Sunday, September 14, 2014

ಉಪಕೃತರ ಅಪಕಾರ...

ಯಾರ ಯಾರನು ತಿದ್ದ ಬಲ್ಲಿರಿ ತಾವೂ
ಶುಕ್ರಾಚಾರ್ಯರ ಸಾಲೆಯಲ್ಲಿ?

ಗಳಗಳಿಸಿ ಶರಣು ಬಂದ ದಿನಗಳೆಲ್ಲವ
ಮರೆಸು ಜಾಣ ಮರೆವಿನ ಉರಗ ಪೊರೆ,
ಬೆವರಿಳಿಸದೇ ಫಸಲೆತ್ತುವ ಕಲೆಯು
ಕರಗತವಾಗಿದೆ ಇನ್ನೇಕೆ ಗುರುವಿನಭಯ?

ತಳಗಟ್ಟಿಯೆಂಬ ಮರುಳು ಕೀಳಲಾರರು
ಊರಿದೆಡೆಯಿಂದಲೆಮ್ಮ ಎಂಬ ಅಹಮು,
ಕುತ್ತಿಗೆಗೆ ಬಂದಾಗಲೆಲ್ಲ ಉಪಕಾರಗಳ
ಬೇಡಿ ಪಡೆದವರಿಗೆಲ್ಲಿದೆ ಆ ನಿಯತ್ತು?

ಬುಡ ಮೆತ್ತೆಗೆ ಅನುಕೂಲವಾದಾಗ
ಅಟ್ಟಕ್ಕೇರಿಸಿ ಬಿದ್ದಡ್ಡಡ್ಡ ಉಧೋ ಉಧೋ,
ಮೂಲಕ ಮೊಳೆ ಇಳಿವಾಗಲೊಮ್ಮೆ
ಸರಕ್ಕನೇಳುವರು ಉರಿದು ಉಗಿದದೋ

ನಾಲಗೆಯ ಚೂಪು ತುದಿಗೆ ಈಟಿಗಳಿವೆ
ಸವರಿ ಇಟ್ಟಿಹರು ತಮ್ಮೊಳ ಜನ್ಯ ಹಲಾಹಲ,
ಘಾಸಿ ಮಾಡುವುದೇ ದಿನದ ಕಾಯಕವು
ರಕ್ತಪಾತವು ಅಗೋಚರ ಮನದ ಕಗ್ಗೊಲೆ

ನಂಬಿಕೆಯೇ ಅಪರಾಧವು ಸಭ್ಯರಿಗೆ,
ಹುಡುಕ ಹೊರಡಬಾರದು ಅವರೂ
ಗಂಜಾಯಿ ತೋಟದಿ ಮಲ್ಲಿಗೆ ಘಮಲು!

(ಚಿತ್ರಕೃಪೆ : ಅಂತರ್ಜಾಲ) 

16 comments:

 1. ಅರ್ಥಪೂರ್ಣ ಕವಿ ಮನದ ಸಾಲುಗಳು, ನಗು ನಗುತಲೇ... ಬೆನ್ನಿಗೆ ಚಾಕು ಹಾಕುವ ಕಾಯಕದಲ್ಲಿ ನಿರತರಾಗಿರುವವರ ನಮ್ಮೆದಿರಿನಲ್ಲಿದ್ದರೂ ಒಳ್ಳೆಯವನೋ..., ಕೆಟ್ಟವನೋ ಹೇಳುವುದು ಕಷ್ಟ.

  ReplyDelete
 2. ಬದುಕಿನ ಕರಾಳತೆ ....

  ReplyDelete
 3. bahala arthapoornavaada kavithe... naavu namma naDuvina kavitheyidu BP avre....

  ReplyDelete
 4. ಅರ್ಥ ಪೂರ್ಣ ಸಾಲುಗಳು ಬದರಿ ಸರ್... ಚೂಪು ನಾಲಗೆಯಲಿ ಈಟಿಗಳಿವೆ ಇದು ನೂರಕ್ಕೆ ನೂರು ಸತ್ಯ

  ReplyDelete
 5. ಉಪಕಾರ ಮಾಡುವುದನ್ನು ನೆನೆಪಿನಲ್ಲಿಟ್ಟುಕೊಳ್ಳುವುದು ಸಹಾಯ ಪಡೆದವರ ನಿಯತ್ತು ಹಾಗೆ ಉಪಕರಿಸಿದ ನಂತರ ಅವರು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವುದು ಉಪಕಾರ ಮಾಡಿದವನ ಯೋಗ್ಯತೆ. ಆದರೆ ಉಪಕಾರ ಮಾಡಿದವರ ಬೆನ್ನಿಗೆ ಚೂರಿ ಚುಚ್ಚುವುದು ಸಲ್ಲ, ಹಾಗೆ ಇದು ಖಂಡನೀಯ. ಚಂದದ ಸಾಲುಗಳು... "ಮರೆಸು ಜಾಣ ಮರೆವಿನ ಉರಗ ಪೊರೆ" ಮರೆವನ್ನು ವರ್ಣಿಸಿದ ಪರಿಗೋಂದು ಸೆಲ್ಯೂಟ್.

  ReplyDelete
 6. modala eradu saalugalu tumbaa ishta aaytu

  ReplyDelete
 7. ನಿಮ್ಮ ಪದ್ಯಗಳನ್ನು ನೋಡಿ ರೂಪಕಗಳಲ್ಲಿ ಕವಿತೆ ಕಟ್ಟುವ ಕಲೆಯನ್ನು ಕಲಿಯಬೇಕು ಸರ್.. ಬಹಳ ಚೆಂದ ಬರ್ದಿದ್ದೀರಿ, ಎದ್ದರೆ ಕಾಲು ಹಿಡಿದೆಳೆದು, ಬಗ್ಗಿದೊಡನೆ ಬೆನ್ನಿಗೆ ಬಾರಿಸುವ ಮಂದಿಯ ಇಂಚಿಂಚು ಭಾವಗಳನ್ನೂ ಮನಮುಟ್ಟುವಂತೆ ಅಭಿವ್ಯಕ್ತಿಸಿದ್ದೀರಿ. ಕವಿತೆ ತೆರೆದುಕೊಳ್ಳುವ ಪರಿಯೇ ರೋಚಕವೆನಿಸುತ್ತದೆ.

  ಬುಡ ಮೆತ್ತೆಗೆ ಅನುಕೂಲವಾದಾಗ
  ಅಟ್ಟಕ್ಕೇರಿಸಿ ಬಿದ್ದಡ್ಡಡ್ಡ ಉಧೋ ಉಧೋ,
  ಮೂಲಕ ಮೊಳೆ ಇಳಿವಾಗಲೊಮ್ಮೆ
  ಸರಕ್ಕನೇಳುವರು ಉರಿದು ಉಗಿದದೋ

  ಈ ಸಾಲುಗಳು ಬಹಳ ಇಷ್ಟವಾದವು.. ಮಸ್ತ್ ಪದ್ಯ..

  - ಪ್ರಸಾದ್.ಡಿ.ವಿ.
  ಮೈಸೂರು

  ReplyDelete
 8. ಮತ್ತದೇ ಭಾವ.
  ಅಂತರಂಗದಲ್ಲುರಿವ ದಾವಾನಲ.
  ಉಪಕ್ಕಾರಕ್ಕಪಕರಿಸುವ ದುರ್ಜನರ ದುರ್ನಾತ.
  ನಂಬಿಸಿ ಕತ್ತಕೊಯ್ಯುವ ಕಿರಾತಕರ ಗಾಥೆ.

  ತುಂಬಾ ಅರ್ಥಪೂರ್ಣ

  ReplyDelete
 9. sir..koneya saalu bahala ishtavayitu..
  naamma manassige kandiddu bittu ulidaddella beku...enanno hudukutteve innello iddukondu..

  ReplyDelete
 10. ಬೆವರಿಳಿಸದೇ ಫಸಲೆತ್ತುವ ಕಲೆಯು
  ಕರಗತವಾಗಿದೆ
  .. ಈ ಕಲೆಯಲ್ಲಿ ಪರಿಣಿತರು ಎಲ್ಲ.
  ಶ್ರಮದ ದುಡಿಮೆ ನಮಗಾರಿಗೂ ಬೇಕಿಲ್ಲ.
  ಬೀಜ ಬಿತ್ತಿ ಬೆಳೆ ಬೆಳೆವ ಕಾಲ ದೂರವಾಯಿತೀಗ
  ಹಣ ಬಿತ್ತಿ ಹಣ ಬೆಳೆವ ಕಾಲವೀಗ .
  .
  ನಾಲಗೆಯ ಚೂಪು ತುದಿಗೆ ಈಟಿಗಳಿವೆ.....
  ಹೌದು ನಾವದರಲ್ಲಿ ಪರಿಣಿತರು,
  ನಿಂದೆಸುವೆವು ನಾವು ಪರರನ್ನು , ಮಾಡುವೆವೆ ನಾವು ಸದಾ ಅದೆ ಕೆಲಸವನ್ನು .

  ಗಂಜಾಯಿಯ ಪರಿಮಳೆ ಎಲ್ಲರಿಗೂ ಪ್ರಿಯವೀಗ,
  ಮಲ್ಲಿಗೆಯ ಪರಿಮಳ ಎಲ್ಲರಿಗೂ ಅದೇನೊ ಅಲರ್ಜಿ ಈಗ

  - ಪಾರ್ಥಸಾರಥಿ

  ReplyDelete
 11. ನಾಲಗೆಯ ಚೂಪು ತುದಿಗೆ ಈಟಿಗಳಿವೆ
  ಸವರಿ ಇಟ್ಟಿಹರು ತಮ್ಮೊಳ ಜನ್ಯ ಹಲಾಹಲ, super sir..

  ನಂಬಿಕೆಯೇ ಅಪರಾಧವು ಸಭ್ಯರಿಗೆ,
  ಹುಡುಕ ಹೊರಡಬಾರದು ಅವರೂ
  ಗಂಜಾಯಿ ತೋಟದಿ ಮಲ್ಲಿಗೆ ಘಮಲು!
  idantuuu tumba satyaa...

  ReplyDelete
 12. ನಾಲಗೆಯ ಚೂಪು ತುದಿಗೆ ಈಟಿಗಳಿವೆ
  ಸವರಿ ಇಟ್ಟಿಹರು ತಮ್ಮೊಳ ಜನ್ಯ ಹಲಾಹಲ,
  ಘಾಸಿ ಮಾಡುವುದೇ ದಿನದ ಕಾಯಕವು
  ರಕ್ತಪಾತವು ಅಗೋಚರ ಮನದ ಕಗ್ಗೊಲೆ

  ಹೌದು ಬದ್ರಿ ಸರ್...ನಾಲಗೆಗೆ ಎಲುಬಿಲ್ಲದಿದ್ದರೂ ಯಾರನ್ನು ಬೇಕಾದ್ರೂ ಇರಿದು ಕೊಲ್ಲುವ ತಾಕತ್ತಿದೆ..

  ತುಂಬಾ ಅರ್ಥಪೂರ್ಣವಾದ ಕವನ

  ಇಷ್ಟ ಆಯ್ತು..

  ReplyDelete
 13. ri gurugale.. ellinda ettaakondbartiri e padagalanna... nange naalku akshara hudukvaagle.. naalku dinabeku .. naagtaane chaaku haakodu andre idene... bt uddesha olledu aste.... tumba ista aaythu.. abhimaani..

  ReplyDelete
 14. ಬೆನ್ನು ಎನ್ನುವುದು ಕಾಯುತ್ತದೆ ಮತ್ತು ಕಾಯಿಸುತ್ತದೆ.. ಕೆಲವೊಮ್ಮೆ ಮಾಡಿದ ಉಪಕಾರ ಮರಳಿ ಮುಂದಕ್ಕೆ ಬರಬಹುದು ಇಲ್ಲವೇ ಅದೇ ತಿರುಗುಬಾಣವಾಗಿ ಬೆನ್ನಿಗೆ ಬಡಿಯಬಹುದು.
  ಇಲ್ಲಿ ಬೇಕಾಗಿರುವುದು ಧೈರ್ಯ.. ಬೆನ್ನಿಗೆ ಬಾಕು ಹಾಕಿದಾಗ ಆ ಬಾಕುವನ್ನೇ ಮುಂದಕ್ಕೆ ನಡೆಯುವ ಮಾರ್ಗದಲ್ಲಿನ ಕಸ ಮುಳ್ಳು ಕಲ್ಲುಗಳನ್ನು ತೆಗೆಯುವ ಸಾಧನಮಾದಿಕೊಂಡರೆ

  ಎಲ್ಲಾ ರೀತಿಯಲ್ಲಿಯೂ ಹರಿಯುವ ನಿಮ್ಮ ಕಾವ್ಯ ಸೆಲೆಗೆ ಸಲಾಂ ಬದರಿ ಸರ್ ಸೂಪರ್

  ReplyDelete