Wednesday, March 19, 2014

ಬಿಟ್ಟರೂ ಬಿಡದು...

ಒಪ್ಪಿಗೆಯೇ ಕದ್ದೀವ ಮುತ್ತಿಗೆ?
ಕೇಳಲೂ ಸಂಕೋಚದ ಮುದ್ದೆ,
ಕೆನ್ನೆ ಆಹ್ವಾನಿಸಿ ನೋಟವೆಲ್ಲೋ
ತೂರೋ ಆ ರಸಿಕ ಚಾಣಾಕ್ಷತೆ

ಒಂದು ತಾಕಿಗೇ ಅದಿನ್ನೆಂತಹ
ಪರಿಪೂರ್ಣ ಅರವಳಿಕೆ ನನಗೆ,
ಮರಳಿ ಮರಳಿ ಬಯಸುತ್ತಿದ್ದ
ನಿಟ್ಟಿಲ್ಲದಾ ಸುದೀರ್ಘ ನಿದ್ರೆ!

ಬೆಚ್ಚನೆಯ ಕಂಬಳಿಯಂತೆ
ನಿನ್ನಿರುವು ನನಗೆ ಕಾಲ್ಪನಿಕ
ಚಳಿಗಾಲದ ಇರುಳುಗಳಲು
ತಟ್ಟನೆ ಒಳ ಸುಳಿವ ಕಾವು

ನೆತ್ತಿ ಹತ್ತಲೇ ಬಾರದೆಂದು
ಮರೆತಂತೆ ನಟಿಸಿಯೇ ನಟಿಸಿದೆ, 
ಇಗೋ ಮರೆತೇ ಬಿಟ್ಟೆ ಪುಣ್ಯಕ್ಕೆ
ಎಂದೊಡನೆ ಮೆದುಳಿಗೇ ಕನ್ನ!

ಗತವು ಗತವಾಗೆಲೆಂದು ಅಗೆದಿಟ್ಟೆ
ಅದು ಸ್ವಗತವಾಯಿತು ಕಡೆಗೆ,
ಬಿಟ್ಟರೂ ಬಿಡಲಿಲ್ಲ ಮಾದಕ ನಗೆ
ಬೆನ್ನು ಬಿದ್ದ ಬೇತಾಳನಂತೆನಗೆ!


(ಚಿತ್ರಕೃಪೆ: ಅಂತರ್ಜಾಲ)

17 comments:

  1. ಬಿಟ್ಟೆನೆಂದರೂ ಬಿಡದ ಮಾಯೆಯ ಬಂಧಿ ಕವಿ ಬರೆದ ಸಾಲುಗಳು ಸೂಪರ್

    ReplyDelete
  2. ಗತವು ಗತವಾಗೆಲೆಂದು ಅಗೆದಿಟ್ಟೆ
    ಅದು ಸ್ವಗತವಾಯಿತು ಕಡೆಗೆ.!! ಅಬ್ಬಾ ಸುಂದರ ಸಾಲುಗಳು.. Awesome.. :)

    ReplyDelete
  3. ಆ ನಗೆಯ ಪ್ರಭಾವ ಭಾರಿ ಇದೆ ಕಾಣುತ್ತೆ.....ಬಿಟ್ಟರೂ ಬಿಡದಷ್ಟು..! :) ಸೂಪರ್ ಸರ್.!

    ReplyDelete
  4. ತುಂಬಾ ಚೆನ್ನಾಗಿದೆ ಬದರಿ ಸರ್,

    ನೆತ್ತಿ ಹತ್ತಲೇ ಬಾರದೆಂದು
    ಮರೆತಂತೆ ನಟಿಸಿಯೇ ನಟಿಸಿದೆ,
    ಇಗೋ ಮರೆತೇ ಬಿಟ್ಟೆ ಪುಣ್ಯಕ್ಕೆ
    ಎಂದೊಡನೆ ಮೆದುಳಿಗೇ ಕನ್ನ!

    ಆ ಸ್ಪರ್ಶದ ಸಂವೇದನೆ ನೆತ್ತಿಗೆ ಎರದೆ ಇರುತ್ತದೆಯೇ, ಮರೆತಂತೆ ನಟಿಸುವುದು ಸುಲಭ ಆದರೆ ಮರೆಯುವುದು ಕಷ್ಟ, ಮೆದುಳು ಕೆಲಸ ಮಾಡದು.


    ಶೃಂಗಾರ ರಸ ತುಂಬಿದೆ ನಿಮ್ಮ ಕವಿತೆಯಲಿ, ಉತ್ತಮ ಪದಗಳ ಆಯ್ಕೆ, ಇದನ್ನು ಬರೆಯಲು ಕೇವಲ ನಿಮ್ಮಿಂದಲೇ ಸಾಧ್ಯ.

    ReplyDelete
  5. superbbbbbbbbbbbbbbbbbbbbb sir :) hats off :)

    ReplyDelete
  6. ಮುತ್ತುಗಳ ಮಾಲೆಯನ್ನು ಪೋಣಿಸಿದ್ದೀರಿ, ಬದರಿನಾಥರೆ. ರಸಿಕತೆ ಹಾಗು ಪ್ರೇಮ ಸಂಗಮಿಸಿದ ಮಧುರ ಕವನಕ್ಕಾಗಿ ಅಭಿನಂದನೆಗಳು.

    ReplyDelete
  7. ಗತವು ಗತವಾಗೆಲೆಂದು ಅಗೆದಿಟ್ಟೆ
    ಅದು ಸ್ವಗತವಾಯಿತು ಕಡೆಗೆ,
    ಬಿಟ್ಟರೂ ಬಿಡಲಿಲ್ಲ ಮಾದಕ ನಗೆ
    ಬೆನ್ನು ಬಿದ್ದ ಬೇತಾಳನಂತೆನಗೆ!

    Hosa padagala ayke hosa tanadadali jodane... Totally Superbbbbbbbbbbbbbbbb............

    ReplyDelete
  8. Wah!! superb.. atyuttama kavite Badari sir.

    ReplyDelete
  9. ವಾಹ್ ವಾ..... ಬಿಟ್ಟರು ಬಿಡಲಿಲ್ಲ ಆ ಮಾದಕ ನಗೆ, ಬೆನ್ನು ಬಿದ್ದ ಬೇತಾಳದಂತೆ ಎಂಥಹ ಉಪಮೇಯ :-) :-)

    ReplyDelete
  10. ಮತ್ತು ಮತ್ತು ಮುತ್ತು ಯಾವಾಗಲೂ ಪ್ಯಾಕೇಜ್ ನಲ್ಲಿ ಬರುತ್ತದೆ.. ಪದಗಳನ್ನು ಆರಿಸಿ ಅವಕ್ಕೆ ಮತ್ತು ಸೇರಿಸಿ ಬಡಿಸುವ ಬಿಡಿಸುವ ನಿಮ್ಮ ಮೆದುಳಿಗೆ ನಿಜವಾಗಿಯೂ ನಾವು ಕನ್ನ ಹಾಕಬೇಕು.. ಓಡುತ್ತಲೇ ಮಡದಿಯ ಕಡೆಗೆ ಕಣ್ಣು ಹೊಡೆಯಬೇಕು ಅನ್ನಿಸುತ್ತದೆ.. ಸೂಪರ್ ಬದರಿ ಸರ್.. ಬಲು ಇಷ್ಟವಾಯಿತು..

    (ಬಲು ದಿನಗಳು ಆದ ಮೇಲೆ ನಿಮ್ಮ ಅಂಕಣಕ್ಕೆ ದಾಳಿಯಿಡುತ್ತಿದ್ದೇನೆ.. ಕ್ಷಮೆ ಇರಲಿ.. )

    ReplyDelete
  11. ಮುತ್ತಿನ ಮತ್ತ ಬಗ್ಗೆ ಹೊತ್ತು ಹೊತ್ತಿನ ತುತ್ತು ಪಡೆದಂತಾಯಿತು.ಮುತ್ತಿನ ಮತ್ತು ಅದು ಅರಿವಳಿಕೆಗೆ ಹೋಲಿಸಿದ್ದು ಇನ್ನೊಂದು ಅಪೂರ್ವ ಸನ್ನಿವೇಶ. ಒಳ್ಳೆಯ ಕವಿತೆ. ರಸಿಕರಿಗೆ ರಸದೌತಣ ನೀಡಿದ್ದಿರಿ.

    ReplyDelete
  12. ರಮ್ಯತೆ, ಮೋಹಕತೆ, ಪ್ರೇಮದ ಹಪಹಪಿ, ವಿರಹ, ಮುಂತಾದ ಮುಖಗಳು ಸಿಕ್ಕವು ಕವಿತೆಗೆ. ಚೆನ್ನಾಗಿದೆ ಸರ್ :-)

    - ಪ್ರಸಾದ್.ಡಿ.ವಿ.

    ReplyDelete