Saturday, November 23, 2013

ಹೊಸ ಹೈನೆಸ್ಸು...

ಇರುವೆಗಳ ಸುಳಿವಿರಲಿಲ್ಲ
ಇಜ್ಜಿಲು ಮಂಡಿಯ ಒಳಗೆ
ಹೊಸ ಯಜಮಾನ ಗಿಲಾವು ಮಾಡಿ
ಬೆಲ್ಲದ ಅಂಗಡಿ ಇಟ್ಟ
ಮುತ್ತಿದವು ನೋಡಿ ಗುಮ್ಮಿಗೂಡಿ

ಅವರಿಗೋ ಅನಿವಾರ್ಯ ಕಜ್ಜಿ
ಇಲ್ಲಿವರು ಕೆರೆದೇ ಕೆರೆದರು
ಎಪ್ಪೆ ಎದ್ದಿತು ಸ್ವಂತ ಚರ್ಮ,
ಭಾಷಣ ಕೊರೆತಕೆ ತೊಟ್ಟಿಕ್ಕಿದ್ದು
ಉಗುಳು ನುಂಗಿದ ಮೈಕಾಸುರ

ಜಾತ್ರೆ ನೆರೆದರೆ ತಾನೇ
ಗಂಟು ಕಳ್ಳರಿಗೂ ವರ್ಸ ತಡುಕು?
ಸಿಕ್ಕಿ ಬಿದ್ದವನು ಬರಿಯ ಕಿಸೆಗಳ್ಳ!
ಹುಳ್ಳಗೆ ನಕ್ಕರು ಮುಸಿ ಮುಸಿ
ಜೋಳಿಗೆ ತುಂಬಿಸಿಕೊಂಡವರು

ಹೊಸ ಹೈನಸ್ಸು ಕಡೆಗೂ 
ಬಂದರು - ಹೋದರು...

ಕೊಸರು:
ಶಿರಾ ಕೂಡ ರವೆ ಉಪ್ಪಿಟಂತೆ
ಕಾಲು ಸೂಪು ನಾಸ್ತಿ ಮಲ್ಲಿಗೆ ಇಡ್ಲಿ
ಗೊಣಗಿಕೊಂಡರು ಕರೆತಂದ ಜನ,
ಮರುದಿನಕೆ ಮುರಿದ ಕುರ್ಚಿ
ಮೈದಾನದಿ ನೆಲಗೊದಗದ ಕಸ
(ಚಿತ್ರ ಕೃಪೆ: ಅಂತರ್ಜಾಲ)

18 comments:

 1. ನಮ್ಮೂರಲ್ಲಿ ರಾಜಕಾರಣಿಗಳ ಭಾಷಣ ಕೇಳೋಕೆ ಅಂತ ಹಿಂಡು ಹಿಂಡು ಜನರನ್ನ ಲಾರಿ, ಮಿನಿ ಬಸ್ಸು, ಟ್ರ್ಯಾಕ್ಟರ್ ಗಳಲ್ಲಿ ತುಂಬಿಸಿಕೊಂಡು ಹೋಗೋರು.. ಬಿರಿಯಾನಿ ಅಂತ ಹೇಳಿ ಕರೆಸಿಕೊಂಡು ಹೋಗಿ ಚಿತ್ರಾನ್ನ ಕೊಡೋರಂತೆ.. ಆ ಪರಿಸ್ತಿತಿಯ ಚಿತ್ರಣವನ್ನ ಅಮೋಘವಾಗಿ ಕಟ್ಟಿಕೊಟ್ಟ ಕವನ.

  ಬಹಳ ಒಳ್ಳೆ ಕವನ ಬದರಿ ಸಾರ್.

  ReplyDelete
 2. ಎಂತಹ ಕಾಕತಾಳೀಯ ಬದರಿ..??!!! ನನ್ನ ಬ್ಲಾಗ್ ನೋಡಿದ್ರಾ..ನನ್ನ ಮನಸಿನ ಓಟ ನಿಮ್ಮ ಲೇಖನಿಯ ನೋಟ ಎರಡಕ್ಕೂ ಸರಿ ಸುಮಾರು ಒಂದೇ ತರಹದ ವಿಷಯ ಸಿಕ್ತಾ...ಜಡವಾಗಿದ್ದವನಲ್ಲಿ ಪ್ರಾಣ ಊದೋದು ನಾವು; ಅಸುರಪಟ್ಟ ಪಡೆದದ್ದು ಮೈಕು, ಅದೂ ಅನಿವಾರ್ಯ ಸಹಿಸಬೇಕು ಕಾವು.

  ReplyDelete
 3. ಜಾತ್ರೆ ನೆರೆದರೆ ತಾನೇ
  ಗಂಟು ಕಳ್ಳರಿಗೂ ವರ್ಸ ತಡುಕು? -ಚೆಂದದ ಸಾಲು. ಕವನ ಇಷ್ಟವಾಯ್ತು ಸರ್

  ReplyDelete
 4. ಭಾಷಣ ಮಾಡುವವರು, ಅದನ್ನು ಕೇಳಲು ಇರುವೆಯಂತೆ ಸೇರಿರುವವರು, ಅವರಿಗೆ ಸಿಕ್ಕ ತಿನಸು, ಭಾಷಣದ ಮರುದಿನದ ವಾತವರಣವನ್ನು ನಿಮ್ಮ ಈ ಕವನ ವಿಶಿಷ್ಟ ರೀತಿಯಲ್ಲಿ ವಿವರಿಸಿತು.

  ReplyDelete
 5. This comment has been removed by the author.

  ReplyDelete
 6. ಕವಿತೆ ಚೆನ್ನಾಗಿದೆ ...

  ಈಗ ಭಾಷಣ ಕೇಳಲು ಯಾರೂ ಹೋಗುವುದಿಲ್ಲ. ಅಲ್ಲಿ ಕೊಡುವ ಲಡ್ಡು , ಊಟದ ರುಚಿ , ಕೂಲಿ ( ಭಾಷಣ ಕೇಳಲು ಬಂದರೆ ಕೊಡುವ ೫೦೦ ರೂ ) ಇದಕ್ಕಾಗಿ ಹೋಗುವರು ಜಾಸ್ತಿ. ಭಾಷಣಕ್ಕೆ ಹೋದವರಲ್ಲಿ ಯಾರಾದರು .. ಭಾಷಣ ಹೆಂಗೈತ್ಲಾ ಅಂದರೆ .. ಉತ್ತರ ಅವರ ಭಾಷಣ ಯಾರ್ಲಾ ಕೇಳ್ತಾರೆ. ಊಟ, ತಿಂಡಿ, ಹೆಂಡ ಚೆನ್ನಾಗಿತ್ತು ಅನ್ನುವವರೇ ಜಾಸ್ತಿ.

  ReplyDelete
 7. ಹೊಸ ವರ್ಷಕ್ಕೆ ಹೊಸ ಹೈನೆಸ್ಸಿಗೆ ಸ್ವಾಗತ ಕೋರುವ ಈ ಪರಿ ನಗುವನ್ನು ಉಕ್ಕಿಸುತ್ತದೆ, ಅಳುವನ್ನು ತರಿಸುತ್ತದೆ!

  ReplyDelete
 8. ಜಾತ್ರೆ ನೆರೆದರೆ ತಾನೇ
  ಗಂಟು ಕಳ್ಳರಿಗೂ ವರ್ಸ ತಡುಕು?
  ಸಿಕ್ಕಿ ಬಿದ್ದವನು ಬರಿಯ ಕಿಸೆಗಳ್ಳ!
  ಹುಳ್ಳಗೆ ನಕ್ಕರು ಮುಸಿ ಮುಸಿ
  ಜೋಳಿಗೆ ತುಂಬಿಸಿಕೊಂಡವರು :-)

  ReplyDelete
 9. ಅಬ್ಬ ಎಂತಹ ಕವಿತೆ ಇದನ್ನು ಓದಿದರೆ ವಾಸ್ತವದಲ್ಲಿ ಸಮಾರಂಭಗಳಿಗೆ ನಾಯಕರುಗಳ ಕರೆಯಂತೆ ಬರುವ ಸಾಮಾನ್ಯಜನರ ಬವಣೆಯ , ಅವರ ಮನಸ್ಥಿತಿಯ ದರ್ಶನ ಆಗುತ್ತದೆ. ಒಳ್ಳೆಯ ಕವಿತೆ ಬದರಿಜಿ ಸಲಾಂ ನಮಸ್ತೆ

  ReplyDelete
 10. ಅಬ್ಬ ಎಂತಹ ಕವಿತೆ ಇದನ್ನು ಓದಿದರೆ ವಾಸ್ತವದಲ್ಲಿ ಸಮಾರಂಭಗಳಿಗೆ ನಾಯಕರುಗಳ ಕರೆಯಂತೆ ಬರುವ ಸಾಮಾನ್ಯಜನರ ಬವಣೆಯ , ಅವರ ಮನಸ್ಥಿತಿಯ ದರ್ಶನ ಆಗುತ್ತದೆ. ಒಳ್ಳೆಯ ಕವಿತೆ ಬದರಿಜಿ ಸಲಾಂ ನಮಸ್ತೆ

  ReplyDelete
 11. ಚನ್ನಾಗಿದೆ...ಸಿಕ್ಕಿ ಬಿದ್ದವನು ಬರಿಯ ಕಿಸೆಗಳ್ಳ!
  ಹುಳ್ಳಗೆ ನಕ್ಕರು ಮುಸಿ ಮುಸಿ
  ಜೋಳಿಗೆ ತುಂಬಿಸಿಕೊಂಡವರು

  ReplyDelete
 12. ಇಜ್ಜಿಲಿದ್ದಲ್ಲಿ ಒಂಚೂರೂ ಸುಳಿಯದ ಇರುವೆಗಳು ಬೆಲ್ಲದಂಗಡಿ ಇಟ್ಟಂತೇ ಮುತ್ತಿದವಂತೆ. ಅದೇ ಪರಿ ನಮ್ಮ ವ್ಯಕ್ತಿತ್ವವೂ ಅನಿಸುತ್ತೆ ಅಲ್ಲವೇ ಬದ್ರಿ ಭಾಯ್.. ಯಾರಿಗೂ ನೆರವಾಗದಂತಿದ್ದರೆ ನಮಗೆ ಬೇಕೆಂದರೂ ಯಾರೂ ಸುಳಿಯುವುದಿಲ್ಲ. ಅದೇ ಬೆಲ್ಲದಂತೆ ಎಲ್ಲರಿಗೂ ಸಹಕರಿಸುತ್ತಾ ಇದ್ದರೆ ನಾವು ಬೇಡವೆಂದರೂ ಜನ ನಮ್ಮ ಸುತ್ತಲೇ ಇರುತ್ತಾರೆ.. ಇನ್ನು ರಾಜಕಾರಣಿಗಳ ಭಾಷಣಕ್ಕೆ ಜನರನ್ನ ಲಾರಿ ತುಂಬೋ ಪ್ರಸಂಗ, ಮೈಕಾಸುರನ ಕತೆ.. ಪರಿಸ್ಥಿತಿಯ ದುರಂತಕ್ಕೆ ಸಾಕ್ಷಿಯಾದಂತಿದೆ

  ReplyDelete
 13. ಬದರೀಜಿ;ಯಥಾ ಪ್ರಕಾರ ಮತ್ತೊಂದು ಸಿಕ್ಸರ್ ಕವಿತೆ!!! ನೀವು ಪ್ರತಿ ಬಾರಿ ಸಿಕ್ಸರ್ ಹೊಡೆದಾಗಲೂ ನಾವಿಲ್ಲಿ ಕಾಯುತ್ತಿದ್ದೇವೆ..........!!!! ಶಿಳ್ಳೆ ಹೊಡೆಯಲು .... :-)

  ReplyDelete
 14. ಕಜ್ಜಿಯ ಕೆರತಕ್ಕೆ ಕೆರದಷ್ಟು ಕೆಂಪೆ ಚರ್ಮ, ನವೆ ಮಾತ್ರ ಹಾಗೆ
  ಮೈಕಾಸುರನ ಮುಂದೆ ನಿಂತವನ ಸ್ಥಿತಿ ಇದಕ್ಕಿಂತ ಬಿನ್ನವಿಲ್ಲ.

  ReplyDelete
 15. ಸುಂದರ ಕವನ ಸಾರ್.... ಪ್ರತೀ ಸಲದಂತೆ ಪದಗಳ ಬಳಕೆ ಗಮನ ಸೆಳೆಯುತ್ತದೆ... ಚುನಾವಣೆ ಹತ್ತಿರಬಂದಾಗ ಮಾತ್ರ ಮೈಕು ಹಿಡಿದು ಹಳ್ಳಿ ಹಳ್ಳಿ ಗಲ್ಲಿ ಗಲ್ಲಿ ತಿರುಗುವ ರಾಜಕಾರಣಿಗಳ ಚಿತ್ರಣ ತುಂಬಾ ಚೆನ್ನಾಗಿ ಮೂಡಿಬಂದಿದೆ!

  ReplyDelete
 16. ಯಪ್ಪಾ ಏನ್ ಬರೀತೀರಿ ಸರ್! ಪದಗಳ ಪ್ರಯೋಗವೂ ಚೆನ್ನ, ಅದನ್ನು ಸಾಮಾನ್ಯವೆಂಬ ಭಾಷೆಯಲ್ಲಿಡುವುದೂ ಚೆನ್ನ :-) ರಾಜಕಾರಣಿಗಳ ದೊಂಬರಾಟವನ್ನು ಮನಮುಟ್ಟುವಂತೆ ಚಿತ್ರಿಸಿದ್ದೀರಿ.

  - ಪ್ರಸಾದ್.ಡಿ.ವಿ.

  ReplyDelete
 17. ನಾ ಕಳೆದು ಕೊಂಡದ್ದು ಏನು ಏನು ಏನು ಎನ್ನುವ ಪ್ರಶ್ನೆ ಉತ್ತರ.. ಕಾರ್ಯ ಒತ್ತಡ ಬ್ಲಾಗಿನ ಕಡೆ ಮುಖ ಮಾಡದ ಹಾಗೆ ಮಾಡಿತ್ತು.

  ಕಾಳಿದಾಸ ಚಿತ್ರದಲ್ಲಿ ಭೋಜ ಹೇಳುತ್ತಾನೆ.. ಇಲ್ಲಿಯ ಒಂದೊಂದು ಪಾತ್ರವು ಜೀವಂತ" ಹಾಗೆಯೇ ಕವನದ ಪ್ರತಿ ಸಾಲುಗಳು ಜೀವಂತ ಕೃತಿ.. ಸೂಪರ್ ಬದರಿ ಸರ್

  ReplyDelete