Thursday, September 26, 2013

ಏಕ ಗ್ರಸ್ತ...

ರುಚಿಯಾದ ಖಾದ್ಯಗಳ ಸವಿದು
ನೀಗಿತು 
ಅಕ್ಷರ ಜಿಹ್ವಾಚಾಪಲ್ಯ

ತೇಗಿದರೂ ಅದರದೇ ಪರಿಮಳ
ಕೇಳಿತೆ ನಿಮಗೆ ಲೊಟ್ಟೆಯ ಸದ್ದು? 


ಮನೆ ಮನೆ ಅಡುಗೆಯ ಮೆಂದು
ನಾನು ದುಂಡಗಾಗಿದ್ದೇನೆ,
ಕಾಯುತಿದೆ ಒಂದಿಷ್ಟು ನಿಮಗಾಗಿ
ಉಪ್ಪು ಹುಳಿ ಖಾರದ ರಸಗವಳ

ಕೊಟ್ಟು ತೆಗೆದುಕೊಂಡರದು
ಸಭ್ಯತೆಗೆ ಗೆಳೆಯ ನಿಜಾರ್ಥ,
ಚಪ್ಪಾಳೆಗೆ ಪರಸ್ಪರ ಹಸ್ತಲಾಘ
ದರ್ಪಕದು 
ಚಿಟಿಕೆ ಕೊಬ್ಬಾರ್ಥ

ಸಮಾಜ ಪದ್ದತಿಯು ಸರಳ
ಇಬ್ಬರಿದ್ದರೇನೇ ದಾಂಪತ್ಯ
ಒಬ್ಬಂಟಿಗೆ ತೀರ್ಥ ಕ್ಷೇತ್ರದಲೂ
ಪಾಪ ವಸತಿ ಯೋಗವಿಲ್ಲ

ಒಮ್ಮೆ ನೀವೂ ಒಮ್ಮೆ ನಾವೂ
ಹಂಚಿಕೊಂಡರೆ ಸರಿ ಪಕ್ವಾನ್ನ,
ಒಬ್ಬನೇ ಕದ್ದು ತಿಂದರೆ ನನಗೂ
ಅರಗದು ಮಾವು ತುರಿ ಚಿತ್ರಾನ್ನ


(ಚಿತ್ರ ಕೃಪೆ: ಅಂತರ್ಜಾಲ)

25 comments:

 1. ಶಬ್ಧ ಮೋಡಿಗಾರ ಬದರಿ ಭಾಯ್...

  ಸತ್ಯವಾದ ಮಾತು ಹೇಳಿದ್ದೀರಿ..
  ತುಂಬಾ ಇಷ್ಟವಾಯ್ತು.. ಕವನ.. ಕವನದ ತಿರುಳು...

  ReplyDelete
 2. ಸೂಪರ್ ಐತೆ ಸ್ವಾಮೀ. ನನ್ನದೇ ಮೊದಲನೇ ಕಮೆಂಟು :)

  ReplyDelete
 3. ಹಂಚಿ ತಿನ್ನೋಣ. ಕೂಡಿ ಬಾಳೋಣ. ಚೆನ್ನಾಗಿದೆ. ಬಹಳ ದಿನಗಳ ಬಳಿಕ ಬ್ಲಾಗ್ ಕಡೆ ಮುಖ ಮಾಡಿದ್ದೇನೆ. ಮೊದಲ ಓದು ನಿಮ್ಮ ಕವನವೇ :)

  ReplyDelete
 4. ಚೆನ್ನಾಗಿದೆ ವಿಷಯ... ಸಮರಸವೆ ಜೀವನ ಎಂಬ ತತ್ವದ ವಾಸ್ತವದ ಉಲ್ಲೇಖ ಅರ್ಥಪೂರ್ಣ ಹೂರಣ.

  ReplyDelete
 5. ವಾಹ್..!! ಹಂಚಿ ತಿನ್ನುವುದರ ಸುಖದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ ಸರ್. ತುಂಬಾ ಇಷ್ಟವಾಯಿತು

  ReplyDelete
 6. "ಒಬ್ಬಂಟಿಗೆ ತೀರ್ಥ ಕ್ಷೇತ್ರದಲೂ
  ಪಾಪ ವಸತಿ ಯೋಗವಿಲ್ಲ" ಹೌದೌದು ...ಚೆನ್ನಾಗಿದೆ. ಸಂಘ ಜೀವನವೇ ಸುಖ

  ReplyDelete
 7. ಸಂಕೀರ್ಣ ತತ್ವವನ್ನು ಸರಳ ರೇಖೆಯಂತೆ ಎಳೆಯಬಲ್ಲ ನಿಮ್ಮ ಪ್ರತಿಭೆಗೆ ನನ್ನ ನಮನಗಳು. ನಿಮ್ಮ ಕವನದ ಶೀರ್ಷಿಕೆಯೂ ಸಹ ಕವನದಂತೆ ವಿಶಿಷ್ಟ ಶೈಲಿಯದಾಗಿರುತ್ತದೆ.

  ReplyDelete
 8. " ಚಪ್ಪಾಳೆಗೆ ಪರಸ್ಪರ ಹಸ್ತ, ಚಿಟಿಕೆ ದರ್ಪಕದು ಸಂಕೇತ " - ಇದ್ದ ವಿಷಯವೇ ಹೌದು ಆದರೂ ಅಷ್ಟು ಗಮನಕೊಟ್ಟಿರಲಿಲ್ಲ, ನಿಜ ಅದು.
  " ಒಬ್ಬಂಟಿಗೆ ತೀರ್ಥ ಕ್ಷೇತ್ರದಲೂ, ಪಾಪ ವಸತಿ ಯೋಗವಿಲ್ಲ " - ಈ ಸನ್ನಿವೇಶವ ಸ್ವತಃ ಅನುಭವಿಸಿದವನು - ಶೃಂಗೇರಿ ಕ್ಷೇತ್ರದಲ್ಲಿ. ಎಂದಿನಂತೆ ಸೂಪರ್

  ReplyDelete
 9. ಒಬ್ಬನೇ ಕದ್ದು ತಿಂದರೆ ನನಗೂ
  ಅರಗದು ಎಂತ ಸಿಹಿ ಮಾವು... ಎಂಥ ಮಾತು .. ಚೆನ್ನಾಗಿದೆ , ಇಷ್ಟವಾಯಿತು . ಮಾಡಿದ ಅಡಿಗೆ ಹಂಚಿ ತಿಂದರೆ ಸಾರ್ಥಕ ಭಾವ .

  ReplyDelete
 10. ಚಪ್ಪಾಳೆಗೆ ಪರಸ್ಪರ ಹಸ್ತ
  ಚಿಟಿಕೆ ದರ್ಪಕದು ಸಂಕೇತ

  ಕೂಡಿ ಬಾಳೋಣ ಹಂಚಿ ತಿನ್ನೋಣ ... ಒಳ್ಳೆ ಸಂದೇಶ ...

  ReplyDelete
 11. ನಾವೂ
  ಹಂಚಿಕೊಂಡರೆ ಸರಿ ಪಕ್ವಾನ್ನ,
  ಒಬ್ಬನೇ ಕದ್ದು ತಿಂದರೆ ನನಗೂ
  ಅರಗದು.........................

  ಬದುಕಿನ ನಿಜವಾದ ತತ್ವ....... ಚನ್ನಾಗಿದೆ ಸರ್

  ReplyDelete
 12. ನಿಮ್ಮ ಕವನದ ಬಗ್ಗೆ ಹೇಳಲು ಹೊಸ ಪದಗಳೇ ಇಲ್ಲ. ಸೂಪರ್... ಸರ್.

  ReplyDelete
 13. wow such a sweet lines about sharing :D olaarthakinta nimma explanation made me hungry Badari avare :D thumba chenagide :D or rather :D Thumba ruchiyagide :D

  ReplyDelete
 14. ಚೆನ್ನಾಗಿದೆ ಸರ್ :-)

  ReplyDelete
 15. ತಮ್ಮಾ...
  ನಾ ಮಾಡಿದ ಸವಿ-ರುಚಿ ಅಡುಗೆಯನು
  ನಿನ್ನ ಬಿಟ್ಟು ಹ್ಯಾಗೆ ತಿನ್ನಲಿ ??
  ನಿನ್ನ ಈ ಕಾವ್ಯ ಲಹರಿಯಲ್ಲಿ
  ಮೀಯದೆ ಹ್ಯಾಗಿರಲಿ ???

  ReplyDelete
 16. "ಒಬ್ಬಂಟಿಗೆ ತೀರ್ಥ ಕ್ಷೇತ್ರದಲೂ
  ಪಾಪ ವಸತಿ ಯೋಗವಿಲ್ಲ" tumba arthapurna kavana Badari sir.... tumba chennagide!!

  ReplyDelete
 17. ಶಿರ್ಷಿಕೆಗೆ ತಕ್ಕ ಛಾಯಾಚಿತ್ರಣ ಹಾಗೂ ಕವನ.

  ReplyDelete
 18. ಶಿರ್ಷಿಕೆಗೆ ತಕ್ಕ ಛಾಯಾಚಿತ್ರಣ ಹಾಗೂ ಕವನ.

  ReplyDelete
 19. ಚಪ್ಪಾಳೆ ಸದ್ದಾಗಬೇಕೆಂದರೂ ಎರಡು ಕೈಗಳು ಒಂದಕ್ಕೊಂದು ಸ್ಪರ್ಶಗೊಳ್ಳಲೇಬೇಕು ನಿಜ. ನಾವೂ ನೀವೂ ಮಾಡಿದ್ದನ್ನೇ ಹಂಚಿಕೊಂಡು ಬದುಕೋಣ ಎನ್ನುವ ತತ್ವ ಸತ್ವಯುತವಾಗಿದೆ ಏಕಗ್ರಸ್ತದೊಳಗೆ.

  ReplyDelete
 20. ತುಂಬಾ ಚೆನ್ನಾಗಿದೆ ಬದ್ರಿ ಸರ್..

  ReplyDelete
 21. ಸಹಬಾಳ್ವೆಯನ್ನು ತಿಳಿಸುವ ಕವನದ ಚಿತ್ರಣ ತುಂಬಾ ಚೆನ್ನಾಗಿ ಮೂಡಿದೆ......!

  ReplyDelete
 22. ಸುಂದರ ಸಂದೇಶ ಹೊತ್ತ ಚೆಂದದ ಕವನ.. ಅಭಿನಂದನೆಗಳು ಬದ್ರಿ ಸರ್

  ReplyDelete
 23. ಕವನ ಸೊಗಸಾಗಿವೆ ಬದರಿಯವರೇ. ಅಭಿನ೦ದನೆಗಳು.

  ReplyDelete
 24. ಹಂಚಿ ತಿನ್ನಬೇಕು.. ಹಂಚಿಕೊಂಡು ಬಾಳಬೇಕು ಎನ್ನುವ ಸೂತ್ರ ನಿಜಕ್ಕೂ ಆಪ್ಯಾಯಮಾನ.. ಎಲ್ಲದರಲ್ಲೂ ಸಂತಸ ಕಾಣಬೇಕು ನಲಿವು ನೋಡಬೇಕು ಜೀವನದ ಸಿದ್ಧ ಸೂತ್ರ ಎನ್ನುವ ಮಾತು ಕವನದ ರೂಪದಲ್ಲಿ ರೂಪುಗೊಂಡಿದೆ. ಸೂಪರ್ ಬದರಿ ಸರ್.. ಆಕಾಶಕ್ಕೆ ಒಂದು ನಾಣ್ಯ ಚಿಮ್ಮಿದರೆ ಕೆಳಗೆ ಬೀಳುವ ಹೊತ್ತಿಗೆ ಒಂದು ಕವಿತೆ ಸಿದ್ಧವಾಗಿರುತ್ತೆ ನಿಮ್ಮಲ್ಲಿ

  ReplyDelete