರಣವಾಗುತ್ತದೆ.
  ದೌರ್ಜನ್ಯದ ಹೆಗ್ಗುರುತನ್ನು ಪದಗಳಲ್ಲಿ ಮೂಡಿಸಿ ಸವಿಯುವ ನಿಮ್ಮ ಜಾಣ್ಮೆಗೆ ಶರಣು.
  ಗಿರಿ ಕನ್ಯೆ ಚಿತ್ರದಲ್ಲಿ ಅಣ್ಣಾವ್ರು ಹಾಡಿದ ಹಾಗೆ "ಮಾನವನಾಸೆಗೆ ಕೊನೆಯೆಲ್ಲಿ.. ಕಾಣೋದೆಲ್ಲ ಬೇಕು ಎಂಬ ಛಲದಲ್ಲಿ ಯಾರನ್ನೂ ಪ್ರೀತಿಸನು ಮನದಲ್ಲಿ.. ಏನೊಂದು ಬಾಳಿಸನು ಜಗದಲ್ಲಿ"

  ಎಷ್ಟು ನಿಜ ಆ ಹಾಡು ಹಾಗು ನಿಮ್ಮ ಕವಿತೆ.. ಸೂಪರ್ ಬದರಿ ಸರ್

  ReplyDelete
  Replies
  1. ನನ್ನ ೫ ಕವನಗಳನ್ನು ಓದಿ ತಾವು ಬರೆದ ಕಮೆಂಟುಗಳೆಲ್ಲವೂ ಆಣಿಮುತ್ಯಗಳು. ತಡೆದು ಬಂದರೂ ಜಡಿದು ಬರುತ್ತಿದೆ ಅಭಿಪ್ರಾಯದ ಸ್ವಾತಿ ಮಳೆ. ಬರಲಿ... ಬರಲಿ. ಇನ್ನೂ...

   Delete