Sunday, January 25, 2015

ಸಕಾಲಿಕ ಬೆತ್ತಲೆ!

ಎಲೆಗಳಷ್ಟೂ ಉದುರಿದರು
ನಿರಾಭರಣ ಸುಂದರಿ ಕೊರಗಲಿಲ್ಲ

ಮುದಿ ಬಿದ್ದ ತರಗೆಲೆಗಳವು
ನೆಲಕುರುಳಿಯೂ ಸಾವಯವ
ಮಣ್ಣಲೊಂದಾಗೋ ಸಾರ್ಥಕ್ಯ,
ಅದರೊಳ ನುಸುಳಿ ಮಣ್ಮುಕ್ಕಿ
ಪಾಳಿ ಗುಂಜದೆ ಗಿಂಡಿ ಗಿಂಜದೆ
ಫಲವತ್ತನೇರಿಸು ಎರೆ ಹುಳ

ಮೂಳೆ ಮೂಲದ ಮಜ್ಜೆಯೂ
ಹಿಮಗಟ್ಟಿಸೋ ಚಳಿಯ ನಡುಕ
ಇದ್ದವರು ಹೊದ್ದರು ಬೆಚ್ಚಗೆ,
ನಟ್ಟಿರುಳ ಅಬ್ಬೇಪರಿಗಳಿಗೆಲ್ಲ
ಒದಗಿದ್ದು ಅವೇ ಬಿದ್ದೆಲೆ ಪುಳ್ಳೆ
ಬೆಂಕಿ ಕಾಯಿಸಲೊಂದು ರಾಶಿ

ಕೊಡವಿಕೊಂಡ ಮರ ನಿಗರ್ವಿ
ಇಚ್ಛಿಸದದು ಎಂದೂ ಎಳ್ಳಷ್ಟೂ
ಕೃಪಾ ಪಟ್ಟಿ, ನಾಮ ನಿರ್ದೇಶನ,
ಖಾಲಿ ಕೊಂಬೆ ರೆಂಬೆಗಳಗುಂಟ
ಚಿಗುರೊಡೆಯಲು ಕಾಯುತ್ತದು
ನಿಜವಾದ ಋತು ಕಾಲ ಮಾನ


(ಚಿತ್ರ 'ಕೃಪೆ' : ಅಂತರಜಾಲ)

44 comments:

 1. ಸುಪ್ತವಾಗಿ ಅಡಗಿರುವ ಪತ್ರೆಂಬೆಗಳ ಸಂಕೀಣರ್ ಗುಣಗಳ ಪರಿಚಯ... ಇಷ್ಟವಾಯಿತು ಅಣ್ಣ.

  ReplyDelete
  Replies
  1. ಪತ್ರೆಂಬೆ ಉತ್ತಮ ಪದ ಪ್ರಯೋಗ, ಬೇರೆಲ್ಲಾದರೂ ನಾನೂ ಈ ಪದ ಬಳಸುತ್ತೇನೆ. ಪ್ರೋತ್ಸಾಹಕ್ಕಾಗಿ ವಂದನೆಗಳು.

   Delete
 2. ಇಚ್ಛಿಸದದು ಎಂದೂ ಎಳ್ಳಷ್ಟೂ ! entha chendada varNane ಸಕಾಲಿಕ ಬೆತ್ತಲೆ! opt title
  very nice bro supa like

  ReplyDelete
  Replies
  1. ಅಕ್ಕ ಈ ಸಾಲು ಮುಖ್ಯವಾಗಿ ಎಲ್ಲ ಮಾತೃ ಹೃದಯಿ ಹೆಣ್ಣು ಮಕ್ಕಳಿಗೂ ಈ ಮೂಲಕ ನನ್ನ ಅರ್ಪಣೆ. ಒಲುಮೆ ಹೀಗೇ ಇರಲಿ.

   Delete
 3. Replies
  1. ಆದರೂ 'ಕೊಳಲು' ನಿಶ್ಯಬ್ಧವಾದರೆ ಹೇಗೆ ಬ್ಲಾಗೋತ್ತಮ! :-(

   Delete
 4. ಸೂಪರ್.. ಸೂಪರ್.. ಸೂಪರ್

  ReplyDelete
  Replies
  1. ನಿಮ್ಮ ಕವಿಗಳ ಶ್ರೇಷ್ಟತಮತೆಯನು ನಾನು ಸರಿಗಟ್ಟಬಲ್ಲೆನೇ ಭಟ್ಟರೇ!

   Delete
 5. ಕ್ರಿಯೆಯಿಂದ ಮತ್ತೊಬ್ಬರಿಗೆ ಉಪಯೋಗವಾದರೆ ಅದೆಷ್ಟು ಚೆಂದ. ಕೊರಗದೆ ಜೀವನ ಮಾಡು ಎನ್ನುತ್ತಿದೆ ಈ ನಿಮ್ಮ ಸಾಲುಗಳು. ತತ್ವೋಕ್ತಿ ಚೆನ್ನಾಗಿದೆ.

  ReplyDelete
  Replies
  1. ನಿಜವಾದ ಕವಿತೆ ಗ್ರಹಿಕೆಯು ತಮ್ಮ ಸಾಲುಗಳಲಿ ಮೂಡಿಬಂದಿದೆ.
   ಪ್ರೋತ್ಸಾಹ ನಿರಂತರವಾಗಿರಲಿ.

   Delete
 6. ಕೊಡವಿಕೊಂಡ ಮರ ನಿಗರ್ವಿ
  ಇಚ್ಛಿಸದದು ಎಂದೂ ಎಳ್ಳಷ್ಟೂ
  - ಇದಂತು ನಿಜ ಎಳ್ಳಷ್ಟೂ ಬಯಸದು ಈ ಪ್ರಕೃತಿಯ ಸಿರಿಯೇ ಹಾಗೆ. ಚೆಂದದ ಕವನ ಬದರಿ ಸರ್

  ReplyDelete
  Replies
  1. ಪ್ರಕೃತಿಗೂ ಮಾತೃ ಹೃದಯೀ ಹೆಣ್ಣಿಗೂ ಹೋಲಿಕೆ ಒಂದೇ ಅದೇ 'ಕೊಡುವುದು'. ಆದ್ದರಿಂದ ಅಂತಹ ಸ್ರೀ ಮೂರ್ತಿಗೂ, ಮರಗಳಿಗೂ ನಾನು ಚಿರ ಋಣಿ.
   ಸದಾ ಬೆನ್ನುತಟ್ಟುವ ತಮಗೆ ಶಾರದೆಯು ಹರಿಸುತಿರಲಿ.

   Delete
 7. ಪೂರಕ ಚಿತ್ರಗಳು...ಸು೦ದರ ಕವನ!

  ReplyDelete
  Replies
  1. ತಮ್ಮೊಲುಮೆ ಹೀಗೆಯೇ ಮುಂದುವರೆಯಲಿ...

   Delete
 8. Replies
  1. ಧನ್ಯವಾದಗಳು ಸಾರ್. :-)

   Delete
 9. ನಿಮ್ಮ ಈ ಹೊಸ ಕವನವನ್ನು ಓದಿ ಎಷ್ಟು ಸಂತೋಷವಾಯಿತು, ಗೊತ್ತೆ ಬದರಿ? ವಿಶಿಷ್ಟ್ಯಶೈಲಿಯ ನಿಮ್ಮ ಕವನಗಳನ್ನು ಓದುವುದೇ ಒಂದು ಸುಖ. ನಿಸರ್ಗಚಕ್ರವನ್ನು ಹಾಗು ಭೂಜೀವಿಸಂಬಂಧವನ್ನು ಕವಿಯ ಕಣ್ಣಿನಿಂದ ನೋಡಿ ವರ್ಣಿಸಿರುವ ಈ ನಿಮ್ಮ ಕವನಕ್ಕೆ ಹಾಗು ಕವಿಗೆ ಒಂದು ಸಲಾಮ್!

  ReplyDelete
  Replies
  1. ನಿಮ್ಮ ದಾರಿ ತೋರುವಿಕೆ ಮತ್ತು ಹುರಿದುಂಬಿಕೆ ಇಂದಲೇ ನನಗೂ ಹುರುಪೂ ಸಾರ್.

   Delete
 10. Prabhanjana Muthagi ಅವರ ಕವನದ ಕಮೆಂಟು:

  ಹಸಿರ ಕಣ್ಣಲಿ ತುಂಬಿ
  ಉಸಿರ ದೇಹದಿ ತುಂಬಿ
  ತುಸು ಮೌನದಲಿ ಅಳುತ್ತಿದೆ
  ಬೇಸರ ತೋರಿಸದೆ ಒಳಗೊಳಗೇ

  ಕಿತ್ತುರು ಪತ್ರಂಬೆಗಳನು
  ಚಿತ್ತದಲಿಲ್ಲ ನೋವುದೆಂದು
  ಕತ್ತುಹಿಸುಕಿ ಕೊಲ್ಲುವರು ದಿನ
  ಬೆತ್ತಲೆ ಮಾಡುತ ಬೀದಿಯೊಳಗೆ

  ಅರೆಬೆತ್ತಲಾದರೆ ಏನು
  ಕರೆದು ಎದೆಹಾಲು ನೀಡುವಳಂತೆ
  ಗಾರೆ ಊರ ತುಂಬಿದರೆ ಏನು
  ತರುವೆ ಹಸಿರು ಪ್ರಕೃತಿಯೊಳಗೆ
  ಅರಿತು ಉಳಿಸಿ ನವ ಪೀಳಿಗೆಗೆ

  ReplyDelete
  Replies
  1. ತಮ್ಮ ಕವನವಂತೂ ನನಗೆ ಸಮ್ಮಾನದಂತೆನಿಸಿತು. ಇನ್ನೊಂದು ಚರಣದ ಸಮೇತ ತಮ್ಮ ಬ್ಲಾಗಲ್ಲಿ ಪ್ರಕಟಿಸಿರಿ ಪ್ರಭಂಜನ.

   Delete
 11. Replies
  1. ಧನ್ಯವಾದಗಳು ಮೇಡಂ. :-)

   Delete
 12. ಏನು ಹೇಳಬೇಕೋ... ಮಾತುಗಳೇ ಒರಳುತ್ತಿಲ್ಲ, ಮಣ್ಣೊಳಗೆ ಹುಟ್ಟಿ ಮಣ್ಣಲ್ಲೇ ಮಿಳಿತವಾಗುವ ಪ್ರತಿ ಮರಕೂ ತನ್ನದೇ ಆದ ಧನ್ಯತೆಯ ಭಾವ...

  ReplyDelete
  Replies
  1. ಮತ್ತು ಮರವೆಂಬುದು ತನಗೇನೂ ಉಳಿಸಿಕೊಳ್ಳದೆ ಬರೀ ಮಕ್ಕಳಿಗೇ ಧಾರೆ ಎರೆಯುವ ತಾಯ್ತನದ ಸಂಕೇತವೂ ಹೌದಲ್ಲವೇ? ಸಾರ್..

   Delete
 13. ಮೊದಲನೆಯ ಸಾಲಿನಲ್ಲೇ ಮನಗೆದ್ದಿತು ನಿನ್ನ ಕವಿತೆ ತಮ್ಮ..
  ಸೋತು ಶರಣಾಗದೆ, ಕಡಿದರೂ ಚಿಗುರುತ್ತ, ಮೂಕ ವೇದನೆ ಸಹಿಸುತ್ತ, ನಸುನಗುವ ನಿಸ್ವಾರ್ಥಿ ಮರದ ಬಗ್ಗೆ ನಿನ್ನ ಕಳಕಳಿಯ ಝಲಕು ಕಂಡೆ ತಮ್ಮ.

  ReplyDelete
  Replies
  1. ಧನ್ಯೋಸ್ಮಿ ಅಕ್ಕ. ತಮ್ಮ ಕಮೆಂಟಿನ ಸಾಲುಗಳು ಹೊಸ ಕವನಕ್ಕೆ ನಾಂದಿಯಾಗಲಿ ಎಂದು ಆಶೀರ್ವಾದವ ಮಾಡಿರಿ.

   Delete
 14. Replies
  1. ಧನ್ಯವಾದಗಳು ಪಾಟೀಲರೇ. :-)

   Delete
 15. ನಿಸ್ವಾರ್ಥತೆಯ ಚಂದದ ಮತ್ತು ವಿಭಿನ್ನ ದೃಷ್ಟಿಕೋಣ ಹೊತ್ತ ಉತ್ತಮ ಕವಿತೆ.

  ReplyDelete
  Replies
  1. ತಮ್ಮ ಅಭಿಪ್ರಾಯ ಸರಿಯಾಗಿದೆ ಮೇಡಂ. ನನ್ನ ಬ್ಲಾಗು ಓದಿದ ನಿಮಗೆ ವಂದನೆಗಳು. :-)

   Delete
 16. ಸುಂದರವಾದ ಕವಿತೆ. ತುಂಬಾ ಇಷ್ಟವಾಯಿತು.

  ReplyDelete
 17. ಕೊಡವಿಕೊಂಡ ಮರ ನಿಗರ್ವಿ
  ಇಚ್ಛಿಸದದು ಎಂದೂ ಎಳ್ಳಷ್ಟೂ
  ಪೂರ್ತಿ ಕವಿತೆಯ ಜೀವಸಾರ ಮೇಲಿನ ಎರಡು ಸಾಲುಗಳು ಗುರುಗಳೇ
  superrr

  ReplyDelete
  Replies
  1. ತಮ್ಮ ಅಭಿಪ್ರಾಯ ಸರಿಯಾಗಿದೆ ಮೇಡಂ. ನನ್ನ ಬ್ಲಾಗು ಓದಿದ ನಿಮಗೆ ವಂದನೆಗಳು. :-)

   Delete
  2. ಸಖತ್ ಸಾರ್.. ಹಣ್ಣೆಲೆ ಉದುರಿದಾಗ ಹಸಿರೆಲೆ ಅರಳುತ್ತಾ ನಳನಳಿಸುತ್ತಿತ್ತಂತೆ.. ಹುಟ್ಟು ಸಾವುಗಳೆಂಬ ಬದುಕ ಚಕ್ರದಲ್ಲಿ ಒಬ್ಬನ ಅವಸಾನದಲ್ಲೇ ಮತ್ತೊಬ್ಬನ ಉಸಿರಾಟವೇನೋ ಅಲ್ಲವೇ ? ಎಲೆಯ ಕೊಳೆಯುವಿಕೆಯಲ್ಲಿ ಎರೆಹುಳದ ಜೀವನವಿದ್ದಂತೆ..

   Delete
  3. ಗೆಳೆಯ, 'ಒಬ್ಬನ ಅವಸಾನದಲ್ಲೇ ಮತ್ತೊಬ್ಬನ ಉಸಿರಾಟವೇನೋ' ಎಂಬ ತಮ್ಮ ಮಾತು ಸರ್ವತ್ರ ನಿಜ.

   ನನ್ನ ಕವನ ಓದಿದ ನಿಮಗೆ ಕೋಟಿ ಸಲಾಮುಗಳು.

   Delete
 18. ಎಲೆಯ ಬದುಕಿನ ಸಾರ್ಥಕತೆಯನ್ನು ವಿವರಿಸಿ ಹಳೆ ನೀರು ಹರಿದರೆ ಹೊಸ ನೀರು ತುಂಬುವುದು ಎಂಬಂತೆ ಚಳಿಗಾಲದಲಿ ಮಣ್ಣನ್ನು ಸೇರಿ ಬದುಕಿನ ಸಾರ್ಥಕತೆ ಪಡೆದ ಎಲೆಗಳು ವಸಂತನಾಗಮನದ ಹರುಷಕ್ಕೆ ಪುನಃ ಚಿಗುರಿ ಕಿಂಚಿತ್ತು ಬಯಸದೆ, ಬೇಸರಿಸದೆ ಮರದ ಮೈ ಆವರಿಸುವುದು.... ಎಂತಹ ಅರ್ಥಪೂರ್ಣ ಸಾಲುಗಳು.

  ನನ್ನಿಂದ ನಿಮಗೊಂದು ಧನ್ಯತೆಯ ಸೆಲ್ಯೂಟ್

  ReplyDelete
 19. ಪ್ರಕೃತಿಯಿಂದ ಮಾನವ ಕಲಿಯಬೇಕಾದದ್ದು ಬಹಳವಿದೆ ಎಂಬುದನ್ನು ಸರಳವಾಗಿ ತಿಳಿಸಿರುವಿರಿ, ಬದರೀನಾಥರೇ. ಆನಂದವಾಯಿತು.

  ReplyDelete
  Replies
  1. ನಿಜ ಸಾರ್, ಪ್ರಕೃತಿಯು ಅಗಾಧ ಮಾನವ ಅಲ್ಪ ಸಂಖ್ಯಾತ.
   ತಮ್ಮ ಅಭಿಮಾನದ ಋಣ ನನ್ನ ಮೇಲಿರಲಿ.

   Delete
 20. ನಾನು ಈಗ ಜರ್ಮನ್ ದೇಶದಲ್ಲಿ ಇದ್ದೇನೆ, ಇಲ್ಲಿ ತುಂಬಾ ಚಳಿ ಹಾಗು ಹಿಮ ಕೂಡಾ ಬೀಳುತ್ತದೆ. ಈ ಹವಾಮಾನ ಕುರಿತ ಒಂದು ನಾಲ್ಕು ಸಾಲು ಬರಿಬೇಕು ಅಂದುಕೊಂಡಿದ್ದೆ ಅಷ್ಟೇ ನಿಮ್ಮ ಕವನ ಕಣ್ಣಿಗೆ ಬಿತ್ತು, ನಾ ಅಂದುಕೊಂಡ ಅಂಶಗಳು ಬಹುತೇಕ ನೀವು ಬಿಂಬಿಸಿರುವಿರಿ, ಇದಕ್ಕಿಂತ ಕವನ ಬೇಕೇ ಅಂದುಕೊಂಡು ಸುಮ್ಮನಾದೆ. ಒಳ್ಳೇಯ ಚಿತ್ರಣದ ಕವನ. :)

  ReplyDelete
  Replies
  1. ಹೊರ ನಾಡಿಗೆ ಹೋದರು ಕನ್ನಡ ಕವನ ಬರೆಯಬೇಕು ಮತ್ತದನ್ನು ಬ್ಲಾಗಲೇ ಅಲಂಕರಿಸಬೇಕು ಎನ್ನುವ ತಮ್ಮ ಕನ್ನಡ ಪ್ರೇಮಕ್ಕೆ ಶರಣು.

   ಅದೆಷ್ಟೇ ಕೆಲಸ ಬಾಹುಳ್ಯವಿರಲಿ, ವಾರಕೊಪ್ಪತ್ತು ಬ್ಲಾಗಲೂ ನಿಮ್ಮ ಕವಿತೆ ಇರಲಿ.

   ಉತ್ತಮ ಕಮೆಂಟಿಗಾಗಿ ಧನ್ಯವಾದಗಳು. :-)

   Delete
 21. ಪ್ರಕೃತಿಯ ಕವಿತೆ
  ನಿಸರ್ಗದಿಂದ ಮೂಲತಃ ಮಾನವ ಕಲಿಯಬೇಕಾಗಿರುವುದು ಬಹಳಷ್ಟಿದೆ
  ಎಂದಿನಂತೆ ನಿಮ್ಮ ಕಾವ್ಯಧಾರೆ ಅರ್ಥಗರ್ಭಿತವಾಗಿ ಮೂಡಿಬಂದಿದೆ (ಅದಕ್ಕೂ ನನಗೆ ಸ್ವಲ್ಪ ಹೊಟ್ಟೆಕಿಚ್ಚು)
  ಅಭಿನಂದನೆಗಳು ಸರ್

  ReplyDelete
 22. ಇಟ್ಟರೆ ಸಗಣಿಯಾದೆ ತಟ್ಟಿದರೆ ಬೆರಣಿಯಾದೆ ಎನ್ನುವಂತೆ.. ಮರಗಳಿಂದ ಉದುರುವ ಹಣ್ಣೆಲೆಗಳು.. ತಮ್ಮ ಜೊತೆಯಲ್ಲಿದ್ದ ತಾರುಣ್ಯದ ಎಲೆಗಳಿಗೆ ಹೇಳುತ್ತವೆ.. ನಾ ಹೋಗಿ ಬರುವೆ.. ಮಣ್ಣೊಳಗೆ ಸೇರಿ ಗೊಬ್ಬರವಾಗಿ ಮತ್ತೆ ನಿಮಗೆ ಚೈತನ್ಯ ತುಂಬುತ್ತೇನೆ ಎನ್ನುತ್ತದೆ.. ಹಾಗೆಯೇ ಸುಟ್ಟುಕೊಂಡರೆ ಆವಿಯಾಗಿ, ಮತ್ತೆ ನೀರಾಗಿ ನಿಮಗೆ ಜಳಕ ಮಾಡಿಸುತ್ತೇನೆ ಎನ್ನುತ್ತದೆ. ಅದು ಧನಾತ್ಮಕ ಯೋಚನೆ ಎಂದರೆ.. ಅಳಿಯುವ ಭಯವಿಲ್ಲ.. ಉಳಿಯುವ ಭರವಸೆಯೇ ಎಲ್ಲಾ..
  ಸೂಪರ್ ಸಂದೇಶ ಹೊತ್ತ ಕವಿತೆ.. ಅದಕ್ಕೆ ಪೂರಕವಾದ ಪದಗಳು ಮತ್ತು ಚಿತ್ರ ಸೂಪರ್ ಬದರಿ ಸರ್

  ReplyDelete
 23. ಮನುಷ್ಯ ಜನ್ಮವೊಂದುಳಿದು ಉಳಿದುದೆಲ್ಲವೂ ಈ ಜಗದಲಿ ಉಪಯೋಗಕ್ಕಿದೆ .... ಸೂಪರ್ ಬದ್ರಿ ಸರ್ ....

  ReplyDelete