Tuesday, January 21, 2014

ಅದೇ ಪುರಾತನ ಕೊಕ್ಕೆ...

ಗಾಳಕೂ ಬೇಜಾರು ಬರುವುದಿಲ್ಲ
ಅವವೇ ಮೀನುಗಳು, ಮತ್ತದೇ ನೀರು!
ನನ್ನಪ್ಪ ಅವನಪ್ಪ ತಾತ ಮುತ್ತಾತಂದಿರೆಲ್ಲ
ಎರವಾದ ಇದು ಪುರಾತನ ಕೊಕ್ಕೆ
ಸದರಿ ನಾನು, ಮುಂದೆ ನನ್ನ ಮಕ್ಕಳೂ,
ನಿರ್ವಿಕಾರದಿ ಉರುಳುತ್ತದು ಕಾಲ ಚಕ್ರ

ಗಾಳಕೂ ಮೊದಲು ಅರಿವಿರುವುದಿಲ್ಲ
ಸಿಕ್ಕು
ಮಿಕ ಪೊಗದಸ್ತೋ ಹೇಗೋ?
ಪಥ್ಯ
ಕೆ ಬಿದ್ದವ ಆರು ಮೈಕಟ್ಟೋ!
ತೂಕ ತುಸು ಹೆಚ್ಚಿಗಾದರೂ ತೂಗಿದರೆ
ಹೂಡಿಕೆಗೂ ಮೇಲೆ ನಾಲ್ಕು ಕಾಸು
ಬಂಡವಾಳಶಾಹಿ ಗಿಟ್ಟು ರೊಕ್ಕಾರ್ಥ

ಗಂಟಲಾಳಕೆ ಸಿಕ್ಕ ಚೂಪು ಲೋಹ
ಕ್ಷಣಾರ್ಧದಿ ಕೊಂದುಬಿಟ್ಟರೆ ಸರಿಯೇ
ಅದಪ್ಪ ಪುಣ್ಯವಂತ ಉಪ ಸಂಹಾರ,
ನೆಲಕ್ಕೆ ಬಿದ್ದು ಒದ್ದಾಡಿ ಉಸಿರು ಕಟ್ಟಿ
ಸಾಯಲೂ ಬಾರದೇ ಹಪಹಪಿಸುವುದು
ಮುಕ್ಕಾಲು ವಾಸಿಗಳ ಹಣೆ ಬರಹ

ಬಸ್ಸು ರೈಲುಗಳು ಇತ್ತಿತ್ತಲಾಗೆ
ಸಂಚಾರಿ ಚಿತಾಗಾರಗಳಾದ ಮೇಲೆ
ಜವರಾಯನು ಒಮ್ಮೆಲೆ ಸಗಟು ಪಾಶಿ,
ಬೀಡಾಡಿ ಸಾವುಗಳನು ಎಣಿಸುತ್ತ
ಸಂತಾಪದ ದಸ್ತಾವೇಜು ಗೀಚುತ್ತ
ಕೂರೋ ದರದು ಅವನಿಗಂತೂ ಇಲ್ಲ

ತಿಂದು ಮೈತುಂಬಿಕೊಂಡರೆ ತಾನೆ
ಕಟುಕನಿಗೂ ಕೈತುಂಬ ಕೆಲಸ!


(ಚಿತ್ರ ಕೃಪೆ : ಅಂತರ್ಜಾಲ)

37 comments:

 1. ಬದರೀಜಿ:ನಿಮ್ಮ ಕಾವ್ಯದ ಗಾಳದ ಸೆಳೆತಕ್ಕೆ ಬಿದ್ದ ಏನು ನಾನು !!! :-) ಕವನ ಪೂರ್ತಿ ಅರ್ಥವಾಗದಿದ್ದರೂ ,ಭಾವಾರ್ಥ ಅರ್ಥವಾಗಿದೆ,ಸಧ್ಯಕ್ಕೆ ಅಷ್ಟೇ ಸಾಕು !!!! ಗಾಳಕ್ಕೆ ಬಿದ್ದದ್ದು ಸಾರ್ಥಕವಾಯಿತು :-)

  ReplyDelete
  Replies
  1. ಒಳ್ಳೆ opening ಸಿಕ್ಕಂತಾಯಿತು ಅಪ್ಪಾಜಿ. ದೇವರು ನಿಮ್ಮನ್ನು ತಣ್ಣಗೆ ಇಟ್ಟಿರಲಿ ಬೆಚ್ಚಗೆ ಯಾವತ್ತೂ...

   Delete
 2. ಬದ್ರಿ ಸರ್, ಕವನ ಚೆನ್ನಾಗಿ ಮೂಡಿ ಬಂದಿದೆ. ಕೆಳಗಿನ ಸಾಲುಗಳೇಕೋ ತುಂಬಾ ಇಷ್ಟವಾದವು,

  ಬಸ್ಸು ರೈಲುಗಳು ಇತ್ತಿತ್ತಲಾಗೆ
  ಸಂಚಾರಿ ಚಿತಾಗಾರಗಳಾದ ಮೇಲೆ
  ಜವರಾಯನು ಒಮ್ಮೆಲೆ ಸಗಟು ಪಾಶಿ,
  ಬೀಡಾಡಿ ಸಾವುಗಳನು ಎಣಿಸುತ್ತ
  ಸಂತಾಪದ ದಸ್ತಾವೇಜು ಗೀಚುತ್ತ
  ಕೂರೋ ದರದು ಅವನಿಗಂತು ಇಲ್ಲ

  ReplyDelete
 3. ಗಾಳ ..ಮೀನು ಇಷ್ಟೇ ಆಗಿ ಹೋಗಿರುವ ಜಗತ್ತಿನ ಬಗ್ಗೆ ಚೆನ್ನಾಗಿ ಹೇಳಿದಿರಿ.
  ಗಂಟಲಾಳಕೆ ಸಿಕ್ಕ ಚೂಪು ಲೋಹ
  ಕ್ಷಣಾರ್ಧದಿ ಕೊಂದುಬಿಟ್ಟರೆ ಸರಿಯೇ
  ಅದಪ್ಪ ಪುಣ್ಯವಂತ ಉಪ ಸಂಹಾರ,
  ನೆಲಕ್ಕೆ ಬಿದ್ದು ಒದ್ದಾಡಿ ಉಸಿರು ಕಟ್ಟಿ
  ಸಾಯಲೂ ಬಾರದೇ ಹಪಹಪಿಸುವುದು
  ಮುಕ್ಕಾಲು ವಾಸಿಗಳ ಹಣೆ ಬರಹ
  ಕಾಡುವ ಸಾಲುಗಳು.

  ReplyDelete
 4. ತಿಂದು ಮೈತುಂಬಿಕೊಂಡರೆ ತಾನೆ
  ಕಟುಕನಿಗೂ ಕೈತುಂಬ ಕೆಲಸ!.... nice :)

  ReplyDelete
 5. ಗಾಳಕೂ ಬೇಜಾರು ಬರುವುದಿಲ್ಲ
  ಅವವೇ ಮೀನುಗಳು, ಮತ್ತದೇ ನೀರು!
  ಇಂದಿನ ರಾಜಕೀಯಕ್ಕೆ ಕನ್ನಡಿ

  ಸಾಯಲೂ ಬಾರದೇ ಹಪಹಪಿಸುವುದು
  ಮುಕ್ಕಾಲು ವಾಸಿಗಳ ಹಣೆ ಬರಹ
  ಇದು ನಮ್ಮ ಭಾರತೀಯರ ಕತೆ

  ಬಸ್ಸು ರೈಲುಗಳು ಇತ್ತಿತ್ತಲಾಗೆ
  ಸಂಚಾರಿ ಚಿತಾಗಾರಗಳಾದ ಮೇಲೆ
  ಈ ಸಾಲುಗಳಿಗೆ ನಿಮಗೆ ನಮೋ ನಮಃ
  ಸರ್, ತುಂಬಾ ತುಂಬಾ ತುಂಬಾ ಅರ್ಥಗರ್ಭಿತವಾದ ಕವನ
  Dr. D. T. Krishnamurthy ಸರ್ ಹೇಳಿದ ಹಾಗೆ, ಪೂರ್ತಿ ಕವನ ಅರ್ಥ ಆಗಿಲ್ಲವಾದರೂ, ನಿಮ್ಮ ಪ್ರತಿಭೆಗೆ ಸಾಟಿ ಉಂಟೆ?

  ReplyDelete
 6. ಹಾಗೆ ನೋಡಿದರೆ ಎಲ್ಲೆಲ್ಲೂ ಗಾಳಗಳೇ !!!!! ಗಾಳಕ್ಕೆ ಸಿಕ್ಕದ ಬುದ್ಧಿವಂತ ಮೀನು ಇನ್ನೂ ಹುಟ್ಟಲ್ಲ.ಎಲ್ಲೋ ಅಪರೂಪಕ್ಕೆ ಬುದ್ಧ,ಮಹಾವೀರರಂಥ , ಬುದ್ಧಿವಂತ ಮೀನುಗಳು ಹುಟ್ಟಿದ್ದೂ ಉಂಟು.......,ಆದರೆ ಅಪರೂಪಕ್ಕೆ !!!! ಡಿ.ವಿ.ಜಿ.ಯವರು ಹೇಳಿದಂತೆ ಗಾಳ ಹಾಕುವವರೆಲ್ಲಾ,ಜವರಾಯನ ಬಾಯಿಗೆ ನಮ್ಮನ್ನು ಮೃದುಗೊಳಿಪ ಭಟರು!!! ತರ,ತರಹಾವರಿ ಗಾಳಗಳು!!! ಗಾಳಗಳು ಎಂದು ಗೊತ್ತಾಗುವುದು,ಗಾಳಕ್ಕೆ ಬಿದ್ದು ಗೋಳಾಡಿದಾಗಲೇ !!!! ಮೀನುಗಳಾಗಿ ಹುಟ್ಟಿದ್ದೇ ಗಾಳಕ್ಕೆ ಬೀಳುವುದಕ್ಕೆ!!!! ಇನ್ನು ಗಾಳಕ್ಕೆ ಹೆದರುವುದೇಕೆ ?

  ReplyDelete
 7. ಗಾಳ ಹಾಕುವವರು ಎಲ್ಲೆಲ್ಲು ಇರ್ತಾರೆ... ಆದರೆ ಗಾಳಕ್ಕೆ ಸಿಕ್ಕಾಕಿಕೊಳ್ಳೋರು ಮುಗ್ಧರೂ ಆಗಿರುತ್ತಾರೆ. ಚೆಂದದ ಕವನ ಸರ್

  ReplyDelete
 8. Vandarthadalli navellaroo meenagale... Tumba chennagide kavana...

  ReplyDelete
 9. ಗಾಳವದು ಆಳಕೆ ಇಳಿದಷ್ಟೂ ಜಾಲಾಡುವುದು ಮೀನಿಗಾಗಿ ಹಾಗೆಯೇ ನಾವು ನಿಮ್ಮ ಕವನದ ಆಳದಲಿ ಮುಳುಗಿದರೆ ಪದಗಳ ಅರ್ಥಕ್ಕಾಗಿ ಜಾಲಡಬೇಕಾಗುತ್ತದೆ.... ಕವನ ಚಂದ ಇದೆ ಬದರಿ ಸರ್

  ReplyDelete
 10. ಬದರಿ ಅಣ್ಣ ಪದಗಳನ್ನ ಅದೆಷ್ಠು ಅಧ್ಬುತವಾಗಿ ದುಡುಸ್ತೀರಿ ಅಲ್ವಾ...... ಇದು ಸೂಪರ್ ಸೇ ಊಪರ್

  ReplyDelete
 11. ಗಾಳ ಮತ್ತು ಗಾಳಕ್ಕೆ ಸಿಕ್ಕಿಹಾಕಿಕೊಳ್ಳುವುದು.
  ಇವುಗಳ ಮಧ್ಯೆ ಜೀಕುವ ಬದುಕು.. ಚಂದದ ಕವನ ಸರ್

  ReplyDelete
 12. ಮತ್ತೆ ಮತ್ತೆ ಓದಿದೆ... ಪೂರ್ತಿ ಅರ್ಥವಾಗದಿದ್ದರೂ ಮೆಲುಕು ಹಾಕುವಂತಹ ಕವನ... :)

  ReplyDelete
 13. ಕವನ ಓದುತ್ತಿದ್ದಂತೆ ಬರೀ ಮೇಲರ್ಥ ತಿಳಿದುಕೊಳ್ಳುತ್ತಾ ಸಾಗಿದೆ, ಕವನ ಮುಗಿದಾಗಲೂ ಅದೆ ಅದರ ತಿರುಳು ಅಂದುಕೊಂಡೆ..., ಆದರೆ ಕವನದ ಹಿಂದೆ ಎನೋ ಒಂದು ಗಮ್ಮತ್ತು, ಧೀರ್ಘ ವಿಷಯ ಇರಬಹುದೇ ಅನಿಸಿತು, ಇಲ್ಲಿ ಎಲ್ಲರ ಗ್ರಹಿಕೆಯ ಮಾತುಗಳು ಆಲಿಸಿ ನೋಡಿದೆ..., ನನಗೂ ಅನಿಸಿದ್ದು ಅದು ಸಾಮಾನ್ಯ ಮನುಷ್ಯನ ವ್ಯಥೆ ಕಥೆ ಮಿನಿನ ಜೀವನದಂತೆ ಹೋಲಿಸಿದಂತಿದೆ ಅನಿಸಿತು. ಮತ್ತೆ ಮತ್ತೆ ಓದಿದೆ, ನಿಮ್ಮ ಬರವಣಿಗೆಯ ಹಾಗು ಸಾಹಿತ್ಯದ ಆಳ ಎಲ್ಲರಲ್ಲೂ ಕಾಣುವುದಿಲ್ಲ ಏಕೆಂದರೆ ನಿಮ್ಮ ಬರಹದ ಶೈಲಿ ವಿಭಿನ್ನವಾಗಿದೆ. ನಿಮ್ಮ ಯೋಚನೆಗಳು ಕೂಡಾ ವಿಭಿನ್ನವಾಗಿದೆ. ಬಹಳಷ್ಟು ಕವಿಗಳು ಯುವ ಕವಿಗಳು ಪ್ರೇಮ ಪ್ರೀತಿ ವಿಷಯದ ಮೇಲೆಯೇ ಬಹಳ ಬರೆಯುತ್ತಾರೆ. ಒಟ್ಟಾರೆ ಹೇಳಬೆಕೆಂದರೆ ನಿಮ್ಮ ಕವನಗಳು ಸಾಮಾಜಿಕ ಚಿಂತನೆ ಮಾಡಲು ಈಡು ಮಾಡುತ್ತವೆ. ಕವನ ಪೂರ್ತಿ ಅರ್ಥಗರ್ಭಿತ !! ಅಭಿನಂದನೆಗಳು. :)

  ReplyDelete
 14. ಕೊಬ್ಬಿದ ಮೀನಿಗಾಗಿ ಗಾಳ - ಸುಲಭ ಮುಕ್ತಿ ನೀಡೋ ಗಾಳಕ್ಕಾಗಿ ಮೀನು; ಯಾವುದಕ್ಕಾಗಿ ಯಾವುದು ಕಾಯುವುದೋ ಅರಿವಾಗದಂತ ಸ್ಥಿತಿ...
  ಇಷ್ಟವಾಯಿತು ಅಂತಷ್ಟೇ ಹೇಳಬಲ್ಲೆ...

  ReplyDelete
 15. ತಿಂದು ಮೈತುಂಬಿಕೊಂಡರೆ ತಾನೆ
  ಕಟುಕನಿಗೂ ಕೈತುಂಬ ಕೆಲಸ!

  ಇಷ್ಟ ಆಯ್ತು ಈ ಸಾಲಿನಲ್ಲಿ ಸರಳವಾಗಿ ಹೇಳಿದ ದೊಡ್ಡ ಸತ್ಯ.

  ReplyDelete
 16. ಬದರಿನಾಥರೆ,
  ತುಂಬ ಸ್ವಾರಸ್ಯಪೂರ್ಣವಾದ ಕವನ. ಬಹಳ ದಿನಗಳಿಂದ ನಿಮ್ಮ ಕವನಕ್ಕಾಗಿ ಕಾಯುತ್ತಿದ್ದೆ, ಗಾಳಕ್ಕೆ ಬೀಳುವ ಮೀನಿನಂತೆ!

  ReplyDelete
 17. ಸರ್ ನಿಮ್ಮ ಕವನ ತುಂಬಾ ಚನ್ನಾಗಿದೆ

  ReplyDelete
 18. ಇದೀಗ ನಾವೆಲ್ಲ ನಿಮ್ಮ ಗಾಳಕ್ಕೆ ಸಿಕ್ಕ ಮೀನುಗಳು :) ಕವನ ಚೆನ್ನಾಗಿದೆ. ಅನಿತಾ ನರೇಶ್ ಮಂಚಿ

  ReplyDelete
 19. ಕವಿತೆ ಬಣ್ಣಿಸಲು ಪದಗಳ ಹುಡುಕಾಟ ಸಾಗಿದೆ, ಸಿಕ್ಕ ಪದಗಳ ಹೆಕ್ಕಿ ಇಲ್ಲಿ ಗುಡ್ಡೆ ಹಾಕಿದ್ದೇನೆ , ನಿಮ್ಮ ಕವಿತೆಗಳ ಒಳ ಅರ್ಥ, ಅರಿಯಲು ಎರಡು ಸಾರಿ ಓದಿದೆ , ವಾಸ್ತವಿಕ ಜೀವನದ ಹಲವು ಮಜಲುಗಳ ಅನಾವರಣ ಆಗಿದೆ ಕವಿತೆಯಲ್ಲಿ, ನಿಮ್ಮ ಕಲ್ಪನಾವಿಸ್ತಾರ ಹರಿಯುವ ನದಿಯಂತೆ ಸರಸರನೆ ಹರಿಯುತ್ತಾ ಸಾಗುತ್ತದೆ, ಒಳ್ಳೆಯ ಕವಿತೆಗೆ ಸಲಾಂ ನಿಮಗೆ

  ReplyDelete
 20. BP avre,
  ನೆಲಕ್ಕೆ ಬಿದ್ದು ಒದ್ದಾಡಿ ಉಸಿರು ಕಟ್ಟಿ
  ಸಾಯಲೂ ಬಾರದೇ ಹಪಹಪಿಸುವುದು
  ಮುಕ್ಕಾಲು ವಾಸಿಗಳ ಹಣೆ ಬರಹ
  enthaa saalugaLivu.......... prathiyobbaroo ondalla ondu reetiya gaaLakke siguva meenugaLu, nimma maatugaLalli kavanada roopadalli tumbaa chennaagi mooDi bandide.

  ReplyDelete
 21. ಮತ್ತೊಂದು ಸೂಪರ್ ಕವಿತೆ ಬದರಿ ಸರ್. ಅರ್ಥಗರ್ಭಿತ. ಬಸ್ಸು ರೈಲುಗಳು ಇತ್ತಿತ್ತಲಾಗೆ
  ಸಂಚಾರಿ ಚಿತಾಗಾರಗಳಾದ ಮೇಲೆ
  ಜವರಾಯನು ಒಮ್ಮೆಲೆ ಸಗಟು ಪಾಶಿ,
  ಬೀಡಾಡಿ ಸಾವುಗಳನು ಎಣಿಸುತ್ತ
  ಸಂತಾಪದ ದಸ್ತಾವೇಜು ಗೀಚುತ್ತ
  ಕೂರೋ ದರದು ಅವನಿಗಂತೂ ಇಲ್ಲ.

  ಸತ್ಯದರ್ಶನ ಕ್ಕೆ ದರ್ಪಣ ಹಿಡಿದ ಸಾಲುಗಳು.

  ReplyDelete
 22. ತುಂಬಾ ಚೆನ್ನಾಗಿದೆ! ಇತ್ತೀಚೆಗೆ ಹೆಚ್ಚಾಗಿರುವ ವೋಲ್ವೋ ಬಸ್ ದುರಂತಗಳಿಂದ ಯಮನನ್ನು ಸಗಟು ಪಾಶಿ ಎಂದದ್ದು ಹಿಡಿಸಿತು.

  ReplyDelete
 23. ಮೀನಿಗೆ ಗಾಳಕ್ಕೆ ಸಿಕ್ಕಾಗಲೇ ಕಷ್ಟದ ಅರಿವಾಗುವುದು ಸಹಜ......ನಮ್ಮ ಬದುಕು ಹಾಗೆಯೇ ಅಲ್ಲವೇ....?ಕವನ ಚೆನ್ನಾಗಿದೆ......!

  ReplyDelete
 24. ಬದರಿ ಅಂಕಲ್, ತುಂಬ ಒಳ್ಳೆ ಸಾಲುಗಳು.. ಒಮ್ಮೆ ಓದಿ,ಮತ್ತೊಮ್ಮೆ ಓದಿ, ಇನ್ನೊಮ್ಮೆ ಒದಿದೆ.. ಕಾವ್ಯದ ವಸ್ತು , ಸದ್ಯದ ಪರಿಸ್ಥಿತಿ ಮತ್ತು ಅದನ್ನು ಮೀನು, ಗಾಳದೊಂದಿಗೆ ವಿಸ್ತರಿಸಿದ್ದು ಭಾಳ ಛಲೋ ಅನಸ್ತು.. ''ಸಗಟು ಪಾಶಿ" ಅಂದ್ರೆ ಏನು ಅರ್ಥ ಆಗ್ಲಿಲ್ಲ.. pls ತಿಳಿಸಿ..

  ReplyDelete
 25. loved these lines..
  ಗಂಟಲಾಳಕೆ ಸಿಕ್ಕ ಚೂಪು ಲೋಹ
  ಕ್ಷಣಾರ್ಧದಿ ಕೊಂದುಬಿಟ್ಟರೆ ಸರಿಯೇ
  ಅದಪ್ಪ ಪುಣ್ಯವಂತ ಉಪ ಸಂಹಾರ,
  ನೆಲಕ್ಕೆ ಬಿದ್ದು ಒದ್ದಾಡಿ ಉಸಿರು ಕಟ್ಟಿ
  ಸಾಯಲೂ ಬಾರದೇ ಹಪಹಪಿಸುವುದು
  ಮುಕ್ಕಾಲು ವಾಸಿಗಳ ಹಣೆ ಬರಹ

  ReplyDelete
 26. ಯಾವ ಸಾಲು ಬಣ್ಣಿಸಲಿ !! ಮತ್ತೆ ಮತ್ತೆ ಓದಿದಷ್ಟೂ ಹೊಸ ಅರ್ಥದ ಗಾಳದಲ್ಲಿ ನಮನ್ನು ಸಿಕ್ಕಿಸಿ ಬಿಡ್ತ್ತೀರಿ ಬದರಿ ಅವರೇ ! ಆದರೆ ಒಂದಂತೂ ನಿಜ ನಿಮ್ಮ ಜೀವನ ದೃಷ್ಟಿ ಅದ್ಭುತ . ನಿಮ್ಮ ಭಾವ ಯಾನ ಗಾಳಕೆ ಸಿಕ್ಕ ಮೀನಿನ ಪಾಡಿನಿಂದ ಸಂಚರಿಸುತ್ತಾ ನಮ್ಮ ಸಧ್ಯದ ಬದುಕಿನ ಒಳ ಸತ್ಯಗಳನ್ನೆಲಾ ತೆರೆದಿಡುತ್ತಾ ನಮನ್ನು ಮೂಕ ವಿಸ್ಮಯಮಾಡಿದೆ .

  ReplyDelete
 27. ಯಾವ ಸಾಲು ಬಣ್ಣಿಸಲಿ !! ಮತ್ತೆ ಮತ್ತೆ ಓದಿದಷ್ಟೂ ಹೊಸ ಅರ್ಥದ ಗಾಳದಲ್ಲಿ ನಮನ್ನು ಸಿಕ್ಕಿಸಿ ಬಿಡ್ತ್ತೀರಿ ಬದರಿ ಅವರೇ ! ಆದರೆ ಒಂದಂತೂ ನಿಜ ನಿಮ್ಮ ಜೀವನ ದೃಷ್ಟಿ ಅದ್ಭುತ . ನಿಮ್ಮ ಭಾವ ಯಾನ ಗಾಳಕೆ ಸಿಕ್ಕ ಮೀನಿನ ಪಾಡಿನಿಂದ ಸಂಚರಿಸುತ್ತಾ ನಮ್ಮ ಸಧ್ಯದ ಬದುಕಿನ ಒಳ ಸತ್ಯಗಳನ್ನೆಲಾ ತೆರೆದಿಡುತ್ತಾ ನಮನ್ನು ಮೂಕ ವಿಸ್ಮಯಮಾಡಿದೆ .

  ReplyDelete
 28. ಬದರಿ ಭಾಯ್...
  ಎಷ್ಟು ಛಂದ ಬರಿತಿರಿ ನೀವು !

  ನಿಮಗೆ ನೀವೇ ಸಾಟಿ..

  ಡಾಕ್ಟ್ರು ಹೇಳಿದ ಹಾಗೆ ನಾನೂ ಸಹ ನಿಮ್ಮ ಕಾವ್ಯಕ್ಕೆ ಬಿದ್ದ ಮೀನು !

  ಒಂದು ರಸಕಾವ್ಯದೌತಣಕ್ಕಾಗಿ ಧನ್ಯವಾದಗಳು...

  ReplyDelete
 29. ಹೊಯ್ ನಿಮ್ದೊಂದ್ ಪದಕೋಶ ಇದ್ರೆ ಕೊಡ್ರ.. ಆ ಶಬ್ಧಗಳೆಂಬ ಮೀನುಗಳು ನಿಮ್ಮ ಗಾಳಕೆ ಸಿಲುಕಿದೆ.. ಪೋಗದಸ್ತಾಗಿದೆ ಓದುಗರಿಗೆ ಭೂರೀ ಭೋಜನ

  ReplyDelete
 30. ಬದರಿ ಸರ್...ಗಾಳಕ್ಕೆ ಸಿಕ್ಕಿದವರೇ ಎಲ್ಲರೂ....
  ನಿಮ್ಮ ಕವಿತೆಯಲ್ಲಿ ಎಂದಿನಂತೆ ಜಂಪ್ ಇದೆ..ಮೂರರಿಂದ ನಾಲ್ಕನೇ ಪ್ಯಾರಾಕ್ಕೆ ನಗರವಾಸಿಗಳ ವಿಚಾರದ ಕೊಂಡಿ ಎದುರಿಗೆ ಕಂಡರೂ ಅದರ ನಿರೂಪಣೆಯಲ್ಲಿ ಬೇರೆಯದೇ ಅಂತರವಿದೆ ಅನಿಸ್ತು :)....ಬರೆಯುತ್ತಿರಿ..ನಮಸ್ತೆ...

  ReplyDelete
 31. " ಬಸ್ಸು ರೈಲುಗಳು ಇತ್ತಿತ್ತಲಾಗೆ
  ಸಂಚಾರಿ ಚಿತಾಗಾರಗಳಾದ ಮೇಲೆ
  ಜವರಾಯನು ಒಮ್ಮೆಲೆ ಸಗಟು ಪಾಶಿ"

  ಇಡಿ ಕವನ ಈ ಸಾಲುಗಳ ಮೇಲೆ ನಿಂತಿದಿಯೇನೋ ಅನ್ನಿಸಿತು. ತಾನು ಮಾಡುವ ಕೆಲಸದ ಪರಿಣಾಮ ಇರದು ಎನ್ನುವುದು ಕೊಕ್ಕೆ ಪಾತ್ರಧಾರಿಯಿಂದ ಅರಿವಾಗುತ್ತದೆ..

  ಒಂದು ವಿಷಾದ ವಸ್ತುವನ್ನು ಪದಗಳಲ್ಲಿ ಕಟ್ಟಿ ಕೂರಿಸುವ ನಿಮ್ಮ ತಾಕತ್ ಸೂಪರ್ ಬದರಿ ಸರ್..

  ReplyDelete
 32. ನಾನೂ ಸಿಕ್ಕಿಹಾಕಿಕೊಂಡೆ ನಿಮ್ಮ ಗಾಳದ ಕೊಕ್ಕೆಗೆ.

  Pushparaj Chowta

  ReplyDelete
 33. ಬಸ್ಸು ರೈಲು ಸಾಲುಗಳು ಅಬ್ಬಾ ಎನಿಸುತ್ತದೆ... nice

  ReplyDelete
 34. This comment has been removed by the author.

  ReplyDelete
 35. This comment has been removed by the author.

  ReplyDelete